For Quick Alerts
ALLOW NOTIFICATIONS  
For Daily Alerts

ನಿಮ್ಮ ನಾಯಿಯ ಅಭ್ಯಾಸ ಬದಲಿಸಿ

By Super
|

ಪ್ರಪಂಚದ ಮೇಲಿನ ಪ್ರತಿ ಜೀವಿಯು ತನ್ನ ತನ್ನ ವಸ್ತುಗಳ ಬಗ್ಗೆ ಮುತುವರ್ಜಿಯನ್ನು ವಹಿಸುವುದು ಸಹಜ. ಇದಕ್ಕೆ ಮನುಷ್ಯರು ಮತ್ತು ಪ್ರಾಣಿಗಳು ಎಂಬ ಭೇದ ಭಾವವಿಲ್ಲ. ಮಾನವರು ತಮ್ಮ ವಸ್ತುಗಳನ್ನು ಹಲವು ತೆರನಾಗಿ ಕಾಪಾಡಿಕೊಳ್ಳುವುದು ಗೊತ್ತಿರುವ ವಿಚಾರವೇ. ಪಕ್ಷಿಗಳು ಸಹ ಗೂಡನ್ನು ಕಟ್ಟಿ ತಮ್ಮದು ಎಂಬ ಆಹಾರ, ಮೊಟ್ಟೆ ಮುಂತಾದವನ್ನು ಭದ್ರ ಮಾಡಿಕೊಳ್ಳುತ್ತವೆ. ಹಾಗೆಯೇ ನಾಯಿಗಳು ಸಹ ನೆಲವನ್ನು ತೋಡಿ ತಮ್ಮ ಪಾಲಿನ ಆಹಾರ ಮತ್ತು ವಸ್ತುಗಳನ್ನು ಅವಿತಿಡುತ್ತವೆ. ಅಲ್ಲದೆ ಕೆಲವೊಂದು ಜಾತಿ ನಾಯಿಗಳು ತಾವು ಆರಾಮವಾಗಿ ಕುಳಿತುಕೊಳ್ಳಲು ಸಹ ನೆಲವನ್ನು ತೋಡುತ್ತವೆ. ಇನ್ನು ಕೆಲವು ನಾಯಿಗಳಿಗೆ ನೆಲ ತೋಡುವುದು ಮನೋರಂಜನೆ ಮತ್ತು ವ್ಯಾಯಾಮದ ಅಂಗವಾಗಿರುತ್ತದೆ.

ಬೀದಿನಾಯಿಗಳು ರಸ್ತೆಗಳಲ್ಲಿ, ಉದ್ಯಾನವನಗಳಲ್ಲಿ ಗುಂಡಿಯನ್ನು ತೋಡುತ್ತಿದ್ದರೆ ಅದರಿಂದ ಅಂತಹ ಸಮಸ್ಯೆ ಉಂಟಾಗುವುದಿಲ್ಲ. ಅದರ ಬದಲಿಗೆ ಸಾಕಿದ ನಾಯಿಯು ನಮ್ಮ ಮನೆಯ ಹಿಂಬದಿ ಮತ್ತು ಉದ್ಯಾನ ಮುಂತಾದೆಡೆಗಳಲ್ಲಿ ತೋಡಲು ಶುರು ಮಾಡಿದರೆ ನಿಜವಾದ ಕಿರಿಕಿರಿಯಾಗುತ್ತದೆ. ಅದರಲ್ಲೂ ಸಾವಿರಾರು ರೂಪಾಯಿ ಖರ್ಚು ಮಾಡಿ, ತುಂಬಾ ವರ್ಷಗಳಿಂದ ಕಾಪಾಡಿದ ಲಾನ್, ಗಿಡಗಳು ಮತ್ತು ಮರಗಳ ಕೆಳಗೆ ಗುಂಡಿಯನ್ನು ತೋಡಿ ಅಂದಗೆಡಿಸಿದರೆ ಸಮಸ್ಯೆಯಾಗುತ್ತದೆ. ಆಗ ನೀವು ಅನಿವಾರ್ಯವಾಗಿ ನಿಮ್ಮ ನಾಯಿಯ ಈ ವರ್ತನೆಗೆ ಕಡಿವಾಣ ಹಾಕಲೆ ಬೇಕು.

How to stop Dogs from digging

ನಾಯಿಗಳು ತುಂಬಾ ವೇಗವಾಗಿ ಕಲಿಯುತ್ತವೆ. ಅವು ತಾವು ಕಲಿತದ್ದನ್ನು ಅಷ್ಟು ಸುಲಭವಾಗಿ ಮರೆಯುವುದಿಲ್ಲ. ಅದಕ್ಕಾಗಿ ನಾವು ಇಲ್ಲಿ ನಾಯಿಗಳು ಗುಂಡಿಯನ್ನು ಏಕೆ ಅಗೆಯುತ್ತವೆ? ಮತ್ತು ಅವುಗಳನ್ನು ನಿವಾರಿಸಿಕೊಳ್ಳುವ ಕ್ರಮಗಳ ಬಗ್ಗೆ ಇಲ್ಲಿ ತಿಳಿಸಿದ್ದೇವೆ ಓದಿಕೊಳ್ಳಿ;

1. ವೃತ್ತಿಪರರನ್ನು ಸಂಪರ್ಕಿಸಿ - ಒಂದು ವೇಳೆ ನಿಮ್ಮ ನಾಯಿಯು ಮನೆಯ ಗಾರ್ಡನ್‍ನಲ್ಲಿ ನಿಮ್ಮ ಇಚ್ಛೆಯ ಪ್ರಕಾರ ವರ್ತಿಸಬೇಕು ಎಂದು ಬಯಸಿದಲ್ಲಿ ಮೊದಲು ಅದನ್ನು ಒಬ್ಬ ವೃತ್ತಿಪರ ಟ್ರೈನರ್ ಬಳಿ ತರಬೇತಿಗೆ ಕಳುಹಿಸಿ. ಈ ವೃತ್ತಿಪರ ಟ್ರೈನರುಗಳು ನಿಮ್ಮ ನಾಯಿಯ ದಕ್ಷತೆಯನ್ನು ಹೆಚ್ಚಿಸುತ್ತಾರೆ. ಆಗ ನಿಮ್ಮ ನಾಯಿಯು ನಿಮಗೆ ಮತ್ತಷ್ಟು ಆಪ್ತವಾಗುತ್ತದೆ.

2. ನಿಮ್ಮ ನಾಯಿಯ ಬಗ್ಗೆ ಅರಿತುಕೊಳ್ಳಿ - ನಿಮ್ಮ ನಾಯಿಯ ಇಷ್ಟ ಅನಿಷ್ಟಗಳೇನು? ಅದು ಯಾವಾಗ ಏನು ಮಾಡುತ್ತದೆ? ಎಂದು ಅರಿತುಕೊಳ್ಳಿ. ಅದರ ಅಗತ್ಯಗಳನ್ನು ತಿಳಿದುಕೊಳ್ಳಿ. ಕೆಲವೊಂದು ಜಾತಿ ನಾಯಿಗಳಿಗೆ ತೋಡುವುದು ಅತ್ಯಂತ ಮೋಜಿನ ಮತ್ತು ಪ್ರಿಯವಾದ ಕೆಲಸವಾಗಿರುತ್ತದೆ. ಅವು ತೋಡುತ್ತ ಕಾಲ ಕಳೆಯುವ ಪ್ರವೃತ್ತಿಯನ್ನು ಹುಟ್ಟಿನಿಂದಲೆ ಪಡೆದಿರುತ್ತವೆ. ಇನ್ನು ಕೆಲವು ನಾಯಿಗಳಿಗೆ ಉಷ್ಣಾಂಶದಿಂದ ಪಾರಾಗಲು ಮತ್ತು ಸಹಿಸಿಕೊಳ್ಳುವ ಸಲುವಾಗಿ ತೋಡುವ ಅಭ್ಯಾಸ ಮೈಗೂಡಿರುತ್ತದೆ. ಹಾಗಾಗಿ ನಿಮ್ಮ ನಾಯಿಯ ಪ್ರವೃತ್ತಿಯನ್ನು ಮೊದಲು ಅರಿತುಕೊಳ್ಳಿ.

3. ಮನೋರಂಜನೆಯನ್ನು ಮತ್ತು ಕೆಲಸವನ್ನು ಒದಗಿಸಿ - ಹಲವಾರು ನಾಯಿ ಪ್ರಭೇದಗಳು ತಮ್ಮ ಬೇಸರವನ್ನು ನೀಗಿಸಿಕೊಳ್ಳಲು ಕಂಡಕಂಡಲ್ಲಿ ಗುಂಡಿಯನ್ನು ತೋಡುತ್ತಿರುತ್ತವೆ. ಅದಕ್ಕಾಗಿ ಅವುಗಳಿಗೆ ಮನೋರಂಜನೆಯನ್ನು ಒದಗಿಸಿ ಅಥವಾ ಕೆಲಸ ನೀಡಿ. ಅವುಗಳ ಜೊತೆಗೆ ಆಟವಾಡಿ, ಮುದ್ದಾಡಿ. ಕರೆದುಕೊಂಡು ಹೋಗಿ ವಾಕ್ ಮಾಡಿಸಿ. ಇಲ್ಲವೇ ಅದರ ನೆಚ್ಚಿನ ಆಟದ ಸಾಮಾನುಗಳನ್ನು ನೀಡಿ. ಒಮ್ಮೆ ಅವು ಕಾರ್ಯ ತತ್ಪರವಾದವೆಂದರೆ ಈ ತೋಡುವ ಚಟವನ್ನು ಅವು ಮರೆತು ಬಿಡುತ್ತವೆ.

4. ಕಟ್ಟು ನಿಟ್ಟಿನಿಂದ ನಡೆಸಿಕೊಳ್ಳಿ - ಕೆಲವೊಮ್ಮೆ ನಾಯಿಗಳಿಗೆ ತರಬೇತಿ ಮತ್ತು ಮನೋರಂಜನೆಯನ್ನು ನೀಡಿದರು ಅವುಗಳ ಬಾಲವು ನೆಟ್ಟಗಾಗಲ್ಲ. ಅದಕ್ಕಾಗಿ ಅವುಗಳ ವಿಚಾರದಲ್ಲಿ ನೀವು ಕಟ್ಟು ನಿಟ್ಟಿನಿಂದ ನಡೆದುಕೊಳ್ಳಬೇಕಾದುದು ಅನಿವಾರ್ಯ. ನಾಯಿಗಳು ಕೆಲವೊಮ್ಮೆ ಸದರ ನೀಡಿದಾಗ ತಮಗೆ ಇಷ್ಟ ಬಂದಂತೆ ಸ್ವೇಚ್ಛೆಯಿಂದ ವರ್ತಿಸುತ್ತವೆ. ಹಾಗಾಗಿ ಏನೇ ಪ್ರೀತಿ ಇರಲಿ ಅವುಗಳನ್ನು ಒಂದು ಕಟ್ಟು ನಿಟ್ಟಿನ ಚೌಕಟ್ಟಿನಲ್ಲಿ ಬೆಳೆಸಿ. ಆಗಲೇ ಅವು ನಿಮಗೆ ಗೌರವವನ್ನು ತಂದು ಕೊಡುತ್ತವೆ.

5. ಐಶಾರಾಮಿ ಜೀವನವನ್ನು ಒದಗಿಸಿ - ನಿಮ್ಮ ನಾಯಿಯು ಕಂಡಕಂಡಲ್ಲಿ ಗುಂಡಿಗಳನ್ನು ತೋಡದಿರುವಂತೆ ಮಾಡದಿರಲು ಅದಕ್ಕೆ ಐಶಾರಾಮಿ ಜೀವನವನ್ನು ದಯಪಾಲಿಸಿ. ಅಂದರೆ ಅದನ್ನು ಕೊಳಕು ಸ್ಥಳ ಮತ್ತು ಜೀವನದಿಂದ ಪಾರುಮಾಡಿ. ಅದಕ್ಕೆ ಅನುಕೂಲಕರವಾಗಿರುವ ಹಾಸಿಗೆ, ಆಟದ ಸಾಮಾನುಗಳು ಮತ್ತು ವಾತಾವರಣವನ್ನು ಕಲ್ಪಿಸಿ. ಸಿಕ್ಕ ಸಿಕ್ಕಾಗಲೆಲ್ಲ ಮೈದಾನಕ್ಕೆ ಹೋಗಿ ಗುಂಡಿ ತೋಡಲು ಅದನ್ನು ಬಿಡಬೇಡಿ.

English summary

How to stop Dogs from digging

Dogs have the habit to dig ground and store things there. Not only they use these dug holes to store food and objects but they also use them to make a comfortable seat for them. For dogs, digging holes is also a good source of entertainment and exercise.
X
Desktop Bottom Promotion