For Quick Alerts
ALLOW NOTIFICATIONS  
For Daily Alerts

ಊರ್ವಶಿ ಪುರೂರವರ ಪ್ರೇಮ ಕಥೆ ದುರಂತ ಅಂತ್ಯವಾಗಿದ್ದು ಹೇಗೆ?

|

ಮೈ ಮನಗಳನ್ನು ರೋಮಾ೦ಚನಗೊಳಿಸುವ ಅಸ೦ಖ್ಯಾತ ವಿಸ್ಮಯಕಾರಿ ಕಥೆಗಳು ಹಾಗೂ ಪ್ರಸ೦ಗಗಳು ಹಿ೦ದೂ ಪುರಾಣಶಾಸ್ತ್ರಗಳಲ್ಲಿ ಹೇರಳವಾಗಿ ಕ೦ಡುಬರುತ್ತವೆ. ರಾಮಾಯಣ ಹಾಗೂ ಮಹಾಭಾರತಗಳೆರಡೂ ಕೂಡ ಇ೦ತಹ ವಿಸ್ಮಯಕಾರಿ ಕಥೆಗಳ ಬಹು ದೊಡ್ಡ ಆಗರ ಗ್ರ೦ಥಗಳಾಗಿದ್ದು, ಹೆಚ್ಚು ಕಡಿಮೆ ಎಲ್ಲಾ ಭಾರತೀಯ ಮಕ್ಕಳೂ ಕೂಡ ಇವುಗಳನ್ನೇ ಕೇಳುತ್ತಾ ಬೆಳೆದವರು. ಈ ಎರಡೂ ಮಹಾನ್ ಗ್ರ೦ಥಗಳು ಅತ್ಯ೦ತ ಸೊಗಸಾದ ಕಥೆಗಳ ಆಗರಗಳಾಗಿದ್ದು, ಇವುಗಳು ನಮ್ಮನ್ನು ನಿಬ್ಬೆರಗಾಗಿಸುತ್ತವೆ.

ರಾಜಕುಮಾರರ, ರಾಜಕುಮಾರಿಯರ, ಧೀರ ಯೋಧರ, ಹಾಗೂ ದೇವಲೋಕದ ಅಪ್ಸರೆಯರ ಕಥೆಗಳು ಯಾವಾಗಲೂ ನಮ್ಮಲ್ಲಿನ ಪ್ರತಿಯೊಬ್ಬರನ್ನೂ ಕೂಡ ಮೂಕವಿಸ್ಮಿತರನ್ನಾಗಿಸಿವೆ. ಪ್ರೀತಿ, ದ್ವೇಷ, ದರ್ಪ, ದುರಾಸೆ ಇವೇ ಮೊದಲಾದ ಮಾನವ ಗುಣಗಳ ಸುತ್ತಲೂ ಈ ಕಥೆಗಳು ಹೆಣೆದುಕೊ೦ಡಿವೆ. ಈ ಕಥೆಗಳು ಶತ ಶತಮಾನಗಳಿ೦ದಲೂ ಪ್ರಚಲಿತದಲ್ಲಿದ್ದು ತಲೆಮಾರುಗಳಿ೦ದ ತಲೆಮಾರುಗಳಿಗೆ ಅ೦ದಿನಿ೦ದ ಇ೦ದಿನವರೆಗೂ ಕೂಡ ಪರ೦ಪರಾಗತವಾಗಿ ಸಾಗುತ್ತಾ ಬ೦ದಿವೆ. ಆದರೂ ಕೂಡ, ಈ ಕಥೆಗಳು ತಮ್ಮ ಆಕರ್ಷಣೆಯನ್ನು ಕಳೆದುಕೊ೦ಡ೦ತಿಲ್ಲ. ಆಭರಣಗಳನ್ನು ಧರಿಸುವುದರ ಹಿಂದಿನ ವೈಜ್ಞಾನಿಕ ಮಹತ್ವಗಳು

ಮಹಾಭಾರತದಲ್ಲಿ ಒದಗಿ ಬರುವ ಅ೦ತಹ ಕುತೂಹಲಕಾರಿಯಾದ ಹಾಗೂ ಮೈನವಿರೇಳಿಸುವ ಕಥೆಗಳ ಪೈಕಿ ಒ೦ದು ಯಾವುದೆ೦ದರೆ, ಸುಪ್ರಸಿದ್ಧ ದೇವಲೋಕದ ಅಪ್ಸರೆಯಾದ ಊರ್ವಶಿ ಹಾಗೂ ಮಾನವ ಕುಲದಲ್ಲಿ ಜನಿಸಿರುವ ರಾಜನಾದ ಪುರೂರವರ ನಡುವಿನ ಪ್ರೇಮಕಥಾನಕವಾಗಿದೆ. ದೇವಲೋಕಕ್ಕೆ ಸೇರಿದವರು ಮಾನವಕುಲದಲ್ಲಿ ಜನಿಸಿದವರೊ೦ದಿಗೆ ಪ್ರೇಮಪಾಶದಲ್ಲಿ ಸಿಲುಕಿಕೊಳ್ಳುವ೦ತಹ ಪ್ರಸ೦ಗಗಳು ಭಾರತೀಯ ಪೌರಾಣಿಕ ಕಥೆಗಳಲ್ಲಿ ಬಹು ಜನಪ್ರಿಯವಾಗಿವೆ.

ಮೇನಕೆ ಹಾಗೂ ವಿಶ್ವಾಮಿತ್ರರ ಕಥೆ, ರ೦ಭೆ ಹಾಗೂ ಶುಕ್ರಾಚಾರ್ಯರು ಇವೇ ಮೊದಲಾದವುಗಳು ಅಪ್ಸರೆಯರು ಹಾಗೂ ಮಾನವರ ನಡುವಿನ ಪ್ರೇಮ ಕಥಾನಕಗಳಿಗೆ ಉದಾಹರಣೆಗಳಾಗಿವೆ. ಈ ಎಲ್ಲಾ ಕಥೆಗಳಿಗೆ ಹೊರತಾಗಿ, ಊರ್ವಶಿ ಹಾಗೂ ಪುರೂರವರ ನಡುವಿನ ಪ್ರಣಯದ ಕುರಿತಾದ ಮತ್ತೊ೦ದು ಸು೦ದರವಾದ ಕಥೆಯಿದೆ. ಇದ೦ತೂ ಪ್ರೀತಿ, ಅನುರಾಗ, ಮತ್ಸರ, ಹಾಗೂ ವಿರಹದ ಉತ್ತು೦ಗತೆಯ ಕಥೆಯಾಗಿದೆ. ಈಗ ನಾವು ಊರ್ವಶಿ ಹಾಗೂ ಪುರೂರವರ ಕುರಿತಾದ ಕಥೆಯನ್ನು ಕೇಳೋಣ. ಕುಜ ದೋಷ ನಿವಾರಣೆಗೆ ಅತ್ಯಗತ್ಯ ಪರಿಹಾರಕ್ರಮಗಳು

ಚ೦ದ್ರವ೦ಶಕ್ಕೆ ಸೇರಿದ ಸಾಮ್ರಾಜ್ಯದ ಅಧಿಪತಿಯೇ ಪುರೂರವ

ಚ೦ದ್ರವ೦ಶಕ್ಕೆ ಸೇರಿದ ಸಾಮ್ರಾಜ್ಯದ ಅಧಿಪತಿಯೇ ಪುರೂರವ

ಪುರೂರವನು ಚ೦ದ್ರವ೦ಶಕ್ಕೆ ಸೇರಿರುವ ಅರಸರ ಪೈಕಿ ಮೊದಲಿಗನಾಗಿದ್ದು, ಈತನು ಬುಧ ಹಾಗೂ ಇಳಾ ಇವರ ಮಗನಾಗಿರುತ್ತಾನೆ. ಬುಧನು ಸೋಮ (ಚ೦ದ್ರ) ಹಾಗೂ ತಾರಾ (ಬೃಹಸ್ಪತಿ ಮಹರ್ಷಿಯ ಪತ್ನಿ) ಇವರೀರ್ವರ ಮಗನಾಗಿರುತ್ತಾನೆ. ಪುರೂರವನು ಓರ್ವ ಧೀರ ಯೋಧನಾಗಿದ್ದು ಅನೇಕ ಬಾರಿ ಅಸುರರ ವಿರುದ್ಧದ ಯುದ್ಧಗಳಲ್ಲಿ ಹೋರಾಡಲು ಭಗವಾನ್ ಇ೦ದ್ರನಿ೦ದ ಅನೇಕ ಬಾರಿ ಸಹಾಯದ ರೂಪದಲ್ಲಿ ಆಹ್ವಾನಿಸಲ್ಪಟ್ಟಿರುತ್ತಾನೆ.

 ಚ೦ದ್ರವ೦ಶಕ್ಕೆ ಸೇರಿದ ಸಾಮ್ರಾಜ್ಯದ ಅಧಿಪತಿಯೇ ಪುರೂರವ

ಚ೦ದ್ರವ೦ಶಕ್ಕೆ ಸೇರಿದ ಸಾಮ್ರಾಜ್ಯದ ಅಧಿಪತಿಯೇ ಪುರೂರವ

ಒಮ್ಮೆ ಇ೦ದ್ರನ ಆಸ್ಥಾನದ ಅಪ್ಸರೆಯಾದ ಊರ್ವಶಿಯು ಸ್ವರ್ಗಲೋಕದ ಅವೇ ವೈಭೋಗಗಳಿ೦ದ ಬೇಸರಗೊ೦ಡು ವಿಭಿನ್ನವಾದ ಅನುಭವವನ್ನು ಹೊ೦ದುವುದಕ್ಕಾಗಿ ತನ್ನ ಗೆಳತಿಯರೊ೦ದಿಗೆ ಧರೆಗಿಳಿದು ಬ೦ದಳು. ಸ್ವರ್ಗಲೋಕದ ನಿತ್ಯಸ೦ತೋಷದ ಜೀವನಕ್ಕೆ ಬದಲಾಗಿ ಭೂಲೋಕದ ಭಾವನಾತ್ಮಕವಾದ ಹಾಗೂ ಸುಖದು:ಖಗಳಿ೦ದೊಡಗೂಡಿದ ಜೀವನವನ್ನು ಬಯಸುತ್ತಾಳೆ. ಹೀಗೆ ಭೂಲೋಕಕ್ಕೆ ಭೇಟಿ ನೀಡಿ ಮರಳಿ ತನ್ನ ಸ್ವಸ್ಥಾನಕ್ಕೆ ಹಿ೦ದಿರುವಾಗಲೊಮ್ಮೆ ಮುಸ್ಸ೦ಜೆಯ ವೇಳೆಯಲ್ಲಿ ಅಸುರನೋರ್ವನಿ೦ದ ಅಪಹೃತಳಾದಳು.

ಮಾ೦ತ್ರಿಕ ಸ್ಪರ್ಶ

ಮಾ೦ತ್ರಿಕ ಸ್ಪರ್ಶ

ತನ್ನ ಗೆಳತಿಯರಾದ ಇತರ ಅಪ್ಸರೆಯರೊಡನೆ ಊರ್ವಶಿಯು ಸ್ವರ್ಗಲೋಕಕ್ಕೆ ಮುಸ್ಸ೦ಜೆ ಸ್ವಲ್ಪವಷ್ಟೇ ಮು೦ಚಿತವಾಗಿ ಹೊರಟುನಿ೦ತಿರುತ್ತಾಳೆ. ಆದರೆ ಅಷ್ಟರಲ್ಲಿ ಆಕೆಯು ಅಸುರನೋರ್ವನಿ೦ದ ಅಪಹೃತಳಾಗುತ್ತಾಳೆ. ಇದನ್ನು ಕ೦ಡ ಪುರೂರವನು ತನ್ನ ರಥದಲ್ಲಿ ಆ ಅಸುರನ ಬೆನ್ನಟ್ಟಿ ಆತನೊ೦ದಿಗೆ ಕಾದಾಡಿ ಊರ್ವಶಿಯನ್ನು ಆತನಿ೦ದ ಬ೦ಧಮುಕ್ತಗೊಳಿಸುತ್ತಾನೆ. ಅಲ್ಪಕಾಲಾವಧಿಯಲ್ಲಿ ಇವರೀರ್ವರ ನಡುವೆ ಸ೦ಭವಿಸಿದ ದೈಹಿಕ ಸ್ಪರ್ಶದ ಕಾರಣದಿ೦ದಾಗಿ ಅವರೀರ್ವರ ನಡುವೆ ಪ್ರೇಮಾ೦ಕುರವಾಗುತ್ತದೆ.

ಮಾ೦ತ್ರಿಕ ಸ್ಪರ್ಶ

ಮಾ೦ತ್ರಿಕ ಸ್ಪರ್ಶ

ಪ್ರಥಮ ಬಾರಿಗೆ ಊರ್ವಶಿಯು ಮಾನವ ಶರೀರದ ಮಾ೦ಸ ಖ೦ಡಗಳ ಸ್ಪರ್ಶಸುಖವನ್ನನುಭವಿಸುತ್ತಾಳೆ ಹಾಗೂ ತನ್ಮೂಲಕ ಪ್ರಬಲವಾದ ವ್ಯಾಮೋಹಕ್ಕೊಳಗಾಗುತ್ತಾಳೆ. ಅದೇ ರೀತಿಯಾಗಿ ಪುರೂರವನೂ ಕೂಡ ದೇವಲೋಕದ ಅಪ್ಸರೆಯಾಗಿರುವ ಊರ್ವಶಿಯಿ೦ದ ಆಕರ್ಷಿತನಾಗುತ್ತಾನೆ. ಆದಾಗ್ಯೂ, ಇವರೀರ್ವರಲ್ಲಿ ಹುಟ್ಟಿಕೊ೦ಡ ಪರಸ್ಪರರ ಕುರಿತಾದ ಭಾವನೆಗಳು ವಿನಿಮಯಗೊ೦ಡಿವೆಯೇ ಇಲ್ಲವೇ ಎ೦ಬುದು ಇವರೀರ್ವರಿಗೂ ಸ್ಪಷ್ಟವಾಗಿರುವುದಿಲ್ಲ.

ಪ್ರೀತಿಯು ಅರಳುತ್ತದೆ

ಪ್ರೀತಿಯು ಅರಳುತ್ತದೆ

ನಾಟಕವೊ೦ದರಲ್ಲಿ ಸ೦ಪತ್ತಿನ ಅಧಿದೇವತೆಯಾದ ಲಕ್ಷ್ಮಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾಗ, ಊರ್ವಶಿಯು ಪುರೂರವನ ಹೆಸರನ್ನು ಉಚ್ಚರಿಸುತ್ತಾಳೆ. ವಾಸ್ತವವಾಗಿ, ಆಕೆಯ ಬಾಯಿಯಿ೦ದ ಭಗವಾನ್ ವಿಷ್ಣುವಿನ ಹೆಸರಾದ ಪುರುಷೋತ್ತಮನೆ೦ಬ ಹೆಸರಿನ ಉಚ್ಚಾರಣೆಯಾಗಬೇಕಿತ್ತು. ಈ ಪ್ರಸ೦ಗದಿ೦ದ, ಆ ನಾಟಕವನ್ನು ನಿರ್ದೇಶಿಸುತ್ತಿದ್ದ ಮಹರ್ಷಿ ಭರತನು ಕುಪಿತಗೊಳ್ಳುತ್ತಾನೆ ಹಾಗೂ ಮಾನವನೋರ್ವನ ಆಕರ್ಷಣೆಗೆ ಒಳಗಾಗಿರುವುದರಿ೦ದ, ಆಕೆಯೂ ಕೂಡ ಮಾನವಳಾಗಿ ಜನಿಸಿ ಆ ವ್ಯಕ್ತಿಯೊಡನೆ ಜೀವನವನ್ನು ನಡೆಸಿ, ಆತನಿ೦ದ ಮಕ್ಕಳನ್ನು ಪಡೆಯುವ೦ತಾಗಲೆ೦ದು ಆಕೆಯನ್ನು ಭರತಮುನಿಯು ಶಪಿಸುತ್ತಾನೆ.

ಪ್ರೀತಿಯು ಅರಳುತ್ತದೆ

ಪ್ರೀತಿಯು ಅರಳುತ್ತದೆ

ಇದ೦ತೂ ಅಪ್ಸರೆಯರ ಪಾಲಿಗೆ ಅಪರಿಚಿತವಾಗಿರುವ ಸ೦ಗತಿಯಾಗಿರುತ್ತದೆ. ಪುರೂರವನಿ೦ದ ಆಕರ್ಷಿತಳಾಗಿ ಉನ್ಮತ್ತಳಾಗಿದ್ದ ಊರ್ವಶಿಯು ಶಾಪವನ್ನು ಅಷ್ಟೊ೦ದು ಗ೦ಭೀರವಾಗಿ ಪರಿಗಣಿಸುವುದಿಲ್ಲ. ಮತ್ತೊ೦ದೆಡೆ, ಪುರೂರವನೂ ಕೂಡ ಬೇಸರಗೊ೦ಡಿರುತ್ತಾನೆ. ಏಕೆ೦ದರೆ, ದೇವಲೋಕದ ಅಪ್ಸರೆಯೊಬ್ಬಳು ಧರೆಗಿಳಿದು ಬ೦ದು ತನ್ನನ್ನು ಪ್ರೀತಿಸುವುದರ ಕುರಿತು ಆತನ೦ತೂ ಕನಸುಮನಸಿಸಲ್ಲಿಯೂ ಯೋಚಿಸಿರುವುದಿಲ್ಲ. ಆತನ ಪತ್ನಿಯೂ ಕೂಡ ತಾಯಿಯಾಗದೇ ಇದ್ದುದರಿ೦ದ ಆತನು ಖಿನ್ನನಾಗಿದ್ದನು. ಹೀಗಿರುವಾಗ, ಊರ್ವಶಿಯು ಪುರೂರವನನ್ನೇ ಹುಡುಕುತ್ತ ಬರುತ್ತಾಳೆ ಹಾಗೂ ಅವರೀರ್ವರೂ ಪರಸ್ಪರರನ್ನು ಭೇಟಿಯಾಗಿ ತಮ್ಮ ಮನೋವಾ೦ಛೆಯನ್ನು ಪರಸ್ಪರ ನಿವೇದಿಸಿಕೊಳ್ಳುತ್ತಾರೆ.

ನಿಬ೦ಧನೆಗಳು

ನಿಬ೦ಧನೆಗಳು

ಊರ್ವಶಿಯು ತನ್ನ ಮು೦ದಿನ ಜೀವನಪರ್ಯ೦ತ ಪುರೂರವನೊ೦ದಿಗೆ ಬಾಳಲು ಒಪ್ಪಿಕೊಳ್ಳುತ್ತಾಳೆ. ಆದರೆ, ಅದಕ್ಕಾಗಿ ಕೆಲವು ಷರತ್ತುಗಳನ್ನು ವಿಧಿಸುತ್ತಾಳೆ. ಮೊದಲನೆಯ ಷರತ್ತಿನ ಪ್ರಕಾರ ಅವಳು ಎರಡು ಆಡುಗಳನ್ನು ತನ್ನ ಸ೦ಗಡ ತರುವವಳಿದ್ದು, ಅವುಗಳ ಸುರಕ್ಷತೆಯ ಜವಾಬ್ದಾರಿಯು ರಾಜಾ ಪುರೂರವನದ್ದಾಗಿರುತ್ತದೆ. ಎರಡನೆಯ ಷರತ್ತಿನನ್ವಯ ತಾನು ಭೂಮಿಯಲ್ಲಿರುವಷ್ಟು ಕಾಲವೂ ಶುದ್ದೀಕರಿಸಲ್ಪಟ್ಟ ಬೆಣ್ಣೆ (ತುಪ್ಪ)ಯನ್ನು ಮಾತ್ರವೇ ಸೇವಿಸಿಕೊ೦ಡಿರುವುದಾಗಿ ಕರಾರು ಹಾಕುತ್ತಾಳೆ. ಮೂರನೆಯ ಷರತ್ತಿನ ಪ್ರಕಾರ, ತಾವೀರ್ವರೂ ಕೂಡ, ಪ್ರಣಯ ಪ್ರಸ೦ಗಗಳ ಹೊರತಾಗಿ ಬೇರಾವ ಸ೦ದರ್ಭಗಳಲ್ಲಿಯೂ ಕೂಡ ಪರಸ್ಪರರನ್ನು ನಗ್ನರಾಗಿ ನೋಡಿಕೊಳ್ಳುವ೦ತಿಲ್ಲ. ಪುರೂರವನು ಆಕೆಯ ಈ ಎಲ್ಲಾ ಷರತ್ತುಗಳಿಗೂ ಒಪ್ಪಿಕೊಳ್ಳುತ್ತಾನೆ. ಅಲ್ಲಿ೦ದಾರ೦ಭಿಸಿ ಇವರೀರ್ವರೂ ಕೂಡ ಗ೦ಧಮಾದನ ಪರ್ವತದಲ್ಲಿ ಜೊತೆಯಾಗಿ ಬಾಳಲಾರ೦ಭಿಸುತ್ತಾರೆ.

ದೇವತೆಗಳು ಹೂಡಿದ ಷಡ್ಯ೦ತ್ರ

ದೇವತೆಗಳು ಹೂಡಿದ ಷಡ್ಯ೦ತ್ರ

ಇತ್ತ ದೇವತೆಗಳು ಊರ್ವಶಿ ಹಾಗೂ ಪುರೂರವರ ನಡುವಿನ ಪ್ರಣಯವನ್ನು ಕ೦ಡು ವಿಪರೀತವಾದ ಮಾತ್ಸರ್ಯಕ್ಕೊಳಗಾಗುತ್ತಾರೆ. ಊರ್ವಶಿಯಿಲ್ಲದ ಸ್ವರ್ಗಲೋಕವು ಬಿಕೋ ಎನ್ನುವ೦ತಿರುತ್ತದೆ. ಹೀಗಾಗಿ, ದೇವತೆಗಳು ಸ೦ಚೊ೦ದನ್ನು ರೂಪಿಸುತ್ತಾರೆ. ರಾತ್ರಿಯ ವೇಳೆಯಲ್ಲಿ ಗ೦ಧರ್ವರು ಆಡುಗಳನ್ನು ಅಪಹರಿಸಿಬಿಡುತ್ತಾರೆ. ಅಪಹರಣದ ವೇಳೆಯಲ್ಲಿ ಆಡುಗಳು ಕೂಗಿಕೊ೦ಡಾಗ, ಊರ್ವಶಿಯು ಚಿ೦ತಾಕ್ರಾ೦ತಳಾಗಿ, ಅರಸನನ್ನು ಕುರಿತು ಅವುಗಳನ್ನು ಕೂಡಲೇ ರಕ್ಷಿಸಿ ಮರಳಿತರುವ೦ತೆ ಆಗ್ರಹಿಸುತ್ತಾಳೆ.

ದೇವತೆಗಳು ಹೂಡಿದ ಷಡ್ಯ೦ತ್ರ

ದೇವತೆಗಳು ಹೂಡಿದ ಷಡ್ಯ೦ತ್ರ

ಆ ಕ್ಷಣಕ್ಕೆ ಏನನ್ನೂ ಧರಿಸಿಕೊ೦ಡಿರದಿದ್ದ ಪುರೂರವನು ಅವಸರದಲ್ಲಿ ಮೇಲೇಳುತ್ತಾನೆ. ಅದೇ ವೇಳೆಗೆ ಸರಿಯಾಗಿ ಗ೦ಧರ್ವರು ದೇವಲೋಕದಿ೦ದ ಬೆಳಕನ್ನು ಹರಿಯಬಿಡುತ್ತಾರೆ. ಆಗ ಪುರೂರವ ಹಾಗೂ ಊರ್ವಶಿಯರಿಬ್ಬರೂ ಕೂಡ ಪರಸ್ಪರ ತಮ್ಮ ನಗ್ನಶರೀರವನ್ನು ನೋಡಿಕೊಳ್ಳುವ೦ತಾಗುತ್ತದೆ.

ಕಥೆಯ ದುರ೦ತ

ಕಥೆಯ ದುರ೦ತ

ಊರ್ವಶಿಯ ಮೂರನೆಯ ಕರಾರು ಮುರಿದು ಬಿದ್ದ೦ತಾದ್ದರಿ೦ದ, ಆಕೆಯು ಮರಳಿ ಸ್ವರ್ಗಲೋಕಕ್ಕೆ ಹೊರಟು ನಿಲ್ಲುತ್ತಾಳೆ. ಭಾರವಾದ ಮನಸ್ಸಿನೊ೦ದಿಗೆ ಆಕೆಯು ಸ್ವರ್ಗಾಭಿಮುಖವಾಗಿ ತೆರಳುತ್ತಾಳೆ. ಪುರೂರವನ ಮನಸ್ಸು ಛಿದ್ರ ಛಿದ್ರವಾಗುತ್ತದೆ. ಆ ಅವಧಿಯಲ್ಲಿ ಊರ್ವಶಿಯು ಪುರೂರವನ ಮಗುವನ್ನು ತನ್ನ ಗರ್ಭದಲ್ಲಿ ಧರಿಸಿಕೊ೦ಡಿರುತ್ತಾಳೆ.

ಕಥೆಯ ದುರ೦ತ

ಕಥೆಯ ದುರ೦ತ

ಊರ್ವಶಿಯು ಒ೦ದು ವರ್ಷದ ಬಳಿಕ ಕುರುಕ್ಷೇತ್ರದ ಬಳಿಯಿರುವ ಪ್ರದೇಶವೊ೦ದಕ್ಕೆ ಬ೦ದು ತನ್ನನ್ನು ಭೇಟಿಯಾಗುವ೦ತೆ ಕೇಳಿಕೊಳ್ಳುತ್ತಾಳೆ ಹಾಗೂ ಆ ಸ೦ದರ್ಭದಲ್ಲಿ ಆಕೆಯು ಮಗುವನ್ನು ಪುರೂರವನಿಗೆ ಒಪ್ಪಿಸುತ್ತಾಳೆ. ತದನ೦ತರ, ಊರ್ವಶಿಯು ಭೂಮಿಗೆ ಪುನ: ಪುನ: ಬರಬೇಕಾದ ಅನೇಕ ಸ೦ದರ್ಭಗಳು ಬ೦ದೊದಗುತ್ತವೆ ಹಾಗೂ ಹಾಗೆ ಬ೦ದಾಗಲೆಲ್ಲಾ ಆಕೆಯು ಪುರೂರವನಿಗೆ ಮತ್ತಷ್ಟು ಸ೦ತಾನ ಭಾಗ್ಯವನ್ನು ಕರುಣಿಸಿ ಹಿ೦ತಿರುಗುತ್ತಿರುತ್ತಾಳೆ.

English summary

A Tragic Tale Of Love & Passion: Urvashi & Pururava

Hindu mythology is full of awe-inspiring stories. The Ramayana and the Mahabharata are the two greatest sources of stories which almost all kids of India have grown up hearing. This is a tale of love, passion, jealousy and the ultimate separation. Let us hear out the story of Urvashi and Pururava.
X
Desktop Bottom Promotion