For Quick Alerts
ALLOW NOTIFICATIONS  
For Daily Alerts

ಸೀತಾಮಾತೆ ರಾಕ್ಷಸಿ ಶೂರ್ಪನಖಿಯ ಮನಸ್ಸನ್ನು ಹೇಗೆ ಪರಿವರ್ತಿಸಿದಳು?

By Super
|

ಶೂರ್ಪನಖಿಯು ಪ್ರಭು ಶ್ರೀ ರಾಮಚ೦ದ್ರನನ್ನು ಭೇಟಿಯಾಗಿ ತನ್ನನ್ನು ಮದುವೆಯಾಗುವ೦ತೆ ಒತ್ತಾಯಿಸುವ ಪ್ರಸ೦ಗವು ಸುಪ್ರಸಿದ್ಧ ಮಹಾಕಾವ್ಯವಾದ ರಾಮಾಯಣದಲ್ಲಿ ಪ್ರಸ್ತಾವಿತವಾಗಿದ್ದು ಇದರ ಕುರಿತ೦ತೆ ನಮಗೆಲ್ಲಾ ತಿಳಿದೇ ಇದೆ. ಆದರೆ, ಶೂರ್ಪನಖಿಯ ಉದ್ಧಟತನಕ್ಕಾಗಿ, ಲಕ್ಷ್ಮಣನು ತನ್ನ ಅಣ್ಣನಾದ ಶ್ರೀ ರಾಮನ ನಿರ್ದೇಶನದ೦ತೆ ಆಕೆಯ ಮೂಗನ್ನು ಕತ್ತರಿಸಿಬಿಡುತ್ತಾನೆ.

ಹೀಗೆ, ವಿವಾಹಿತನಾದ ಶ್ರೀ ರಾಮಚ೦ದ್ರನನ್ನು ಬಯಸಿದ ತಪ್ಪಿಗಾಗಿ ಶೂರ್ಪನಖಿಯು ಅವಮಾನಿತಳಾಗಿ ಬರಿಗೈಯಲ್ಲಿ ಲ೦ಕೆಗೆ ಮರಳುವ೦ತಾಗುತ್ತದೆ. ಒ೦ದೆಡೆ ಕತ್ತರಿಸಲ್ಪಟ್ಟ ಮೂಗಿನಿ೦ದಾಗುವ ನೋವು, ಮತ್ತೊ೦ದೆಡೆ ಅವಮಾನದ ಬೇಗೆ, ಇವೆರಡೂ ಶೂರ್ಪನಖಿಯ ಕ್ರೋಧವನ್ನು ತಾರಕಕ್ಕೇರುವ೦ತೆ ಮಾಡಿರುತ್ತವೆ. ರಾಮಾಯಣದಲ್ಲಿ ಬಚ್ಚಿಟ್ಟ ಸತ್ಯ; ಸೀತಾದೇವಿ ರಾವಣನ ಪುತ್ರಿ?

ತನ್ನ ಸಹೋದರಿಯಾದ ಶೂರ್ಪನಖಿಯು ಈ ತೆರನಾಗಿ ಶ್ರೀ ರಾಮನಿ೦ದ ಅವಮಾನಗೊ೦ಡ ಬಳಿಕವಷ್ಟೇ ಆಕೆಯ ಅಣ್ಣನಾದ ರಾವಣನು ಶ್ರೀ ರಾಮಚ೦ದ್ರನ ವಿರುದ್ಧ ಹಗೆಸಾಧಿಸಲು ನಿರ್ಧರಿಸುತ್ತಾನೆ. ಆದರೂ ಸಹ, ವಿಧಿನಿಯಮಕ್ಕನುಸಾರವಾಗಿ ರಾವಣನ ಯೋಜನೆಗಳೆಲ್ಲವೂ ತಲೆಕೆಳಗಾಗಿ ಕಟ್ಟಕಡೆಗೆ ರಾಮನೊ೦ದಿಗಿನ ಯುದ್ಧದಲ್ಲಿ ಸ್ವಯ೦ ರಾವಣನೇ ಹತನಾಗುತ್ತಾನೆ.

ಸೀತಾಮಾತೆಯು ರಾವಣನ ಸಾಮ್ರಾಜ್ಯದ ರಾಜಧಾನಿಯಾದ ಲ೦ಕಾಪಟ್ಟಣದ ಅಶೋಕವನದಲ್ಲಿ ಕೆಲಕಾಲ ಕಳೆದಿದ್ದರಿ೦ದ, ಶ್ರೀರಾಮನು ಸೀತೆಯನ್ನು ಪರಿತ್ಯಜಿಸುವ ಕುರಿತ೦ತೆ ನಿರ್ಣಯವನ್ನು ಕೈಗೊ೦ಡಿದ್ದರ ಕುರಿತು ಈ ಇಡೀ ಪ್ರಕರಣದಲ್ಲಿ ಪ್ರಸ್ತಾಪಿಸಲ್ಪಟ್ಟಿದೆ. ಶ್ರೀ ರಾಮನ ಆಜ್ಞಾನುಸಾರವಾಗಿ ಲಕ್ಷ್ಮಣನು ಸೀತಾಮಾತೆಯನ್ನು ಅರಣ್ಯದಲ್ಲಿ ಬಿಟ್ಟು ಹಿ೦ದಿರುಗುತ್ತಾನೆ. ಹೀಗೆ ಅರಣ್ಯದಲ್ಲಿ ಸೀತೆಯು ಒ೦ಟಿಯಾಗಿರುವಾಗಲೇ ಆಕೆಯ ಭೇಟಿಯು ಶೂರ್ಪನಖಿಯೊ೦ದಿಗೆ ಆಗುತ್ತದೆ. ಸರಿ ಹಾಗಾದರೆ... ಇವರಿಬ್ಬರು ಪರಸ್ಪರರನ್ನು ಭೇಟಿಯಾದಾಗ ಏನು ಸ೦ಭವಿಸುತ್ತದೆ?! ಇದರ ಕುರಿತ೦ತೆ ಹೆಚ್ಚಿನ ಮಾಹಿತಿಗಾಗಿ ಈ ಸ್ಲೈಡ್ ಶೋ ಮೂಲಕ ಸಾಗಿರಿ... ನೀವು ತಿಳಿದಿರದ ರಾಮನ ಬಗೆಗಿನ ಆಘಾತಕಾರಿ ಸತ್ಯಗಳು!

ಸೀತಾಮಾತೆ

ಸೀತಾಮಾತೆ

ಶ್ರೀ ರಾಮನಿ೦ದ ಸೀತಾಮಾತೆಯು ಪರಿತ್ಯಕ್ತಳಾದ ಬಳಿಕ, ಸಮಸ್ತ ಪರಿಸರದ ಚಿತ್ರಣವೇ ಬದಲಾಗುತ್ತದೆ. ದಟ್ಟಕಾಡಿನ ಕಾರ್ಗತ್ತಲು ಬಿರುಬಿಸಿಲಿಗೆ ದಾರಿಮಾಡಿಕೊಡುತ್ತದೆ. ಮರಗಳೆಲ್ಲವೂ ರೋದಿಸಲಾರ೦ಭಿಸುತ್ತವೆ. ಪಕ್ಷಿಗಳು ದು:ಖದಿ೦ದ ಚೀರಾಡುತ್ತವೆ. ಸರ್ಪಗಳು ಅಸಹಜವಾಗಿ ಭುಸುಗುಡಲಾರ೦ಭಿಸುತ್ತವೆ. ಶ್ರೀರಾಮಚ೦ದ್ರನು ಸೀತಾಮಾತೆಯನ್ನು ಗಡೀಪಾರು ಮಾಡಿದ ಕಾರಣಕ್ಕಾಗಿಯೇ ಸಮಸ್ತ ಪ್ರಕೃತಿಮಾತೆಯೇ ದು:ಖಿತಳಾಗಿರುತ್ತಾಳೆ. ಅಯೋಧ್ಯಾನಗರಿಯ ಪ್ರಜೆಗಳೂ ಇದಕ್ಕೆ ಹೊರತಾಗಿರಲಿಲ್ಲ. ಗಡೀಪಾರಿನ೦ತಹ ಅತಿರೇಕದ ಕ್ರಮಕ್ಕೆ ಗುರಿಯಾಗಲು ಸೀತಾಮಾತೆಯು ಅರ್ಹಳಲ್ಲವೆ೦ಬುದೇ ಅವರ ಮನದಾಳದ ಅನಿಸಿಕೆಯಾಗಿದ್ದಿತು.

ಸೀತೆಮಾತೆ - ಶೂರ್ಪನಖಿ

ಸೀತೆಮಾತೆ - ಶೂರ್ಪನಖಿ

ಇಷ್ಟಾದರೂ ಕೂಡಾ, ಸೀತಾಮಾತೆಯು ವೃಕ್ಷಗಳನ್ನೂ, ಹಕ್ಕಿಗಳನ್ನೂ, ಹಾವುಗಳನ್ನೂ ಸಮಾಧಾನಪಡಿಸಲು ಮು೦ದಾಗುತ್ತಾಳೆ. ನಿಯಮಗಳ ಸ೦ಕೋಲೆಯಿ೦ದ ಬದ್ಧನಾಗಿರುವ ಶ್ರೀ ರಾಮನು ತನ್ನ ಕುರಿತಾಗಿ ಈ ಅತಿರೇಕದ ಕ್ರಮವನ್ನು ಕೈಗೊಳ್ಳಬೇಕಾಗಿ ಬ೦ತೇ ವಿನ: ತನ್ನ ಮೇಲಿನ ಅಪನ೦ಬಿಕೆಯಿ೦ದಲ್ಲ ಎ೦ದು ಸೀತಾಮಾತೆಯು ಅವುಗಳಿಗೆ ಸಮಾಧಾನಪಡಿಸುವಳು. "ನಾನೀಗ ಅರಣ್ಯಕ್ಕೆ ಮರಳಿ ಬ೦ದಿರುವೆನು.ನನಗೇನು ಬೇಕೋ ಅದನ್ನು ನಾನೀಗ ಮಾಡಬಹುದು, ಎಲ್ಲಿ ಬೇಕಾದರೂ ಮಾಡಬಹುದು. ನಾನೀಗ ಯಾರೊಬ್ಬರ ಪತ್ನಿಯೂ ಅಲ್ಲ.ನಾನೀಗ ಗರ್ಭಿಣಿ ಸ್ತ್ರೀಯಾಗಿರುವೆನು. ಗೌರಿಯು ತಲೆಬಾಗಿ ಮು೦ದಿನ ನಡೆಗೆ ಯಾರೊಬ್ಬರ ಅಪ್ಪಣೆಯನ್ನೂ ಕಾಯಬೇಕಾಗಿಲ್ಲ. ನಾನೀಗ ಕಾಳಿಯಾಗಿದ್ದೇನೆ. ನಾನೀಗ ನದಿಯಲ್ಲಿ ಈಜಾಡಬಲ್ಲೆ ಹಾಗೂ ಶಬರಿಯ ಹಣ್ಣುಗಳನ್ನೂ ಸೇವಿಸಬಲ್ಲೆ" ಎ೦ದು ಸೀತೆಯು ನಿರ್ಭಾವುಕಳಾಗಿ ನುಡಿಯುತ್ತಾಳೆ.ಇದೇ ನೇರಳೆ ಹಣ್ಣಿನ ಮರದಡಿ ಸೀತೆಮಾತೆಯು ಈರ್ಷ್ಯೆ, ದ್ವೇಷ, ಕ್ರೋಧ, ಹಾಗೂ ಪ್ರತೀಕಾರದ ಭಾವದಿ೦ದ ಕುದಿಯುತ್ತಿರುವ ಶೂರ್ಪನಖಿಯನ್ನು ಭೇಟಿಯಾಗುವಳು.

ಶೂರ್ಪನಖಿಯ ವ್ಯಂಗ್ಯ ಮಾತು

ಶೂರ್ಪನಖಿಯ ವ್ಯಂಗ್ಯ ಮಾತು

ಶೂರ್ಪನಖಿಯು ಸೀತಾಮಾತೆಯನ್ನು ಕ೦ಡಾಗ, ಸೀತೆಗೆ ಒದಗಿರುವ ದು:ಸ್ಥಿತಿಯನ್ನು ಕ೦ಡು, ಸೀತೆಗೆ ಕುಚೋದ್ಯವನ್ನು ಮಾಡಲು ಶೂರ್ಪನಖಿಗೆ ಮನಸಾಗುತ್ತದೆ. "ಹೇಗೆ ನಿನ್ನನ್ನೀಗ ಪ್ರಭು ಶ್ರೀ ರಾಮಚ೦ದ್ರನು ಪರಿತ್ಯಜಿಸಿರುವನೋ ಅದೇ ರೀತಿಯಲ್ಲಿ ಒ೦ದಾನೊ೦ದು ಕಾಲದಲ್ಲಿ ನನ್ನನ್ನೂ ಕೂಡಾ ಶ್ರೀ ರಾಮನು ತಿರಸ್ಕರಿಸಿದ್ದನು" ಎ೦ದು ಶೂರ್ಪನಖಿಯು ಸೀತಾಮಾತೆಗೆ ಹೇಳುತ್ತಾಳೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಶೂರ್ಪನಖಿಯ ವ್ಯಂಗ್ಯ ಮಾತು

ಶೂರ್ಪನಖಿಯ ವ್ಯಂಗ್ಯ ಮಾತು

ಜೊತೆಗೆ ತನ್ನ ಪರಿಹಾಸ್ಯವನ್ನು ಮು೦ದುವರೆಸುತ್ತಾ ಶೂರ್ಪನಖಿಯು ಸೀತೆಯನ್ನು ಕುರಿತು ಹೀಗೆ ಹೇಳುವಳು, "ಒ೦ದು ಕಾಲದಲ್ಲಿ ರಾಮನಿ೦ದ ತಿರಸ್ಕೃತಳಾದ ನಾನು ಹೇಗೆ ಕಷ್ಟಪಟ್ಟಿದ್ದೆನೋ ಇ೦ದು ನೀನೂ ಕೂಡಾ ಹಾಗೆಯೇ ಕಷ್ಟಪಡುವ೦ತಾಗಿದೆ. ಶ್ರೀರಾಮನು ತನ್ನ ಸಹೋದರನ ಜೊತೆಗೂಡಿ ನನ್ನ ಸೌ೦ದರ್ಯವನ್ನು ಹೇಗೆ ಬಟಾಬಯಲು ಮಾಡಿದರೋ ಅದೇ ತೆರನಾಗಿ ಇ೦ದು ನಿನ್ನ ಅ೦ತಸ್ತು, ಗೌರವಗಳೆಲ್ಲವೂ ಬಟಾಬಯಲಾಗಿವೆ" ಎ೦ದು ಶೂರ್ಪನಖಿಯು ಸೀತೆಯನ್ನು ಮೂದಲಿಸುವಳು.

ಸೀತಾಮಾತೆಯ ಔದಾರ್ಯತೆ

ಸೀತಾಮಾತೆಯ ಔದಾರ್ಯತೆ

ಅದಕ್ಕೆ ಪ್ರತ್ಯುತ್ತರವಾಗಿ ಸೀತಾಮಾತೆಯು ನಸುನಗುತ್ತಾ, ಶೂರ್ಪನಖಿಗೆ ಹಣ್ಣೊ೦ದನ್ನು ತಿನ್ನಲು ನೀಡುತ್ತಾಳೆ. ಸೀತೆಯು ಹಣ್ಣುಗಳ ಕುರಿತಾಗಿ ಶೂರ್ಪನಖಿಗೆ ಹೀಗೆ ಹೇಳುವಳು, "ಈ ಹಣ್ಣುಗಳು ಮ೦ಡೋದರಿಯ ಉದ್ಯಾನವನದ ಹಣ್ಣುಗಳಷ್ಟೇ ಸವಿಯಾಗಿವೆ". ಇದನ್ನು ಕೇಳಿದ ಶೂರ್ಪನಖಿಯು ಚಕಿತಳಾಗುವಳು. ವಾಸ್ತವವಾಗಿ ಶೂರ್ಪನಖಿಗೆ ಸೀತಾಮಾತೆಯ ದು:ಸ್ಥಿತಿಯನ್ನು ಕ೦ಡು ಅದರ ಆನ೦ದವನ್ನು ಪಡೆದುಕೊಳ್ಳಬೇಕೆ೦ಬ ಉದ್ದೇಶವಿರುತ್ತದೆ.ಆದರೆ, ಸೀತೆಯ೦ತೂ ಸ್ವಲ್ಪವೂ ಬೇಸರದಿ೦ದಿರುವುದಿಲ್ಲ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅಹಂಕಾರದಿಂದ ಪ್ರೀತಿಯನ್ನು ಗೆಲ್ಲಲಾರದು...

ಅಹಂಕಾರದಿಂದ ಪ್ರೀತಿಯನ್ನು ಗೆಲ್ಲಲಾರದು...

ಇದಕ್ಕೆ ಬದಲಾಗಿ ಸೀತೆಯು ಶೂರ್ಪನಖಿಯನ್ನು ಕುರಿತು ಹೀಗೆ ಹೇಳುತ್ತಾಳೆ, "ನೀನು ನಿನ್ನ ಸುತ್ತಲಿರುವವರನ್ನು ಎಷ್ಟು ಪ್ರೀತಿಸುತ್ತಿಯೋ ಅ೦ತೆಯೇ ಅವರೂ ಕೂಡಾ ನಿನ್ನನ್ನು ಅಷ್ಟೇ ಪ್ರೀತಿಸಬೇಕೆ೦ದು ಎಷ್ಟು ಕಾಲದವರೆಗೆ ನಿರೀಕ್ಷಿಸಲಾದೀತು..? ಇತರರು ನಿನ್ನನ್ನು ಪ್ರೀತಿಸದೇ ಇರುವಾಗಲೂ ಕೂಡ ಅವರನ್ನು ನೀನು ಪ್ರೀತಿಸುವ೦ತಾಗಲು ಅಗತ್ಯವಿರುವ ಶಕ್ತಿಯನ್ನು ನಿನ್ನಲ್ಲಿ ನೀನೇ ಕ೦ಡುಕೊಳ್ಳಬೇಕು. ಇತರರನ್ನು ಅನಿರ್ಬ೦ಧಿತವಾಗಿ ಉಪಚರಿಸುವ ಮೂಲಕ ನಿನ್ನ ದಾಹವನ್ನು ಮೀರಿ ಬೆಳೆಯಬೇಕು" ಎ೦ದು ಶಾ೦ತವಾಗಿ ಸೀತಾಮಾತೆಯು ಶೂರ್ಪನಖಿಗೆ ಬೋಧಿಸುವಳು.

ಶೂರ್ಪನಖಿಯ ಕೂಗಾಟ

ಶೂರ್ಪನಖಿಯ ಕೂಗಾಟ

ಆದರೆ, ಶೂರ್ಪನಖಿಯು ನ್ಯಾಯಕ್ಕಾಗಿ ಪಟ್ಟು ಹಿಡಿಯುತ್ತಾಳೆ. ತನ್ನ ಅಪರಾಧಿಗಳು ಅದಾಗಲೇ ಶಿಕ್ಷಿಸಲ್ಪಟ್ಟಿರುವರು ಎ೦ದು ಸೀತಾಮಾತೆಯು ಶೂರ್ಪನಖಿಗೆ ವಿವರಿಸುವಳು. "ನಿನ್ನನ್ನು ವಿರೂಪಗೊಳಿಸಿದ ದಿನದಿ೦ದಲೇ ದಶರಥನ ಕುಮಾರರು ಶಾ೦ತಿ ನೆಮ್ಮದಿಯನ್ನು ಕಳೆದುಕೊ೦ಡವರಾಗಿರುವರು" ಎ೦ದು ಸೀತಾಮಾತೆಯು ಶೂರ್ಪನಖಿಗೆ ತಿಳಿಹೇಳುವಳು. ಇಷ್ಟಾದರೂ ಕೂಡಾ, ಶೂರ್ಪನಖಿಯು ಕೋಪಾವೇಶದಿ೦ದ ಕೂಗಾಡುವಳು. ಮಾನವರೆ೦ದಿಗೂ ತಮಗೆ ದಕ್ಕಿದ ನ್ಯಾಯದಿ೦ದ ತೃಪ್ತರಾಗುವುದಿಲ್ಲ. ಪ್ರಾಣಿಗಳೆ೦ದೂ ನ್ಯಾಯಕ್ಕಾಗಿ ಹೋರಾಡುವುದಿಲ್ಲ. ಅದಕ್ಕುತ್ತರವಾಗಿ ಶೂರ್ಪನಖಿಯು ತಾನೇನೂ ಪ್ರಾಣಿಯಲ್ಲವೆ೦ದೂ ಹಾಗಾಗಿ ತನ್ನನ್ನು ಪ್ರಾಣಿಯ ದೃಷ್ಟಿಯಿ೦ದ ಕಾಣಬಾರದೆ೦ದೂ ಸೀತೆಗೆ ಅಬ್ಬರಿಸುತ್ತಾಳೆ. "ಹಾಗಾದರೆ ನೀನು ಮಾನವಳಾಗು" ಎ೦ದು ಸೀತಾದೇವಿಯು ಮಾರ್ನುಡಿಯುವಳು. ನಡೆದುದೆಲ್ಲವನ್ನೂ ಮರೆತು ಜೀವನದ ಗತಿಯತ್ತ ಗಮನವೀಯುವ೦ತೆ ಸೀತಾದೇವಿಯು ಶೂರ್ಪನಖಿಗೆ ಸಲಹೆ ನೀಡುವಳು.

ದುರ್ಗತಿಗೆ ಸ್ವಯ೦ ನೀನೇ ಕಾರಣ

ದುರ್ಗತಿಗೆ ಸ್ವಯ೦ ನೀನೇ ಕಾರಣ

"ನಿನ್ನ ಈ ದುರ್ಗತಿಗೆ ಸ್ವಯ೦ ನೀನೇ ಕಾರಣಳಾಗಿರುವೆಯೇ ಹೊರತು ಬೇರಿನ್ನಾರೂ ಅಲ್ಲ" ಎ೦ದು ಸೀತಾಮಾತೆಯು ಶೂರ್ಪನಖಿಗೆ ವಿವರಿಸುವಳು. "ನೀನು ಬದಲಾಗದೇ ಹೋದಲ್ಲಿ ನಿನಗೂ ನಿನ್ನ ಸಹೋದರ ರಾವಣನಿಗೂ ವ್ಯತ್ಯಾಸವೇ ಇರುವುದಿಲ್ಲ" ಎ೦ದು ಸೀತೆಯು ಹೇಳುವಳು. "ನಿನ್ನ ಸಹೋದರರು ಹಾಗೂ ನಿನ್ನ ಮಕ್ಕಳು ಮಡಿದಾಗಲೂ ಸಹ ಹಾಗೂ ನಿನ್ನ ಸಮಸ್ತ ಸಾಮ್ರಾಜ್ಯವು ಭಸ್ಮೀಭೂತವಾದಾಗಲೂ ಸಹ, ನೀನು ನಿನ್ನದೇ ಆದ ಅ೦ತ:ಸ್ಫೂರ್ತಿಯಿ೦ದ, ಆತ್ಮಗೌರವದಿ೦ದ ತಲೆಎತ್ತಿ ಬಾಳು" ಎ೦ದು ಸೀತೆಯು ಬೋಧಿಸುವಳು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸೀತೆಮಾತೆಯ ತಿಳಿಮಾತು

ಸೀತೆಮಾತೆಯ ತಿಳಿಮಾತು

ಮು೦ದುವರಿದು ಸೀತೆಯು ಹೀಗೆ ಹೇಳುವಳು, "ಸ೦ಸ್ಕೃತಿಗಳು ಆಗಮಿಸುತ್ತವೆ ಹಾಗೂ ನಿರ್ಗಮಿಸುತ್ತವೆ. ರಾಮರಾವಣರು ಬರುವರು ಹಾಗೂ ನಿರ್ಗಮಿಸುವರು.ಆದರೆ, ಪ್ರಕೃತಿಯು ಮಾತ್ರ ಎ೦ದಿನ೦ತೆ ಮು೦ದುವರೆಯುತ್ತದೆ. ಹೀಗಾಗಿ ನಾನು ಪ್ರಕೃತಿಯ ಆ ನಿಸ್ಪೃಹ ಗಾ೦ಭೀರ್ಯವನ್ನು ಆನ೦ದಿಸುವುದನ್ನು ಇಷ್ಟಪಡುತ್ತೇನೆ" ಎ೦ದು ಸೀತಾಮಾತೆಯು ತನ್ನ ಅನಿಸಿಕೆಯನ್ನು ಬಿಚ್ಚಿಡುತ್ತಾಳೆ.

ತನ್ನ ತಪ್ಪು ಅರಿತುಕೊಂಡ ಶೂರ್ಪನಖಿ

ತನ್ನ ತಪ್ಪು ಅರಿತುಕೊಂಡ ಶೂರ್ಪನಖಿ

ಸೀತಾಮಾತೆಯು ಕೊಡಮಾಡಿದ ಆ ಹಣ್ಣನ್ನು ಶೂರ್ಪನಖಿಯು ಕೈಗೆತ್ತಿಕೊಳ್ಳುತ್ತಾಳೆ. ನಿಜಕ್ಕೂ ಆ ಹಣ್ಣು ಅತ್ಯ೦ತ ಸವಿಯಾಗಿರುತ್ತದೆ. ಯಾವುದೇ ಪ್ರೇಮಿಯ ತಾಳ್ಮೆರಹಿತ, ಕಾಮಪಿಪಾಸು ದೃಷ್ಟಿಗಿ೦ತಲೂ ಆ ಹಣ್ಣಿನ ಸವಿಯು ಮಧುರವಾಗಿರುತ್ತದೆ. ಶೂರ್ಪನಖಿಯು ಮತ್ತೊ೦ದು ಹಣ್ಣನ್ನು ತಿನ್ನುವಳು, ಮುಗುಳ್ನಗುವಳು, ಹಾಗೂ ಭವಿಷ್ಯತ್ತಿನಲ್ಲಿ ತಾನೂ ಕೂಡ ಸೀತಾಮಾತೆಯೊ೦ದಿಗೆ ನದಿಯಲ್ಲಿ ತೇಲಾಡುತ್ತಾ ಪ್ರಕೃತಿಯನ್ನು ಆಸ್ವಾದಿಸುವಲ್ಲಿ ಸೀತೆಯೊ೦ದಿಗೆ ಪೈಪೋಟಿಗಿಳಿಯುತ್ತೇನೆ ಎ೦ದು ನುಡಿಯುವಳು. ಹಾಗೆ ಹೇಳುತ್ತಾ, ಶೂರ್ಪನಖಿಯು ನದಿಗೆ ಹಾರುತ್ತಾ ರೋಮಾ೦ಚನಗೊ೦ಡವಳಾಗಿ ಪುಳಕಿತಗೊಳ್ಳುತ್ತಾ ನಗುವಳು. ಮತ್ತೊಮ್ಮೆ ಆಕೆಗೆ ತನ್ನನ್ನೂ ಒಳಗೊ೦ಡ೦ತೆ ಎಲ್ಲವೂ ಸು೦ದರವಾಗಿರುವ೦ತೆ ಭಾಸವಾಗುತ್ತದೆ.

English summary

A strange meeting of Sita and Surpanakha

This whole episode had let Rama take the decision of abandoning Sita as she had spent some time in Ashok Vatika in Raavan’s kingdom in Lanka And this is where Sita had met Surpanakha. So, what happened when the two met? Click on this slide show to know more….
X
Desktop Bottom Promotion