For Quick Alerts
ALLOW NOTIFICATIONS  
For Daily Alerts

ಪ್ಲಾಸ್ಟಿಕ್ ಪಾತ್ರೆಗಳ ಸಂರಕ್ಷಣೆಗಾಗಿ ಸರಳ ಸಲಹೆಗಳು

By Jayasubramanya
|

ನಾವು ತಿನ್ನುವ ಆಹಾರ ತಾಜಾ ಆಗಿ ಇರಬೇಕೆಂಬ ಬಯಕೆ ನಮ್ಮದಾಗಿದೆ. ಅದಕ್ಕೆಂದೇ ಅಹಾರ ಸಾಮಾಗ್ರಿಗಳನ್ನು ಸಂರಕ್ಷಿಸುವ ವಿಧ ವಿಧದ ಪಾತ್ರೆ ಪರಿಕರಗಳನ್ನು ನಾವು ಬಳಸುತ್ತೇವೆ ಹಿಂದಿನಿಂದಲೂ ಅಲ್ಯುಮಿನಿಯಮ್ ಅನ್ನೇ ಆಹಾರ ಸಂರಕ್ಷಣೆಗಾಗಿ ಬಳಸುತ್ತಿದ್ದು ಇಂದು ಇವುಗಳ ಸ್ಥಾನವನ್ನು ಪ್ಲಾಸ್ಟಿಕ್ ಪಾತ್ರೆಗಳು ಆವರಿಸಿಕೊಂಡಿವೆ. ಆರೋಗ್ಯಕ್ಕೆ ಹಾನಿಕರ ಎಂಬ ಹಣೆಪಟ್ಟಿನ್ನು ಪ್ಲಾಸ್ಟಿಕ್ ಹೊತ್ತಿದ್ದರೂ ಪರಿಸರ ಸ್ನೇಹಿ ಮತ್ತು ಆರೋಗ್ಯಕ್ಕೆ ಹಾನಿಕರವಲ್ಲದ ಪ್ಲಾಸ್ಟಿಕ್ ಪಾತ್ರೆಗಳು ಕೂಡ ಇಂದು ಮಾರುಕಟ್ಟೆಯಲ್ಲಿ ದೊರೆಯುತ್ತಿದೆ.

ಮೈಕ್ರೋವೇವ್‌ನಲ್ಲಿ ಬಿಸಿ ಮಾಡಿಕೊಳ್ಳಬಹುದಾದ ಈ ಪ್ಲಾಸ್ಟಿಕ್‌ಗಳು ಆಹಾರವನ್ನು ತಾಜಾವಾಗಿರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಆದರೆ ಬಳಸಲೂ ಸುಲಭ ನಿರ್ವಹಣೆಯಲ್ಲೂ ಸರಳವಾಗಿರುವ ಪ್ಲಾಸ್ಟಿಕ್ ಪಾತ್ರೆಗಳು ಕೂಡ ದೀರ್ಘ ಸಮಯದವರೆಗೆ ಬಾಳಿಕೆ ಬರುವುದಿಲ್ಲ ಎಂಬುದು ನಿಮಗೆ ತಿಳಿದಿದೆಯೇ? ಹೌದು, ಪ್ಲಾಸ್ಟಿಕ್ ಪಾತ್ರೆಗಳು ಒಂದು ತೆರನಾದ ವಾಸನೆಯನ್ನು ಹೊರಬಿಡುತ್ತಿದ್ದರೆ ಇಲ್ಲವೇ ಅವುಗಳ ಬಣ್ಣಗಳಲ್ಲಿ ಏನಾದರೂ ವ್ಯತ್ಯಾಸ ನಿಮಗೆ ಕಂಡುಬಂದಿತು ಎಂದಾದಲ್ಲಿ ಅವುಗಳನ್ನು ನೀವು ತೆರವು ಮಾಡಿ ಬೇರೆಯದನ್ನು ಬಳಸುವುದು ಸೂಕ್ತ. ಪ್ಲಾಸ್ಟಿಕ್ ಬಾಟಲಿಗಳಲ್ಲಿ ದೊರಕುವ ನೀರು ಸುರಕ್ಷಿತವೇ?

ಪ್ಲಾಸ್ಟಿಕ್ ಪಾತ್ರೆಗಳು ಬಳಸುವಿಕೆಗೆ ಹೇಗೆ ನೆರವನ್ನು ನೀಡಲಿದೆಯೋ ಅಂತೆಯೇ ಅವುಗಳ ನಿರ್ವಹಣೆಯಲ್ಲೂ ಕೆಲವೊಂದು ನಿಯಮಗಳನ್ನು ನಾವು ಅನುಸರಿಸುವುದು ಸೂಕ್ತವಾದುದು. ನಿತ್ಯವೂ ಬಳಸುವ ಪ್ಲಾಸ್ಟಿಕ್‌ ಪಾತ್ರೆಗಳ ನಿರ್ವಹಣೆಯನ್ನು ನೀವು ಹೇಗೆ ಮಾಡಬೇಕು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ. ಬನ್ನಿ ಅದೇನು ಎಂಬುದನ್ನು ಕೆಳಗಿನ ಸ್ಲೈಡರ್‌ನಿಂದ ತಿಳಿದುಕೊಳ್ಳಿ....

ಪ್ಲಾಸ್ಟಿಕ್ ವಾಸನೆ

ಪ್ಲಾಸ್ಟಿಕ್ ವಾಸನೆ

ಪ್ಲಾಸ್ಟಿಕ್ ವಾಸನೆಯನ್ನು ಬೀರುತ್ತಿದೆ ಎಂದಾದಲ್ಲಿ, ಸರಳವಾದ ಮನೆಮದ್ದು ಇದ್ದು ಅದನ್ನು ನೀವು ಅನುಸರಿಸಬಹುದು. ಒಂದು ಬಕೆಟ್ ತುಂಬಾ ಉಗುರು ಬೆಚ್ಚನೆಯ ನೀರಿಗೆ ಮೂರು ಚಮಚದಷ್ಟು ಬೇಕಿಂಗ್ ಸೋಡಾವನ್ನು ಹಾಕಿ. ವಾಸನೆ ಹೊರಸೂಸುತ್ತಿರುವ ಪ್ಲಾಸ್ಟಿಕ್ ಪಾತ್ರೆಗಳನ್ನು ಈ ನೀರಿನಲ್ಲಿ ಮುಳುಗಿಸಿಡಿ. ಅರ್ಧ ಗಂಟೆಗಳಷ್ಟು ಸಮಯ ಇದನ್ನು ಹಾಗೆಯೇ ಬಿಡಿ. ನಂತರ ಅವುಗಳನ್ನು ಹೊರತೆಗೆದು ಚೆನ್ನಾಗಿ ಒಣಗಿಸಿಕೊಳ್ಳಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪ್ಲಾಸ್ಟಿಕ್ ವಾಸನೆ

ಪ್ಲಾಸ್ಟಿಕ್ ವಾಸನೆ

ಇನ್ನೊಂದು ವಿಧಾನವೆಂದರೆ ಉಗುರು ಬೆಚ್ಚನೆಯ ನೀರಿಗೆ, ಲಿಂಬೆ ರಸವನ್ನು ಬೆರೆಸಿಕೊಳ್ಳಿ ಮತ್ತು ಒಂದು ಚಮಚದಷ್ಟು ಆಪಲ್ ಸೀಡರ್ ವಿನೇಗರ್ ಅನ್ನು ಸೇರಿಸಿಕೊಳ್ಳಿ. ಈ ನೀರಿನಲ್ಲಿ ಪ್ಲಾಸ್ಟಿಕ್ ಪಾತ್ರೆಯನ್ನು ಮುಳುಗಿಸಿಡಿ. ಹತ್ತು ನಿಮಿಷಗಳ ನಂತರ ಈ ಪಾತ್ರೆಗಳನ್ನು ಹೊರತೆಗೆದು ಅವುಗಳನ್ನು ಒಣಗಿಸಿಟ್ಟುಕೊಳ್ಳಿ.

ಕಲೆಗಳನ್ನು ಹೋಗಲಾಡಿಸಲು

ಕಲೆಗಳನ್ನು ಹೋಗಲಾಡಿಸಲು

ಪ್ಲಾಸ್ಟಿಕ್ ಪಾತ್ರೆಗಳಿಂದ ಕಲೆಗಳನ್ನು ನಿವಾರಿಸಿಕೊಳ್ಳಲು ಇರುವ ಉತ್ತಮ ವಿಧಾನವೆಂದರೆ ದ್ರವ ರೂಪದ ಕ್ಲೋರೀನ್ ಬ್ಲೀಚ್ ಅನ್ನು ಬಳಸವುದಾಗಿದೆ. 30 ನಿಮಿಷಗಳಷ್ಟು ಕಾಲ ಬ್ಲೀಚ್‌ನಲ್ಲಿ ಪಾತ್ರೆಗಳನ್ನು ನೆನೆಸಿಡಿ. ಇದಾದ ನಂತರ ಪಾತ್ರೆಯನ್ನು ಹೊರತೆಗೆದು ಅದನ್ನು ಬಿಸಿಯಾದ ಸೋಪು ನೀರಿನಿಂದ ತೊಳೆದುಕೊಳ್ಳಿ. ಇದನ್ನು ಚೆನ್ನಾಗಿ ಒಣಗಿಸಿಕೊಳ್ಳಲು ಮರೆಯದಿರಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕಲೆಗಳನ್ನು ಹೋಗಲಾಡಿಸಲು

ಕಲೆಗಳನ್ನು ಹೋಗಲಾಡಿಸಲು

ಇನ್ನೂ ಕಲೆ ಹೋಗಿಲ್ಲ ಎಂದಾದಲ್ಲಿ ಪಾತ್ರೆಗೆ ಇನ್ನಷ್ಟು ಬ್ಲೀಚ್ ಅನ್ನು ಸೇರಿಸಿ ಕಲೆಯನ್ನು ಹೋಗಲಾಡಿಸಿ.

ಪ್ಲಾಸ್ಟಿಕ್ ನಿರ್ವಹಣೆಗಾಗಿ ಸಲಹೆಗಳು

ಪ್ಲಾಸ್ಟಿಕ್ ನಿರ್ವಹಣೆಗಾಗಿ ಸಲಹೆಗಳು

ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಕಲೆಗಳುಂಟಾಗುವುದನ್ನು ತಡೆಗಟ್ಟಲು, ದೀರ್ಘಸಮಯದವರೆಗೆ ಅದರಲ್ಲಿ ಆಹಾರ ಹಾಕಿಡುವುದನ್ನು ನಿಲ್ಲಿಸಿ. ಅವುಗಳನ್ನು ಬಿಸಿ ಮಾಡುವ ಮುನ್ನ ಅದು ಮೈಕ್ರೋವೇವ್ ಸೇಫ್ ಸುರಕ್ಷಿತವೇ ಎಂಬುದನ್ನು ಪರಿಶೀಲಿಸಿಕೊಳ್ಳಿ. ಇದರಿಂದ ಪ್ಲಾಸ್ಟಿಕ್ ಪಾತ್ರೆಗಳ ಕಲೆ ಮತ್ತು ವಾಸನೆಯನ್ನು ನಿವಾರಿಸಿಕೊಳ್ಳಬಹುದಾಗಿದೆ.

English summary

Tips To Clean Plastic Food Containers

Gone are the days when people used steel and aluminium containers to store their food for a long period of time. These days, people have become quite modern and the use of plastic containers have become common. Since plastic containers are dish-washer and microwave friendly, people have begun to use this item more when compared to the rest.
X
Desktop Bottom Promotion