For Quick Alerts
ALLOW NOTIFICATIONS  
For Daily Alerts

ಮುದ್ದಿನ ನಾಯಿಯ ದುರ್ವಾಸನೆ ದೂರ ಮಾಡಿ!

|

ಸಾಕು ಪ್ರಾಣಿಗಳಲ್ಲಿ ನಾಯಿ ಮನುಷ್ಯನಿಗೆ ನಿಕಟವಾಗಿರುವ ಪ್ರಾಣಿ. ನಾಯಿಯನ್ನು ಪ್ರೀತಿಸದಿರುವವರು ತುಂಬಾ ಕಡಿಮೆ. ಆದರೆ ಕೆಲವೊಮ್ಮೆ ನಾಯಿಯಿಂದ ಬರುವ ದುರ್ವಾಸನೆ ನಾಯಿಯನ್ನು ಸಾಕಬೇಕೇ? ಅದನ್ನು ಮನೆ ಅಥವಾ ಕಾರಿನ ಒಳಗಡೆ ಹೇಗೆ ಬಿಟ್ಟುಕೊಡುವುದು ಎಂದು ಯೋಚಿಸುವಂತೆ ಮಾಡುತ್ತದೆ. ನಾಯಿಯ ವಾಸನೆ ಹಲವಾರು ಮತ್ತು ವಿಭಿನ್ನ.

ನಾಯಿಯ ಕೆಟ್ಟ ಉಸಿರಾಟ, ವಾಯು, ಕಳಪೆ ಮಟ್ಟದ ತುಪ್ಪಳ, ಉರುಳುವಿಕೆ ಮೊದಲಾದವುಗಳು. ನಾಯಿ ನೋಡಲು ಎಷ್ಟೇ ಸುಂದರವಾಗಿದ್ದರೂ ಅದರ ವಾಸನೆ ದೂರ ಓಡುವಂತೆ ಮಾಡಬಹುದು. ಸಾಕು ನಾಯಿಯನ್ನು ಸುಂದರವಾಗಿ ಅಷ್ಟೇ ಸುವಾಸನೆಯಿಂದ ಹೇಗೆ ಇಡಬಹುದು ಎನ್ನುವ ಬಗ್ಗೆ ಕೆಲವು ಮಹತ್ವ ಸಲಹೆಗಳಿವೆ.

How to Make Your Dog Smell Better

1. ಸುಗಂಧಿತ ದ್ರವ್ಯ ಅಥವಾ ಇತರ ಯಾವುದೇ ಸುವಾಸನೆ ದ್ರವ್ಯಗಳನ್ನು ನಾಯಿ ಮೈಮೇಲೆ ಸಿಂಪಡಿಸಬೇಡಿ. ಇದು ಸುವಾಸನೆಯ ಮುಖವಾಡ ಮಾತ್ರ. ಇದರಿಂದ ವಾಸನೆ ಹೋಗಲ್ಲ. ಹೆಚ್ಚು ದುರ್ಗಂಧವಿದ್ದರೆ ಅದನ್ನು ಮರೆಮಾಚುವುದು ಕಷ್ಟ. ನೀವು ನಾಯಿ ಮೈಮೇಲೆ ಸಿಂಪಡಿಸುವ ಸುಗಂಧಿತ ದ್ರವ್ಯ ಅದಕ್ಕೆ ಒಗ್ಗಿಕೊಳ್ಳದೆ ಇರಬಹುದು ಅಥವಾ ಅದು ಅಪಾಯಕಾರಿಯೂ ಆಗಬಹುದು.

2. ನಾಯಿಯನ್ನು ಒದ್ದೆಯಾಗಿರಲು ಬಿಡಬೇಡಿ. ಸ್ನಾನದ ಬಳಿಕ ಆದಷ್ಟು ಬೇಗ ಅದರ ಮೈಯನ್ನು ಒಣಗಿಸಿ. ನಾಯಿಯ ಚರ್ಮದಲ್ಲಿರುವ ಎಣ್ಣೆಯಿಂದ ಬ್ಯಾಕ್ಟೀರಿಯಾ ಉತ್ಪತ್ತಿಯಾಗುತ್ತದೆ. ಆದರೆ ಇತರ ಬ್ಯಾಕ್ಟೀರಿಯಾಗಳಂತೆ ಬೆಚ್ಚಗಿನ ವಾತಾವರಣದಲ್ಲಿ ಈ ಬ್ಯಾಕ್ಟೀರಿಯಾಗಳು ಕೂಡ ಬದುಕುವುದಿಲ್ಲ. ನಾಯಿಯನ್ನು ಆಗಾಗ ಸ್ನಾನ ಮಾಡಿಸುತ್ತಾ ಇರಿ ಮತ್ತು ಅದು ಹೆಚ್ಚು ಸಮಯ ಒದ್ದೆಯಾಗಿರದಂತೆ ನೋಡಿಕೊಳ್ಳಿ.

3. ನಾಯಿಯ ಕಿವಿಯನ್ನು ಆಗಾಗ ಸ್ವಚ್ಛ ಮಾಡುತ್ತಾ ಇರಿ. ಇದರಿಂದ ಮೇಣ ಶೇಖರಣೆಯಾಗುವುದು ತಪ್ಪುತ್ತದೆ. ಕಿವಿ ಒರೆಸುವ ಬಟ್ಟೆ ಅಥವಾ ಇಯರ್ ಕ್ಲೀನರ್ ಗಳನ್ನು ಬಳಸಿ.

4. ನಾಯಿಯ ಮೈಗೆ ದಿನಾಲೂ ಬ್ರಶ್ ಹಾಕಿ ಬಾಚಣಿಗೆಯಿಂದ ಬಾಚಿ. ಇದರಿಂದ ನಾಯಿಯ ಮೈಮೇಲಿನ ಕೊಳಕು ಮತ್ತು ಬ್ಯಾಕ್ಟೀರಿಯಾ ಕಡಿಮೆಯಾಗಬಹುದು. ಉದುರಿದ ಕೂದಲು ಕೂಡ ಬಾಚುವುದರಿಂದ ಕೆಳಗೆ ಬೀಳಬಹುದು. ಒದ್ದೆ ಬಾಚಣಿಗೆಯಿಂದ ಬಾಚಿದರೆ ಉದುರಿದ ಕೂದಲು ಅದಕ್ಕೆ ಅಂಟಿಕೊಳ್ಳಬಹುದು.

5. ನಾಯಿಯ ಹಲ್ಲುಗಳು ಸ್ವಚ್ಛವಾಗಿದೆಯಾ ಎನ್ನುವುದನ್ನು ಪರೀಕ್ಷಿಸಿ. ಕೆಟ್ಟ ಹಲ್ಲಿನಿಂದ ಬಾಯಿ ವಾಸನೆ ಬರಬಹುದು. ನಾಯಿಯ ಬಾಯಿಯ ಗಾತ್ರಕ್ಕೆ ಅನುಗುಣವಾಗಿ ನಾಯಿಯ ಟೂಥ್ ಬ್ರಶ್ ಆಯ್ಕೆ ಮಾಡಿ. ಮನುಷ್ಯರ ಟೂಥ್ ಪೇಸ್ಟ್ ನ್ನು ಬಳಸಬೇಡಿ. ನಾಯಿಯ ಟೂಥ್ ಪೇಸ್ಟ್ ಗಳು ಬೀಫ್ ಅಥವಾ ಕೋಳಿ ಮಾಂಸದ ಸುವಾಸನೆಯನ್ನು ಹೊಂದಿರುತ್ತದೆ.

English summary

How to Make Your Dog Smell Better

A smelly dog is hard to spend time around, so it's vital to get him to smell great again. Here are some key doggy odor checking and arresting activities you can put into action.
Story first published: Thursday, July 4, 2013, 16:48 [IST]
X
Desktop Bottom Promotion