For Quick Alerts
ALLOW NOTIFICATIONS  
For Daily Alerts

ನಿಮ್ಮ ಮುದ್ದಿನ ನಾಯಿಯ ಕಾಳಜಿಗಾಗಿ ಸರಳ ಸಲಹೆಗಳು

|

ನಿಮ್ಮ ಮುದ್ದಿನ ಸಾಕು ನಾಯಿಯನ್ನು ನೋಡಿಕೊಳ್ಳುವುದು ಮತ್ತು ನಿಮ್ಮ ಮಕ್ಕಳನ್ನು ಹಾರೈಕೆ ಮಾಡುವುದು ಎರಡೂ ಒಂದೆ. ಇವೆರಡಕ್ಕು ಅಧಿಕ ಶ್ರಮ ಮತ್ತು ಬದ್ಧತೆ ಬೇಕಾಗುತ್ತದೆ. ನಾಯಿಗಳು ವಿಶೇಷವಾಗಿ ಮರಿಗಳಾಗಿದ್ದಾಗ ತಮ್ಮ ಕುರಿತಾಗಿ ಹೆಚ್ಚಿನ ಮುತುವರ್ಜಿಯನ್ನು ಬಯಸುತ್ತವೆ. ಏಕೆಂದರೆ ಈ ಸಮಯದಲ್ಲಿ ಅವು ಕಾಯಿಲೆಗಳಿಗೆ ಮತ್ತು ಇನ್‍ಫೆಕ್ಷನ್‍ಗಳಿಗೆ ಹೆಚ್ಚಾಗಿ ತುತ್ತಾಗುತ್ತವೆ. ಇಂತಹ ಮರಿಗಳ ಮಾಲೀಕರಾಗಿ ನೀವು ಇವುಗಳು ಅನಾರೋಗ್ಯಕರವಾದ ನೀರನ್ನು ಮತ್ತು ಆಹಾರವನ್ನು ಸೇವಿಸುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳುವುದು ಅಗತ್ಯ.

ಇದಕ್ಕಾಗಿ ನಾವು ಈ ಅಂಕಣದಲ್ಲಿ ಕೆಲವೊಂದು ಪ್ರಮುಖ ವಿಚಾರಗಳ ಬಗ್ಗೆ ಗಮನ ಸೆಳೆಯಲು ಪ್ರಯತ್ನಿಸಿದ್ದೇವೆ. ಇವುಗಳು ನಿಮ್ಮ ಮುದ್ದಿನ ನಾಯಿ ಮರಿಗಳನ್ನು ರೋಗಗಳಿಂದ ಮತ್ತು ಇನ್‍ಫೆಕ್ಷನ್‍ಗಳಿಂದ ದೂರವಿರಿಸುತ್ತವೆ. ಬನ್ನಿ ನಾವು ನಮ್ಮ ಮುದ್ದಿನ ನಾಯಿ ಮರಿಗಳನ್ನು ಆರೋಗ್ಯವಾಗಿರಿಸಲು ಕೆಲವೊಂದು ಸರಳ ಸಲಹೆಗಳನ್ನು ಪಾಲಿಸುವುದು ಹೇಗೆಂದು ತಿಳಿಯೋಣ.

Simple Rules To Keep Your Dog Hale And Healthy

ಇವುಗಳು ನಿಮ್ಮ ನಾಯಿಗಳನ್ನು ಮತ್ತು ನಾಯಿ ಮರಿಗಳನ್ನು ಆರೋಗ್ಯವಾಗಿರಿಸಲು ಪರಿಣಾಮಕಾರಿಯಾಗಿ ನೆರವಾಗುತ್ತವೆ. ಯಾವುದೇ ಸಾಕು ಪ್ರಾಣಿಯ ಮಾಲೀಕರಾಗಿ ಆ ಪ್ರಾಣಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕಾದುದು ಅವರ ಕರ್ತವ್ಯವಾಗಿರುತ್ತದೆ. ಬನ್ನಿ ಆ ಕರ್ತವ್ಯಗಳು ಏನು ಮತ್ತು ಅದರ ಕುರಿತು ನಾವು ನೀಡಿರುವ ಸರಳ ಸಲಹೆಗಳ ಕುರಿತು ಮುಂದೆ ಓದಿ......

ಪ್ರತಿ ಆರು ತಿಂಗಳಿಗೊಮ್ಮೆ ಒಂದು ಪರೀಕ್ಷೆ
ವಯಸ್ಸಿಗೆ ಬಂದ ನಾಯಿಗೆ ಆರು ತಿಂಗಳಿಗೊಮ್ಮೆ ಪರೀಕ್ಷೆ ಮಾಡುವುದನ್ನು ಕಡ್ಡಾಯವಾಗಿ ಶಿಫಾರಸು ಮಾಡುತ್ತೇವೆ. ಅದರಲ್ಲೂ ನಾಯಿ ಮರಿಗಳನ್ನು ನೀವು ಸಾಕುತ್ತಿದ್ದಲ್ಲಿ, ಆಗಾಗಾ ವೈದ್ಯರ ಬಳಿ ಪರೀಕ್ಷೆ ಮಾಡಿಸಿದರೆ ಒಳ್ಳೆಯದು. ನಾಯಿ ಮರಿಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆಯಾದರು ವೈದ್ಯರ ಬಳಿ ತಪಾಸಣೆ ನಡೆಸಿ, ಅವುಗಳ ಆರೋಗ್ಯವನ್ನು ಖಾತ್ರಿ ಪಡಿಸಿಕೊಳ್ಳುವುದು ಉತ್ತಮ.

ಬಾಯಿಯ ಆರೋಗ್ಯ
ಇದು ಬಹುತೇಕ ಎಲ್ಲಾ ನಾಯಿಗಳ ಮಾಲೀಕರು ಉದಾಸೀನ ಮಾಡುವ ವಿಚಾರವಾಗಿರುತ್ತದೆ. ಬಾಯಿಯ ಆರೋಗ್ಯ ತುಂಬಾ ಮುಖ್ಯ, ಏಕೆಂದರೆ ಬಾಯಿ ಆರೋಗ್ಯವಾಗಿಲ್ಲದಿದ್ದಲ್ಲಿ, ಹಲವಾರು ಇನ್‍ಫೆಕ್ಷನ್‍ಗಳು ಮತ್ತು ಕಾಯಿಲೆಗಳು ಬರುತ್ತವೆ. ನಾಯಿಗಳು ತಮ್ಮ ಕೊಳಕು ಮತ್ತು ಅನಾರೋಗ್ಯಕರವಾದ ಹಲ್ಲುಗಳಿಂದ ಹಲವಾರು ಇನ್‍ಫೆಕ್ಷನ್‍ಗಳಿಗೆ ಗುರಿಯಾಗುತ್ತವೆ. ಹಾಗಾಗಿ ನಿಮ್ಮ ನಾಯಿಯನ್ನು ಆರೋಗ್ಯಕರವಾಗಿಡಲು ಇರುವ ಅತ್ಯುತ್ತಮವಾದ ಮಾರ್ಗವೆಂದರೆ, ಅದು ನಿಮ್ಮ ನಾಯಿಯ ಬಾಯಿಯ ಆರೋಗ್ಯವನ್ನು ಕಾಪಾಡುವುದಾಗಿರುತ್ತದೆ. ನಾಯಿಗಳಿಗೆ ಮೂಳೆಗಳನ್ನು ನೀಡುವುದು ಒಳಿತೇ ಅಥವಾ ಕೆಡುಕೇ?

ಗುಣಮಟ್ಟದಿಂದ ಕೂಡಿದ ಪೆಟ್ ಫುಡ್
ನಿಮ್ಮ ನಾಯಿಗಳಿಗೆ ಸಿಕ್ಕಿ ಸಿಕ್ಕಿದ್ದನ್ನು ತಿನ್ನಿಸಲು ಹೋಗಬೇಡಿ. ಏಕೆಂದರೆ ಕೆಲವೊಂದು ಆಹಾರಗಳನ್ನು ನಿಮ್ಮ ನಾಯಿಯು ಸೇವಿಸಬಾರದು. ಹಾಗಾಗಿ ಅದರ ಮಾಲೀಕರಾಗಿ ನೀವು ಆ ನಿಮ್ಮ ಮುದ್ದಿನ ಸಾಕು ಪ್ರಾಣಿಗೆ ಯಾವುದನ್ನು ಆಹಾರವಾಗಿ ನೀಡಬೇಕು ಎಂಬುದನ್ನು ವೈದ್ಯರನ್ನು ಕಂಡು ತೀರ್ಮಾನ ತೆಗೆದುಕೊಳ್ಳುವುದು ಉತ್ತಮ. ನಾಯಿಗಳಿಗೆಂದೆ ವಿಶೇಷವಾದ ಆಹಾರವು ಅಂಗಡಿಗಳಲ್ಲಿ ದೊರೆಯುತ್ತದೆ. ನಾಯಿಗಳಿಗೆ ನೀಡುವ ಆಹಾರದ ವಿಚಾರದಲ್ಲಿ ಕಟ್ಟು ನಿಟ್ಟಾಗಿರಿ.

ನಿಯಮಿತ ವ್ಯಾಯಾಮ ಮತ್ತು ಆಟ
ನಿಮ್ಮ ನಾಯಿಯು ನಿಯಮಿತವಾಗಿ ವ್ಯಾಯಾಮಕ್ಕೆ ಒಳಪಡುತ್ತಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಒಬ್ಬ ಮಾಲೀಕನಾಗಿ ಎಲ್ಲ ಮಾನವರಿಗು ವ್ಯಾಯಾಮ ಎಷ್ಟು ಮುಖ್ಯ ಎಂಬುದನ್ನು ನೀವು ಅರಿತಿರಿತ್ತೀರಿ, ಹಾಗೆಯೇ ನಿಮ್ಮ ನಾಯಿಗೂ ಸಹ ವ್ಯಾಯಾಮ ಅಗತ್ಯವೆಂಬುದನ್ನು ತಿಳಿದುಕೊಳ್ಳಿ. ನಿಯಮಿತವಾಗಿ ವ್ಯಾಯಾಮ ಮಾಡಿಸುವುದರಿಂದ ನಿಮ್ಮ ನಾಯಿಯ ರೋಗ ನಿರೋಧಕ ಶಕ್ತಿಯು ಹೆಚ್ಚುತ್ತದೆ ಮತ್ತು ಇನ್‍ಫೆಕ್ಷನ್‍ಗಳನ್ನು ನಿವಾರಿಸಲು ಇದರಿಂದ ಸಹಕಾರಿಯಾಗುತ್ತದೆ. ಈ ಶ್ವಾನಗಳು ಮನೆಯಲ್ಲಿದ್ದರೆ ಕಾವಲುಗಾರ ಬೇಕಾಗಿಲ್ಲ

ಅಂದ ಚಂದವನ್ನು ಕಾಪಾಡಿಕೊಳ್ಳುವುದು
ನಿಮ್ಮ ನಾಯಿಯ ಸೌಂದರ್ಯವನ್ನು ಕಾಪಾಡುವ ಕೆಲಸವನ್ನು ಸಹ ಮರೆಯಬಾರದು. ನಾಯಿಗಳು ತಮ್ಮ ತುಪ್ಪಳದಲ್ಲಿ ಕೊಳೆ ಮತ್ತು ಧೂಳನ್ನು ಮೆತ್ತಿಕೊಂಡು ಹಲವಾರು ರೋಗಗಳಿಗೆ ತುತ್ತಾಗುತ್ತದೆ. ಇವುಗಳನ್ನು ನಿಯಂತ್ರಿಸಲು ನೀವು ಅವುಗಳ ಅಂದವನ್ನು ಮತ್ತು ಪರಿಶುದ್ಧತೆಯನ್ನು ಕಾಪಾಡುವ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇವು ಪ್ರತಿನಿತ್ಯದ ಪರಿಪಾಠವಾಗಿರಬೇಕು. ಹೆಚ್ಚಿಗೆ ಹೇಳಬೇಕು ಎಂದರೆ ನಾಯಿಗಳು ತುಂಬಾ ಸೂಕ್ಷ್ಮ ಎಂಬುದನ್ನು ಮರೆಯಬೇಡಿ.

Read more about: ನಾಯಿ ಮನೆ dog home
English summary

Simple Rules To Keep Your Dog Hale And Healthy

Taking care of your pet is akin to taking care of your own children- the effort needed is immense and the commitment no less. Dogs, especially when they are puppies, need constant observation and care.Here are some simple pet care tips for dog owners. Read on...
X
Desktop Bottom Promotion