For Quick Alerts
ALLOW NOTIFICATIONS  
For Daily Alerts

ಸಾಕುಪ್ರಾಣಿಗಳ ಆಹಾರ-ಎಚ್ಚರ ತಪ್ಪಿದರೆ ಪ್ರಾಣಕ್ಕೆ ಕಂಟಕ..!

By Arshad
|

ಹಿಂದೆಲ್ಲಾ ಮನೆಯಲ್ಲಿರುವ ನಾಯಿ, ಬೆಕ್ಕು, ಗಿಳಿ ಮೊದಲಾದ ಸಾಕುಪ್ರಾಣಿಗಳಿಗೆ ಪ್ರತ್ಯೇಕವಾದ ಆಹಾರವೆಂದೇ ಇರಲಿಲ್ಲ, ನಾವು ನಮಗೇನು ಅಡುಗೆ ಮಾಡಿಕೊಂಡಿದ್ದೆವೋ ಅದರಲ್ಲಿ ಒಂದು ಪಾಲು ಇವಕ್ಕೂ ಸಿಗುತ್ತಿತ್ತು. ಹೆಚ್ಚಿನ ಮನೆಗಳಲ್ಲಿ ಮನೆಯವರು ತಿಂದ ಬಳಿಕ ಉಳಿದಿದ್ದ ಅನ್ನಸಾರು ಇವುಗಳ ಪಾಲಾಗುತ್ತಿತ್ತು. ಆದರೆ ಇಂದು ಕಾಲ ಬದಲಾಗಿದೆ. ನಾಯಿಬೆಕ್ಕುಗಳಿಗೂ ಪ್ರತ್ಯೇಕವಾದ ಆಹಾರಗಳು ಸಿದ್ಧರೂಪದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿವೆ.

ಏಕೆಂದರೆ ನಾವು ಉಣ್ಣುವ ಆಹಾರದಲ್ಲಿ ಕೆಲವು ಇವುಗಳಿಗೆ ವಿಷವಾಗಿ ಪರಿಣಮಿಸಬಹುದು. ವಿಶೇಷವಾಗಿ ಉಪ್ಪು. ನಾವು ಅರಗಿಸಿಕೊಳ್ಳುವಷ್ಟು ಸಮರ್ಥವಾಗಿ ನಮ್ಮ ಸಾಕುಪ್ರಾಣಿಗಳು ಉಪ್ಪನ್ನು ಜೀರ್ಣಿಸಿಕೊಳ್ಳಲಾರವು. ನಿಧಾನವಾಗಿ ಇದು ಪ್ರಾಣಿಗಳ ಆರೋಗ್ಯದ ಮೇಲೆ ಪರಿಣಾಮ ಬೀರಿ ಅವುಗಳ ಆಯಸ್ಸನ್ನು ಕಡಿಮೆಗೊಳಿಸುತ್ತವೆ. ಆದ್ದರಿಂದ ಅಪ್ಪಿ ತಪ್ಪಿಯೂ ನಾವು ಕುರುಕುವ ಆಲೂಗಡ್ಡೆ ಚಿಪ್ಸ್ ಮೊದಲಾದವುಗಳನ್ನು ಪ್ರಾಣಿಗಳಿಗೆ ತಿನ್ನಿಸಬಾರದು. ನಿಮ್ಮ ಮನೆಯಲ್ಲೂ ಸಾಕಬಹುದಾದ 5 ಅಸಾಮಾನ್ಯ ಸಾಕುಪ್ರಾಣಿಗಳು

ಸಾಮಾನ್ಯವಾಗಿ ನಾವು ಊಟ ಮಾಡುವಾಗ ನಮ್ಮ ಸಾಕುಪ್ರಾಣಿಗಳು ನಾವು ತಿನ್ನುತ್ತಿರುವುದನ್ನೇ ದೈನ್ಯನೋಟದಿಂದ ನೋಡುತ್ತಿರುತ್ತವೆ. ಈ ನೋಟ ಎಂತಹವರನ್ನಾದರೂ ಕರಗಿಸಬಲ್ಲದಾದುದರಿಂದ ಹೆಚ್ಚಿನವರು ತಮ್ಮ ಊಟದ ಒಂದು ತುತ್ತನ್ನು ಅವುಗಳಿಗೆ ತಿನ್ನಲು ನೀಡುತ್ತಾರೆ. ಆದರೆ ಈ ಆಹಾರ ಅವುಗಳಿಗೆ ವಿಷವಾಗಿ ಪರಿಣಮಿಸಬಹುದು.

ಅದರಲ್ಲೂ ಮಕ್ಕಳಲ್ಲಿ ಈ ಪರಿಯ ಅಭ್ಯಾಸ ಹೆಚ್ಚು. ಆದ್ದರಿಂದ ನಿಮ್ಮ ನೆಚ್ಚಿನ ಸಾಕುಪ್ರಾಣಿಗೆ ಯಾವ ಆಹಾರ ಸಲ್ಲುತ್ತದೆ ಎಂಬುದನ್ನು ಪಶುವೈದ್ಯರಿಂದ ಅಥವಾ ಈ ಕ್ಷೇತ್ರದಲ್ಲಿ ನುರಿತ ಅನುಭವಸ್ಥರಿಂದ ತಿಳಿದುಕೊಂಡು ಅವುಗಳನ್ನು ಮಾತ್ರ ಸೂಕ್ತಪ್ರಮಾಣದಲ್ಲಿ ನೀಡುವುದು ಉತ್ತಮ. ಪ್ರಾಣಿಗಳಿಗೆ ಮಾರಕವಾಗಬಹುದಾದ ಆರು ಆಹಾರಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ..

ಕೆಫೀನ್

ಕೆಫೀನ್

ಕಾಫಿ ಮತ್ತಿತರ ಆಹಾರಗಳಲ್ಲಿರುವ ಕೆಫೀನ್ ಮಾನವರಿಗೆ ಉತ್ತಮವಾದುದಾದರೂ ಪ್ರಾಣಿಗಳ ಆರೋಗ್ಯಕ್ಕೆ ಮಾರಕವಾಗಿದೆ. ನಾಯಿ, ಬೆಕ್ಕು ಮೊದಲಾದವು ಕಾಫಿಯನ್ನು ಕುಡಿದರೆ ಅವುಗಳ ಹೃದಯಬಡಿತವನ್ನೇ ಏರುಪೇರುಗೊಳಿಸಿ ತಲೆತಿರುಗಿ ಬೀಳುವಂತೆ ಮಾಡಬಹುದು. ಕೆಲವೊಮ್ಮೆ ಹೃದಯಬಡಿತವನ್ನು ವಿಪರೀತ ಏರಿಸಿ ಅವುಗಳ ಚಟುವಟಿಕೆಯನ್ನು ಹೆಚ್ಚಾಗಿಸಬಹುದು. ಈ ಪ್ರಮಾಣ ಹೆಚ್ಚಾದರೆ ಪ್ರಾಣಾಪಾಯವೂ ಸಂಭವಿಸಬಹುದು. ಆದ್ದರಿಂದ ನಿಮ್ಮ ಯಾವುದೇ ಸಾಕುಪ್ರಾಣಿಗೆ ಕಾಫಿ, ಟೀ, ಎನರ್ಜಿ ಡ್ರಿಂಕ್ ಮೊದಲಾದ ಯಾವುದೇ ಆಹಾರಗಳನ್ನು ತಿನ್ನಿಸಬೇಡಿ.

ಚಾಕಲೇಟ್

ಚಾಕಲೇಟ್

ಚಾಕಲೇಟು, ಅದರಲ್ಲೂ ಕಪ್ಪು ಚಾಕಲೇಟು ನಾಯಿಗಳಿಗೆ ಮಾರಕವಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕೋಕೋ ವನ್ನು ನಾಯಿಯ ಜೀರ್ಣಾಂಗಗಳು ಜೀರ್ಣಿಸಿಕೊಳ್ಳಲಾರದೇ ವಾಂತಿ ಮತ್ತು ಬೇಧಿಯಾಗಬಹುದು. ಏಕೆಂದರೆ ಒಮ್ಮೆಲೇ ಆಗಾಧ ಪ್ರಮಾಣದಲ್ಲಿ ದೊರಕುವ ಕೋಕೋ ಅವುಗಳ ಹೃದಯಬಡಿತವನ್ನು ಏರಿಸಿ ತಲೆತಿರುಗಿ ಬೀಳುವಂತೆ ಮಾಡುತ್ತವೆ. ಇನ್ನುಳಿದಂತೆ ಮೂತ್ರಪಿಂಡದ ವೈಫಲ್ಯ ಮತ್ತು ಸಾವು ಸಹಾ ಸಂಭವಿಸಬಹುದು. ಆದ್ದರಿಂದ ವಿಶೇಷವಾಗಿ ಮಕ್ಕಳಿಗೆ ಯಾವುದೇ ಸಾಕುಪ್ರಾಣಿಗೆ ಚಾಕಲೇಟು ತಿನ್ನಿಸದಿರುವಂತೆ ಎಚ್ಚರಿಸಿ.

ದ್ರಾಕ್ಷಿ ಮತ್ತು ಒಣದ್ರಾಕ್ಷಿ

ದ್ರಾಕ್ಷಿ ಮತ್ತು ಒಣದ್ರಾಕ್ಷಿ

ದ್ರಾಕ್ಷಿ ಮತ್ತು ಒಣದ್ರಾಕ್ಷಿಯನ್ನು ಸೇವಿಸಿದಾಕ್ಷಣ ಹೆಚ್ಚಿನ ಸಾಕುಪ್ರಾಣಿಗಳಿಗೆ ಅಜೀರ್ಣವಾಗುತ್ತದೆ. ಪ್ರಮಾಣ ಹೆಚ್ಚಾದರೆ ಮೂತ್ರಪಿಂಡಗಳ ವೈಫಲ್ಯ ಮತ್ತು ಸಾವು ಸಹಾ ಸಂಭವಿಸಬಹುದು. ಆದ್ದರಿಂದ ಯಾವುದೇ ಸಾಕುಪ್ರಾಣಿಗೆ ದ್ರಾಕ್ಷಿ ನೀಡಲೇಬೇಡಿ.

ಒಣಫಲಗಳು

ಒಣಫಲಗಳು

ಮನುಷ್ಯರಿಗೆ ಅತ್ಯುತ್ತಮವಾದ ಒಣಫಲಗಳು ಪ್ರಾಣಿಗಳ ಆರೋಗ್ಯಕ್ಕೆ ಮಾರಕವಾಗಿವೆ. ಏಕೆಂದರೆ ಒಣಫಲಗಳನ್ನು ಸೇವಿಸಿದ ಬಳಿಕ ಅವುಗಳನ್ನು ಜೀರ್ಣಿಸಿಕೊಳ್ಳಲು ಅವುಗಳ ಜೀರ್ಣಾಂಗಗಳಿಗೆ ಸಾಧ್ಯವಾಗದೇ ಇರುವುದರಿಂದ ಇದು ವಾಂತಿ ಮತ್ತು ಶರೀರದ ತಾಪಮಾನ ಅತಿಹೆಚ್ಚಾಗುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ.

ಬೆಣ್ಣೆಹಣ್ಣು

ಬೆಣ್ಣೆಹಣ್ಣು

ಬೆಣ್ಣೆಹಣ್ಣು ಅಥವಾ ಬಟರ್ ಫ್ರುಟ್ ಅಥವಾ ಅವೋಕ್ಯಾಡೋ ಎಂಬ ಹಣ್ಣಿನ ತಿರುಳು ಅಥವಾ ಪೇಯವನ್ನು ಯಾವುದೇ ಸಾಕುಪ್ರಾಣಿಗೆ ನೀಡಬೇಡಿ. ಏಕೆಂದರೆ ಇದರಲ್ಲಿರುವ ಪರ್ಸಿನ್ (persin) ಎಂಬ ಶಿಲೀಂಧ್ರಕಾರಕ ರಾಸಾಯನಿಕವನ್ನು ಪ್ರಾಣಿಗಳ ಜೀರ್ಣಾಂಗಗಳು ಜೀರ್ಣಿಸಿಕೊಳ್ಳಲು ಅಸಮರ್ಥವಾಗಿದ್ದು ಕೂಡಲೇ ಬೇಧಿ, ವಾಂತಿಯಲ್ಲಿ ಪರ್ಯವಸಾನವಾಗುತ್ತದೆ.

ಈರುಳ್ಳಿ ಮತ್ತು ಬೆಳ್ಳುಳ್ಳಿ

ಈರುಳ್ಳಿ ಮತ್ತು ಬೆಳ್ಳುಳ್ಳಿ

ನಮ್ಮ ಆಹಾರಗಳಲ್ಲಿ ಅನಿವಾರ್ಯವಾದ ಈ ತರಕಾರಿಗಳು ಹಸಿರೂಪದಲ್ಲಿ ಪ್ರಾಣಿಗಳ ಶರೀರಕ್ಕೆ ವಿಷಕಾರಿಯಾಗಿವೆ. ಆದ್ದರಿಂದ ಹಸಿನೀರುಳ್ಳಿಯನ್ನು ಸರ್ವಥಾ ತಿನ್ನಿಸಬೇಡಿ. ಅಲ್ಲದೇ ಮಸಾಲೆ ರೂಪದಲ್ಲಿದ್ದರೂ ತಿನ್ನಿಸದೇ ಇರುವುದು ಉತ್ತಮ. ಏಕೆಂದರೆ ಮಸಾಲೆವಸ್ತುಗಳನ್ನು ಪ್ರಾಣಿಗಳು ಜೀರ್ಣಿಸಿಕೊಳ್ಳಲಾರವು.

ಈ ಆಹಾರಗಳ ಮೇಲೂ ನಿಯಂತ್ರಣವಿರಲಿ

ಈ ಆಹಾರಗಳ ಮೇಲೂ ನಿಯಂತ್ರಣವಿರಲಿ

ಸಾಮಾನ್ಯವಾಗಿ ನಾಯಿಗಳು ಮೂಳೆ ತಿನ್ನುತ್ತವೆ ಎಂದು ನಾವೆಲ್ಲಾ ನಂಬಿದ್ದೇವೆ. ಆದರೆ ನಾಯಿಗಳು ಅದಕ್ಕಂಟಿಕೊಂಡಿರುವ ಮಾಂಸವನ್ನು ತಿನ್ನುವುದಕ್ಕೋಸ್ಕರ ಮೂಳೆ ಜಗಿಯುತ್ತವೆ. ಈ ಮೂಳೆಗಳ ಚೂರುಗಳು ಹೊಟ್ಟೆಗೆ ಹೋದರೆ ಜೀರ್ಣಾಂಗಗಳನ್ನು ಘಾಸಿಗೊಳಿಸಬಹುದು. ಆದ್ದರಿಂದ ಮೂಳೆಗಳನ್ನು ತಿನ್ನಿಸಬೇಡಿ. ಇನ್ನುಳಿದಂತೆ, ಉಪ್ಪು, ಸಕ್ಕರೆ, ಹಸಿ ಹಾಲು, ಮೊಸರು, ಡೈರಿ ಉತ್ಪನ್ನಗಳು, ಹಸಿಮಾಂಸ, ಅರೆಬೆಂದ ಅಥವಾ ಸಮಯ ಮೀರಿದ ಮಾಂಸ, ಮೊಟ್ಟೆ, ಸೋಡಾಪುಡಿ ಹಾಕಿದ ಯಾವುದೇ ಆಹಾರಗಳು, ಪೀಚ್ ಹಣ್ಣುಗಳು, ಆಲ್ಕೋಹಾಲ್ ಸಹಾ ಸಾಕುಪ್ರಾಣಿಗಳಿಗೆ ಮಾರಕವಾಗಿವೆ.

English summary

Foods That Can Kill Your Pet

We all love having pets at home and feed them with good nutritious foods for their healthy being. But do you even realise that there are certain basic foods that can kill your pet? Well, we are here today to share about foods that can actually kill your pets.
X
Desktop Bottom Promotion