For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರ ಕಾಲಿನ ಊತ ತಡೆಯುವುದು ಹೇಗೆ?

By Super
|

ಗರ್ಭಿಣಿ ಸ್ತ್ರೀಯರಿಗೆ ತಿಂಗಳು ತುಂಬುತ್ತ ಬಂದಂತೆ ದೇಹದ ಬದಲಾವಣೆಗೆ ತಕ್ಕಂತೆ ಒಂದಿಷ್ಟು ಊತಗಳೂ ಕಾಣಿಸಿಕೊಳ್ಳುತ್ತವೆ. ಇಂತಹ ನೋವನ್ನು ಬರದಂತೆ ತಡೆಯುವುದು ಕಷ್ಟ ಸಾಧ್ಯ. ಆದರೆ ದೇಹದಲ್ಲಿ ಕಂಡುಬರುವ ಇಂತಹ ನೋವುಗಳನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲು ಸಾಧ್ಯ!

ಗರ್ಭಧಾರಣೆ ಮತ್ತು ಊತ ದೇಹದಲ್ಲಿ ಒಂದಕ್ಕೊಂದು ಅಂಟಿಕೊಂಡಂತೆ ಕಂಡುರುತ್ತದೆ. ಏಕೆಂದರೆ ಗರ್ಭಿಣಿಯಾದ ಸ್ತ್ರೀಗೆ ದೇಹದಲ್ಲಿ ಹಲವಾರು ಕಾರಣಗಳಿಂದ ಊತ ಕಂಡುಬರುತ್ತದೆ. ಇಂತಹ ಊತ ಹೊಟ್ಟೆಯಲ್ಲಿ ಮಾತ್ರವಲ್ಲದೆ ಗರ್ಭಿಣಿಯರ ಇಡೀ ದೇಹದಲ್ಲಿಯೇ ಕಂಡುಬರುತ್ತದೆ. ಗರ್ಭಧಾರಣೆಯ ಸಂದರ್ಭದಲ್ಲಿ ಪ್ರಮುಖವಾಗಿ ಎರಡು ಕಾರಣಗಳಿಂದ ಊತ ಕಾಣಿಸಿಕೊಳ್ಳುತ್ತದೆ. ಅವುಗಳೆಂದರೆ. ದೇಹದಲ್ಲಿ ನೀರಿನ ಧಾರಣಶಕ್ತಿ ಹೆಚ್ಚಾಗುವ ಸಂದರ್ಭದಲ್ಲಿ ಮತ್ತು ರಕ್ತದ ಪ್ರಮಾಣವು ಹೆಚ್ಚುವ ಸಮಯ. ಬೋಲ್ಡ್ ಸ್ಕೈ ಮೂಲಕ ಗರ್ಭಾವಸ್ಥೆಯಲ್ಲಿ ಉಂಟಾದ ಊತ ಗುಣಪಡಿಸಲು ಕೆಲವು ಪರಿಣಾಮಕಾರಿ ಮಾರ್ಗಗಳನ್ನು ಹೇಳಲಾಗಿದೆ.

How to overcome swollen feet during pregnancy

ಆಗಾಗ್ಗೆ ಚಲನೆ

ಗರ್ಭಿಣಿಯಾಗಿದ್ದಾಗ ಎಲ್ಲಿಯೂ ಹೋಗದೆ ಕುಳಿತಿದ್ದಲ್ಲೇ ಕುಳಿತಿದ್ದರೆ, ಗರ್ಭಾವಸ್ಥೆಯಲ್ಲಿ ಊತ ಉಂಟಾಗುವ ಸಾಧ್ಯತೆ ಹೆಚ್ಚು. ಹೆಚ್ಚು ಹೊತ್ತು ನಿರಂತರವಾಗಿ ಕುಳಿತಿದ್ದಾಗ ದೇಹದಲ್ಲಿ ನೀರಿನ ಧಾರಣಶಕ್ತಿ ಹೆಚ್ಚಾಗುತ್ತದೆ. ನಿಸ್ಸಂಶಯವಾಗಿ ಇದು ಊತವನ್ನು ಪ್ರಚೋದಿಸುತ್ತದೆ. ಆದ್ದರಿಂದ ನಿಧಾನವಾಗಿ ನಡೆಯುವುದು ಅಥವಾ ನಿಮ್ಮ ವೈದ್ಯರು ಶಿಫಾರಸು ಮಾಡಿದ ವ್ಯಾಯಾಮಗಳನ್ನು ಮಾಡಿ.

ಸೋಕಿಂಗ್

ನೀರಿನಲ್ಲಿ ನಿಮ್ಮ ಕಾಲುಗಳನ್ನು ಇಳಿಬಿಡುವುದರಿಂದ ಅಥವಾ ಸೋಕಿಂಗ್ ಮಾಡುವುದರಿಂದ ನಿಮ್ಮ ಪಾದ ಹಗುರವಾಗಿ ಮತ್ತು ಹರ್ಷಚಿತ್ತದಿಂದ ಇರಲು ಸಹಾಯ ಮಾಡಬಹುದು. ಆದ್ದರಿಂದ ನೀವು ಗರ್ಭಾವಸ್ಥೆಯಲ್ಲಿ ಊತವನ್ನು ಗುಣಪಡಿಸಲು ಈಜಲು ಪ್ರಯತ್ನಿಸಬಹುದು. ಇದು ಸಾಧ್ಯವಿಲ್ಲವಾದರೆ ನೀರಿನ ಟಬ್ ನಲ್ಲಿ ಸಂಪೂರ್ಣ ದೇಹವನ್ನು ಸೋಕಿಂಗ್ ಮಾಡಿ. ಇದೂ ಕೂಡ ನೋವು ನಿವಾರಿಸಲು ಸಹಾಯ ಮಾಡಬಹುದು. ಆದರೆ ಅತಿಯಾದ ಬಿಸಿ ನೀರು ಗರ್ಭಿಣಿಯರಿಗೆ ಉತ್ತಮವಲ್ಲವಾದ್ದರಿಂದ ನೀರು ತುಂಬಾ ಬಿಸಿ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಕಾಲುಗಳನ್ನು ನೇರಗೊಳಿಸಿ

ದೀರ್ಘ ಕಾಲ ಕಚೇರಿಯಲ್ಲಿ ಕುಳಿತುಕೊಳ್ಳುವುದೂ ಕಾಲಿನ ಊತವನ್ನು ಉಂಟುಮಾಡಬಹುದು. ರಕ್ತ ಪರಿಚಲನೆಯ ಮೆದುಗೊಳಿಸುವ ಸಲುವಾಗಿ ನಿಮ್ಮ ದೇಹವನ್ನು ವಿಸ್ತಾರಗೊಳಿಸಬೇಕು. ಆದ್ದರಿಂದ ಕೆಲಸ ಮಾಡುವ ಮೇಜಿನ ಅಡಿಯಲ್ಲಿ, ಪಾದವನ್ನು ಇಡಲು ಅನುಕೂಲವಾಗುವಂತೆ ಸಣ್ಣ ಸ್ಟೂಲ್ ಇಟ್ಟುಕೊಳ್ಳಿ. ಇದರಿಂದ ಕಾಲುಗಳನ್ನು ಬಾಗಿಸದೇ ನೇರವಾಗಿಟ್ಟು ಕೆಲಸಮಾಡಬಹುದು.

ನಿಮ್ಮ ಎಡಭಾಗ ಮಲಗಿ

ಎಡ ಭಾಗದಲ್ಲಿ ಮಲಗುವುದು ದೇಹದ ಪರಿಚಲನೆಗೆ ಸಹಾಯಕ. ಆದ್ದರಿಂದ ಆಗಾಗ್ಗೆ ಸಾಧ್ಯವಾದಷ್ಟು ಎಡಭಾಗದ ಮಗ್ಗಲಿನಲ್ಲಿ ಮಲಗಲು ಪ್ರಯತ್ನಿಸಿ.

ಕಡಿಮೆ ಉಪ್ಪು ಬಳಕೆ

ನೀವು ಗರ್ಭಿಣಿಯಾಗಿರುವಾಗ ನಿಮ್ಮ ದೇಹದ ಹೆಚ್ಚು ನೀರನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತದೆ. ಇದನ್ನು ಎಡಿಮಾ (edema) ಎಂದು ಕರೆಯಲಾಗುತ್ತದೆ. ಎಲ್ಲರಿಗೂ ತಿಳಿದಿರುವಂತೆ ಉಪ್ಪು ದೇಹದಲ್ಲಿ ಹೆಚ್ಚು ನೀರನ್ನು ಹಿಡಿದಿಡುತ್ತದೆ. ಆದ್ದರಿಂದ ಗರ್ಭಾವಸ್ಥೆಯಲ್ಲಿ ಊತವನ್ನು ಕಡಿಮೆ ಮಾಡಲು ನಿಮ್ಮ ಉಪ್ಪು ಸೇವನೆಯನ್ನು ಕಡಿಮೆ ಮಾಡುವುದು ಒಳಿತು.

ಮೇಲೆ ನೀಡಿದ ಸಲಹೆಗಳು ಗರ್ಭಾವಸ್ಥೆಯಲ್ಲಿ ಊತದಿಂದ ಪರಿಹಾರ ನೀಡಲು ಸಹಾಯ ಮಾಡಬಹುದು. ಈಗ ಹೇಳಿ ನೀವು ಗರ್ಭಾವಸ್ಥೆಯಲ್ಲಿ ಊತದಿಂದ ಪರಿಹಾರ ಪಡೆಯಲು ಏನು ಮಾಡುವಿರಿ?

English summary

How to overcome swollen feet during pregnancy

Pregnancy and swelling of the body is in line. Swelling does not only occur in the stomach, but your whole body. Here are some effective way to cure swelling during pregnancy, as reported by Boldsky.
X
Desktop Bottom Promotion