For Quick Alerts
ALLOW NOTIFICATIONS  
For Daily Alerts

ಜಟಾಧಾರಿ ಶಿವನ ಮಹಿಮೆ ಈ 10 ವಿಶೇಷತೆಗಳಲ್ಲಿ ಅಡಗಿದೆ!

By Deepak M
|

ಧರ್ಮವು ಬಹುತೇಕ ವಿಜ್ಞಾನದಂತೆಯೇ. ಅದು ಸಹ ಲಾಂಛನಗಳು ಮತ್ತು ಆಧ್ಯಾತ್ಮಿಕ ಚಿಹ್ನೆಗಳ ಮೂಲಕ ಕೆಲಸ ಮಾಡುತ್ತದೆ. ಪ್ರತಿ ಧರ್ಮವು ತನ್ನದೇ ಆದ ಚಿಹ್ನೆ ಮತ್ತು ಸಂಕೇತಗಳನ್ನು ಹೊಂದಿರುತ್ತದೆ. ಉದಾಹರಣೆಗ ಕ್ರೈಸ್ತ ಧರ್ಮದಲ್ಲಿ ಶಿಲುಬೆ, ಮೇರಿ ಮಾತೆ, ಪವಿತ್ರ ಪ್ರೇತಾತ್ಮ ಇತ್ಯಾದಿಗಳಿದ್ದರೆ. ಇಸ್ಲಾಂ ಧರ್ಮದಲ್ಲಿ ಬಿದಿಗೆ ಚಂದ್ರ ಮತ್ತು ನಕ್ಷತ್ರಗಳಿವೆ. ಇನ್ನೂ ವಿಶ್ವದಲ್ಲಿಯೇ ಪುರಾತನ ಧರ್ಮವಾದ ಹಿಂದೂ ಧರ್ಮದಲ್ಲಿ ಹಲವಾರು ಲಾಂಛನಗಳು ಇವೆ.

ಇನ್ನು ವಿಶೇಷವೆಂದರೆ ಪ್ರತಿಯೊಂದು ಹಿಂದೂ ದೇವರುಗಳು ಸಹ ತನ್ನದೇ ಆದ ಲಾಂಛನಗಳನ್ನು ಹೊಂದಿವೆ. ಹಿಂದೂ ಧರ್ಮದಲ್ಲಿ ಸಾಂಬ ಸದಾಶಿವನು ತ್ರಿಮೂರ್ತಿಗಳಲ್ಲಿ ಒಬ್ಬನಾಗಿ ಆರಾಧಿಸಲ್ಪಡುವವನು. ಆದ್ದರಿಂದ ಶಿವನು ಸಹ ಹಲವು ಲಾಂಛನಗಳ ಜೊತೆಗೆ ಗುರುತಿಸಲ್ಪಡುತ್ತಾನೆ. ಶಿವನ ಲಾಂಛನಗಳು ತುಂಬಾ ಆಕರ್ಷಕವಾಗಿರುತ್ತವೆ ಏಕೆಂದರೆ ಈತ ಮಾತ್ರನೇ ದೇವತೆಗಳ ಪೈಕಿ ತಪಸ್ವಿಯಾಗಿ ಗುರುತಿಸಲ್ಪಟ್ಟಿರುವವನು. ಸರ್ವ ಸಂಗ ಪರಿತ್ಯಾಗಿಯಂತೆ ಸ್ಮಶಾನ ವಾಸಿಯಾಗಿ ತಪಸ್ಸು ಆಚರಿಸುವ ಶಿವನಿಗೆ ಬಂಗಾರವು ಸಹ ಬೇಕಾಗಿಲ್ಲ.

ಶಿವನು ಕಠಿಣ ತಪಸ್ಸು ಮತ್ತು ಧ್ಯಾನವನ್ನು ಮಾಡುವ ಜೀವನವನ್ನು ಆಯ್ಕೆ ಮಾಡಿಕೊಂಡನು. ಹಾಗಾಗಿಯೇ ಶಿವನ ಲಾಂಛನಗಳು ಹಿಂದೂ ಧರ್ಮದಲ್ಲಿಯೇ ಅತ್ಯಂತ ವಿಭಿನ್ನವಾಗಿವೆ. ಆ ಲಾಂಛನಗಳು ಮತ್ತು ಚಿಹ್ನೆಗಳು ಶಿವನ ಅಲೆಮಾರಿತನವನ್ನು ಪ್ರತಿಬಿಂಬಿಸುತ್ತವೆ. ಆದರೆ ಅದೇ ಶಿವನ ವಿಚಾರಕ್ಕೆ ಬಂದರೆ "ಜಟಾಧಾರಿ" ಎಂಬ ಧನಾತ್ಮಕ ಪ್ರತಿಕ್ರಿಯೆ ಭಕ್ತಾಧಿಗಳಲ್ಲಿ ಮೂಡುತ್ತದೆ. ಇಲ್ಲಿ ನಾವು ಶಿವನ ಲಾಂಛನಗಳ ಬಗ್ಗೆ ಕೆಲವೊಂದಿಷ್ಟು ವಿವರಣೆಗಳನ್ನು ನೀಡುತ್ತಿದ್ದೇವೆ ಓದಿಕೊಳ್ಳಿ.

ಹಿಂದೂ ದೇವರುಗಳನ್ನು ದಿನದ ಪ್ರಕಾರ ಪೂಜಿಸಿ

ಶಿವ ಲಿಂಗ

ಶಿವ ಲಿಂಗ

ಬಹುತೇಕ ಮಂದಿರಗಳಲ್ಲಿ ಶಿವನನ್ನು ನಾವು ಲಿಂಗ ರೂಪದಲ್ಲಿ ಪೂಜಿಸುತ್ತೇವೆ. ಮಂದಿರಗಳಲ್ಲಿ ಕಪ್ಪು ಅಥವಾ ಕಡು ಬೂದು ಬಣ್ಣದ ಶಿವ ಲಿಂಗವನ್ನು ಸ್ಥಾಪಿಸಿರುತ್ತಾರೆ. ಲಂಬವಾಗಿ ನಿಂತಿರುವ ಕಲ್ಲು ನಮಗೆ ಶಿವನೆಂಬ ಭಾವನೆಯನ್ನು ಮೂಡಿಸುತ್ತದೆ.

ನಂದಿ

ನಂದಿ

ನಂದಿ ಅಥವಾ ಎತ್ತು ಶಿವ ಗಣಗಳಲ್ಲಿ ಒಬ್ಬನಾಗಿರುವ ಅವತಾರ ಪುರುಷ. ಶಿವನ ಅನುಯಾಯಿ. ಹಾಗಾಗಿಯೇ ಶಿವಾಲಯಗಳ ಹೊರಗೆ ಲಿಂಗಕ್ಕೆ ಅಭಿಮುಖವಾಗಿ ನಾವು ನಂದಿಯನ್ನು ಕಾಣಬಹುದು. ಶಿವನನ್ನು ದರ್ಶನ ಮಾಡಿಕೊಂಡು ಬಂದು, ನಂದಿಯ ಕೋಡುಗಳಿಂದ ಶಿವನನ್ನು ದರ್ಶನ ಮಾಡಿ, ನಂದಿಯ ಕಿವಿಯಲ್ಲಿ ನಮ್ಮ ಇಚ್ಛೆಗಳನ್ನು ಪಿಸುಮಾತಿನಲ್ಲಿ ಹೇಳಿದರೆ ಅದು ಶಿವನಿಗೆ ತಲುಪುತ್ತದೆ ಎಂಬ ಪ್ರತೀತಿ ಬೆಳೆದು ಬಂದಿದೆ.

ತ್ರಿಶೂಲ

ತ್ರಿಶೂಲ

ಸಾಕ್ಷಾತ್ ಶಿವನು ಸರ್ವ ಆಯುಧಗಳನ್ನು ಬಲ್ಲವನಾದರು, ಆತ ಆರಿಸಿಕೊಂಡಿದ್ದು ಮಾತ್ರ ತ್ರಿಶೂಲವನ್ನು. ಶಿವನು ಸದಾ ಒಂದು ಕೈಯಲ್ಲಿ ತ್ರಿಶೂಲವನ್ನು ಹಿಡಿದಿರುತ್ತಾನೆ. ತ್ರಿಶೂಲದಲ್ಲಿರುವ ಮೂರು ಅಲಗುಗಳು ಮೂರು ಶಕ್ತಿಗಳನ್ನು ಪ್ರತಿನಿಧಿಸುತ್ತವೆ. ಅವುಗಳೆಂದರೆ ಬಯಕೆ, ಕ್ರಿಯೆ ಮತ್ತು ಜ್ಞಾನ.

ಬಿದಿಗೆ ಚಂದ್ರ

ಬಿದಿಗೆ ಚಂದ್ರ

ಶಿವನಿಗೆ ಇರುವ ಮತ್ತೊಂದು ಹೆಸರುಗಳು ಚಂದ್ರಶೇಖರ, ಚಂದ್ರ ಮೌಳೀಶ್ವರ ಇತ್ಯಾದಿ. ಪುರಾಣದ ಪ್ರಕಾರ ದಕ್ಷನ ಗರ್ವವನ್ನು ಭಂಗ ಮಾಡಿದ ಸಂದರ್ಭದಲ್ಲಿ ಚಂದ್ರನಿಗೆ ಇತ್ತ ಅಭಯದ ಕಾರಣವಾಗಿ ಚಂದ್ರ ಸದಾ ಶಿವನ ಜಡೆಯಲ್ಲಿ ವಿರಾಜಮಾನನಾದನು. ಚಂದ್ರನು ಅಭಿವೃದ್ಧಿ ಮತ್ತು ಅವನತಿಯ ಸಂಕೇತ. ಇದು ಪ್ರಕೃತಿ ಧರ್ಮವನ್ನು ಜಗತ್ತಿಗೆ ಸಾರುವ ಒಂದು ಪ್ರಕ್ರಿಯೆ. ಹಿಂದೂಗಳ ಪಂಚಾಂಗವು ಚಂದ್ರನ ಚಲನೆಯ ಆಧಾರದ ಮೇಲೆ ರಚಿಸಲ್ಪಡುತ್ತದೆ.

ನೀಲಕಂಠ

ನೀಲಕಂಠ

ಶಿವನ ಮತ್ತೊಂದು ಹೆಸರು ನೀಲಕಂಠ, ವಿಷಕಂಠ, ನಂಜುಂಡೇಶ್ವರ ಎಂದು ಸಹ ಕರೆಯುತ್ತಾರೆ. ಸಮುದ್ರ ಮಂಥನ ಮಾಡುವಾಗ ಹುಟ್ಟಿಕೊಂಡ ಹಾಲಾಹಲವನ್ನು ಶಿವನು ಕುಡಿದನು. ಇದನ್ನು ಗಮನಿಸಿದ ದೇವಿ ಪಾರ್ವತಿಯು ಅದನ್ನು ಆತನ ಗಂಟಲಿನಲ್ಲಿಯೇ ತಡೆದಳು. ಇದು ನೀಲಿ ಬಣ್ಣಕ್ಕೆ ತಿರುಗಿತು. ಹಾಗಾಗಿಯೇ ಶಿವನಿಗೆ ನೀಲಕಂಠ ಎಂಬ ಹೆಸರು ಬಂದಿತು.

ರುದ್ರಾಕ್ಷಿ

ರುದ್ರಾಕ್ಷಿ

ಶಿವನು ತನ್ನ ಕುತ್ತಿಗೆಯ ಸುತ್ತಲೂ ರುದ್ರಾಕ್ಷಿಯ ಮಾಲೆಯನ್ನು ಹಾಕಿಕೊಂಡಿರುತ್ತಾನೆ. ಶಿವನು ರುದ್ರಾಕ್ಷಿಯ ತಾಯತಗಳನ್ನು ಸಹ ಹೊಂದಿರುತ್ತಾನೆ. "ರುದ್ರಾಕ್ಷಿ" ಎಂಬ ಹೆಸರಿನಲ್ಲಿರುವ "ರುದ್ರ" ಎಂಬ ಪದವು ಶಿವನ ಇನ್ನೊಂದು ಹೆಸರನ್ನು ಸೂಚಿಸುತ್ತದೆ. ಅಂದರೆ ರುದ್ರ+ ಅಕ್ಷಿ= ರುದ್ರನ ಕಣ್ಣೀರು ಎಂದರ್ಥ. ಇದರ ಹಿಂದೆ ಒಂದು ಕುತೂಹಲಕಾರಿ ಕತೆಯಿದೆ. ಒಮ್ಮೆ ಶಿವನು ದೀರ್ಘ ತಪಸ್ಸನ್ನು ಮಾಡಿದನಂತೆ. ತಪಸ್ಸಿನ ನಂತರ ಕಣ್ಣನ್ನು ತೆರೆದಾಗ ಆತನ ಕಣ್ಣಿಂದ ಕಣ್ಣೀರಿನ ಹನಿ ಕೆಳಗೆ ಬಿತ್ತಂತೆ. ಹಾಗೆ ಬಿದ್ದ ಕಣ್ಣೀರು, ಪವಿತ್ರವಾದ ರುದ್ರಾಕ್ಷಿಯ ಮರವಾಗಿ ಬೆಳೆಯಿತಂತೆ.

ನಾಗರಹಾವು

ನಾಗರಹಾವು

ಶಿವನು ತನ್ನ ಕುತ್ತಿಗೆಯ ಸುತ್ತಲೂ ಮೂರು ಸುತ್ತು ಹಾವನ್ನು ಸುತ್ತಿಕೊಂಡಿರುತ್ತಾನೆ. ಹಾವಿನ ಮೂರು ಸುತ್ತುಗಳು ಭೂತ, ಭವಿಷ್ಯ ಮತ್ತು ವರ್ತಮಾನಗಳ ಪ್ರತೀಕ. ಅಲ್ಲದೆ ನಾಗರಹಾವನ್ನು ಸಹ ಹಿಂದೂಗಳು ಭಕ್ತಿ ಭಾವಗಳಿಂದ ಪೂಜಿಸುತ್ತಾರೆ.

ಮೂರನೆ ಕಣ್ಣು

ಮೂರನೆ ಕಣ್ಣು

ಶಿವನ ಮತ್ತೊಂದು ಲಾಂಛನ ಎಂದರೆ ಅದು ಮೂರನೆ ಕಣ್ಣು. ಇದು ಶಿವನ ಹಣೆಯಲ್ಲಿ ನೆಲೆಗೊಂಡಿದೆ. ಶಿವನು ತುಂಬಾ ಕೋಪಗೊಂಡಾಗ, ರಾಕ್ಷಸರ ಸಂಹಾರ ಮಾಡಬೇಕಾದಾಗ ಈ ಮೂರನೆ ಕಣ್ಣನ್ನು ತೆರೆಯುತ್ತಾನೆ. ಮೂರನೆ ಕಣ್ಣು ಬುದ್ಧಿವಂತಿಕೆ ಮತ್ತು ಸರ್ವ ವ್ಯಾಪಿ ಎಂಬ ಸಂದೇಶವನ್ನು ಸಾರುತ್ತದೆ.

ಡಮರುಗ

ಡಮರುಗ

ಚಿಕ್ಕದಾದ ಡೋಲನ್ನು ಹೋಲುವ ಡಮರುಗವು ಶಿವನೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ. ಸಾಕ್ಷಾತ್ ಶಿವನು ಕಲಾ ತಪಸ್ವಿ, ನೃತ್ಯದ ಆದ್ಯ ಪ್ರವರ್ತಕ. ಯಾವಾಗ ರುದ್ರನು ನಾಟ್ಯ ಇಲ್ಲವೇ ರುದ್ರ ತಾಂಡವ ಮಾಡಲು ಶುರುಮಾಡಿದಾಗ ಡಮರುಗವನ್ನು ಬಾರಿಸುತ್ತಾನೆ.

ಜಡೆ

ಜಡೆ

ಸಿಕ್ಕು ಸಿಕ್ಕಾದ, ಗಂಟು ಕಟ್ಟಿದ ಜಡೆಯು ಅಶುಚಿತ್ವದ ಸಂಕೇತ. ಆದರೆ ಶಿವನ ವಿಚಾರದಲ್ಲಿ ಇದು ಅತ್ಯಂತ ಪವಿತ್ರವಾಗಿ ಗೋಚರಿಸುತ್ತದೆ. ಈ "ಜಡೆ" ಅಥವಾ ಜಟೆಯಲ್ಲಿ ಆತನು ಸೌಂದರ್ಯ ಮತ್ತು ಪವಿತ್ರ ಎಂಬ ವ್ಯಾಖ್ಯಾನಗಳನ್ನು ಮೀರಿ ನಿಂತು ಬಿಡುತ್ತಾನೆ.

English summary

10 Holy Lord Shiva Symbols

That is why, Lord Shiva's symbols are all very different from the other symbols in Hinduism. They relate to the nomadic nature of the Mahadev himself. Here are some of the main Lord Shiva symbols that are considered holy in Hinduism.
X
Desktop Bottom Promotion