For Quick Alerts
ALLOW NOTIFICATIONS  
For Daily Alerts

ಬೆಕ್ಕು ನಿಮ್ಮನ್ನು ನೆಕ್ಕಿದರೆ ಅದರ ಅರ್ಥವೇನು ?

By Arpitha Rao
|

ಬೆಕ್ಕುಗಳನ್ನು ಸಾಮಾನ್ಯವಾಗಿ ಸಾಕಷ್ಟು ಜನ ಸಾಕುತ್ತಾರೆ. ಬೆಕ್ಕು ಸದಾ ಸ್ವಚ್ಚತೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ. ಬೆಕ್ಕುಗಳು ಮಾಡುವ ಕೆಲವೊಂದು ಚಟುವಟಿಕೆಗಳಿಗೆ ನಮಗೆ ತಿಳಿಯದ ಅರ್ಥವಿರುತ್ತದೆ. ಅವುಗಳ ಬಗ್ಗೆ ತಿಳಿದುಕೊಂಡು ಅದರಂತೆ ನಡೆದುಕೊಂಡರೆ ಅವೂ ಕೂಡ ನಮಗೆ ಅಷ್ಟೇ ಮುದ ನೀಡುತ್ತವೆ.

ನಾಯಿಗಳು ಮನುಷ್ಯನನ್ನು ಆಗಾಗ ನೆಕ್ಕುವುದಿದೆ ಆದರೆ ಬೆಕ್ಕು ನೆಕ್ಕಿದರೆ ಅದಕ್ಕೊಂದು ಅರ್ಥವಿದೆ. ಬೆಕ್ಕುಗಳು ಸಾಮಾನ್ಯವಾಗಿ ತಮ್ಮ ಪ್ರೀತಿ ವಾತ್ಸಲ್ಯವನ್ನು ಸಾರ್ವಜನಿಕವಾಗಿ ತೋರಲು ಇಷ್ಟಪಡುವುದಿಲ್ಲ. ಸಾಮಾನ್ಯವಾಗಿ ನಿಮ್ಮ ಬೆಕ್ಕು ಬಂದು ನಿಮ್ಮ ಕೈ ಮತ್ತು ಕಾಲಿನ ಪಾದಗಳನ್ನು ನೆಕ್ಕಲು ಪ್ರಾರಂಭಿಸಿದರೆ ಅದು ನಿಮ್ಮನ್ನು ತನ್ನ ತಾಯಿ ತನ್ನ ಮೊದಲ ವಾರಗಳಲ್ಲಿ ತೋರುತ್ತಿದ್ದ ವಾತ್ಸಲ್ಯ, ಪ್ರೀತಿ ಮತ್ತು ಕಾಳಜಿಯನ್ನು ತೋರುವ ಸ್ವಚ್ಚತೆಯನ್ನು ನಿಮ್ಮಲ್ಲಿ ತೋರುತ್ತಿದೆ ಎಂದರ್ಥ.

ನೀವು ನೋಡಿರಬಹುದು ಬೆಕ್ಕುಗಳು ಒಂದನ್ನೊಂದು ಅವುಗಳಿಗೆ ಸ್ವತಃ ಸಿಗದ ಜಾಗವಾದ ಕಿವಿ, ಮುಖದ ಮೇಲ್ಬಾಗ ಇವುಗಳನ್ನೆಲ್ಲ ನೆಕ್ಕಿಕೊಳ್ಳುತ್ತವೆ. ಹಾಗೆಯೇ ಬೆಕ್ಕು ನಿಮ್ಮ ಕೈ,ಕಾಲು ಮತ್ತು ಕೂದಲನ್ನು ನೆಕ್ಕಲು ಬಂದರೆ ಅವುಗಳಿಗೆ ಕಾರಣವೇನು ಎಂಬುದನ್ನು ನಾವಲ್ಲಿ ತಿಳಿಸುವ ಪ್ರಯತ್ನ ಮಾಡಿದ್ದೇವೆ.

ಮುದ್ದಿನ ಬೆಕ್ಕಿನ ಹಲ್ಲು ತಿಕ್ಕುವವರು ಯಾರು?

What Does It Mean When Your Cat Licks You?

ಪ್ರಾದೇಶಿಕ ಹಕ್ಕುಗಳು:
ನಿಮ್ಮ ಬೆಕ್ಕಿಗೆ ತನ್ನ ಮೊದಲ ಸ್ಪರ್ಶದ ಅನುಭವವಾದ ನೆಕ್ಕುವಿಕೆಯನ್ನು ನೆನಪಿನಲ್ಲಿ ಇಟ್ಟುಕೊಂಡಿರುತ್ತದೆ.ತಾಯಿ ಬೆಕ್ಕು ತನ್ನ ಕಿವಿ,ನೆತ್ತಿ ಇನ್ನಿತರ ಎಲ್ಲಾ ಭಾಗಗಳನ್ನು ನಾಲಿಗೆಯಿಂದ ನೆಕ್ಕಿ ಸ್ವಚ್ಚ ಮಾಡಿದ ಅನುಭವ ಅದು ಎಂದಿಗೂ ನೆನಪಿಸಿಕೊಳ್ಳುತ್ತದೆ. ತಾಯಿ ಬೆಕ್ಕು ತನ್ನ ಮರಿಯನ್ನು ಸರಿಯಾಗಿ ಉಸಿರಾಡುವಂತೆ ಮಾಡಲು ಮತ್ತು ಹೆರಿಗೆ ನಂತರ ಅದರ ಮೈಮೇಲೆ ಇರುವ ಲೋಳೆಯನ್ನು ಸ್ವಚ್ಚಗೊಳಿಸುವ ಉದ್ದೇಶದಿಂದ ಹುಟ್ಟಿದ ತಕ್ಷಣ ನೆಕ್ಕಿ ಎಲ್ಲವನ್ನೂ ಸ್ವಚ್ಚವಾಗಿಸುತ್ತದೆ. ಹಾಗೆಯೇ ಪ್ರತಿ ಭಾರಿ ಪುನಃ ಮರಿ ಹತ್ತಿರ ಬಂದಾಗ ಇದೇ ರೀತಿ ನೆಕ್ಕಿ ಸ್ವಚ್ಚಗೊಳಿಸುತ್ತಾ ಇರುತ್ತದೆ. ಬೆಕ್ಕುಗಳಿಗೆ ಹೆಣ್ಣು ಬೆಕ್ಕಿರಲಿ ಅಥವಾ ಗಂಡು ಬೆಕ್ಕಿರಲಿ ನೆಕ್ಕುವುದು ಶುಚಿತ್ವ ಮತ್ತು ಸಾಮಾಜಿಕ ವಿನಿಮಯವಾಗಿದೆ.ಬೆಕ್ಕುಗಳು ಕೊಳೆಯನ್ನು ತೆಗೆದುಹಾಕಿ ಪರಿಮಳವನ್ನು ಹರಡುವ ಉದ್ದೇಶದಿಂದ ತಮ ಇಷ್ಟದ ಜಾಗಗಳಿಗೆ ಪರಚುವುದು ನೆಕ್ಕುವುದನ್ನು ಮಾಡುತ್ತವೆ.ನಿಮ್ಮ ಬೆಕ್ಕು ನಿಮ್ಮನ್ನು ನೆಕ್ಕುತ್ತಿದ್ದರೆ ಅದು ಅದರ ಗೆಳತಿಗೆ ಮಾಡಿದಂತೆ ನಿಮ್ಮನ್ನು ಸ್ವಚ್ಚಗೊಳಿಸಿ ವಾತ್ಸಲ್ಯ ತೋರುತ್ತಿದೆ ಎಂದರ್ಥ.

ನೆಕ್ಕುವುದರಿಂದ ಬೆಕ್ಕಿಗೆ ಯಾವ ರೀತಿಯ ಅನುಭವವಾಗುತ್ತದೆ?
ಕೆಲವು ತಜ್ಞರು ಹೇಳುವ ಪ್ರಕಾರ ಅನಾಥ ಬೆಕ್ಕು ಅಥವಾ ತಾಯಿಯಿಂದ ಬೇಗ ಬೆರಯಾದ ಬೆಕ್ಕು ಮುದ್ದು ಮಾಡುವುದು ಮತ್ತು ನೆಕ್ಕುವುದನ್ನು ಹೆಚ್ಚು ರೂಡಿಸಿಕೊಂಡಿರುತ್ತದೆ ಮತ್ತು ಈ ಮಗುವಿನಂತಹ ಗುಣವನ್ನು ದೊಡ್ಡದಾದರೂ ಬೆಳಸಿಕೊಂಡು ಬರುತ್ತದೆ. ಆದರೆ ಬೆಕ್ಕುಗಳ ಈ ಗುಣ ಸಾಮಾನ್ಯವಾದುದು.6 ವರ್ಷದ ಕೆಲ್ಸಿ ತನ್ನ ತಾಯಿ ಬೆಕ್ಕಿನೊಂದಿಗೆ ಇರುತ್ತದೆ ಮತ್ತು ಅದರ ಇಷ್ಟದ ಹವ್ಯಾಸವೆಂದರೆ ಮನುಷ್ಯರನ್ನು ನೆಕ್ಕುವುದು.ಮತ್ತು ಕೆಲ್ಸಿಯ ತಾಯಿ ಈ ಮರಿಯನ್ನು ಪ್ರತಿದಿನ ನೆಕ್ಕುತ್ತದೆ ಅಥವಾ ತಿವಿಯುತ್ತಿರುತ್ತದೆ.
ನೆಕ್ಕುವುದು ಅಥವಾ ತಿವಿಯುವುದು ಎಂದರೆ ಬೆಕ್ಕನ ಅರ್ಥದಲ್ಲಿ ಅವು ಸಾಂತ್ವನ ನೀಡುತ್ತಿವೆ ಅಥವಾ ವಾತ್ಸಲ್ಯ ತೋರುತ್ತಿವೆ ಎಂದರ್ಥ. ಬೆಕ್ಕು ನಿಮ್ಮನ್ನು ಬಂದು ನೆಕ್ಕಿದರೆ ಅದು ನಿಮ್ಮನ್ನು ಕಾಳಜಿ ಮಾಡುತ್ತಿದೆ ಎಂದರ್ಥ ನೀವು ಅದರ ಮೈದಡವಿ.ಯಾರಿಗೆ ತಾನೇ ವಾತ್ಸಲ್ಯ ಅನುಭವಿಸಲು ಇಷ್ಟವಿರುವುದಿಲ್ಲ? ಆದ್ದರಿಂದ ಬೆಕ್ಕು ನಿಮ್ಮನ್ನು ಇಷ್ಟಪಡುತ್ತಿದೆ ಎಂಬುದನ್ನು ಆನಂದಿಸಿ.

ನಿಮ್ಮ ಬೆಕ್ಕು ತಿನ್ನಲೇ ಬಾರದಾದ ತಿನಿಸುಗಳು

ಅತಿಯಾದ ನೆಕ್ಕುವಿಕೆ:
ವಯಸ್ಸಾದ ಬೆಕ್ಕು ಇದ್ದಕ್ಕಿಂದಂತೆ ಬಂದು ಹೆಚ್ಚು ನೆಕ್ಕುವುದು ಮೈ ತಿವಿಯುವುದು ಮಾಡಿದರೆ ಎಚ್ಚರದಿಂದ ಗಮನಿಸಿ. ಕೆಲವೊಮ್ಮೆ ಕೀಟಗಳಿಂದ ಸೋಂಕುಗಳಾಗಿದ್ದರೆ ಅಥವಾ ಹುಳು ಕಡಿದಿದ್ದರೆ ತನ್ನ ಮೈ ಮೇಲಿನ ತುರಿಕೆಯನ್ನು ಹೋಗಲಾಡಿಸಲು ಬಂದು ತಿವಿಯುತ್ತವೆ ಇಂತಹ ಸಮಯದಲ್ಲಿ ನೀವು ಅವುಗಳ ಬಗ್ಗೆ ಹೆಚ್ಚು ಕಾಳಜಿ ತೋರಿಸಿ ಪಶು ಚಿಕಿತ್ಸಕರಲ್ಲಿ ಸರಿಯಾದ ಚಿಕಿತ್ಸೆ ಕೊಡಿಸಿ.

ನಿಮ್ಮ ಬೆಕ್ಕಿಗೆ ಯಾವುದೇ ರೀತಿಯ ಚರ್ಮದ ತೊಂದರೆ ಇಲ್ಲದಿದ್ದರೂ ಅದು ಬಂದು ನಿಮ್ಮನ್ನು ತಿವಿಯುವುದು ಮತ್ತು ನೆಕ್ಕುವುದು ಮಾಡಿದರೆ ನಿಮಗೆ ಅದರ ನಾಲಿಗೆಯ ತಿವಿತ ತಡೆಯಲು ಆಗದಿದ್ದಲ್ಲಿ ಅದಕ್ಕೆ ಶಿಕ್ಷೆ ನೀಡಬೇಡಿ.ಬದಲಿಗೆ ನೀವು ಅದರಿಂದ ದೂರ ಹೋಗುವುದರ ಮೂಲಕ ನಿಮಗೆ ಅದು ನೆಕ್ಕುವುದು ಇಷ್ಟವಿಲ್ಲ ಎಂಬುದನ್ನು ತೋರಿಸಿ.
ನಿಮ್ಮ ಕೈಯನ್ನು ನಿಂಬೆ ಹಣ್ಣಿನ ರಸದಿಂದ ಹಾಕಿ ತಿಕ್ಕಿದರೆ ಅದು ಹತ್ತಿರ ಬರುವುದಿಲ್ಲ ಮತ್ತು ಯಾವುದಾದರೂ ಟೆರಿಕಾಟ್ ಆಟಿಕೆಯನ್ನು ಅದಕ್ಕೆ ನೀಡಿ ಆಗ ಅದು ಅದರೊಂದಿಗೆ ಆಡುತ್ತದೆ ಮತ್ತು ಟೇಬಲ್ ತಿರುಗಿಸುವುದು ಇನ್ನಿತರ ಆಟವನ್ನು ಮಾಡಿ ಅದಕ್ಕೆ ನೀವು ಅದನ್ನು ಇಷ್ಟಪಡುತ್ತೀರಿ ಆದರೆ ನಿಮಗೆ ಅದು ನೆಕ್ಕುವುದು ಇಷ್ಟವಾಗುವುದಿಲ್ಲ ಎಂಬುದನ್ನು ಖಚಿತಪಡಿಸಿ.

English summary

What Does It Mean When Your Cat Licks You?

Dogs may lick our faces — remember Lucy from “Peanuts” exclaiming, “Aaack, dog germs!” after a kiss from exuberant beagle Snoopy? — but cats are more refined in their public displays of affection. When your cat licks you, usually after a mock-bite or firm grab with his paws, she’s doing what her mother did during the early weeks of her life:
Story first published: Friday, May 16, 2014, 15:54 [IST]
X
Desktop Bottom Promotion