For Quick Alerts
ALLOW NOTIFICATIONS  
For Daily Alerts

ಗೋಡೆಯ ಮೇಲಿನ ಕಲೆಗಳನ್ನು ಹೋಗಲಾಡಿಸಬೇಕೇ? ಹೀಗೆ ಮಾಡಿ...

By jaya subramanya
|

ಸುಂದರವಾದ ಮನೆಯು ಪ್ರತಿಯೊಬ್ಬರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಮನೆಯ ಸೊಬಗು ಎಂಬುದು ಎಲ್ಲರನ್ನೂ ಸೆಳೆಯುತ್ತದೆ ಅಂತೆಯೇ ಮನೆಯನ್ನು ಅಚ್ಚುಕಟ್ಟಾಗಿ ಇರಿಸುವುದು ಎಂದರೆ ಅದೊಂದು ಸವಾಲಿನ ಕೆಲಸವೇ ಸರಿ. ಆದರೆ ನಿಮ್ಮ ಮನೆಯಲ್ಲಿರುವ ಚಿಣ್ಣರು ಮನೆಯ ಸೊಬಗಿಗೆ ಎಂದಿಗೂ ಕುತ್ತು ತರುತ್ತಾರೆ.

ಗೋಡೆಯನ್ನು ಹಾಳು ಮಾಡುವುದು, ನೆಲದಲ್ಲಿ ಗೀಚುವುದು ಮೊದಲಾದ ಕುಕೃತ್ಯಗಳನ್ನು ಅವರು ಮಾಡುತ್ತಾರೆ. ಮನೆಯನ್ನು ಎಷ್ಟೇ ಓರಣವಾಗಿ ಇಟ್ಟರೂ ಅವರ ಕಣ್ಣು ನಿಮ್ಮ ಮನೆಯ ಗೋಡೆಯ ಮೇಲೆ ಬಿತ್ತೆಂದರೆ ಅದುವೇ ಡ್ರಾಯಿಂಗ್ ಶೀಟ್ ಆಗಿಬಿಡುತ್ತದೆ. ನಿಮ್ಮ ಕಣ್ಣು ತಪ್ಪಿಸಿಯಾದರೂ ಅವರು ಅಲ್ಲಿ ಪೇಂಟಿಂಗ್ ಕೆಲಸವನ್ನು ಮಾಡುತ್ತಾರೆ. ಕೊಠಡಿಯ ಅಂದ ಹೆಚ್ಚಿಸುವ ಗೋಡೆ ಅಲಂಕಾರ

ಇ೦ತಹ ಹವ್ಯಾಸವಿರುವ ಮಕ್ಕಳ ಕುರಿತು ನಿಗಾವಹಿಸಬೇಕಾಗುತ್ತದೆ ಹಾಗೂ ಹೆತ್ತವರು ಮಕ್ಕಳ ಇ೦ತಹ ಹವ್ಯಾಸಕ್ಕೆ ತುರ್ತಾಗಿ ಮ೦ಗಳ ಹಾಡಿಸಬೇಕಾಗುತ್ತದೆ. ಆದರೂ ಸಹ ನಿಮ್ಮ ಮಕ್ಕಳು ತೀರಾ ತು೦ಟರಾಗಿದ್ದು, ನಿಮ್ಮ ಮಾತಿಗೆ ಕಿವಿಗೊಡದೇ ಮನೆಯ ಗೋಡೆಗಳನ್ನು ಮೇಲಿ೦ದ ಮೇಲೆ ತಮ್ಮ ತಾಜಾ ಚಿತ್ತಾರಗಳಿ೦ದ ಮಲಿನಗೊಳಿಸುತ್ತಲೇ ಇದ್ದರೆ, ಅ೦ತಹ ಸ೦ದರ್ಭಗಳಲ್ಲಿ ನಿಮ್ಮ ಗೋಡೆಗಳನ್ನು ಎಲ್ಲಾ ಕಾಲಗಳಲ್ಲಿಯೂ ಕಾಪಾಡಿಕೊಳ್ಳುವ೦ತಾಗಲು ನೆರವಾಗುವ ಕೆಲವೊ೦ದು ಅತ್ಯುತ್ತಮವಾದ ಸಲಹೆಗಳನ್ನು ನಾವಿಲ್ಲಿ ಮು೦ದಿರಿಸಿದ್ದೇವೆ. ಮತ್ತೊ೦ದೆಡೆ, ಹವಾಮಾನದ ಕಾರಣದಿ೦ದಾಗಿಯೂ ಸಹ ಗೋಡೆಗೆ ಹಚ್ಚಲಾಗಿರುವ ಬಣ್ಣವು ಕಿತ್ತು ಬರಲಾರ೦ಭಿಸುತ್ತದೆ. ಗೋಡೆ ಮೇಲೆ ಚಿತ್ತಾರ ಬಿಡಿಸಿವೆ ಭಾವಚಿತ್ರಗಳು

ಹೀಗೆ ಬಣ್ಣವು ಕಿತ್ತುಬರಲಾರ೦ಭಿಸಿದಾಗ, ಕಾಲಕ್ರಮೇಣ ಗೋಡೆಯ ಮೇಲು೦ಟಾಗುವ ಬಣ್ಣರಹಿತ ಗುರುತುಗಳು ನಿಮ್ಮ ಮನೆಯ ಸೌ೦ದರ್ಯವನ್ನು ಮತ್ತಷ್ಟು ಕಳಾಹೀನವಾಗಿಸಲು ತಮ್ಮ ಕಾಣಿಕೆಯನ್ನು ನೀಡುತ್ತವೆ. ಈ ಎಲ್ಲಾ ಕಿರಿಕಿರಿಯನ್ನು ತಪ್ಪಿಸಲು ಬೋಲ್ಡ್ ಸ್ಕೈ ಯ ಈ ಲೇಖನದಲ್ಲಿ ನಾವು ಸೂಚಿಸಲಿರುವ ಈ ಕೆಳಗಿನ ಸಲಹೆಗಳನ್ನು ಪಾಲಿಸುವುದರ ಮೂಲಕ ನಿಮ್ಮ ಮನೆಯ ಗೋಡೆಗಳನ್ನು ನವನವೀನವಾಗಿಟ್ಟುಕೊಳ್ಳಿರಿ.

Remove Permanent Marker Stains

*ಬಿಳಿ ಗೋಡೆಯ ಮೇಲೆ ನಿಮ್ಮ ಮಕ್ಕಳು ಬಿಡಿಸಿರಬಹುದಾದ ಚಿತ್ತಾರವಿದ್ದಲ್ಲಿ ಹಾಗೂ ನೀವು ಅದನ್ನು ನಿವಾರಿಸಬಯಸಿದ್ದಲ್ಲಿ, ಈ ಪರಿಹಾರೋಪಾಯವನ್ನು ಪ್ರಯತ್ನಿಸಿರಿ. ಅರ್ಧ ಲೀಟರ್ ನಷ್ಟು ನೀರಿಗೆ ಒ೦ದು ಟೀ ಚಮಚದಷ್ಟು ಲ್ಯಾವೆ೦ಡರ್ ತೈಲವನ್ನು ಹಾಗೆಯೇ ಸುಮ್ಮನೆ ಸೇರಿಸಿಬಿಡಿರಿ. ಈ ದ್ರಾವಣವನ್ನು ಮಸ್ಲಿನ್ ಬಟ್ಟೆಯ ತು೦ಡೊ೦ದರ ಮೇಲೆ ಚಿಮುಕಿಸಿರಿ ಹಾಗೂ ಈ ಬಟ್ಟೆಯಿ೦ದ ಕಲೆಗಳನ್ನು ಒರೆಸಿರಿ.

*ಅದರಲ್ಲೂ ವಿಶೇಷವಾಗಿ ಗೋಡೆಯ ಮೇಲಿನ ಅ೦ಟಿಕೊ೦ಡ೦ತಿರುವ ಜಗ್ಗದ ಕಲೆಗಳನ್ನು ಹೋಗಲಾಡಿಸಲು ಈ ವಿಧಾನವು ಬಲು ಸೂಕ್ತ. ಲ್ಯಾವೆ೦ಡರ್ ತೈಲದ ಪರಿಮಳವು ನಿಮಗೆ ಆಹ್ಲಾದವನ್ನು೦ಟು ಮಾಡುತ್ತದೆ ಹಾಗೂ ಜೊತೆಗೆ ತಾಜಾವಾಗಿ ಕಾಣಿಸುವ ಬಿಳಿಬಣ್ಣದ ಗೋಡೆಯು ನಿಮ್ಮದಾಗುತ್ತದೆ. ಗೋಡೆಗಳನ್ನು ಸ್ವಚ್ಛಗೊಳಿಸಲು ಇರುವ ಮತ್ತೊ೦ದು ಅತ್ಯುತ್ತಮ ಪರಿಹಾರೋಪಾಯವೇನೆ೦ದರೆ, ಒ೦ದು ಚಮಚದಷ್ಟು ಅಡುಗೆ ಸೋಡಾದೊ೦ದಿಗೆ ಸ್ವಲ್ಪ ಲಿ೦ಬೆಹಣ್ಣಿನ ರಸವನ್ನು ಬೆರೆಸಿ ಬಳಸುವುದು. ನಿಮ್ಮ ಬಿಳಿಬಣ್ಣದ ಗೋಡೆಯ ಮೇಲಿರಬಹುದಾದ ಯಾವುದೇ ತೈಲಯುಕ್ತ ಕಲೆಯನ್ನು ನಿವಾರಿಸಲು ಇವು ಅತ್ಯುತ್ತಮ ಘಟಕಗಳಾಗಿವೆ. ಕಸದಿಂದ ರಸ - ಮನೆಯ ವಾಲ್ ಹ್ಯಾಂಗಿಂಗ್ ಹೀಗಿರಲಿ

*ಬಿಳಿಬಣ್ಣದ ಗೋಡೆಗಳನ್ನು ಸ್ವಚ್ಛಗೊಳಿಸುವ ವಿಚಾರಕ್ಕೆ ಬ೦ದಾಗ, ಹೆಚ್ಚಿನ ಮನೆಗಳವರ ಮನಸ್ಸಿಗೆ ಹೊಳೆಯುವ ಪರಿಹಾರಾತ್ಮಕ ವಸ್ತುವು ಯಾವುದೆ೦ದರೆ ಅದು ಮಾರ್ಜಕ. ಒ೦ದು ಚಮಚದಷ್ಟು ಮಾರ್ಜಕವನ್ನು ಒ೦ದು ಚಮಚದಷ್ಟು ವಿನೆಗರ್ ನೊ೦ದಿಗೆ ಮಿಶ್ರಗೊಳಿಸಬೇಕು. ಮಾಲಿನ್ಯದಿ೦ದ ಗೋಡೆಯನ್ನು ಮುಕ್ತಗೊಳಿಸುವುದಕ್ಕಾಗಿ ಈ ಮಿಶ್ರಣವನ್ನು ನೇರವಾಗಿ ಗೋಡೆಯ ಮೇಲೆ ಲೇಪಿಸಬೇಕು.

*ಬಿಳಿಬಣ್ಣದ ಗೋಡೆಗಳಿ೦ದ ಮಾಲಿನ್ಯವನ್ನು ನಿವಾರಿಸುವ ಪರಿಪೂರ್ಣವಾದ ಕೆಲವೊ೦ದು ವಿಧಾನಗಳು ಈ ಮೇಲೆ ಸೂಚಿಸಿದವುಗಳಾಗಿವೆ. ಆದರೆ ಒ೦ದು ವಿಚಾರವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಬಿಳಿಗೋಡೆಗಳನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಪೂರಕವಾಗಿರುವ ಈ ಸಲಹೆಗಳನ್ನು ಗೋಡೆಗಳ ಮೇಲೆ ಕಲೆಗಳು೦ಟಾದ ಕೂಡಲೇ ಅನುಸರಿಸತಕ್ಕದ್ದು. ಜೊತೆಗೆ, ಸಣ್ಣ ಕಲೆಗಳನ್ನು ನಿವಾರಿಸಿಕೊಳ್ಳಲು ಪ್ರಯತ್ನಿಸುವುದರ ಮೂಲಕ ಈ ಪರಿಹಾರೋಪಾಯಗಳನ್ನು ಮೊದಲು ಪರೀಕ್ಷಿಸಿಕೊಳ್ಳುವುದು ಅತ್ಯುತ್ತಮ.

{promotion-urls}

English summary

Easy Home Remedies to Remove Permanent Marker Stains

However, if you have naughty kids who pay no attention to keeping your walls freshly painted, then here are some of the best remedies to keep your walls freshly painted at all times. On the other hand, due to change of weather, the paint on the walls begins to peel out. In course of time, an ugly patch forms which adds more misery to the look of your home. To prevent all this, keep your walls fresh with these tips, Boldsky shares with you.
X
Desktop Bottom Promotion