For Quick Alerts
ALLOW NOTIFICATIONS  
For Daily Alerts

ಸಾಕುಪ್ರಾಣಿಗಳ ಕಾಳಜಿಗೆ 10 ಸಲಹೆಗಳು

By Poornima Hegde
|

ಸಾಕುಪ್ರಾಣಿಗಳೆಂದರೆ ಯಾರಿಗೇ ತಾನೇ ಇಷ್ಟವಿಲ್ಲ? ಅದರ ಆಟ, ಕೀಟಲೆಗಳು ಎಲ್ಲರನ್ನೂ ಆಕರ್ಷಿಸುತ್ತದೆ. ಸಾಮಾನ್ಯವಾಗಿ ಸಾಕುಪ್ರಾಣಿಗಳನ್ನು ಇಷ್ಟಪಡುವವರು ಮನೆಯಲ್ಲಿಯೇ ಅವುಗಳನ್ನು ಮುದ್ದಿನಿಂದ ಸಾಕುತ್ತಾರೆ. ಅತೀಹೆಚ್ಚು ಜನರಿಗೆ ಇಷ್ಟವಾಗುವ ಪ್ರಾಣಿಯೆಂದರೆ ಪಪ್ಪಿ ಅಥವಾ ನಾಯಿ. ಇದು ಮಾನವನ ಅತ್ಯಂತ ಸ್ನೇಹಿ ಪ್ರಾಣಿ. ಹಿಂದಿನಿಂದಲೂ ನಂಬಿಕೆಗೆ ಹೆಸರುವಾಸಿಯಾದ ಪ್ರಾಣಿಗಳೇ ನಾಯಿಗಳು. ನಮಗೆ ಯಾವುದೇ ತೊಂದರೆಯನ್ನೂ ಕೊಡದೆ ಅವುಗಳ ಪಾಡಿಗೆ ಅವು ಆಟವಾಡಿಕೊಂಡಿರುತ್ತವೆ. ದಿನದ ಸುಸ್ತು ಹಾಗೂ ಸಮಸ್ಯೆಗಳನ್ನು ಪರೆಯಲು ನಿಮ್ಮ ಪಪ್ಪಿಯೊಂದಿಗೆ ಒಂದಿಷ್ಟು ಸಮಯ ಕಳೆದರೆ ಸಾಕು, ಮನಸ್ಸು ಶಾಂತವೆನಿಸುತ್ತದೆ. ನಿಮಗೆ ಅತ್ಯಂತ ಒಳ್ಳೆಯ ಮೂಡ್ ಉಂಟಾಗುತ್ತದೆ. ಅದರಲ್ಲೂ ಮಕ್ಕಳಂತೂ ದಿನದ ಬಹುಪಾಲು ಸಮಯವನ್ನು ನಾಯಿಯೊಂದಿಗೆ ಕಳೆಯಲು ಇಚ್ಛಿಸುತ್ತಾರೆ! ಇದು ನಿಮ್ಮ ಮನೆಯವರಲ್ಲಿ ಒಂದಾಗಿ ಎಲ್ಲರ ಪ್ರೀತಿಪಾತ್ರವಾಗಿರುತ್ತದೆ. ಆದ್ದರಿಂದ ಇದರ ರಕ್ಷಣೆ, ಆರೈಕೆ ಖಡ್ಡಾಯ!

ಈ ಪಪ್ಪಿ ಅಥವಾ ನಾಯಿಯನ್ನು ಸಾಕುವುದು ಅವುಗಳ ಪೋಷಣೆ ಮಾಡುವುದು ಕಷ್ಟದಾಯಕ. ಆದರೆ ದಿನದ ಸ್ವಲ್ಪ ಸಮಯವನ್ನು ಇದಕ್ಕಾಗಿಯೇ ಮೀಸಲಿಟ್ಟರೆ ನಿಮ್ಮ ಕೆಲಸ ಇನ್ನಷ್ಟು ಸುಲಭ. ನಿಮ್ಮ ಪಪ್ಪಿಗೆ ಯಾವುದೇ ತೊಂದರೆಯಾಗದಂತೆ ನಿಗಾವಹಿಸಬೇಕಾಗುತ್ತದೆ. ಆದ್ದರಿಂದ ನಿಮ್ಮ ಪಪ್ಪಿಯನ್ನು ರಕ್ಷಣೆ ಮಾಡಲು ಈ ಕೆಳಗಿನ ಸಲಹೆಗಳನ್ನು ಪಾಲಿಸುವುದು ಅಗತ್ಯ. ಯಾವುದೇ ಆಯಾಸವಿಲ್ಲದೇ ಸುಲಭವಾಗಿ ಸಾಕುಪ್ರಾಣಿಗಳ ಕಾಳಜಿ ಮಾಡಬಹುದು.

ನಿಮ್ಮಂತೆ ನಿಮ್ಮ ಸಾಕುಪ್ರಾಣಿಯೂ ಕೂಡ ನಿಮ್ಮನ್ನು ಪ್ರೀತಿಸುತ್ತದೆ. ಆದ್ದರಿಂದ ಅದೇ ಪ್ರೀತಿಯಿಂದ ನಿಮ್ಮ ನಾಯಿ ಅಥವಾ ಸಾಕು ಪ್ರಾಣಿಯನ್ನು ಆರೈಕೆ ಮಾಡಿ.

1. ಮೊದಲನೆಯದಾಗಿ ಪಪ್ಪಿಯ ಆಯ್ಕೆ

1. ಮೊದಲನೆಯದಾಗಿ ಪಪ್ಪಿಯ ಆಯ್ಕೆ

ನೀವು ಪಪ್ಪಿಯನ್ನು ಕೊಂಡುಕೊಳ್ಳಬೇಕಾದಾಗ ನಿಮ್ಮ ಆಯ್ಕೆ ಸರಿಯಾಗಿರಲಿ. ನೀವು ನಿಮ್ಮ ಜೀವನ ಶೈಲಿಗೆ ಹೊಂದಿಕೊಳ್ಳುವ ಒಂದು ತಳಿಯನ್ನು ಆಯ್ಕೆ ಮಾಡಿ. ನಿಮ್ಮ ಸಮಯ ಮತ್ತು ಬಜೆಟ್ ಗಳ ಬಗ್ಗೆ ವ್ಯಾಪಕ ಗಮನವಿರಲಿ. ಏಕೆಂದರೆ ನೀವು ಖರೀದಿಸುವ ಸಾಕುಪ್ರಾಣಿ ನಿಮ್ಮ ಬಜೆಟ್ ಗೂ ಮೀರಿ ಖರ್ಚು ಮಾಡಿ ಸಾಕುವಂತಹ ಸೂಕ್ಷ್ಮ ಗುಣವುಳ್ಳದ್ದಾಗಿರಬಾರದು.

2. ಆಹಾರ

2. ಆಹಾರ

ಪಪ್ಪಿಯನ್ನು ತಂದ ನಂತರ ಅದಕ್ಕೆ ಆಹಾರ ನೀಡುವುದನ್ನು ಕಲಿತುಕೊಳ್ಳಿ. ನಾಯಿಗೆ ಸರಿಯಾದ ಹಾಗೂ ಆರೋಗ್ಯಕರವಾದ ಆಹಾರವನ್ನೇ ನೀಡಿ. ಪಪ್ಪಿಯ ಬಗ್ಗೆ ಕಾಳಜಿ ಮಾಡುವ ಮೊದಲ ಹಂತವೇ ಅವುಗಳ ಆಹಾರದ ಬಗ್ಗೆ ಗಮನವಹಿಸುವುದು. ಅವುಗಳಿಗೆ ಸರಿಹೊಂದದ ಆಹಾರದ ಬಗೆಗೆ ಎಚ್ಚರವಿರಲಿ. ಅಂತಹ ಆಹಾರಗಳನ್ನು ಪುನಃ ಕೊಡದಿರುವುದು ಒಳಿತು.

3. ಅಗತ್ಯ ಕ್ರಮಗಳು

3. ಅಗತ್ಯ ಕ್ರಮಗಳು

ನಿಮ್ಮ ಸಾಕುಪ್ರಾಣಿಗಳನ್ನು ಸುರಕ್ಷಿತವಾಗಿಡಲು ಕೆಲವು ಅಗತ್ಯತೆಗಳ ಬಗ್ಗೆ ನಿಗಾವಹಿಸಿ. ಉದಾಹರಣೆಗೆ ನಾಯಿಗೆ ಆಹಾರ ನೀಡುವ ಪಾತ್ರೆ, ಬಾಚಣಿಗೆ, ಬ್ರಶ್, ಸರಪಳಿ ಮೊದಲಾದವುಗಳು ಸ್ವಚ್ಚವಾಗಿರಬೇಕು.

4. ನಿಮ್ಮೊಂದಿಗೆ ಬೆರೆಯುವಂತೆ ಮಾಡಿ

4. ನಿಮ್ಮೊಂದಿಗೆ ಬೆರೆಯುವಂತೆ ಮಾಡಿ

ನಿಮ್ಮ ಕುಟುಂಬದ ಎಲ್ಲಾ ಸದಸ್ಯರು ಪಪ್ಪಿಯೊಂದಿಗೆ ಬೆರೆಯುವಂತೆ ನೋಡಿಕೊಳ್ಳಿ. ಯಾರೂ ಅದನ್ನು ಗದರದೆ ಪ್ರೀತಿಯಿಂದ ನೋಡಿಕೊಳ್ಳುವಂತೆ ಮಾಡಿ. ಮನೆಗೆ ಹೊಸದಾಗಿ ಬಂದಾಗ ಮಕ್ಕಳು ಹೆಚ್ಚಾಗಿ ಅದರೊಂದಿಗೆ ಆಟವಾಡದಂತೆ ನೋಡಿಕೊಳ್ಳಿ. ನಾಯಿ ಒಮ್ಮೆ ನಿಮ್ಮೆಲ್ಲರೊಂದಿಗೆ ಬೆರೆಯುವವರೆಗೂ ಅದರೊಂದಿಗೆ ಆಟವಾಡದಂತೆ ಮಕ್ಕಳನ್ನು ಎಚ್ಚರಿಸಿ.

5. ಬೇರೆ ಸಾಕುಪ್ರಾಣಿಗಳೊಂದಿಗೆ ಪರಿಚಯ

5. ಬೇರೆ ಸಾಕುಪ್ರಾಣಿಗಳೊಂದಿಗೆ ಪರಿಚಯ

ನಿಮ್ಮ ಮನೆಯಲ್ಲಿ ಬೇರೆ ಸಾಕುಪ್ರಾಣಿಗಳಿದ್ದರೆ ಅವುಗಳೂ ಈ ನಾಯಿಯೊಂದಿಗೆ ಬೆರೆಯುವಂತೆ ಮಾಡಿ. ನಿಮ್ಮಲ್ಲಿ ಬೆಕ್ಕು ಅಥವಾ ಹಕ್ಕಿಗಳಿದ್ದರೆ ಬಬ್ಬರಿಗೊಬ್ಬರನ್ನು ಪರಿಚಯ ಮಾಡಿಕೊಡಿ. ಇಲ್ಲವಾದರೆ ಹಕ್ಕಿಗಳಿಗೆ ಅಥವಾ ಬೆಕ್ಕಿನೊಂದಿಗೆ ಹೊಡೆದಾಡಬಹುದು.

6. ವಿಶೇಷ ಕಾಳಜಿವಹಿಸಿ

6. ವಿಶೇಷ ಕಾಳಜಿವಹಿಸಿ

ಕೆಲವೊಮ್ಮೆ ನಿಮ್ಮ ಪಪ್ಪಿಗೆ ವಿಶೇಷ ಗಮನ ನೀಡುವ ಅಗತ್ಯವಿರುತ್ತದೆ. ಅದರ ಅಗತ್ಯಗಳನ್ನು ಅರಿತು ಅವುಗಳನ್ನು ಒದಗಿಸಲು ಪ್ರಯತ್ನಿಸಿ. ಸರಿಯಾದ ಸಮಯಕ್ಕೆ ಊಟ, ಆಹಾರಗಳನ್ನು ನೀಡಿ.

7. ವೈದ್ಯರ ಸಲಹೆ

7. ವೈದ್ಯರ ಸಲಹೆ

ಪಶು ವೈದ್ಯರ ಬಳಿ ನಿಮ್ಮ ಸಾಕು ಪ್ರಾಣಿಯನ್ನು ಆಗಾಗ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು. ಇದರಿಂದ ನಿಮ್ಮ ಸಾಕುಪ್ರಾಣೀಗೆ ಯಾವ ರೀತಿಯ ಕಾಳಜಿಯ ಅಗತ್ಯವಿದೆ ಎಂಬುದನ್ನು ತಿಳಿದುಕೊಳ್ಳಬಹುದು.

8. ಅಲಂಕಾರ

8. ಅಲಂಕಾರ

ಕೆಲವು ನಾಯಿಗಳಿಗೆ ಅಲಂಕಾರಮಾಡುವ ಅಗತ್ಯವಿದೆ. ಉದಾಹರಣೆಗೆ ಅಧಿಕ ಕೂದಲಿರುವ ನಾಯಿಗೆ ಕೂದಲು ಬಾಚುವ ಅಗತ್ಯವಿರುತ್ತದೆ. ಸರಿಯಾದ ಸಮಯಕ್ಕೆ ಅವುಗಳನ್ನು ಸ್ವಚ್ಚಗೊಳಿಸಿ ಕೂದಲನ್ನೂ ಬಾಚುವುದು, ಉಗುರುಗಳನ್ನು ಸ್ವಚ್ಚಗೊಳಿಸುವುದು ಒಳ್ಳೆಯದು.

9. ವಾಕ್ ಗೆ ಕರೆದೊಯ್ಯಿರಿ

9. ವಾಕ್ ಗೆ ಕರೆದೊಯ್ಯಿರಿ

ನಿಮ್ಮ ಪಪ್ಪಿಯನ್ನು ದಿನವೂ ಹೊರಗಡೆ ವಾಕ್ ಗೆ ಕರೆದೊಯ್ಯಿರಿ. ನಿಮ್ಮಂತೆ ನಿಮ್ಮ ಪಪ್ಪಿಗೂ ವ್ಯಾಯಾಮ ಬೇಕಲ್ಲವೇ ಏನಂತೀರಿ? ಜೊತೆಗೆ ಮನೆಯಲ್ಲಿಯೇ ಮಲ ಮೂತ್ರ ವಿಸರ್ಜನೆ ಮಾಡುವುದನ್ನೂ ತಡೆಯಬಹುದಲ್ಲವೇ?

10. ಮಾನವ ಆಹಾರ / ನೀವು ತಿನ್ನುವ ಆಹಾರವನ್ನು ನೀಡದಿರಿ

10. ಮಾನವ ಆಹಾರ / ನೀವು ತಿನ್ನುವ ಆಹಾರವನ್ನು ನೀಡದಿರಿ

ಸಾಕು ಪ್ರಾಣಿಗಳಿಗೆ ಅವುಗಳದ್ದೇ ಆದ ಆಹಾರಗಳಿರುತ್ತವೆ. ಆದ್ದರಿಂದ ಅಂತಹ ಆಹಾರಗಳನ್ನೇ ನೀಡಿ. ನಾವು ತಿನ್ನುವ ಆಹಾರವನ್ನು ಪ್ರಾಣಿಗಳು ಜೀರ್ಣಿಸಿಕೊಳ್ಳುವುದು ಕಷ್ಟ. ಅದರಲ್ಲೂ ಕೆಲವು ಸೂಕ್ಷ್ಮ ಸ್ವಭಾವದ ಪ್ರಾಣಿಗಳಿಗೆ ಇದರಿಂದ ತೊಂದರೆಗಳಾಗಬಹುದು. ಆದ್ದರಿಂದ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಲು ಆದಷ್ಟು ಮಟ್ಟಿಗೆ ಪ್ರಾಣಿಗಳ ಆಹಾರವನ್ನೇ ನೀಡಿ.

ಈ ಮೇಲಿನ ಸಲಹೆಗಳಂತೆ ನಿಮ್ಮ ಮುದ್ದಿನ ಪಪ್ಪಿಯನ್ನು ರಕ್ಷಣೆ ಮಾಡಿ.

English summary

Top 10 puppy care tips

Pets are something everyone loves. They are indeed lovely! If you are a lover of pets, then you would be possessing at least one at home. Most of the times, a dog or the pup is the one which people pet. Dog is a man’s best friend.
Story first published: Wednesday, December 11, 2013, 9:39 [IST]
X
Desktop Bottom Promotion