For Quick Alerts
ALLOW NOTIFICATIONS  
For Daily Alerts

ಹೃದಯ ಪಂಜರದಲ್ಲಿ ಲವ್ ಬರ್ಡ್ಸ್ ಕಲರವ

|
How To Care Love Birds
ಬಣ್ಣ-ಬಣ್ಣದ ಪಕ್ಷಿಗಳ ಸೌಂದರ್ಯಕ್ಕೆ ಮನಸೋಲದವರಾರು? ಅದರಲ್ಲೂ ಕೆಲವು ಜಾತಿಯ ಪಕ್ಷಿಗಳನ್ನು ಮನೆಯಲ್ಲಿ ಸಾಕಬಹುದು. ಅದರಲ್ಲೂ ಲವ್ ಬರ್ಡ್ಸ್ ನೋಡಲು ತುಂಬಾ ಸುಂದರವಾಗಿದ್ದು ಅವುಗಳನ್ನು ನೋಡುವುದೇ ಕಣ್ಣಿಗೆ ಮತ್ತು ಮನಸ್ಸಿಗೆ ಹಬ್ಬವಾಗಿರುತ್ತೆ.

ಅದರಲ್ಲೂ ಗಂಡ-ಹೆಂಡತಿ ಮಾತ್ರ ಇರುವ ಸಂಸಾರದಲ್ಲಿ ಮನೆಯಲ್ಲಿ ಗಂಡ ಹೊರಗಡೆ ಹೋದಾಗ ಅಥವಾ ಹೆಂಡತಿ ತವರಿಗೆ ಹೋದಾಗ ಈ ಲವ್ ಬರ್ಡ್ಸ್ ಗಳಿದ್ದರೆ ನಿಮ್ಮ ಒಂಟಿತನ ಮಾಯ. ಈ ವ್ಯಾಲೆಂಟೈನ್ಸ್ ಡೇ ಗೆ ಗಿಫ್ಟ್ ಗಳ ಜೊತೆಗೆ ವಿಶೇಷವಾದದು ಏನಾದರೂ ತರಬೇಕೆಂದು ಬಯಸುವವರು ಲವ್ ಬರ್ಡ್ಸ್ ತನ್ನಿ. ತಂದ ಲವ್ ಬರ್ಡ್ಸ್ಆರೈಕೆಯನ್ನು ಈ ಕೆಳಗಿನಂತೆ ಮಾಡಿ.


1. ಲವ್ ಬರ್ಡ್ಸ್ ಗಳಿಗೆ ಎಲ್ಲಾ ರೀತಿಯ ಆಹಾರಗಳನ್ನು ಸೇವಿಸುವುದಿಲ್ಲ. ಅದರಲ್ಲೂ ದವಸ ದಾನ್ಯಗಳನ್ನು ಸೇವಿಸುವುದಾದರೂ ಧಾನ್ಯಗಳನ್ನು ಅತಿ ಹೆಚ್ಚು ಕೊಡಬಾರದು.

2. ತಾಜಾ ಹಣ್ಣುಗಳು, ಹಸಿರು ತರಕಾರಿಗಳನ್ನು ಚಿಕ್ಕದಾಗಿ ಕತ್ತರಿಸಿ ಕೊಡಬೇಕು. ಬಟಾಣಿ, ಜೋಳಗಳೆಂದರೆ ಅವುಗಳಿಗೆ ಪ್ರಿಯವಾದ ಆಹಾರವಾಗಿದೆ.

3. ಲವ್ ಬರ್ಡ್ಸ್ ಗಳನ್ನು ತಂದ ಮೇಲೆ ಒಮ್ಮೆ ಪಶುವೈದ್ಯರಿಗೆ ತೋರಿಸಬೇಕು.

4. ತುಂಬಾ ಸ್ಥಳಾವಕಾಶವಿದ್ದರೆ ಲವ್ ಬರ್ಡ್ಸ್ ಗಳನ್ನು ಅಧಿಕ ಸಂಖ್ಯೆಯಲ್ಲಿ ಕೂಡ ಸಾಕಬಹುದು.

5. ಲವ್ ಬರ್ಡ್ಸ್ ನಲ್ಲಿ ಹೆಣ್ಣು ಗಂಡು ಅಂತ ಗುರುತಿಸುವುದು ಕಷ್ಟ. ಆದರೆ ಪಕ್ಷಿಗಳನ್ನು ಮಾರಾಟ ಮಾಡುವವರು ಸುಲಭವಾಗಿ ಗುರುತಿಸುವುದರಿಂದ ಪಕ್ಷಿಗಳನ್ನು ತರುವಾಗ ಜೋಡಿ ಹಕ್ಕಿಗಳನ್ನು ತನ್ನಿ.

6. ಲವ್ ಬರ್ಡ್ಸ್ ಪಂಜರವನ್ನು ತುಂಬಾ ಸ್ವಚ್ಚವಾಗಿ ಇಟ್ಟುಕೊಳ್ಳಬೇಕು. ಅಂದರೆ ಮಾತ್ರ ಅವುಗಳು ಪಂಜರದಲ್ಲಿ ಚಟುವಟಿಕೆಯಿಂದ ಇರುತ್ತವೆ.

English summary

How To Care Love Birds | Tips For Pet Care | ಲವ್ ಬರ್ಡ್ಸ್ ಆರೈಕೆ ಹೇಗೆ? | ಸಾಕುಪ್ರಾಣಿಗಳ ಆರೈಕೆಗೆ ಕೆಲ ಸಲಹೆ

Love birds are always bought in pair and are very playful. They are good breeders but sensitive. Today, we will discuss about love bird care and food. Take a look.
Story first published: Monday, February 6, 2012, 14:42 [IST]
X
Desktop Bottom Promotion