For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿರುವ ಪ್ರಮುಖ ಮೂಢನಂಬಿಕೆಗಳು

By manohar
|

ಭಾರತಭೂಮಿಯು ಮೂಢನಂಬಿಕೆಯ ಜನರ ಭೂಮಿಯೆಂದು ಅನಾದಿಕಾಲದಿಂದಲೂ ಹೆಸರುಬಂದಿದೆ. ಪ್ರತಿ ಸಂಸ್ಕೃತಿ, ಧರ್ಮ ಮತ್ತು ಪ್ರದೇಶ ತಮ್ಮದೇ ಆದ ಮೂಢನಂಬಿಕೆಗಳನ್ನು ಹೊಂದಿವೆ. ಕೆಲವು ಮೂಢನಂಬಿಕೆಗಳಿಗೆ ವೈಜ್ಞಾನಿಕವಾಗಿ ವಿವರಣೆ ಇದ್ದರೂ, ಉಳಿದೆದ್ದಲ್ಲಾ ಅತ್ಯಂತ ಕ್ಷುಲ್ಲಕವಾಗಿವೆ. ನಮ್ಮ ದೇಶವು ಆಧುನೀಕರಣವಾಗಿದ್ದರೂ ಮತ್ತು ಹೊಸ ಪೀಳಿಗೆಯು ಕ್ಷುಲ್ಲಕ ಮೂಢನಂಬಿಕೆಗಳನ್ನು ಒಪ್ಪದಿದ್ದರೂ ಸಹ, ಕೆಲವು ಮೂಢನಂಬಿಕೆಗಳು ಇನ್ನೂ ಪ್ರಚಲಿತವಾಗಿವೆ.

ನೀವು ಒಂದು ನಿರ್ದಿಷ್ಟ ಮೂಢನಂಬಿಕೆಯನ್ನು ಅನುಸರಿಸಲು ಬಯಸುತ್ತೀರೋ ಇಲ್ಲವೋ ಅದು ಮುಖ್ಯವಲ್ಲ. ಆದರೆ ಕೆಲವೊಮ್ಮೆ ನಮ್ಮ ದೈನಂದಿನ ಕಾರ್ಯಗಳಲ್ಲಿ ತೊಡಗಿದ್ದಾಗ ಕೆಲವು ಮೂಢನಂಬಿಕೆಗಲ್ಲಿ ಪಾಲ್ಗೊಳ್ಳುವಹಾಗಾಗುತ್ತದೆ. ಕೆಲವು ನಂಬಿಕೆಗಳು ಬರೇ ತಮಾಷೆಯಂತಿರುತ್ತದೆಯಾದರೂ ಮತ್ತೆ ಕೆಲವು ನಂಬಿಕೆಗಳ ಪರಿಣಾಮ ಅತ್ಯಂತ ಅಪಾಯಕಾರಿಯಾಗಿರುತ್ತವೆ. ಈ ದಿಶೆಯಲ್ಲಿ ಪ್ರತೀತಿಯಲ್ಲಿರುವ ನಂಬಿಕೆಗಳಲ್ಲಿ ಪ್ರಖ್ಯಾತ ಮತ್ತು ಜನಪ್ರಿಯವಾಗಿರುವ 10 ಮೂಢನಂಬಿಕೆಗಳನ್ನು ಗಮನಿಸೋಣ.

12 ಧಾರ್ಮಿಕ ಸಂಕೇತಗಳು ಮತ್ತು ಅದರ ಅರ್ಥಗಳು

ಒಂದು ರೂಪಾಯಿಯ ಮೂಢನಂಬಿಕೆ

ಒಂದು ರೂಪಾಯಿಯ ಮೂಢನಂಬಿಕೆ

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಒಂದು ರೂಪಾಯಿ ಮಂಗಳಕರವೆಂದು ಪರಿಗಣಿಸಲಾಗಿದೆ. ಭಾರತದಲ್ಲಿ ಮದುವೆ ಮತ್ತು ಇತರ ಸಮಾರಂಭಗಳಲ್ಲಿ ಹಣವನ್ನು ಉಡುಗೊರೆಯಾಗಿ ಕೊಡುವ ಸಾಂಪ್ರದಾಯಿಕ ಪದ್ದತಿ ಇದೆ. ಆದಾಗ್ಯೂ ಹಾಗೆ ಕೊಡುವ ಹಣವು ಯಾವಾಗಲೂ ಬೆಸ ಸಂಖ್ಯೆಯಿಂದ ಅಥವಾ ಒಂದು ಅಂಟಿಕೊಂಡಿರುವ ರೂಪಾಯಿಯಿಂದ ಅಂತ್ಯಗೊಳ್ಳಬೇಕು.

ನಿಂಬೆ ಮೆಣಸಿನಕಾಯಿಯ ಮೋಡಿ

ನಿಂಬೆ ಮೆಣಸಿನಕಾಯಿಯ ಮೋಡಿ

ಭಾರತದಲ್ಲಿ ನೀವು ಅನೇಕ ಬಾಗಿಲ ಮೇಲೆ ನಿಂಬೆ ಮೆಣಸಿನಕಾಯಿಗಳನ್ನು ಕಟ್ಟಿ ತೂಗುಹಾಕಿರುವುದನ್ನು ಗಮನಿಸಿರ ಬೇಕು. ಸಾಮಾನ್ಯವಾಗಿ ಒಂದು ನಿಂಬೆ ಹಣ್ಣಿನ ಜೊತೆ ಏಳು ಮೆಣಸಿನಕಾಯಿಗಳನ್ನು ದಾರದಿಂದ ಪೋಣಿಸಿ ಮುಂಬಾಗಿಲ ಹೊರಗೆ ನೇತುಹಾಕಿರುತ್ತಾರೆ. ಸಂಖ್ಯೆ ಏಳು ಮಾಂತ್ರಿಕ ಸಂಖ್ಯೆಯೆಂದು ಪರಿಗಣಿಸಿ ಈ ಮೋಡಿಯು ಮನೆಗೆ ಅದೃಷ್ಟ ಮತ್ತು ಅಭಿವೃದ್ಧಿ ತರುವುದೆಂಬ ನಂಬಿಕೆ.

ದುರಾದೃಷ್ಟ ಶನಿವಾರ:

ದುರಾದೃಷ್ಟ ಶನಿವಾರ:

ಶನಿವಾರವು ಸಾಮಾನ್ಯವಾಗಿ ಶನಿದೇವರ ದಿನವೆಂದು ಪರಿಗಣಿಸಲಾಗಿದೆ. ಶನಿ ದೇವರು ಬಹಳ ಉಗ್ರ ಮತ್ತು ಕೋಪಿಷ್ಟ ದೇವರೆಂಬ ನಂಬಿಕೆ. ಆದ್ದರಿಂದ ಶನಿವಾರದ ದಿವಸ ಪ್ರಯಾಣ ಬೆಳಸುವುದು ಅಶುಭವೆಂದು ಮತ್ತು ಯಾವ ಮಂಗಳಕರ ಸಮಾರಂಭವನ್ನು ಅಂದು ನಡೆಸುವುದಿಲ್ಲ.

ಕೆಟ್ಟ ದೃಷ್ಟಿ

ಕೆಟ್ಟ ದೃಷ್ಟಿ

ಕೆಟ್ಟ ದೃಷ್ಟಿ ಮತ್ತೊಂದು ಭಾರತೀಯ ಮೂಢನಂಬಿಕೆ. ಕೆಟ್ಟ ದೃಷ್ಟಿಯೆಂದರೆ ಸಾಮಾನ್ಯವಾಗಿ ಯಾರಾದರೊಬ್ಬರ ದೃಷ್ಟಿ ಉದ್ದೇಶಪೂರಕವಾಗಿಯೋ ಅಥವ ಇಲ್ಲದೇಯೋ ಬೀಳುವುದು. ಹಾಗೆ ಆದಾಗ ಕೆಡುಕಾದಲ್ಲಿ ಆ ಮನುಷ್ಯನ ದೃಷ್ಟಿ ಕೆಟ್ಟದೆಂದು ಪರಿಗಣಿಸಿ, ಆ ಮನುಷ್ಯನು ಅಸೂಯೆಯಿಂದಲೋ ಅಥವ ತೀವ್ರ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾನೆಂಬ ನಂಬಿಕೆ. ಹಾಗೆ ಆದಾಗ ನಿಮಗೆ ಅನಾರೊಗ್ಯ ಬರಬಹುದು ಅಥವ ನಿಜವಾಗಿಯೂ ಕೆಟ್ಟ ಘಟನೆ ಸಂಭವಹಿಸಬಹುದು.

ಅರಳಿ ಮರ

ಅರಳಿ ಮರ

ಭಾರತದ ಅನೇಕ ಭಾಗಗಳಲ್ಲಿ ಅರಳಿ ಮರದಲ್ಲಿ ಭೂತ ಪ್ರೇತಗಳ ವಾಸಸ್ಥಾನವೆಂಬ ನಂಬಿಕೆ ನಿಜಕ್ಕೂ ಬಹಳ ದೂರ. ಈ ಮರವು ರಾತ್ರಿ ವೇಳೆ ಇಂಗಾಲದ ಆಮ್ಲ (Carbon Di Oxide) ಹೆಚ್ಚಿನ ಪ್ರಮಾಣದಲ್ಲಿ ಹೊರ ಸೂಸುವುದರಿಂದ ಮರದ ಕೆಳಗೆ ನಿಂತರೂ ಅಥವಾ ಮಲಗಿದರೂ ಸಾಕಷ್ಟು ಅಪಾಯಕಾರಿ ಎಂಬುದು ಇದಕ್ಕೆ ಕಾರಣ. ಮರದಿಂದ ದೂರವಿರಲೆಂದು ಮರದಲ್ಲಿ ಭೂತ ಪ್ರೇತಗಳಿವೆಯೆಂದು ಜನರಿಗೆ ನಂಬಿಸಿ ಮೂಢನಂಬಿಕೆ ಜನಪ್ರಿಯವಾಯಿತು.

ಗ್ರಹಣದ ಪ್ರಭಾವ

ಗ್ರಹಣದ ಪ್ರಭಾವ

ಸೂರ್ಯ ಮತ್ತು ಚಂದ್ರಗ್ರಹಣಗಳಿಗೆ ಸಂಭಂದಿಸಿದಂತೆ ಅನೇಕ ಮೂಢನಂಬಿಕೆಗಳಿವೆ. ಹಿಂದೂ ಪುರಾಣದ ಪ್ರಕಾರ, ಸೂರ್ಯ ಅಥವಾ ಚಂದ್ರಗಹಣದ ದಿವಸ ಸೂರ್ಯ ಅಥವ ಚಂದ್ರನನ್ನು ಒಬ್ಬ ರಾಕ್ಷಸ ನುಂಗುತ್ತಾನೆಂದು ನಂಬುತ್ತಾರೆ. ಆ ಕಾರಣದಿಂದ ಜನರಿಗೆ ಮನೆಯ ಒಳಾಂಗಣದಲ್ಲಿ ಉಳಿಯಲು ಹೇಳುತ್ತಾರೆ. ವಿಶೇಷವಾಗಿ ಗರ್ಭಿಣಿ ಹೆಂಗಸರು ತಮ್ಮ ಮಕ್ಕಳು ವಿಕಾರರೂಪದಿಂದ ಜನಿಸದಿರಲು ಮನೆಯ ಒಳಗಡೆಯೇ ಇರಲು ಹೇಳುತ್ತಾರೆ. ಹಾಗೂ ಗ್ರಹಣದ ಸಮಯದಲ್ಲಿ ಅಡುಗೆ ಮಾಡುವುದು ಮತ್ತು ಆಹಾರ ಸೇವಿಸುವುದು ಕೂಡ ನಿಷೇಧ. ಕೆಲವು ಪ್ರದೇಶಗಳಲ್ಲಿ ಗ್ರಹಣ ಕಾಲದಲ್ಲಿ ಎಲ್ಲಾ ತಿನ್ನುವ ಆಹಾರಗಳು ಕೆಡುವುದನ್ನು ತಡೆಯಲು ಅವುಗಳ ಮೇಲೆ ಒಂದೊಂದು ತುಳಸಿ ಎಲೆಯನ್ನು ಇಡುತ್ತಾರೆ.

ಅದೃಷ್ಟಶಾಲಿಯಲ್ಲದ ಭಾರತೀಯ ವಿಧವೆಯರು

ಅದೃಷ್ಟಶಾಲಿಯಲ್ಲದ ಭಾರತೀಯ ವಿಧವೆಯರು

ಭಾರತದಲ್ಲಿ ಇನ್ನೂ ಚಾಲ್ತಿಯಲ್ಲಿರುವ ಇನ್ನೊಂದು ವಿಷಾದಕರ ಮೂಢನಂಬಿಕೆಯೆಂದರೆ ವಿಧವೆಯರಿಗೆ ಸಂಭಂದಪಟ್ಟಿದ್ದು. ಕೆಲವು ಭಾಗಗಳಲ್ಲಿ ವಿಧವೆಯರನ್ನು ಪ್ರಾಣಿಗಳಿಗಿಂತಾ ಕೆಟ್ಟದಾಗಿ ಕಾಣುತ್ತಾರೆ. ವಿಧವೆಯರು ಯಾವ ಆಭರಣವನ್ನು ಧರಿಸಬಾರದು ಮತ್ತು ತಮ್ಮ ಜೀವನದ ಉಳಿದ ಭಾಗದಲ್ಲಿ ಬಿಳಿ ಉಡುಪನ್ನೇ ಧರಿಸಬೇಕು ಎಂದು ಭಾವಿಸಲಾಗಿದೆ. ಅವಳು ಯಾವುದೇ ಮಸಾಲೆ (Spicy) ಆಹಾರ ತಿನ್ನದೆ ಕೇವಲ ಸಸ್ಯಾಹಾರಿ ಆಹಾರಗಳನ್ನೇ ತಿನ್ನಬೇಕೆಂದು ಹೇಳುತ್ತಾರೆ. ಮೂಢನಂಬಿಕೆಗಗಳಲ್ಲಿ ಅತ್ಯಂತ ವಿಷಾದದ ಸಂಗತಿಯೆಂದರೆ ವಿಧವೆಯರ ಮುಖದರ್ಶನವೂ ಬಹಳ ದೊಡ್ಡ ಅಪಶಕುನವೆಂಬ ಭಾವನೆ ಇರುವುದು.

English summary

10 Popular Indian Superstitions

India has always been a land of superstitious people. Every culture, religion and region have their own sets of superstitions. Though some superstitions have scientific reasons attached to them, most of them seem extremely silly.
X
Desktop Bottom Promotion