For Quick Alerts
ALLOW NOTIFICATIONS  
For Daily Alerts

ಈ ಜಾತಿಯ ನಾಯಿಗಳಿಗೆ ತುಂಟತನದ ಬುದ್ಧಿ ಹೆಚ್ಚು

|

ನಾಯಿ ಮನೆಯಲ್ಲಿದ್ದರೆ ಅದು ನಮ್ಮ ಮನೆಯ ಸದಸ್ಯರಲ್ಲಿ ಒಂದಾಗಿ ಬಿಡುತ್ತದೆ. ನಾಯಿಯಷ್ಟು ನಿಯತ್ತಿನ ಪ್ರಾಣಿ ಈ ಜಗತ್ತಿನಲ್ಲಿ ಮತ್ತೊಂದಿಲ್ಲ. ಮನುಷ್ಯನ ನಂಬಲು ಸಾಧ್ಯವಿಲ್ಲ, ಆದರೆ ನಾಯಿಯನ್ನು ನಂಬಬಹುದು. ಅವುಗಳಿಗೆ ಸರಿಯಾಗಿ ಪಾಠ ಕಲಿಸಿದರೆ ತುಂಬಾ ಬುದ್ಧಿವಂತಿಕೆಯಿಂದ ವರ್ತಿಸುತ್ತದೆ. ಅವುಗಳು ನಮ್ಮ ಮೇಲೆ ಇಟ್ಟಿರುವ ಪ್ರೀತಿ, ಅದರ ದರ್ಪ, ಅಪರಿಚಿತರನ್ನು ಗದರಿಸುವ ಪರಿ, ನಮ್ಮ ಜೊತೆ ಅದರ ತುಂಟಾಟ ಪ್ರತಿಯೊಂದು ಶ್ವಾನ ಪ್ರಿಯರ ಮನಗೆಲ್ಲುತ್ತದೆ.

ಅನೇಕ ಜಾತಿಯ ನಾಯಿಗಳಿವೆ. ಕೆಲವು ನಾಯಿಗಳು ತುಂಬಾ ಅಪಾಯಕಾರಿಯಾದ ನಾಯಿಗಳಾಗಿರುತ್ತವೆ. ಅಪರಿಚಿತರ ಅದರ ಕೈಗೆ ಸಿಕ್ಕಿದರೆ ಕಚ್ಚಿ, ಎಳೆದಾಡಿ ಬಿಡುತ್ತದೆ. ಮತ್ತೆ ಕೆಲವು ನಾಯಿಗಳು ತುಂಬಾ ಮೃದುವಾಗಿರುತ್ತದೆ. ಇಲ್ಲಿ ನಾವು ತುಂಟ ನಾಯಿಗಳ ಬಗ್ಗೆ ಹೇಳಿದ್ದೇವೆ. ಈ ನಾಯಿಗಳು ತುಂಬಾ ಬುದ್ಧಿವಂತಿಕೆಯನ್ನು ಹೊಂದಿದೆ, ನಿಮ್ಮ ಜೊತೆ ಬೆರೆಯುತ್ತದೆ, ಆದರೆ ಅಷ್ಟೇ ತುಂಟತನವನ್ನು ಹೊಂದಿದೆ. ಅವುಗಳ ತುಂಟಾಟ ನೋಡಲು ಇಷ್ಟವಾದರೂ, ಕೆಲವೊಮ್ಮೆ ತುಂಬಾ ಕೋಪ ಬರುತ್ತದೆ.

ಮುದ್ದಿನ ಆ ತುಂಟ ನಾಯಿಗಳಾವುವು ಎಂದು ನೋಡೋಣ ಬನ್ನಿ:

ದಖ್ಸಂದ್ (Dachshund)

ದಖ್ಸಂದ್ (Dachshund)

ಈ ನಾಯಿ ನಿಮ್ಮನ್ನು ನಗಿಸುತ್ತದೆ, ನಿಮ್ಮ ಜೊತೆ ಆಟ ಆಡುತ್ತದೆ. ಆದರೆ ಮನೆಯಲ್ಲಿರುವ ವಸ್ತುಗಳನ್ನು ಕಚ್ಚಿ ನಮಗೆ ಕೋಪ ಬರುವಂತೆ ಮಾಡುತ್ತದೆ.

ಬುಲ್ ಟೆರ್ರಯರ್(Bull Terrier)

ಬುಲ್ ಟೆರ್ರಯರ್(Bull Terrier)

ಈ ಚುರುಕಿನ ನಾಯಿ ಇದರ ಘಾಟು ವಾಸನೆಯಿಂದ ಸ್ವಲ್ಪ ಕಿರಿಕಿರಿ ಅನಿಸಿದರೂ ಇದರ ತುಂಟಾಟ ನೋಡಿದರೆ ಹೊಟ್ಟೆ ನೋವು ಬರುವಷ್ಟು ನಗಾಡುತ್ತೇವೆ. ಯಜಮಾನನ್ನು ನಗಿಸುವುದೆಂದರೆ ಈ ನಾಯಿಗೆ ತುಂಬಾ ಪ್ರಿಯವಾದ ಕೆಲಸವಾಗಿದೆ.

ಜಾಕ್ ಬುಲ್ ಟೆರ್ರಿಯರ್ (Jack Bull Terrier)

ಜಾಕ್ ಬುಲ್ ಟೆರ್ರಿಯರ್ (Jack Bull Terrier)

ಇದಕ್ಕೆ ಸುಲಭದಲ್ಲಿ ಟ್ರೈನಿಂಗ್ ಕೊಡಬಹುದು, ತುಂಬಾ ಬುದ್ಧಿವಂತಿಕೆಯಿದೆ, ಕೆಲವೊಮ್ಮೆ ಅತೀ ಬುದ್ಧಿವಂತಿಕೆಯಿಂದ ವರ್ತಿಸುತ್ತದೆ.

 ಪಗ್ (pug)

ಪಗ್ (pug)

ಇದು ಸಕತ್ ತುಂಟತನದ ನಾಯಿಮರಿಯಾಗಿದೆ. ಇದು ಅಪರಿಚಿತರನ್ನು ಕಂಡಾಗ ಇತರ ನಾಯಿಗಳಂತೆ ಬೊಗಳುವುದಿಲ್ಲ, ಈ ನಾಯಿ ಆಟ ಆಡುವುದನ್ನು ತುಂಬಾ ಇಷ್ಟಪಡುತ್ತದೆ.

ಮಾಲ್ಟೇಸೆ(Maltese)

ಮಾಲ್ಟೇಸೆ(Maltese)

ಈ ನಾಯಿ ಇತರರನ್ನು ಹೆದರಿಸುವುದಿಲ್ಲ, ಮಕ್ಕಳೊಂದಿಗೆ ಆಟವಾಡುತ್ತದೆ. ಇದರ ಜೊತೆ ಕಣ್ಣಾಮುಚ್ಚಲೆ ಆಟ ಕೂಡ ಆಡಬಹುದು. ಇದರ ಜೊತೆ ಆಟ ಆಡಲು ಪ್ರತಿಯೊಬ್ಬರೂ ಇಷ್ಟಪಡುವವರು.

ಅಮೇರಿಕನ್ ಪಿಟ್ ಬುಲ್ ಟೆರ್ರಿಯರ್

ಅಮೇರಿಕನ್ ಪಿಟ್ ಬುಲ್ ಟೆರ್ರಿಯರ್

ಈ ನಾಯಿ ಕೂಡ ತುಂಬಾ ತುಂಟಾಟವನ್ನು ಮಾಡುತ್ತದೆ. ನಿಮ್ಮ ಸಾಕ್ಸ್ ಗಳನ್ನು ಎತ್ತಿಕೊಂಡು ಹೋಗಿ ಅದರ ಬೆಡ್ ನ ಅಡಿಯಲ್ಲಿ ಅಣಗಿಸಿಟ್ಟು ನಿಮ್ಮನ್ನು ಆಟ ಆಡಿಸುತ್ತದೆ.

ಯೋರ್ಕ್ ಶೈರ್ ಟೆರ್ರಿಯರ್

ಯೋರ್ಕ್ ಶೈರ್ ಟೆರ್ರಿಯರ್

ಗಾತ್ರದಲ್ಲಿ ಚಿಕ್ಕದಾರು ಈ ಟೆರ್ರಿಯರ್ ಮಡುವ ತುಂಟಾಕ್ಕೇನು ಕಮ್ಮಿಯಿಲ್ಲ. ಇದು ತನ್ನ ಯಜಮಾನನ ಜೊತೆ ಆಟ ಆಡುವುದು, ಬಚ್ಚಿಟ್ಟುಕೊಳ್ಳುವುದು ಮಾಡುತ್ತದೆ.

ಮನಸ್ಸಿನ ಒತ್ತಡ ಕಡಿಮೆ ಮಾಡಲು ನಮ್ಮನ್ನು ನಗಿಸುವ ಇಂತಹ ತುಂಟ ನಾಯಿಯೊಂದಿದ್ದರೆ ಸಾಕಲ್ಲವೇ?

English summary

Naughtiest Dog Breeds | Tips For Pet Care | ಅತೀ ತುಂಟ ನಾಯಿಗಳಿವು | ಪ್ರಾಣಿ ಸಾಕುವವರಿಗೆ ಕೆಲ ಟಿಪ್ಸ್

Dogs are basically naughty but are generally termed to be playful. This particular trait of dogs is what makes them a favourite pet. Known to be clever animals, dogs tend to show their naughty behaviour in order to seek attention from their masters.
X
Desktop Bottom Promotion