For Quick Alerts
ALLOW NOTIFICATIONS  
For Daily Alerts

ಪೂಜೆ ಎಂದರೆ ಹೀಗಿರಬೇಕು, ಎಲ್ಲಾ ವಿಧಿವತ್ತಾಗಿ ನಡೆಯಬೇಕು!

ದೇವರನ್ನು ನಿತ್ಯವೂ ಪೂಜಿಸುವ ಮೂಲಕ ದೇವರ ಅನುಗ್ರಹಕ್ಕೆ ಪಾತ್ರರಾಗಬಹುದು ಎಂದು ಶಾಸ್ತ್ರ ಪುರಾಣಗಳಲ್ಲಿ ವಿವರಿಸಲಾಗಿದ್ದು ಅಂತೆಯೇ ಸೂಕ್ತವಾದ ಪೂಜಾ ಪರಿಕಗಳನ್ನು ಬಳಸುವುದೂ ಅಷ್ಟೇ ಅಗತ್ಯವಾಗಿದೆ...ಎಂದು ಹೇಳಲಾಗಿದೆ

By Arshad
|

ಹಿಂದೂ ಧರ್ಮದ ನಂಬಿಕೆಯ ಪ್ರಕಾರ ದೇವರ ಅಸ್ತಿತ್ವವನ್ನು ಮೂರ್ತಿರೂಪದಲ್ಲಿ ಕಾಣಲಾಗುತ್ತದೆ. ಈ ಮೂರ್ತಿಗಳನ್ನು ಪೂಜಿಸುವ ಮೂಲಕ ದೇವರನ್ನು ಆರಾಧಿಸಲಾಗುತ್ತದೆ. ಅಂತೆಯೇ ಪ್ರತಿ ಮನೆ, ಆಫೀಸ್‌ನಲ್ಲಿ ದೇವರ ಪೂಜೆಗೆಂದು ಪುಟ್ಟ ಸ್ಥಳವನ್ನು ನಿಗದಿಪಡಿಸಲಾಗಿರುತ್ತದೆ. ದೇವರನ್ನು ನಿತ್ಯವೂ ಪೂಜಿಸುವ ಮೂಲಕ ದೇವರ ಅನುಗ್ರಹಕ್ಕೆ ಪಾತ್ರರಾಗಬಹುದು ಎಂದು ಶಾಸ್ತ್ರ ಪುರಾಣಗಳಲ್ಲಿ ವಿವರಿಸಲಾಗಿದ್ದು ಪೂಜೆಯನ್ನು ಸರಿಯಾದ ಕ್ರಮದಲ್ಲಿ ನಿರ್ವಹಿಸುವುದು ಅಗತ್ಯವಾಗಿದೆ. ಅಂತೆಯೇ ಸೂಕ್ತವಾದ ಪೂಜಾ ಪರಿಕಗಳನ್ನು ಬಳಸುವುದೂ ಅಷ್ಟೇ ಅಗತ್ಯವಾಗಿದೆ. ಶಿವ ಪೂಜೆಯಲ್ಲಿ ಇಂತಹ ತಪ್ಪುಗಳಾಗದಂತೆ ಎಚ್ಚರವಹಿಸಿ

ಕೆಲವು ಪರಿಕರಗಳು ಪೂಜೆಗೆ ಅತ್ಯಂತ ಅಗತ್ಯವಾಗಿದ್ದು ಇವುಗಳ ವಿನಃ ಪೂಜೆ ಅಪೂರ್ಣವಾಗುತ್ತದೆ. ಉದಾಹರಣೆಗೆ ಶಿವಪೂಜೆಗೆ ಅಗತ್ಯವಿರಬೇಕಾದ ಸಾಮಾಗ್ರಿ ಎಂದರೆ ಕರಡಿಗೆ. ಕರಡಿಗೆಯ ಹೊರತಾಗಿ ಶಿವಪೂಜೆ ನಿರ್ವಹಿಸುವುದು ಕಷ್ಟವಾಗುತ್ತದೆ. ಇದನ್ನೇ ಕೊಂಚ ಮಾರ್ಪಾಡು ಮಾಡಿ 'ಶಿವಪೂಜೆಯಲ್ಲಿ ಕರಡಿ ಬಿಟ್ಟಂತೆ' ಎಂದು ಗಾದೆಯ ರೂಪ ತಾಳಿದೆ. ಹಿಂದೂ ಧರ್ಮದಲ್ಲಿ ಅರಿಶಿನ ಹಾಗೂ ಕುಂಕುಮದ ಮಹತ್ವ

ಇದರ ನಿಜಕಾರಣ ಅರಿಯದ ಹೆಚ್ಚಿನವರು ಇಂದಿಗೂ ಕರಡಿಯನ್ನು ಶಿವಪೂಜೆಗೆ ಅಡ್ಡಿಪಡಿಸಲು ಬೇಕೆಂದೇ ಬಿಟ್ಟಂತೆ ಎಂದೇ ಅರ್ಥೈಸಿಕೊಂಡಿದ್ದಾರೆ. ಯಾವುದೇ ಪೂಜೆಗೆ ಮುಖ್ಯವಾಗಿ ಬೇಕಾಗಿರುವುದು ಭಕ್ತನ ಭಕ್ತಿಯೇ ಹೊರತು ಇದರ ಪರಿಕರಗಳು ಸುಲಭವಾಗಿ ಮತ್ತು ಅಗ್ಗವಾಗಿ ಸಿಗುವಂತಹದ್ದೇ ಆಗಿವೆ. ಬನ್ನಿ, ಸಾಮಾನ್ಯವಾಗಿ ಎಲ್ಲಾ ಪೂಜೆಗಳಲ್ಲಿ ಬಳಸಲಾಗುವ ಪರಿಕರಗಳ ಮಹತ್ವ ಹಾಗೂ ಇವುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಂದು ಅರಿಯೋಣ.....

ಪಂಚಾಮೃತ

ಪಂಚಾಮೃತ

ಆಯುರ್ವೇದ ಸೂಚಿಸಿರುವ ಐದು ವಸ್ತುಗಳನ್ನು ಬೆರೆಸಿ ಪಂಚಾಮೃತವನ್ನು ತಯಾರಿಸಲಾಗುತ್ತದೆ. ಇವೆಂದರೆ ಹಾಲು, ತುಪ್ಪ, ಮೊಸರು, ಜೇನು ಮತ್ತು ಸಕ್ಕರೆ. ಪಂಚಾಮೃತದಿಂದ ಗರ್ಭಗುಡಿಯಲ್ಲಿರುವ ವಿಗ್ರಹ ಅಥವಾ ಮನೆದೇವರ ವಿಗ್ರಹಕ್ಕೆ ಅಭಿಷೇಕ ಮಾಡಿ ಪುನೀತವಾಗಿಸಲಾಗುತ್ತದೆ. ವಿಗ್ರಹದಿಂದ ಸೋರಿದ ಈ ದ್ರವವನ್ನು ಸಂಗ್ರಹಿಸಿ ಪ್ರಸಾದದ ರೂಪದಲ್ಲಿ ಭಕ್ತರಿಗೆ ವಿತರಿಸಲಾಗುತ್ತದೆ. ಈ ಪಂಚಾಮೃತವನ್ನು ಸೇವಿಸುವುದರಿಂದ ಹಲವಾರು ಆರೋಗ್ಯಕರ ಲಾಭಗಳೂ ಇವೆ.

ತುಳಸಿ ಎಲೆಗಳು

ತುಳಸಿ ಎಲೆಗಳು

ತುಳಸಿ ಎಲೆಗಳು ಆರೋಗ್ಯದ ಗಣಿಯೇ ಆಗಿದ್ದು ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಕೃಷ್ಣ ಪರಮಾತ್ಮನಿಗೆ ತುಳಸಿ ಎಂದರೆ ತುಂಬಾ ಇಷ್ಟ. ಆದ್ದರಿಂದ ವಿಷ್ಣುದೇವರ ಪೂಜೆಗೆ ತುಳಸಿ ಎಲೆಗಳನ್ನು ಬಳಸುವುದು ಉತ್ತಮ. ಆದರೆ ಶಿವಪೂಜೆ ಮತ್ತು ಗಣೇಶನ ಪೂಜೆಯಲ್ಲಿ ಮಾತ್ರ ತುಳಸಿ ಎಲೆಗಳನ್ನು ಖಂಡಿತಾ ಬಳಸಬಾರದು.

ಅಕ್ಷತೆ ಕಾಳು (ತುಂಡಾಗದ ಅಕ್ಕಿ)

ಅಕ್ಷತೆ ಕಾಳು (ತುಂಡಾಗದ ಅಕ್ಕಿ)

ಅಕ್ಷತ ಅಂದರೆ ತುಂಡಾಗದಿರುವ ಎಂದರ್ಥ. ಆದ್ದರಿಂದ ಅಕ್ಷತೆಗಾಗಿ ಕೇವಲ ಇಡಿಯ ಅಕ್ಕಿಯನ್ನು ಮಾತ್ರ ಬಳಸಬೇಕು. ಈ ಅಕ್ಕಿಯನ್ನು ಪೂಜಾತಟ್ಟೆಯ ನಡುವಲ್ಲಿರಿಸಬೇಕು. ಅಕ್ಷತೆಕಾಳು ಮನೆಯಲ್ಲಿ ಸಮೃದ್ಧಿ, ಫಲವತ್ತತೆ ಹಾಗೂ ಉದಾರತೆಯ ಸಂಕೇತವಾಗಿದೆ.

ದೀವಿಗೆ

ದೀವಿಗೆ

ಯಾವುದೇ ಪೂಜೆಯಲ್ಲಿ ಅಗತ್ಯವಾಗಿ ಬಳಸಬೇಕಾದ ಪರಿಕರವೆಂದರೆ ದೀಪ ಅಥವಾ ದೀವಟಿಗೆ ಅಥವಾ ದೀವಿಗೆ. ದೀವಿಗೆ ಉಪಯೋಗಿಸುವ ಒಂದೇ ಉದ್ದೇಶವೆಂದರೆ ಇದರ ಬೆಳಕು ಸದಾ ಮನೆಯನ್ನು ಬೆಳಗುತ್ತಿರಬೇಕು. ಈ ಬೆಳಕು ಜ್ಞಾನ, ಪ್ರಜ್ಞೆ, ನಿರ್ಮಲತೆ ಹಾಗೂ ದಿವ್ಯತೆಯ ಸಂಕೇತವಾಗಿದು ಪ್ರತಿಯೊಬ್ಬರೂ ಇದನ್ನು ತಪ್ಪದೇ ಅರಿತಿರಬೇಕು. ಇದೇ ಕಾರಣಕ್ಕೆ ದೀಪದ ಬೆಳಕು ಸದಾ ಮನೆಯಲ್ಲಿ ಬೆಳಗುತ್ತಾ ಇರುವಂತೆ, ಎಂದಿಗೂ ಎಣ್ಣೆ ಕಡಿಮೆಯಾಗದಂತೆ ನೋಡಿಕೊಳ್ಳುವುದು ಗೃಹಿಣಿಯ ಕರ್ತವ್ಯವೂ ಆಗಿದೆ.

ಅಗರಬತ್ತಿ ಅಥವಾ ಅತ್ತರ್

ಅಗರಬತ್ತಿ ಅಥವಾ ಅತ್ತರ್

ಮನೆಯ ಪರಿಸರದಲ್ಲಿರುವ ದುಷ್ಟಶಕ್ತಿಗಳನ್ನು ದೂರ ಓಡಿಸಲು ಸುವಾಸನೆಯ ಅಗತ್ಯವಿದ್ದು ಅಗರಬತ್ತಿಯ ಹೊಗೆಯಲ್ಲಿರುವ ಸುವಾಸನೆಯ ಮೂಲಕ ದೇವರಿಗೆ ನಿರ್ಮಲ ವಾತಾವರಣವನ್ನು ನಿರ್ಮಿಸಲು ನೆರವಾಗುತ್ತದೆ. ಈ ಪರಿಮಳ ಕೇವಲ ಪರಿಸರದಲ್ಲಿ ಸುವಾಸನೆ ಮೂಡಿಸುವುದು ಮಾತ್ರವಲ್ಲ, ಮನಸ್ಸನ್ನು ತಿಳಿಗೊಳಿಸಿ ಯಾವುದೇ ಋಣಾತ್ಮಕ ಯೋಚನೆಗಳನ್ನೂ ಬದಲಿಸುತ್ತದೆ.

ಸಕ್ಕರೆ ಅಥವಾ ಮಿಶ್ರಿ

ಸಕ್ಕರೆ ಅಥವಾ ಮಿಶ್ರಿ

ದೇವರಿಗೆ ಸಿಹಿಪದಾರ್ಥವನ್ನು ಅರ್ಪಿಸುವ ಮೂಲಕ ದೇವರ ಅನುಗ್ರಹವನ್ನು ಪಡೆಯಬಹುದು. ಇದಕ್ಕಾಗಿ ಮೋದಕ, ಲಡ್ಡು, ಬರ್ಫಿ ಅಥವಾ ಇತರ ಯಾವುದೇ ಸಿಹಿವಸ್ತುಗಳನ್ನು ಆಯ್ದುಕೊಳ್ಳಬಹುದು. ಇವು ಲಭ್ಯವಿಲ್ಲದ ಸಮಯದಲ್ಲಿ ಸಾದಾ ಸಕ್ಕರೆ ಅಥವಾ ಮಿಶ್ರಿಯನ್ನೂ ದೇವರಿಗೆ ಅರ್ಪಿಸುವ ಮೂಲಕ ಪೂಜೆಯನ್ನು ಸಂಪನ್ನಗೊಳಿಸಬಹುದು.

English summary

Any Puja Ceremony Is Incomplete If You Don't Include These Items In It...

These things are considered auspicious and render a puja complete. These items are easy to buy and not expensive either, and any devotee would love to please god in the most perfect way. We also tell you the significance behind including them in puja. So, are you missing out on any of these important puja item? Take a look..
X
Desktop Bottom Promotion