For Quick Alerts
ALLOW NOTIFICATIONS  
For Daily Alerts

ಕೃಷ್ಣಾಷ್ಟಮಿ 2019: ಕೃಷ್ಣ ಏಕೆ ಕರ್ಣನನ್ನು ಕೊಲ್ಲಲು ಬಯಸಿದ್ದ?

By Staff
|

ಕೃಷ್ಣ ಭಕ್ತದ ನೆಚ್ಚಿನ ಹಬ್ಬ, ಪವಿತ್ರ ಹಬ್ಬಗಳಲ್ಲಿ ಒಂದಾದ ಕೃಷ್ಣ ಜನ್ಮಾಷ್ಟಮಿಯ 2019ರಲ್ಲಿ ಆಗಸ್ಟ್ 24ರ ಶನಿವಾರದಂದು ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಮಹಾಭಾರತದ ಕಥೆಯ ಕೆಲವು ಅಚ್ಚರಿಯ ಸಂಗತಿಗಳನ್ನು ತಿಳಿಯೋಣ....

ನಮ್ಮಲ್ಲಿನ ಬಹುತೇಕ ಸಾಮಾನ್ಯ ಓದುಗರು ಮತ್ತು ಮಹಾಭಾರತದ ಬಗ್ಗೆ ಸ್ವಲ್ಪ ತಿಳಿದಿರುವವರು ಸುಲಭವಾಗಿ ಭಾವಿಸುತ್ತಾರೆ. ಮಹಾಭಾರತದ ಯುದ್ಧದಲ್ಲಿ ಕರ್ಣನನ್ನು ಅರ್ಜುನ ಕೊಂದನೆಂದೇ ತಿಳಿದುಕೊಂಡಿದ್ದಾರೆ. ಮಹಾಭಾರತದ ಉದ್ದಕ್ಕು ಅಲ್ಲದೆ ಶ್ರೀ ಕೃಷ್ಣನು ಅರ್ಜುನನು ತನ್ನ ಕೈಯಲ್ಲಿರುವ ಆಯುಧ ಎಂಬುದನ್ನು ಪದೇ ಪದೇ ಸೂಚಿಸುತ್ತಿದ್ದನು.

ಮೈ ನವಿರೇಳಿಸುವ ಬಕಾಸುರನ ಸ೦ಹಾರದ ರೋಚಕ ಕಥೆ!

ಆ ಅಂಕಣವು ಯುದ್ಧದಲ್ಲಿ ಇವರಿಬ್ಬರ ಪಾತ್ರದ ಕುರಿತು ವಿಸ್ತ್ರುತವಾಗಿ ಚರ್ಚೆಗೆ ಹಚ್ಚಿತ್ತು. ಬಹುತೇಕ ಜನರು ಪಾಂಡವರ ಧರ್ಮ ನಿಷ್ಠೆ ಮತ್ತು ಕರ್ಣನ ಆತ್ಮ ಸಾಕ್ಷಿ ಇವುಗಳಲ್ಲಿ ಯಾರಿಗೆ ಹೆಚ್ಚಿನ ಬೆಲೆ ನೀಡಬೇಕೆಂದು ಚರ್ಚಿಸಿದ್ದರು ಮತ್ತು ಒಂದು ತೀರ್ಮಾನಕ್ಕೆ ಬರಲು ಅವರಿಂದ ಸಹ ಸಾಧ್ಯವಾಗಿರಲಿಲ್ಲ. ಬನ್ನಿ ಮಹಾಭಾರತದ ಕಥೆಯ ಅಂತರಾಳವನ್ನು ತಿಳಿಯೋಣ....

ಕರ್ಣನ ಬಗ್ಗೆ ಮತ್ಸರದ ಮಾತು

ಕರ್ಣನ ಬಗ್ಗೆ ಮತ್ಸರದ ಮಾತು

ಕರ್ಣನು ವಿರೋಧಿಪಡೆಯವನಾಗಿದ್ದರೂ ಮಹಾಭಾರತದಲ್ಲಿ ಅಲ್ಲಲ್ಲಿ ಕೃಷ್ಣನು ಕರ್ಣನ ಸದ್ಗುಣಗಳನ್ನು ಕೊಂಡಾಡುವುದನ್ನು ಕಾಣಬಹುದು. ಕೆಲವೆಡೆ ಕರ್ಣನ ಬಗ್ಗೆ ಮತ್ಸರದ ಮಾತುಗಳನ್ನಾಡುತ್ತಾನೆ, ಅಲ್ಲದೇ ಕರ್ಣನ ಬಗ್ಗೆ ಕೇವಲವಾಗಿ ಮಾತನಾಡಿದ ಅರ್ಜುನನಿಗೆ ವಾಗ್ದಂಡನೆಯನ್ನೂ ವಿಧಿಸಿದ್ದಾನೆ. ಕರ್ಣನು ವಾಸ್ತವವಾಗಿ ಪಾಂಡವರ ರಕ್ತಸಂಬಂಧಿಯಾಗಿದ್ದರೂ ದುರ್ಯೋಧನನನ್ನು ಬೆಂಬಲಿಸುವುವ ಆತನ ನೈತಿಕತೆಯನ್ನೂ ಪ್ರಶಂಸಿಸುತ್ತಾನೆ. ಆದರೆ ಕರ್ಣ ಕೃಷ್ಣನ ಉಪದೇಶಗಳನ್ನು ಅಲಕ್ಷಿಸಿದುದರ ಪರಿಣಾಮವಾಗಿ ಕೌರವರಿಗೆ ಇನ್ನಷ್ಟು ಹತ್ತಿರಾಗಿದ್ದ. ಆದರೆ ಕೌರವರ ಕಪಟಬುದ್ದಿಯನ್ನು ಅರಿತ ಮೇಲೆಯೂ ಅವರನ್ನೇ ಬೆಂಬಲಿಸುವುದು ಮಾತ್ರ ಕರ್ಣನಂತಹ ನೈತಿಕ ವ್ಯಕ್ತಿಗೆ ತಕ್ಕುದಲ್ಲ ಎಂದು ಹೆಚ್ಚಿನವರು ಅಭಿಪ್ರಾಯ ಪಡುತ್ತಾರೆ.

ಕೃಷ್ಣ ಜನ್ಮಾಷ್ಟಮಿ 2019: ದಿನಾಂಕ, ಸಮಯ, ಮಹತ್ವ

ಕೃಷ್ಣನ ಭಿನ್ನ ಪಾತ್ರ

ಕೃಷ್ಣನ ಭಿನ್ನ ಪಾತ್ರ

ಮಹಾಭಾರತವನ್ನು ಆಳವಾಗಿ ಅಧ್ಯಯನ ಮಾಡಿದವರ ಪ್ರಕಾರ ಕೃಷ್ಣ ಇಡಿಯ ಕಥನದಲ್ಲಿ ವಿಭಿನ್ನವಾದ ಪಾತ್ರಗಳನ್ನು ಅಭಿನಯಿಸುತ್ತಾನೆ. ಉದಾಹರಣೆಗೆ ಗಾಂಧಾರಿ ತನ್ನ ಕಣ್ಣ ಪಟ್ಟಿಯನ್ನು ತೆರೆಯುವಾಗ ನಗ್ನನಾಗಿ ಬರುವಂತೆ ಹೇಳಿದ್ದ ದುರ್ಯೋಧನನಿಗೆ ತೊಡೆಯನ್ನು ಮುಚ್ಚಿಕೊಂಡು ಹೋಗುವಂತೆ ಹೇಳುವುದು, ಬಳಿಕ ಯುದ್ಧದಲ್ಲಿ ತೊಡೆಯನ್ನು ಸೀಳುವಂತೆ ಭೀಮನಿಗೆ ಕಡ್ಡಿಯನ್ನು ಸೀಳಿ ಸನ್ನೆ ಮಾಡುವುದು ಇವೆಲ್ಲಾ ಕೃಷ್ಣನ ಭಿನ್ನ ಪಾತ್ರಗಳನ್ನು ಬಿಂಬಿಸುತ್ತವೆ.

ಎಲ್ಲವನ್ನೂ ತಿಳಿದಿರುವ ಕೃಷ್ಣನ ಭಿನ್ನ ಪಾತ್ರ

ಎಲ್ಲವನ್ನೂ ತಿಳಿದಿರುವ ಕೃಷ್ಣನ ಭಿನ್ನ ಪಾತ್ರ

ದೇವರ ಮತ್ತು ದಾನವರ ನಡುವೆ ಸಂಘರ್ಷವಾದಾಗ ಕೆಲವೊಮ್ಮೆ ದೇವರೂ ಕೆಲವು ತಂತ್ರಗಳನ್ನು ಅನುಸರಿಸಬೇಕಾಗುತ್ತದೆ, ಇದಕ್ಕಾಗಿ ಕೆಲವೊಮ್ಮೆ ತಪ್ಪು ದಾರಿಯನ್ನೂ ತುಳಿಯಬೇಕಾಗುತ್ತದೆ ಎಂದು ವಾದಿಸುತ್ತಾರೆ. ಭಸ್ಮಾಸುರನನ್ನು ವಧಿಸಲು ದೇವರು ಕುತಂತ್ರದಿಂದ ನಾಟ್ಯದ ಅಮಲಿನಲ್ಲಿದ್ದಾಗ ಆತನೇ ತನ್ನ ತಲೆಯನ್ನು ಮುಟ್ಟಿಕೊಳ್ಳುವಂತೆ ಮಾಡಿದ್ದುದು ಇದಕ್ಕೊಂದು ಉದಾಹರಣೆ. ರಾಮಾಯಣದಲ್ಲಿ ಯುದ್ದ ನಡೆದದ್ದು ರಾಮ ಮತ್ತು ರಾವಣರ ನಡುವೆ, ಅಂದರೆ ಸುರ ಮತ್ತು ಅಸುರರ ನಡುವೆ. ಮಹಾಭಾರತದಲ್ಲಿಯಾದರೆ ಯುದ್ಧ ನಡೆದದ್ದು ಒಂದೇ ಕುಟುಂಬದ ಸದಸ್ಯರ ನಡುವೆ. ಈ ಸಮರದಲ್ಲಿ ಕೃಷ್ಣ ವಿವಿಧ ಪಾತ್ರಗಳನ್ನು ನಿಭಾಯಿಸಬೇಕಾಗಿ ಬಂದಿತ್ತು. ಈ ಪಾತ್ರಗಳೇ ಆತನನ್ನು ಮಹಾಭಾರತದ ಅತ್ಯಂತ ಚಾಣಾಕ್ಷ ರಾಜಕಾರಣಿಯಾಗಿಸಿದೆ.

ಮಹಾಭಾರತ ಯುದ್ಧದ ಸಮಯ

ಮಹಾಭಾರತ ಯುದ್ಧದ ಸಮಯ

ಬಹುತೇಕ ಕಡೆ ಅಲ್ಲದಿದ್ದರು ಅಪರೂಪವಾಗಿ ಶ್ರೀ ಕೃಷ್ಣನು ಮಹಾಭಾರತ ಯುದ್ಧದ ಸಮಯದಲ್ಲಿ ಕರ್ಣನ ಕುರಿತು ಹೆಚ್ಚಿನ ದ್ವೇವನ್ನು ತೋರುತ್ತಾನೆ. ಕೆಲವೊಂದು ಸಂದರ್ಭದಲ್ಲಿ ಕರ್ಣನ ಗುಣಗಾನ ಮಾಡುವ ಶ್ರೀ ಕೃಷ್ಣನು ಅರ್ಜುನನು ಕರ್ಣನ ಮೇಲೆ ಹಿಂದೇಟು ಹಾಕುವ ಸಂದರ್ಭದಲ್ಲಿ ಆತ ಮಾಡಿದ ತಪ್ಪುಗಳನ್ನು ಎತ್ತಿ ತೋರಿಸಿ, ಕರ್ಣನ ವಧೆ ಮಾಡಲು ಪ್ರೇರೇಪಿಸುತ್ತಾನೆ. ಯುದ್ಧಕ್ಕೆ ಮೊದಲೆ ಕೃಷ್ಣನು ಕರ್ಣನನ್ನು ಪಾಂಡವರ ಪಕ್ಷವಹಿಸುವಂತೆ ಪುಸಲಾಯಿಸುತ್ತಾನೆ. ಆದರೆ ಈ ಬೇಧವು ಅವನಿಂದ ಸಾಧ್ಯವಾಗುವುದಿಲ್ಲ. ಆದರೆ ಕರ್ಣನ ಮನಸ್ಸು ಇದರಿಂದ ವಿಚಲಿತವಾಗಿದ್ದು ಮಾತ್ರ ಸತ್ಯ.

ಕರ್ಣನ ಸ್ವಾಮಿ ನಿಷ್ಠೆ

ಕರ್ಣನ ಸ್ವಾಮಿ ನಿಷ್ಠೆ

ಕರ್ಣನು ತಾನು ದುಷ್ಟರ ಸಹವಾಸ ಮಾಡುತ್ತಿದ್ದೀನಿ ಎಂದು ತಿಳಿದಿದ್ದರು ಅವನ ಸ್ವಾಮಿ ನಿಷ್ಠೆ ಮತ್ತು ಸ್ನೇಹವನ್ನು ಕಡೆಯವರೆಗೆ ಕಾಯ್ದಿರಿಸಿಕೊಂಡನು. ಈತನ ಸ್ವಾಮಿ ನಿಷ್ಠೆಯ ಬಗ್ಗೆ ನಾವು ಕನಿಕರ ತೋರಿಸಬಹುದೇ ಹೊರತು, ಒಬ್ಬ ಒಳ್ಳೆಯ ವ್ಯಕ್ತಿ ಮಾಡಿದ ಈ ಅಪರಾಧವನ್ನು ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ.

ಚಿಂತಕರ ಪ್ರಕಾರ

ಚಿಂತಕರ ಪ್ರಕಾರ

ಬಹುತೇಕ ಚಿಂತಕರ ಪ್ರಕಾರ ಶ್ರೀ ಕೃಷ್ಣನು ಮಹಾಭಾರತದಲ್ಲಿ ಸಾಮಾನ್ಯವಾದ ವ್ಯಕ್ತಿಯಾಗಿ ಕಾಣಿಸಿಕೊಳ್ಳಲಿಲ್ಲ. ಆತ ಎಂದಿಗು ನೀತಿ ಮತ್ತು ನಿಯಮಗಳನ್ನು ತನ್ನ ಗುರಿ ಈಡೇರಿಸಿಕೊಳ್ಳಲು ಪಾಲಿಸಲು ಹೋಗಲಿಲ್ಲ. ಈ ನೀತಿ ಮತ್ತು ನಿಯಮಗಳನ್ನು ಅವನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡನು ಮತ್ತು ಬೇಕೆಂದಾಗ ಅವುಗಳನ್ನ ಆತನೇ ಮುರಿದನು ಸಹ.

ಜನ್ಮಾಷ್ಟಮಿ ವಿಶೇಷ- ರಾಧಾ-ಕೃಷ್ಣರ ಪ್ರೇಮ ಕಥೆ

ಚಿಂತಕರ ಪ್ರಕಾರ

ಚಿಂತಕರ ಪ್ರಕಾರ

ಭೂಮಿಯ ಮೇಲೆ ದುಷ್ಟ ಕಾರ್ಯಗಳು ಅಧಿಕಗೊಂಡಾಗ ಅವುಗಳನ್ನು ಅಂತ್ಯಗೊಳಿಸಲು ಮತ್ತು ಧರ್ಮ ಸಂಸ್ಥಾಪನೆ ಮಾಡಲು ದೇವರು ಸಹ ಕೆಲವೊಂದು ತಂತ್ರಗಳನ್ನು ಮಾಡಬೇಕಾಗುತ್ತದೆ. ಈ ಅಂಶಗಳನ್ನು ನಾವು ಕೃಷ್ಣನ ಜೀವನದಾದ್ಯಂತ ನೋಡಬಹುದು. ಇದನ್ನು ಹಲವಾರು ಕಥೆಗಳಲ್ಲಿಯು ಸಹ ನಾವು ಓದಬಹುದು. ಕೃಷ್ಣನು ಹೇಗೆ ತನ್ನ ರಾಜ ನೀತಿಯಿಂದ ದುಷ್ಟರನ್ನು ಸಂಹರಿಸಿದನು ಎಂಬುದನ್ನು ನಾವು ಈ ಕಥೆಗಳಲ್ಲಿ ನೋಡಬಹುದು.

ಚಿಂತಕರ ಪ್ರಕಾರ

ಚಿಂತಕರ ಪ್ರಕಾರ

ಇದರಲ್ಲಿ ದುಷ್ಟರು ಯಾರು, ಒಳ್ಳೆಯವರು ಯಾರು ಎಂಬುದನ್ನು ಸ್ಪಷ್ಟವಾಗಿ ತೀರ್ಮಾನಕ್ಕೆ ಬರಲು ಕಷ್ಟವಾಗುತ್ತದೆ. ಆದರೆ ಕೃಷ್ಣನ ಧರ್ಮ ಸಂಸ್ಥಾಪನೆಯ ಕಾರ್ಯದಲ್ಲಿ ಇವುಗಳ ಲೆಕ್ಕಕ್ಕೆ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ರಾಮಾಯಣದಲ್ಲಿರುವಂತೆ ಮಹಾಭಾರತದಲ್ಲಿ ಕೃಷ್ಣನು ಹೆಚ್ಚಿನ ಅಸುರರ ಅಥವಾ ರಾಕ್ಷಸರ ಜೊತೆ ಯುದ್ಧ ಮಾಡಲು ಹೋಗಲಿಲ್ಲ. ಆದರೆ ಅದಕ್ಕೆ ಬದಲು ಕುಟುಂಬ ಸದಸ್ಯರ ಜೊತೆ ಅವನು ಯುದ್ಧ ಮಾಡಬೇಕಾಯಿತು.

ಕರ್ಣನ ಅಚಲ ನಿರ್ಧಾರ

ಕರ್ಣನ ಅಚಲ ನಿರ್ಧಾರ

ಕರ್ಣನು ತನ್ನ ಸದಾಚಾರ ಮತ್ತು ಸ್ವಾಮಿನಿಷ್ಠೆಯಲ್ಲಿ ಅಚಲನಾಗಿ ನಿಂತಿದ್ದನು. ಕರ್ಣನ ಇದೇ ಅಚಲವಾದ ನಡುವಳಿಕೆಯು ಆತನನ್ನು ಸಾವಿಗೆ ನೂಕಿತು. ತಾವೆಲ್ಲರು ಅಣ್ಣ-ತಮ್ಮಂದಿರು ಎಂಬ ಅಂಶ ಅವನಿಗೆ ಗೊತ್ತಾದರು ಸಹ ಆತ ದುರ್ಯೋಧನನ ಜೊತೆಗಿನ ಸ್ನೇಹಕ್ಕೆ ಕಟ್ಟು ಬಿದ್ದನು. ಇದರ ಜೊತೆಗೆ ತನ್ನ ತಮ್ಮಂದಿರು, ದ್ರೌಪದಿ, ಸ್ವಂತ ತಾಯಿ ಮತ್ತು ಗುರುವಿನಿಂದ ನಡೆದ ದೌರ್ಜನ್ಯಗಳ ನೆನಪುಗಳ ಕಾರ್ಮೋಡದಲ್ಲಿ ಅವನ ಮನಸ್ಸು ಮರೆಯಾಯಿತು. ಅವನ ಕಾರಣಗಳು ದೋಷ ಪೂರಿತವಾಗಿದ್ದವು.

ಕರ್ಣನ ಅಚಲ ನಿರ್ಧಾರ

ಕರ್ಣನ ಅಚಲ ನಿರ್ಧಾರ

ಈ ಕಾರಣಗಳು ಅವನ ಸ್ವಾಮಿ ನಿಷ್ಠೆ ಮತ್ತು ಧರ್ಮವನ್ನು ಮಸುಕು ಮಾಡಲಿಲ್ಲ ಎಂಬುದು ಸಹ ಸತ್ಯ. ಯಾವುದೇ ಕಾರಣಕ್ಕು ಮತ್ತು ಎಂತಹ ಸಂದರ್ಭದಲ್ಲಿಯು ಸಹ ಅವನ ಈ ನಿಲುವು ಬದಲಾಗಲಿಲ್ಲ. ಯಾವಾಗ ಕೃಷ್ಣನ ಬೇಧವು ಸಹ ಇವನನ್ನು ಅಲುಗಾಡಿಸಲಾಗಲಿಲ್ಲವೋ, ಆಗ ಕರ್ಣನ ಕೌಶಲ್ಯಗಳನ್ನು ಮತ್ತು ಶಕ್ತಿಯನ್ನು ನಾಶಗೊಳಿಸಲೆಬೇಕಾದ ಸಂದಿಗ್ಧ ಪರಿಸ್ಥಿತಿ ಎದುರಾಯಿತು. ಆಗ ಸಾವು ಒಂದೇ ಉಳಿದ ದಾರಿಯಾಗಿತ್ತು. ಯುದ್ಧದ ಕೊನೆಯಲ್ಲಿ ಯಾರಾದರು ಒಬ್ಬರು ಸೋಲಲೆ ಬೇಕಾದ ಸಂದರ್ಭ ಎದುರಾಯಿತು. ಮೇಲಾಗಿ ಇದು ಕೊಲ್ಲು ಇಲ್ಲವೆ ಕೊಲ್ಲಲ್ಪಡು ಎಂಬ ಯುದ್ಧ. ಆಗ ಎದುರಾಳಿಯ ದೌರ್ಬಲ್ಯಗಳನ್ನು ತಮ್ಮ ಉಪಯೋಗಕ್ಕೆ ಬಳಸಿಕೊಂಡು ಅವರ ಅಂತ್ಯ ಕಾಣಿಸುವ ಸಮಯ. ಅದರಲ್ಲಿಯೂ ಕೃಷ್ಣನು ಇಂತಹ ಯಾವುದೇ ಸಂದರ್ಭವನ್ನು ಕಳೆದುಕೊಳ್ಳಲು ಬಿಡುವವನಲ್ಲ.

ಕೃಷ್ಣನ ಚಾಕಚಕ್ಯತೆ

ಕೃಷ್ಣನ ಚಾಕಚಕ್ಯತೆ

ಕುರುಕ್ಷೇತ್ರದ ಆ ಯುದ್ದದ ಸಮಯದಲ್ಲಿ ಕರ್ಣನ ರಥ ಕೆಸರಿನಲ್ಲಿ ಹೂತು ಹೋಗಿತ್ತು. ಕುದುರೆಗಳು ಎಷ್ಟು ಎಳೆದರೂ ಹೊರಬರದೇ ಸಿಕ್ಕಿಕೊಂಡಿದ್ದ ರಥದ ಚಕ್ರವನ್ನು ಹೊರತೆಗೆಯಲು ಕರ್ಣ ರಥದಿಂದ ಕೆಳಜಿಗಿದು ಚಕ್ರವನ್ನು ಎತ್ತುತ್ತಿದ್ದ. ಆ ಸಮಯದಲ್ಲಿ ಆತನ ಬಳಿ ಯಾವುದೇ ಆಯುಧವಿರಲಿಲ್ಲ. ಆಗಲೇ ಕೃಷ್ಣ ಅರ್ಜುನನಿಗೆ ಬಾಣ ಹೂಡಲು ನಿರ್ದೇಶಿಸಿದ. ಏಕೆಂದರೆ ಒಂದು ವೇಳೆ ಕರ್ಣ ರಥವನ್ನು ಮೇಲೆತ್ತಲು ಸಫಲನಾಗಿ ರಥಾರೂಢನಾದರೆ ಆತನನ್ನು ಸುಲಭವಾಗಿ ಮಣಿಸಲು ಸಾಧ್ಯವಿಲ್ಲ ಎಂದು ಕೃಷ್ಣ ಅರಿತಿದ್ದ.

ಕೃಷ್ಣನ ಚಾಕಚಕ್ಯತೆ

ಕೃಷ್ಣನ ಚಾಕಚಕ್ಯತೆ

ನೈತಿಕವಾಗಿ ಸರಿಯಲ್ಲದ ಈ ಕ್ರಮವನ್ನು ಪ್ರಶ್ನಿಸಿದ ಅರ್ಜುನನಿಗೆ ಕೃಷ್ಣ ಬೋಧನೆಯನ್ನು ನೀಡುತ್ತಾ ಕರ್ಣನು ಈಗ ಬೇಡುವ ದಯಾಭಿಕ್ಷೆಯನ್ನು ನೀಡುವ ಸಮಯ ಇದಲ್ಲ, ಕರ್ಣನ ವಿಯೋಗ ತನಗೂ

ದುಃಖಕರವಾಗಿದೆ, ಆದರೆ ಈಗ ಸಿಕ್ಕಿರುವ ಅವಕಾಶವನ್ನು ಕಳೆದುಕೊಳ್ಳಬೇಡ, ಬೇಗನೇ ಬಾಣ ಹೂಡು ಎಂದು ಅವಸರಿಸಿದ. ಅಲ್ಲದೇ ಮುಂದೆ ಮಾತನಾಡಲು ಅರ್ಜುನನಿಗೆ ಅವಕಾಶವನ್ನೇ ನೀಡದೇ ಬಾಣ ಬೇಗ ಹೂಡು ಎಂದು ಅಪ್ಪಣೆ ಮಾಡಿದ್ದರಿಂದ ಅನಿವಾರ್ಯವಾಗಿ ಮೊದಲು ರುದ್ರ ಎಂಬ ಬಾಣವನ್ನು ಹೂಡಿದ್ದ, ಆದರೆ ಬಾಣ ಬಿಡಲಿಲ್ಲ.

ಬ್ರಹ್ಮಾಸ್ತ್ರದ ಮಂತ್ರ ಮರೆತು ಬಿಟ್ಟ ಕರ್ಣ!

ಬ್ರಹ್ಮಾಸ್ತ್ರದ ಮಂತ್ರ ಮರೆತು ಬಿಟ್ಟ ಕರ್ಣ!

ಇದೇ ಸಮಯಕ್ಕೆ ಕರ್ಣನಿಗೆ ಬ್ರಹ್ಮಾಸ್ತ್ರದ ಮಂತ್ರ ಮರೆತು ಹೋಗಿತ್ತು. ಇದಕ್ಕೆ ಕಾರಣ ಪರಶುರಾಮರ ಶಾಪವಾಗಿತ್ತು. ಇದೇ ಸಮಯವೆಂದು ಅರಿತ ಕೃಷ್ಣ ಅರ್ಜುನನಲ್ಲಿ ಅಭಿಮನ್ಯುವಿನ ಮರಣದ ವಿಷಯವನ್ನು ಪ್ರಸ್ತಾಪಿಸಿ ಬೇರೆ ಬಾಣ ಹೂಡು ಎಂದು ಅವಸರಿಸಿದ. ಈಗ ನಿಜವಾಗಿಯೂ ಕ್ಷೋಭೆಗೊಂಡ ಅರ್ಜುನ ಅಂಜಲಿಕಾ ಎಂಬ ಬಾಣವನ್ನು ಹೂಡಿ ಕರ್ಣನ ಶಿರಸಂಹರಿಸಿದ. ಇದು ತನ್ನ ಆಯ್ಕೆ ಅಲ್ಲವೆಂದೂ, ತಾನು ಕೇವಲ ಕೃಷ್ಣನ ನಿರ್ದೇಶನಗಳನ್ನು ಪಾಲಿಸುತ್ತಿದ್ದೆನೆಂದು ಬಳಿಕ ತಿಳಿಸಿದ.

English summary

Surprising facts! Why Krishna Killed Karna?

Most all casual readers or even a few astute followers of Mahabharata are easily fooled into thinking that Karna was killed by Arjuna. Even though throughout the Mahabharata, Krishna constantly indicates that Arjuna is nothing but an instrument in his hands.
X
Desktop Bottom Promotion