For Quick Alerts
ALLOW NOTIFICATIONS  
For Daily Alerts

ಗಂಡನಿಗಿಂತ ನಾಯಿಯೇ ಹೆಚ್ಚು ಇಷ್ಟವಂತೆ!

|
ಹೆಂಗಸರು ತಮ್ಮ ಬಾಳಸಂಗಾತಿಗಿಂತ ಸಾಕು ಪ್ರಾಣಿಗಳೊಂದಿಗೇ ಹೆಚ್ಚು ಮಾತನಾಡುತ್ತಾರಂತೆ. ಅವರು ತಮ್ಮ ಮುದ್ದು ನಾಯಿಗಳೊಂದಿಗೇ ಹೆಚ್ಚು ಕಾಲ ಕಳೆಯಲು ಬಯಸುತ್ತಾರಂತೆ. ಇಂಥ ಆಶ್ಚರ್ಯಕರ ಸುದ್ದಿಯನ್ನು ಬಿತ್ತರಿಸಿರುವುದು ಇತ್ತೀಚಿನ ಒಂದು ಸಂಶೋಧನೆ.

ಐವರಲ್ಲಿ ಒಬ್ಬ ಮಹಿಳೆ ತನ್ನ ಗಂಡನಿಗಿಂತ, ಮನೆಯಲ್ಲಿ ಸಾಕಿರುವ ನಾಯಿಯೊಂದಿಗೆ ಹೆಚ್ಚು ಮಾತನಾಡುತ್ತಾಳೆ ಎಂದಿದೆ ಈ ಸಂಶೋಧನೆ.

ನಾಯಿಯನ್ನು ಸಾಕಿರುವ ಸುಮಾರು 2000 ಮಹಿಳೆಯರ ಮೇಲೆ ಬ್ರಿಟನ್ ನಲ್ಲಿ ನಡೆಸಿದ ಪ್ರಯೋಗದಿಂದ ಈ ಅಂಶ ತಿಳಿದುಬಂದಿದೆ. ನಾಯಿಯನ್ನು ನೋಡಿಕೊಳ್ಳಲೆಂದೇ ತಮ್ಮ ಕೆಲಸದ ಹೊರತಾಗಿಯೂ ಸಮಯ ಮೀಸಲಿಡುವ ಮಹಿಳೆಯರು, ನಾಯಿಗಳ ಮೇಲಿನ ಪ್ರೀತಿಯಿಂದ ಟಿವಿ ರೇಡಿಯೋ ಪ್ರೋಗ್ರಾಮ್ ಗಳನ್ನೂ ಕೇಳಿಸಿ ಅವುಗಳನ್ನು ಸಂತಸ ಪಡಿಸುತ್ತಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ.

ತಮ್ಮ ಗಂಡ ಅಥವಾ ಬಾಯ್ ಫ್ರೆಂಡ್ ಗಿಂತ ಈ ನಾಯಿಗಳ ಜೊತೆ ಶೇಕಡಾ 18 ರಷ್ಟು ಹೆಚ್ಚು ಮಾತನಾಡುತ್ತಾರಂತೆ. 42 % ಮಹಿಳೆಯರು ತಮ್ಮ ನಾಯಿಗಳ ಪೋಷಣೆಗೆಂದು ಪ್ರತ್ಯೇಕ ಸಮಯವನ್ನು ಮೀಸಲಿಟ್ಟರೆ, 34 % ಹೆಂಗಸರು ತಮ್ಮ ನಾಯಿಗಳಿಗೆ ಖುಷಿಯಾಗಲೆಂದು ರೇಡಿಯೋ ಮತ್ತು ಟಿವಿ ಹಾಕಿ ಅವುಗಳೊಂದಿಗೆ ತಾವೂ ಕೂತು ಟಿವಿ ನೋಡುತ್ತಾರಂತೆ.

ನಾವು ನಾಯಿಗಳೊಂದಿಗೆ ಚೆನ್ನಾಗಿ ಬೆರೆಯುತ್ತೇವೆ. ನಮ್ಮ ನಿಜ ಪ್ರೀತಿಯನ್ನು ನಮ್ಮ ಪ್ರೀತಿಯ ಸಂಗಾತಿ ನಾಯಿಯೊಂದಿಗೆ ಹಂಚಿಕೊಳ್ಳುವುದರಲ್ಲಿ ನಮಗೆ ಸಂತೋಷವಿದೆ ಎನ್ನುತ್ತಾರೆ ಫುಡ್ ಸ್ಪೆಷಲಿಸ್ಟ್ ರಿಚರ್ಡ್ ರಾಕೆಟ್.

English summary

Women Love Pets | Women Talk to Dogs more than their Partner | ಸ್ತ್ರೀಯರು ತಮ್ಮ ಸಂಗಾತಿಗಿಂತ ನಾಯಿಯೊಂದಿಗೆ ಹೆಚ್ಚು ಮಾತಾಡುತ್ತಾರೆ

One in five women spend more time talking to their pets than their partners, a survey of 2,000 female dog owners in Britain has found.
Story first published: Saturday, September 10, 2011, 17:32 [IST]
X
Desktop Bottom Promotion