For Quick Alerts
ALLOW NOTIFICATIONS  
For Daily Alerts

ಮಹಾಭಾರತದ ಯುದ್ಧದ ಕಥೆಯನ್ನು ಒಂದೇ ನಿಮಿಷದಲ್ಲಿ ಮುಗಿಸಿ ಬಿಟ್ಟ!

By manu
|

ಮಹಾಭಾರತವು ವಿಶ್ವದ ಅತ್ಯಂತ ಬೃಹತ್ ಮಹಾಕಾವ್ಯವೆಂದು ಪರಿಗಣಿಸಲಾಗಿದೆ. ಅದರಲ್ಲಿ ಅನೇಕ ಪಾತ್ರಧಾರಿಗಳಿದ್ದಾರೆ. ಇಂತಹ ಮಹಾಕಾವ್ಯದಲ್ಲಿ ಬರುವ ಎಲ್ಲಾ ಪಾತ್ರಧಾರಿಗಳ ಹೆಸರುಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ನಿಜಕ್ಕೂ ಅಸಾಧ್ಯ.

ಅದರಲ್ಲಿ ಕೆಲವು ಪಾತ್ರಧಾರಿಗಳ ಹೆಸರುಗಳು ನಮಗೆ ಸಾಕಷ್ಟು ಪರಿಚಯವಾಗಿದ್ದರೂ ಹೊರಗಿನವರಿಗೆ ಬಹಳಷ್ಟು ಗೊಂದಲಮಯವಾಗಿದೆ. ಆದರೆ ಎಲ್ಲಾ ಮಹಾನ್ ಪುರಾಣಗಳಲ್ಲಿರುವಂತೆ ಮಹಾಭಾರತದಲ್ಲಿಯೂ ಸಹ ಪ್ರಮುಖ ಪಾತ್ರವಹಿಸಿದ ಅನೇಕ ಅಪರಿಚಿತ ಮತ್ತು ಹೆಸರುವಾಸಿಯಲ್ಲದ ಯೋಧರು ಇದ್ದಾರೆ.

ಕುರುಕ್ಷೇತ್ರದ ಮಹಾಯುದ್ಧವನ್ನು ಒಂದೇ ನಿಮಿಷದಲ್ಲಿ ಕೊನೆಗೊಳ್ಳಿಸುತ್ತೇನೆಂದು ಹೇಳಿದ ಯೋಧನ ಕಥೆಯೂ ಒಂದು. ಆ ಯೋಧನ ಹೆಸರು ಬಾರ್ಬರಿಕ ಅಥವಾ ಇನ್ನೊಂದು ಹೆಸರಿನಿಂದ ಪ್ರಖ್ಯಾತನಾಗಿದ್ದ ಖಟುಶ್ಯಾಮ್ ಜೀ. ಬಾರ್ಬರಿಕ, ಭೀಮನ ಮೊಮ್ಮಗ ಹಾಗೂ ಘಟೋತ್ಕಚ ಮತ್ತು ಮೌರ್ವಿ ದಂಪತಿಗಳ ಮಗ. ಬಾರ್ಬರಿಕ ತನ್ನ ಬಾಲ್ಯದಿಂದಲೇ ಮಹಾನ್ ಯೋಧನಾಗಿದ್ದ. ಮಹಾಭಾರತದಲ್ಲಿ ನಿಮ್ಮನ್ನು ಬೆಚ್ಚಿ ಬೀಳಿಸುವ ಸತ್ಯಗಳು!

ಶ್ರೀಕೃಷ್ಣನು ಒಮ್ಮೆ ಎಲ್ಲಾ ಯೋಧರನ್ನು ಉದ್ದೇಶಿಸಿ ಮಹಾಭಾರತದ ಯುದ್ಧದ ಕಥೆಯನ್ನು ಎಷ್ಟು ದಿನಗಳಲ್ಲಿ ಮುಗಿಸುತ್ತೀರಾ ಎಂದು ಕೇಳಿದನು. ಎಲ್ಲರೂ ಸರಾಸರಿ 15 - 20 ದಿನಗಳಲ್ಲಿ ಮುಗಿಸುತ್ತೇವೆಂದು ಉತ್ತರವಿತ್ತರು. ಹಾಗೆಯೇ ಬಾರ್ಬರಿಕಾನನ್ನು ಪಶ್ನೆ ಮಾಡಿದಾಗ ಅವನು ಯುದ್ಧವನ್ನು ಒಂದು ನಿಮಿಷದಲ್ಲಿ ಕೊನೆಗೊಳ್ಳಿಸುತ್ತೇನೆಂದು ಉತ್ತರಿಸಿದನು.

ಈ ಉತ್ತರಕ್ಕೆ ಶ್ರೀಕೃಷ್ಣನು ಚಕಿತನಾಗಿ ಅದು ಹೇಗೆ ಕೊನೆಗೊಳ್ಳಿಸುತ್ತೀಯಾ ಎಂದು ಕೇಳಿದನು. ಆಗ ಬಾರ್ಬರಿಕ ಶ್ರೀ ಪರಮೇಶ್ವರನು ತನಗೆ ವರವಾಗಿ ನೀಡಿದ್ದ ತನ್ನ ಮೂರು ಬಾಣಗಳ ರಹಸ್ಯವನ್ನು ಬಹಿರಂಗ ಪಡಿಸಿದನು. ಈ ಮೂರು ಬಾಣಗಳ ಸಹಾಯದಿಂದ ಮಹಾಭಾರತದ ಯುದ್ಧದ ಕಥೆಯನ್ನು ಕೇವಲ ಒಂದೇ ನಿಮಿಷದಲ್ಲಿ ಕೊನೆಗೊಳ್ಳಿಸಬಹುದಿತ್ತು. ನಿಮಗೆ ಆ ಕಥೆಯನ್ನು ತಿಳಿಯಲು ಆಸಕ್ತಿಯಿದೆಯೇ? ಹಾಗಿದ್ದಲ್ಲಿ ಇನ್ನು ಮುಂದೆ ಓದಿ:

ಬಾರ್ಬರಿಕಾನ ತಪಸ್ಸು

ಬಾರ್ಬರಿಕಾನ ತಪಸ್ಸು

ಬಾರ್ಬರಿಕ ಕೇವಲ ಯೋಧನಲ್ಲದೆ ಆತನು ಶ್ರೀ ಪರಮೇಶ್ವರನ ಉತ್ಕಟ ಭಕ್ತನಾಗಿಯೂ ಇದ್ದ. ಅವನು ಭಗವಾನ್ ಪರಮೇಶ್ವರನನ್ನು ಮೆಚ್ಚಿಸುವ ಸಲುವಾಗಿ ಘೋರ ತಪಸ್ಸನ್ನು ಮಾಡಿದನು. ಇದರ ಫಲವಾಗಿ ಶಿವನಿಂದ ಅವನು ಮಾಂತ್ರಿಕ ಶಕ್ತಿಗಳನ್ನು ಹೊಂದಿದ ಮೂರು ಬಾಣಗಳನ್ನು ಪಡೆದನು. ಮೊದಲನೆ ಬಾಣದಿಂದ ಅವನು ನಾಶಪಡಿಸಬೇಕೆಂದಿರುವ ಶತ್ರುಗಳನ್ನು ಗುರುತಿಸಿಕೊಳ್ಳಬಹುದಾಗಿತ್ತು. ಮೂರನೇ ಬಾಣವನ್ನು ಉಪಯೋಗಿಸಿ ಎಲ್ಲಾ ಗುರುತಿಸಿರುವ ಶತ್ರುಗಳನ್ನು ನಾಶಪಡಿಸಿ ಆ ಬಾಣವು ಮತ್ತೆ ಅವನ ಬತ್ತಳಿಕೆಗೆ ಮರಳಬಹುದಾಗಿತ್ತು. ಎರಡನೇ ಬಾಣದಿಂದ ಅವನು ಯಾವ ಯಾವ ಯೋಧರನ್ನು ಮತ್ತು ವಸ್ತುಗಳನ್ನು ನಾಶಪಡಿಸದೇ ಅವರನ್ನು ಗುರುತಿಸಿ ಉಳಿಸಿಕೊಳ್ಳಬಹುಗಿತ್ತು. ನಂತರ ಮೂರನೇ ಬಾಣದಿಂದ ಗುರುತು ಮಾಡಿದ್ದ ಶತ್ರುಗಳನ್ನು ಮತ್ತು ವಸ್ತುಗಳನ್ನು ನಾಶಪಡಿಸಬಹುದಾಗಿತ್ತು. ಅರ್ಥಾತ್, ಅವನು ಒಂದೇ ಬಾಣದಿಂದ ನಾಶಪಡಿಸಬೇಕೆಂದುಕೊಂಡಿರುವ ಎಲ್ಲಾ ಶತ್ರುಗಳು ಮತ್ತು ವಸ್ತುಗಳನ್ನು ಒಮ್ಮೆಯೇ ನಾಶಪಡಿಸುವ ಶಕ್ತಿಯಿತ್ತು. ಹೀಗಾಗಿ ಬಾರ್ಬರಿಕಾಗೆ 'ತ್ರಿಬಾಣಧಾರಿ' ಅಥವ ಮೂರು ಬಾಣಗಳನ್ನು ಹೊಂದಿದವನೆಂಬ ಹೆಸರಾಯಿತು.

ಶ್ರೀಕೃಷ್ಣನ ಪರೀಕ್ಷೆ

ಶ್ರೀಕೃಷ್ಣನ ಪರೀಕ್ಷೆ

ಶ್ರೀಕೃಷ್ಣನಿಗೆ ಬಾರ್ಬರಿಕ ಇಂತಹ ವರವನ್ನು ಪಡೆದಿರುವುದನ್ನು ಕೇಳಿ, ಅವನನ್ನು ಪರೀಕ್ಷಿಸಲು ನಿರ್ಧಾರ ಮಾಡಿದನು. ನೀನು ಅದು ಹೇಗೆ ಕೇವಲ ಮೂರು ಬಾಣಗಳಿಂದ ಯುದ್ಧದಲ್ಲಿ ಹೋರಾಟ ಮಾಡುತ್ತೀಯಾ, ಅದು ಹೇಗೆ ಸಾಧ್ಯ ಎಂದು ಗೇಲಿ ಮಾಡಿದನು. ಅದಕ್ಕೆ ಅವನು ಶ್ರೀಕೃಷ್ಣನನ್ನು ಕಾಡಿಗೆ ಕರೆದುಕೊಂಡು ಹೋಗಿ ಅಲ್ಲಿ ಒಂದು ಮರದಲ್ಲಿರುವ ಎಲ್ಲಾ ಎಲೆಗಳ ಮೇಲೆ ಪ್ರಯೋಗ ಮಾಡಲು ಗುರಿಯಿಟ್ಟನು. ಬಾರ್ಬರಿಕ ಕಣ್ಣುಮುಚ್ಚಿರುವಾಗ ಕ್ಷಣಮಾತ್ರದಲ್ಲಿ ಶ್ರೀಕೃಷ್ಣನು ಒಂದು ಎಲೆಯನ್ನು ಕಿತ್ತು ತನ್ನ ಕಾಲಿನಡಿಯಲ್ಲಿ ಬಾರ್ಬರಿಕಾಗೆ ಕಾಣದ ಹಾಗೆ ಇಟ್ಟು ಮುಚ್ಚಿಕೊಂಡುಬಿಟ್ಟನು. ಬಾರ್ಬರಿಕ ಪ್ರಯೋಗಿಸಿದ ಮೊದಲನೇ ಬಾಣವು ಮರದಲ್ಲಿದ್ದ ಎಲ್ಲ ಎಲೆಗಳನ್ನು ಗುರುತಿಸಿ ನಂತರ ಶ್ರೀಕೃಷ್ಣನ ಪಾದದಡಿಯಲ್ಲಿರುವ ಎಲೆಯನ್ನು ಗುರುತಿಸಲು ನುಗ್ಗಿ ಬಂದಿತು. ಶ್ರೀಕೃಷ್ಣನಿಗೆ ಅಚ್ಚರಿಯಾಗಿ ತನ್ನ ಪಾದವನ್ನು ಎತ್ತಿದ ತಕ್ಷಣವೆ ಆ ಬಾಣವು ಆ ಎಲೆಯನ್ನೂ ಗುರುತುಮಾಡಿಕೊಂಡಿತು. ನಂತರ ಬಾರ್ಬರಿಕ ತನ್ನ ಮೂರನೆ ಬಾಣವನ್ನು ಪ್ರಯೋಗಿಸಿದಾಗ ಆ ಮರದಲ್ಲಿದ್ದ ಎಲ್ಲಾ ಎಲೆಗಳನ್ನು ಸಂಗ್ರಹಿಸಿ ಬಂಧಿಸಿತು.

ಬಾರ್ಬರಿಕಾಗಿದ್ದ ವರದ ಷರತ್ತುಗಳು

ಬಾರ್ಬರಿಕಾಗಿದ್ದ ವರದ ಷರತ್ತುಗಳು

ಬಾರ್ಬರಿಕಾಗೆ ತಾನು ಪಡೆದಿದ್ದ ವರಕ್ಕೆ ಎರಡು ಷರತ್ತುಗಳಿದ್ದವು. ಅವನು ಅದನ್ನು ತನ್ನ ವೈಯುಕ್ತಿಕ ದ್ವೇಷವನ್ನು ಸಾಧಿಸಲು ಉಪಯೋಗಿಸಬಾರದು ಮತ್ತು ಸದಾ ಒಂದು ಯುದ್ಧದ ರಣರಂಗದಲ್ಲಿ ದುರ್ಬಲವಾಗಿರುವ ಸೈನ್ಯ ಪಡೆಯ ಕಡೆಯಿಂದ ಮಾತ್ರ ಉಪಯೋಗಿಸಬೇಕು.

ಶ್ರೀ ಕೃಷ್ಣನ ಉಪಾಯ

ಶ್ರೀ ಕೃಷ್ಣನ ಉಪಾಯ

ಶ್ರೀಕೃಷ್ಣನು ಆ ಬಾಣಗಳ ಶಕ್ತಿಯನ್ನು ನೋಡಿ, ಕುರುಕ್ಷೇತ್ರದ ಯುದ್ಧದಲ್ಲಿ ನೀನು ಯಾರ ಪಕ್ಷದ ಕಡೆಯಿಂದ ಯುದ್ಧ ಮಾಡಲಿದ್ದೀಯಾ ಎಂದು ಕೇಳಿದನು. ಬಾರ್ಬರಿಕ ತಾನು ಕೌರವ ಪಕ್ಷವನ್ನು ಪಾಂಡವ ಪಕ್ಷಕ್ಕೆ ಹೋಲಿಸಿದಾಗ ಪಾಂಡವ ಪಕ್ಷವು ದುರ್ಬಲರಾಗಿರುವುದರಿಂದ ಅವರಕಡೆಯಿಂದಲೇ ಖಂಡಿತವಾಗಿ ಹೋರಾಡುತ್ತೇನೆಂದು ಹೇಳಿದನು. ಆದರೆ ಅವನು ಪಾಂಡವ ಪಕ್ಷದ ಕಡೆಯಿಂದ ಯುದ್ಧಮಾಡಿದರೆ, ಪಾಂಡವರು ತಾನಾಗಿಯೇ ಬಲಶಾಲಿಗಳಾಗುತ್ತಾರೆಯೆಂದು ಮತ್ತು ಆಗ ಕೌರವರು ದುರ್ಬಲರಾಗುತ್ತರೆಂದು ಶ್ರೀಕೃಷ್ಣನು ಹೇಳಿದನು. ಇದನ್ನು ಕೇಳಿ ಬಾರ್ಬರಿಕಾಗೆ ಒಂದು ಸಂದಿಗ್ಧತೆಯುಂಟಾಗಿಹೋಯಿತು. ಅವನ ಬಾಣದ ಷರತ್ತುಗಳನ್ನು ಪೂರೈಸಲು ಬಲ ಮತ್ತು ದುರ್ಬಲಗೊಳ್ಳುವ ಎರಡೂಕಡೆಯಿಂದ ಯುದ್ಧಮಾಡಬೇಕಾಗುತ್ತದೆ. ಅವನು ಯಾವ ಪಕ್ಷದ ಪರ ಯುದ್ಧ ಮಾಡಿದರೂ ಆ ಪಕ್ಷ ಬಲಶಾಲಿಗಳಗುತ್ತಾರೆ ಮತ್ತೊಂದು ಪಕ್ಷವು ಬಲಹೀನರಾಗುತ್ತಾರೆ. ಹಾಗಾದಾಗ ತಕ್ಷಣವೇ ತಾನು ಹೋರಾಡುತ್ತಿದ್ದ ಬಲಶಾಲಿ ಪಕ್ಷವನ್ನು ಬಿಟ್ಟು ದುರ್ಬಲಶಾಲಿ ಪಕ್ಷದ ಕಡೆಯಿಂದ ಹೋರಾಡಬೇಕು. ಹೀಗೆ ಮಾಡುತ್ತಿದ್ದರೆ ತಾನು ತನ್ನ ಶಕ್ತಿಯನ್ನು ಉಪಯೋಗಿಸಲು ಆಗುವುದೇ ಇಲ್ಲ. ಆದ್ದರಿಂದ ಮಾನವಕುಲದ ರಕ್ಷಣೆಗಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳಬೇಕೆಂದು ಮನವರಿಕೆಯಾಯಿತು.

ಬಾರ್ಬರಿಕಾನ ಸಾವು

ಬಾರ್ಬರಿಕಾನ ಸಾವು

ಹೀಗಾಗಿ ಒಂದು ನಿಜವಾದ ಯುದ್ಧದಲ್ಲಿ ತಾನು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೊಯ್ದಾಡುವ ಸಂದರ್ಭ ಬಂದು, ಕೊನೆಗೆ ಎರಡೂ ಸಂಪೂರ್ಣ ಸೈನ್ಯವನ್ನು ನಾಶಮಾಡಿ, ತಾನೊಬ್ಬನೇ ಉಳಿಯುವನೆಂಬ ಮನವರಿಕೆಯಾಯಿತು. ಕೊನೆಗೆ ಯಾವ ಪಕ್ಷವೂ ಜಯಸಾಧಿಸದೇ ಅವನೊಬ್ಬನೇ ಉಳಿಯುವ ಹಾಗಾಗುತ್ತದೆ. ಆದ್ದರಿಂದ ಶ್ರೀಕೃಷ್ಣನು ಉಪಾಯಮಾಡಿ ಅವನಲ್ಲಿ ಒಂದು ಭಿಕ್ಷೆಯನ್ನು ಬೇಡಿದನು. ಅದಕ್ಕೆ ಬಾರ್ಬರಿಕ ತಾನು ಏನು ಕೇಳಿದರೂ ಕೊಡಲು ಸಿದ್ಧನಿದ್ದೇನೆಂದು ಹೇಳಿದನು. ತಕ್ಷಣವೇ ಶ್ರೀಕೃಷ್ಣನು ಅವನ ತಲೆಯನ್ನು ದಾನವಾಗಿ ಕೇಳಿ ಬಾರ್ಬರಿಕ ಮಹಾಭಾರತದ ಯುದ್ಧದಲ್ಲಿ ಭಾಗವಹಿಸಿವುದನ್ನು ತಪ್ಪಿಸಿದನು.

ಖಟು ಶ್ಯಾಮ್ ಜಿ

ಖಟು ಶ್ಯಾಮ್ ಜಿ

ರಾಜಾಸ್ಥಾನದಲ್ಲಿ ಬಾರ್ಬರಿಕಾನನ್ನು ಖಟು ಶ್ಯಾಮ್ ಜಿ ಎಂದು ಆರಾಧಿಸುತ್ತಾರೆ. ಅವನ ನಿಸ್ವಾರ್ಥ ತ್ಯಾಗ ಮತ್ತು ಎದೆಗುಂದದ ನಂಬಿಕೆಯನ್ನು ಶ್ರೀಕೃಷ್ಣನ ಮೇಲಿಟ್ಟಿದ್ದರಿಂದ ಶ್ರೀ ಕೃಷ್ಣನ ಮತ್ತೊಂದು ಹೆಸರಾದ ಶ್ಯಾಮ್ ಎಂಬ ಹೆಸರನ್ನು ಪಡೆದನು. ಶ್ರೀಕೃಷ್ಣನ ಹೇಳಿಕೆಯ ಪ್ರಕಾರ ಬಾರ್ಬರಿಕ ಹೆಸರನ್ನು ಭಕ್ತಾದಿಗಳು ಉಚ್ಚರಿಸಿದರೆ ತಮ್ಮ ಇಚ್ಚೆಯನ್ನು ಪೂರೈಸಿಕೊಳ್ಳಬಹುದು.

English summary

Barbarika: Warrior Who Could Have Ended Mahabharata War In A Minute

Mahabharata is considered to be the longest epic of the world. It has a lot of characters in it. Naturally, it is not possible for us to know and remember all the characters of this great epic. But like every great story, Mahabharata also has a number of unsung heroes who actually play an important role in the story.
X
Desktop Bottom Promotion