For Quick Alerts
ALLOW NOTIFICATIONS  
For Daily Alerts

ಹಿಂದೂ ಧರ್ಮದಲ್ಲಿರುವ ಅಷ್ಟ ವಿಧದ ವಿವಾಹ ಪದ್ಧತಿಗಳು

By Deepak M
|

ಮದುವೆ ಮಾಡುವ ವಿಧಾನಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತಿದ್ದರು, ಇಂದಿಗು ಸಹ ಮದುವೆಯೆಂಬುದು ನಮ್ಮ ಜೀವನದ ಅತ್ಯಂತ ಮಹತ್ವದ ಭಾಗವೇ ಆಗಿದೆ. ಪ್ರತಿಯೊಂದು ಸಂಸ್ಕೃತಿಯಲ್ಲೂ ಮದುವೆಯು ಅತ್ಯಂತ ವಿಶೇಷ ಸ್ಥಾನಮಾನವನ್ನು ಸಂಪಾದಿಸಿರುತ್ತದೆ.

ಇನ್ನೂ ಹಿಂದೂ ಧರ್ಮದಲ್ಲಿ ಮದುವೆಯು ಅತ್ಯಂತ ಮಹತ್ವದ ವಿಧಿ ವಿಧಾನಗಳನ್ನು ಹೊಂದಿರುವ ಕಾರ್ಯವಷ್ಟೇ ಅಲ್ಲದೆ ವ್ಯಕ್ತಿಯ ಬಾಳಿನ ತಿರುವು ಸಹ ಆಗಿ ಗುರುತಿಸಿಕೊಂಡಿದೆ. ಏಕೆಂದರೆ ಮದುವೆಯ ನಂತರ ಗಂಡು- ಹೆಣ್ಣು ಜೀವನದ ಹೊಸ ಸ್ತರಕ್ಕೆ ಕಾಲಿರಿಸುತ್ತಾರೆ. ಹಿಂದೂ ಧರ್ಮದ ಉಲ್ಲೇಖಗಳ ಪ್ರಕಾರ ಗಂಡು, ಹೆಣ್ಣು ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ನಂತರವೇ ಮದುವೆಯಾಗಬೇಕಂತೆ.

ಇದರರ್ಥ ಗಂಡು ಮತ್ತು ಹೆಣ್ಣು ಜವಾಬ್ದಾರಿಗಳನ್ನು ಹೊರಲು ಸಮರ್ಥರಾದಾಗ ಮಾತ್ರ ಮದುವೆಯನ್ನು ಮಾಡಬೇಕು. ಮದುವೆಯಾದ ಪತಿ-ಸತಿಯರಿಬ್ಬರು ಪರಸ್ಪರರಲ್ಲಿ ಅನುರಾಗವನ್ನು ಹೊಂದಿರಬೇಕು. ಇವರಿಬ್ಬರು ಜೀವನದ ವಿವಿಧ ಘಟ್ಟಗಳಲ್ಲಿ ಪರಸ್ಪರರನ್ನು ಪ್ರೋತ್ಸಾಹಿಸುತ್ತ, ತಮ್ಮ ಮದುವೆಯನ್ನು ಸಾರ್ಥಕಗೊಳಿಸಿಕೊಳ್ಳಲು ಶ್ರಮಪಡಬೇಕು. ಮತ್ತೊಂದು ಕುತೂಹಲಕಾರಿ ವಿಚಾರವೆಂದರೆ ಪ್ರಾಚೀನ ಹಿಂದೂ ಗ್ರಂಥಗಳು ನಮಗೆ ಹಿಂದೂ ಧರ್ಮದಲ್ಲಿದ್ದ 8 ಬಗೆಯ ವಿವಾಹ ಪದ್ಧತಿಗಳ ಕುರಿತು ತಿಳಿಸುತ್ತವೆ. ಬನ್ನಿ ಆ 8 ವಿವಾಹ ಪದ್ಧತಿಗಳ ಕುರಿತಾಗಿ ಒಮ್ಮೆ ಗಮನ ಹರಿಸೋಣ:

ಬ್ರಾಹ್ಮ ವಿವಾಹ

ಬ್ರಾಹ್ಮ ವಿವಾಹ

ಇದು ಎಂಟು ಬಗೆಯ ವಿವಾಹಗಳಲ್ಲಿಯೇ ಅತ್ಯಂತ ಶ್ರೇಷ್ಠವಾದ ವಿವಾಹ ವಿಧಾನ. ಈ ವಿವಾಹ ಪದ್ಧತಿಯಲ್ಲಿ ಗಂಡಿನ ತಂದೆ-ತಾಯಿಯರು ತಮ್ಮ ಮಗನಿಗೆ ಅನುರೂಪಳಾದ ಹೆಣ್ಣನ್ನು ಹುಡುಕುತ್ತಾರೆ. ಹೆಣ್ಣಿನ ಪೋಷಕರು ಗಂಡಿನ ಪೂರ್ವಾಪರ ಮತ್ತು ಯೋಗ್ಯತೆಯನ್ನು ಪರಿಶೀಲಿಸಿ ಹೆಣ್ಣು ಕೊಡುವ ನಿರ್ಧಾರಕ್ಕೆ ಬರಲಾಗುತ್ತದೆ. ಹೆಣ್ಣು - ಗಂಡಿನ ಪೋಷಕರು ಹಾಗು ವಧು ವರರು ಒಪ್ಪಿದ ನಂತರ ಹೆಣ್ಣಿನ ತಂದೆ-ತಾಯಿಯರು ತಮ್ಮ ಅಳಿಯನನ್ನು ಮನೆಗೆ ಕರೆದು ತಮ್ಮ ಶಕ್ತಿಯನುಸಾರ ಕನ್ಯಾದಾನವನ್ನು ಮಾಡಿಕೊಡುತ್ತಾರೆ.

ದೈವ ವಿವಾಹ

ದೈವ ವಿವಾಹ

ಇದೊಂದು ಬಗೆಯ ಕೆಳಸ್ತರದ ಮದುವೆ. ಇಲ್ಲಿ ಹೆಣ್ಣಿನ ತಂದೆ-ತಾಯಿಯರು ತಮ್ಮ ಮಗಳನ್ನು ಪ್ರಾಪ್ತ ವಯಸ್ಸಿಗೆ ಬರುವವರೆಗೆ ಕಾಯುತ್ತಾರೆ. ಆಕೆ ಪ್ರಾಪ್ತ ವಯಸ್ಕಳಾದಾಗ ವರನನ್ನು ಹುಡುಕುವ ಅವಕಾಶವನ್ನು ಆಕೆಗೆ ಒದಗಿಸಲಾಗುವುದಿಲ್ಲ. ಆಗ ಹೆಣ್ಣಿನ ಪೋಷಕರು ಆಕೆಯನ್ನು ಯಙ್ಞಕರ್ಮ ಮಾಡುವ ವೇದ ಪಾರಂಗತನಾದ ಒಬ್ಬ ಬ್ರಾಹ್ಮಣನಿಗೆ ಯಙ್ಞದ ಕಾಣಿಕೆಯ ರೂಪದಲ್ಲಿ ಹೆಣ್ಣನ್ನು ಧಾರೆ ಎರೆದು ಕೊಡಲಾಗುತ್ತದೆ.

ಆರ್ಷ ವಿವಾಹ

ಆರ್ಷ ವಿವಾಹ

ಈ ಪದ್ಧತಿಯಲ್ಲಿ ವಧುವನ್ನು ಸಾಧುಗಳಿಗೆ ಮದುವೆ ಮಾಡಿಕೊಡಲಾಗುತ್ತದೆ. ಇಲ್ಲಿ ವಧುವನ್ನು ಎರಡು ಹಸುಗಳಿಗೆ ಬದಲಿಯಾಗಿ ನೀಡಲಾಗುತ್ತದೆ. ಇದೊಂದು ಬಗೆಯ ವ್ಯವಹಾರವಾಗಿರುವುದರಿಂದ ಇದನ್ನು ಉತ್ತಮ ವಿವಾಹ ಪದ್ಧತಿಯಾಗಿ ಯಾರೂ ಪರಿಗಣಿಸುವುದಿಲ್ಲ.

ಪ್ರಾಜಾಪತ್ಯ ವಿವಾಹ

ಪ್ರಾಜಾಪತ್ಯ ವಿವಾಹ

ಈ ವಿಧಾನದಲ್ಲಿ ಹೆಣ್ಣಿನ ತಂದೆಯು ತನ್ನ ಮಗಳಿಗೆ ಅನುರೂಪನಾದ ಗಂಡನ್ನು ಹುಡುಕಲು ಹೊರಡುತ್ತಾನೆ. ಇಲ್ಲಿ ಹೆಣ್ಣಿನ ತಂದೆಯೇ ತನ್ನ ಮಗಳಿಗಾಗಿ ಗಂಡನ್ನು ಹುಡುಕಲು ಹೊರಡುವ ಕಾರಣಕ್ಕಾಗಿ ಇದನ್ನು ಸಹ ಕೆಳ ದರ್ಜೆಯ ವಿವಾಹವಾಗಿ ಪರಿಗಣಿಸಲಾಗಿದೆ. ಆದರೂ ಇದರಲ್ಲಿ ಹೆಣ್ಣಿನ ತಂದೆ ತನ್ನ ಅಳಿಯ ಮತ್ತು ಮಗಳಿಗೆ ಯಾವಜ್ಜೀವನವು ಧರ್ಮವನ್ನೆ ಆಚರಿಸಬೇಕೆಂದು ಹೇಳಿ ಧಾರೆಯೆರೆಯುವ ದೊಡ್ಡತನ ಇದೆ.

ಅಸುರ ವಿವಾಹ

ಅಸುರ ವಿವಾಹ

ಈ ಬಗೆಯ ವಿವಾಹ ಪದ್ಧತಿಯಲ್ಲಿ ವರನು ತನಗೆ ಹಿಡಿಸಿದ ವಧುವಿನ ತಂದೆ ತಾಯಿಯು ಕೇಳಿದಷ್ಟು ಹಣವನ್ನು ಮತ್ತು ಕಾಣಿಕೆಗಳನ್ನು ನೀಡಿ ಮದುವೆಯಾಗುತ್ತಾನೆ. ತುಂಬಾ ಸಲ ಈ ಪದ್ಧತಿಯ ಅನುಸಾರ ಮದುವೆಯಾಗುವ ಗಂಡು ಆ ಹೆಣ್ಣಿಗೆ ಯಾವುದೇ ದೃಷ್ಟಿಯಲ್ಲೂ ಅನುರೂಪನಾಗಿರುವುದಿಲ್ಲ. ಆದರೆ ಹೆಣ್ಣಿನ ತಂದೆ ತಾಯಿ ಕಾಣಿಕೆ ಮತ್ತು ಉಡುಗೊರೆಗಳಿಗೆ ಆಸೆಪಡುವುದರಿಂದ, ಹೆಣ್ಣು ಬಲವಂತವಾಗಿ ಆತನ ವಶವಾಗುತ್ತಾಳೆ.

ಗಂಧರ್ವ ವಿವಾಹ

ಗಂಧರ್ವ ವಿವಾಹ

ಇದರ ಆಧುನಿಕ ಸ್ವರೂಪವೇ ಪ್ರೇಮ ವಿವಾಹ. ಇಲ್ಲಿ ಗಂಡು ಮತ್ತು ಹೆಣ್ಣು ತಮ್ಮ ಕುಟುಂಬದ ಸದಸ್ಯರು ಒಪ್ಪಲಿ ಅಥವಾ ಬಿಡಲಿ. ತಮ್ಮ ಪರಸ್ಪರ ಒಪ್ಪಿಗೆಯನ್ನು ಸೂಚಿಸಿ ರಹಸ್ಯವಾಗಿ ಮದುವೆಯಾಗುತ್ತಾರೆ.

ರಾಕ್ಷಸ ವಿವಾಹ

ರಾಕ್ಷಸ ವಿವಾಹ

ಈ ಬಗೆಯ ವಿವಾಹ ಪದ್ಧತಿಯಲ್ಲಿ ವರನು ಹೆಣ್ಣಿನ ಕಡೆಯವರ ಮೇಲೆ ಜಗಳ ಮಾಡುತ್ತಾನೆ. ಒಮ್ಮೊಮ್ಮೆ ಇದರಿಂದ ಸಾವು ನೋವು ಸಹ ಸಂಭವಿಸುತ್ತದೆ. ನಂತರ ಕನ್ಯೆಯ ಇಚ್ಛೆಗೆ ವಿರುದ್ಧವಾಗಿ ಆಕೆಯನ್ನು ಅಪಹರಿಸಿ, ವಿವಾಹ ಮಾಡಿಕೊಳ್ಳುತ್ತಾನೆ.

ಪಿಶಾಚ ವಿವಾಹ

ಪಿಶಾಚ ವಿವಾಹ

ಈ ವಿವಾಹ ಪದ್ಧತಿಯಲ್ಲಿ ವರನು ವಧುವು ಮಲಗಿರುವಾಗ ಅಥವಾ ಮತ್ತಿನಲ್ಲಿರುವಾಗ ಅಥವಾ ವಿಕಲ ಚೇತನಳಾಗಿರುವಾಗ, ಆಕೆಗೆ ತಿಳಿಯದೇ ಮದುವೆಯನ್ನು ಮಾಡಿಕೊಳ್ಳುತ್ತಾನೆ.

X
Desktop Bottom Promotion