For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿರುವ 6 ಶ್ರೀ ಕೃಷ್ಣನ ದೇವಾಲಯಗಳು

|

ಪುರಾಣದಲ್ಲಿ ದುಷ್ಟರ ಸಂಹಾರಕ್ಕಾಗಿ ಮಹಾವಿಷ್ಣು ತುಂಬಾ ಅವತಾರಗಳನ್ನು ತಾಳಿದನು ಎಂದು ಕೇಳಿದ್ದೇವೆ. ಅಂತಹ ಅವತಾರಗಳಲ್ಲಿ ಒಂದು ಶ್ರೀ ಕೃಷ್ಣನ ಅವತಾರ. ವ್ಯಾಸ' ಮಹರ್ಷಿಯ ತಂದೆಯಾದ ಪರಾಶರ ಮಹರ್ಷಿಯು ವಿಷ್ಣು ಪುರಾಣದಲ್ಲಿ ಶ್ರೀ ಕೃಷ್ಣನ ಅವತಾರವು ಪರಿಪೂರ್ಣ ಅವತಾರ ಎಂದಿದ್ದಾರೆ.

ಕಲಿಯುಗದಲ್ಲಿ ಶ್ರೀ ಕೃಷ್ಣನಿಗಾಗಿ ಅನೇಕ ದೇವಾಲಯಗಳನ್ನು ನಿರ್ಮಿಸಲಾಗಿದೆ. ಅವುಗಳಲ್ಲಿ ಕೆಲವೊಂದು ಶ್ರೀ ಕೃಷ್ಣನ ದೇವಾಲಯವು ತುಂಬಾ ಪ್ರಸಿದ್ಧಿಯನ್ನು ಪಡೆದಿದ್ದು ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಈ ದೇವಾಲಯಕ್ಕೆ ಕೃಷ್ಣನ ಅನುಗ್ರಹವನ್ನು ಪಡೆಯಲು ಬರುತ್ತಾ ಇರುತ್ತಾರೆ.

ಇಲ್ಲಿ ನಾವು ಭಾರತದಲ್ಲಿರುವ ಪ್ರಸಿದ್ಧ 6 ಶ್ರೀ ಕೃಷ್ಣನ ದೇಗುಲಗಳ ಬಗ್ಗೆ ಚಿತ್ರ ಮಾಹಿತಿ ನೀಡಲಾಗಿದೆ ನೋಡಿ:

1. ಇಸ್ಕಾನ್

1. ಇಸ್ಕಾನ್

ಇಸ್ಕಾನ್ ದೇವಾಲಯವು ಭಾರತದಲ್ಲಿ ಮಾತ್ರವಲ್ಲ ವಿಶ್ವದಲ್ಲಿಯೇ ಪ್ರಸಿದ್ಧಿಯನ್ನು ಪಡೆದಂತಹ ಶ್ರೀ ಕೃಷ್ಣನ ಮಂದಿರವಾಗಿದೆ. ಜಾತಿ ಮತ್ತು ಧರ್ಮದ ಬೇಧವಿಲ್ಲದೆ ಎಲ್ಲರೂ ಈ ದೇವಾಲಯಕ್ಕೆ ಭೇಟಿಕೊಡಬಹುದಾಗಿದೆ. ಇಸ್ಕಾನ್ ದೇವಾಲಯವು ದೆಹಲಿ, ವೃಂಧಾವನ, ಬೆಂಗಳೂರು, ಕಲ್ಕತಾ ಹೀಗೆ ಹಲವು ಕಡೆಗಳಲ್ಲಿ ಇದೆ.

2. ದ್ವಾರಕ

2. ದ್ವಾರಕ

ದ್ವಾರಕ ಶ್ರೀಕೃಷ್ಣ ನ ದೇವಾಲಯವು ಗುಜರಾತ್ ನಲ್ಲಿದೆ. ಈ ದ್ವಾರಕ ವಿಷ್ಣು ದೇವಾಲಯವನ್ನು ಜಗತ್ ಮಂದಿರಾ ಎಂದು ಕೂಡ ಕರೆಯಲಾಗುತ್ತದೆ. ಇದನ್ನು 2500 ವರ್ಷಗಳ ಹಿಂದೆ ಕಟ್ಟಲಾಯಿತು.

3. ವೃಂದಾವನ

3. ವೃಂದಾವನ

ಶ್ರೀ ಕೃಷ್ಣನು ತನ್ನ ಬಾಲ್ಯವನ್ನು ಇಲ್ಲಿ ಕಳೆದನು ಎಂಬ ಪ್ರತೀತಿ ಇದೆ. ರಾಜ ಅಕ್ಬರ್ ಈ ಪ್ರದೇಶಕ್ಕೆ ಭೇಟಿ ಕೊಟ್ಟು ಇಲ್ಲಿ ಶ್ರೀ ಕೃಷ್ಣನ 4 ದೇವಾಲಯಗಳನ್ನು ನಿರ್ಮಿಸಲು ಆಜ್ಞೆ ನೀಡಿದನು. ಆ ದೇವಾಲಯಗಳನ್ನು ಮದನ್ ಮೋಹನಾ, ಗೋಪಿನಾಥ್, ಗೋವಿಂದ, ಜುಗಲ್ ಅಥಾವ ಕಿಸೋರ್ ಎಂದು ಹೆಸರಿಸಲಾಗಿದೆ.

4. ಜುಗಲ್ ಕಿಸೋರ್

4. ಜುಗಲ್ ಕಿಸೋರ್

ಈ ದೇವಾಲಯವು ಕೃಷ್ಣನ ಜನ್ಮ ಸ್ಥಳವಾದ ಮಥುರಾದಲ್ಲಿದೆ. ಇದು ತುಂಬಾ ಹಳೆಯದಾದ ಹಾಗೂ ಪ್ರಸಿದ್ಧಿಯನ್ನು ಪಡೆದಂತಹ ದೇವಾಲಯವಾಗಿದೆ. ಇಲ್ಲಿ ಯಮುನಾ ದೇವಿಗೆ ಪ್ರತಿದಿನ ಆರತಿಯನ್ನು ಮಾಡಲಾಗುತ್ತದೆ.

5.ಗುರುವಾಯರ್

5.ಗುರುವಾಯರ್

ಈ ದೇವಾಲಯವು ಕೇರಳದಲ್ಲಿದೆ. ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ಇಲ್ಲಿ ಭೇಟಿ ನೀಡುತ್ತಾ ಇರುತ್ತಾರೆ. ಅಲ್ಲದೆ ಇಲ್ಲಿ 36 ಆನೆಗಳು ಹಾಗೂ ಪಕ್ಷಿಗಳಿವೆ. ಕೇರಳದಲ್ಲಿ ಹೊಸದಾಗಿ ಮದುವೆಯಾದವರು ನಮ್ಮ ಮದುವೆ ಜೀವನ ಸುಗಮವಾಗಿರಲಿ ಎಂದು ಬೇಡಿಕೊಳ್ಳಲು ಈ ದೇವಾಲಯಕ್ಕೆ ಕೊಡುತ್ತಾರೆ. ಚಿಕ್ಕ ಮಕ್ಕಳಿಗೆ ಇಲ್ಲಿ ಅಕ್ಕಿಯಲ್ಲಿ ಅಕ್ಷರಗಳನ್ನು ಬರಿಸುವ ಪದ್ಧತಿ ಕೂಡ ಇದೆ. ಹೀಗೆ ಮಾಡಿದರೆ ಮಕ್ಕಳು ವಿಧ್ಯಾಭ್ಯಾಸದಲ್ಲಿ ಚುರುಕಾಗಿ ಇರುತ್ತಾರೆ ಎಂಬ ನಂಬಿಕೆ ಇದೆ.

6. ಜಗನ್ನಾಥ್

6. ಜಗನ್ನಾಥ್

ಈ ದೇವಾಲಯವು ಒರಿಸ್ಸಾದಲ್ಲಿದೆ. ಇಲ್ಲಿಗೆ ಭಗವಂತನ ಅನುಗ್ರಹ ಪಡೆಯಲು ಸಾಕಷ್ಟು ಭಕ್ತಾದಿಗಳು ಭೇಟಿ ನೀಡುತ್ತಾರೆ.

7. ಉಡುಪಿ ಕೃಷ್ಣ ಮಂದಿರ

7. ಉಡುಪಿ ಕೃಷ್ಣ ಮಂದಿರ

ವಿಶ್ವ ವಿಖ್ಯಾತ ಕೃಷ್ಣ ಮಂದಿರ ದಕ್ಷಿಣ ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿದೆ. ಇಲ್ಲಿರುವ ಕನಕನ ಕಿಂಡಿ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ.

English summary

7 Famous Lord Krishna Temples In India | ಭಾರತದಲ್ಲಿರುವ 7 ಶ್ರೀ ಕೃಷ್ಣನ ದೇವಾಲಯಗಳು

Lord Krishna is one of the most popular avatars of Lord Vishnu. Krishna is worshiped in many temples around the world. These temples are famous because they are either associated with the birth of Lord Krishna or known for the architecture and history.
X
Desktop Bottom Promotion