For Quick Alerts
ALLOW NOTIFICATIONS  
For Daily Alerts

ಹೊಸ ಟ್ರಿಕ್ಸ್- ಮನೆಯ ಸ್ವಚ್ಛತೆಗೆ ಕಡಲೆಕಾಯಿ ಬೆಣ್ಣೆ!

By Jaya subramanya
|

ಇದುವರೆಗೆ ಪಾಶ್ಚಾತ್ಯ ದೇಶಗಳಲ್ಲಿ ಜನಪ್ರಿಯವಾಗಿದ್ದ ಶೇಂಗಾ-ಬೆಣ್ಣೆಯ ಮಿಶ್ರಣವಾದ ಪೀನಟ್ ಬಟರ್ ಈಗ ಭಾರತದಲ್ಲಿಯೂ ಲಭ್ಯವಾಗತೊಡಗಿದೆ. ಬೆಳಗ್ಗಿನ ಉಪಾಹಾರಕ್ಕೆ ಹೆಚ್ಚಿನ ಸಮಯವಿಲ್ಲದವರಿಗೆ ಹೇಳಿ ಮಾಡಿಸಿದ ಆಹಾರವಾದ ಇದು ಆರೋಗ್ಯಕರವೂ ಪೌಷ್ಠಿಕವೂ ಆಗಿದೆ. ಸಿದ್ಧ ರೂಪದಲ್ಲಿ ಬ್ರೆಡ್, ಚಪಾತಿ, ರೊಟ್ಟಿಗಳೊಡನೆ ಸೇವಿಸಲು ಸಾಧ್ಯವಿರುವ ಈ ಖಾದ್ಯ ಮಕ್ಕಳಿಂದ ಹಿರಿಯರಿಗೆ ಇಷ್ಟವಾಗುತ್ತದೆ. ಆದರೆ ಇದರ ಉಪಯೋಗ ತಿನ್ನುವುದರ ಹೊರತಾಗಿ ಇನ್ನೂ ಹಲವು ವಿಧಗಳಲ್ಲಿ ಇದರ ಪ್ರಯೋಜನಗಳನ್ನು ನಾವು ಪಡೆಯಬಹುದು.

ಆದರೆ ಇದು, ಬರಿಯ ಬೆಳಗ್ಗಿನ ಉಪಹಾರಕ್ಕೆ ಮಾತ್ರವೇ ಕಡಲೆ ಕಾಯಿ ಬೆಣ್ಣೆ ಸಹಕಾರಿಯಾಗಿರದೇ ಹಲವಾರು ಮನೆಗೆಲಸದಲ್ಲೂ ಇದು ನಿಮಗೆ ಸಹಾಯ ಮಾಡಲಿದೆ ಎಂಬುದನ್ನು ನೀವು ನಂಬಲೇಬೇಕು. ಅಡುಗೆ ಮನೆಯ ಹಲವಾರು ಸಮಸ್ಯೆಗಳನ್ನು ನಿಯಂತ್ರಿಸುವ ಶಕ್ತಿಯನ್ನು ಕಡಲೆಕಾಯಿ ಬೆಣ್ಣೆ ಹೊಂದಿದ್ದು ಹೋಗಲಾಡಿಸಲೂ ಸಾಧ್ಯವಾಗದೇ ಇರುವ ವಾಸನೆಗಳನ್ನು ಇದು ನಿವಾರಿಸುತ್ತದೆ. ಬನ್ನಿ ಅಂತಹ ಕಮಾಲಗಳನ್ನು ಕಡಲೆ ಕಾಯಿ ಬೆಣ್ಣೆ ಹೇಗೆ ಮಾಡುತ್ತದೆ ಎಂಬುದನ್ನು ನೋಡೋಣ ಬನ್ನಿ...

Little-known uses for your peanut butter

ಅಸಹ್ಯ ವಾಸನೆಯನ್ನು ಹೋಗಲಾಡಿಸಲು
ಅಡುಗೆ ಮನೆಯಲ್ಲಿ ಹೆಚ್ಚು ಸಮಯ ಕಳೆಯುವವರಿಗೆ ಇದು ವರದಾಯಕ ಎಂದೆನಿಸಿದೆ. ಪಾತ್ರೆ ಮತ್ತು ಕೈಗಳಿಂದ ಮೀನಿನ ವಾಸನೆಯನ್ನು ನಿವಾರಿಸಲು ಕಡಲೆ ಕಾಯಿ ಬೆಣ್ಣೆ ಉತ್ತಮವಾದುದು. ನಿಮ್ಮ ಕೈಗಳಿಗೆ ಕಡಲೆ ಕಾಯಿ ಬೆಣ್ಣೆಯನ್ನು ಸವರಿಕೊಳ್ಳಿ ನಂತರ ಕೈಗಳನ್ನು ತೊಳೆಯಿರಿ. ಅಂತೆಯೇ ಪಾತ್ರೆಗಳಿಗೂ ಈ ಬೆಣ್ಣೆಯನ್ನು ಸವರಿ ವಾಸನೆಯನ್ನು ಹೋಗಲಾಡಿಸಬಹುದು.

ಚರ್ಮವನ್ನು ಸ್ವಚ್ಛಮಾಡಲು
ಚರ್ಮವನ್ನು ಸ್ವಚ್ಛಮಾಡುವುದು ಹೆಚ್ಚು ಕಷ್ಟಕರ ಕೆಲಸ ಎಂದೆನಿಸಿದೆ. ಅದನ್ನು ನಿರ್ವಹಣೆ ಮಾಡುವುದೂ ಅಷ್ಟೇ ತಲೆನೋವನ್ನು ಉಂಟುಮಾಡುತ್ತದೆ. ಆದರೆ ಈ ಸಮಸ್ಯೆಯನ್ನು ಹೋಗಲಾಡಿಸಲು ಕಡಲೆ ಕಾಯಿ ಬೆಣ್ಣೆಯ ಮೊರೆ ಹೋಗಬಹುದು. ವೃತ್ತಾಕಾರವಾಗಿ ಬೆಣ್ಣೆಯನ್ನು ಸವರಿ ನಂತರ ಹತ್ತಿ ಬಟ್ಟೆಯಿಂದ ಅದನ್ನು ಒರೆಸಿ. ಬೆಣ್ಣೆಯ ವಾಸನೆಯನ್ನು ನಿವಾರಿಸಲು ಸುಗಂಧದದ ಎಣ್ಣೆಯನ್ನು ಹಚ್ಚಿರಿ.

ಸ್ಕ್ರಾಚ್ ಆಗಿರುವ ಸಿಡಿಗಳ ರಿಪೇರಿ
ಪೆನ್ ಡ್ರೈವ್ ಮತ್ತು ಹಾರ್ಡ್ ಡ್ರೈವ್‎ಗಳು ಹಳೆಯ ಉತ್ಪನ್ನಗಳನ್ನು ಭಾಗಶಃ ಮೂಲೆಗುಂಪಾಗಿಸಿದೆ. ನಿಮ್ಮ ಹಳೆಯ ಸಿಡಿಗಳನ್ನು ನೀವು ಕಂಡಲ್ಲಿ ಅದು ಸ್ಕ್ರಾಚ್ ಮತ್ತು ಹಾನಿಗೊಳಗಾಗಿದ್ದಲ್ಲಿ, ಕಡಲೆಕಾಯಿ ಬೆಣ್ಣೆ ಬಳಸಿ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದಾಗಿದೆ. ಸಿಡಿಗಳ ಮೇಲೆ ಬೆಣ್ಣೆಯನ್ನು ಚೆನ್ನಾಗಿ ಉಜ್ಜಿಕೊಳ್ಳಿ ಮತ್ತು ಒಣಬಟ್ಟೆಯಿಂದ ಸಿಡಿಯನ್ನು ಒರೆಸಿ. ಮ್ಯಾಜಿಕ್ ನೀವೇ ನೋಡಿ.

ಪೀಠೋಪಕರಣಗಳ ಸ್ವಚ್ಛತೆಗೆ
ನಮ್ಮ ಮನೆಯ ಪೀಠೋಪಕರಣಗಳಿಗೆ ಸ್ಕ್ರಾಚ್ ಮತ್ತು ಹಾನಿ ಉಂಟಾಗುತ್ತಲೇ ಇರುತ್ತದೆ. ಪ್ರತೀ ಸ್ಕ್ರಾಚ್‎ನ ನಂತರ ಪಾಲಿಶ್ ಮಾಡಿಸುವುದು ನಿಮಗೆ ಬೇಡವೆಂದಾದಲ್ಲಿ ಈ ಭಾಗಕ್ಕೆ ಕಡಲೆಕಾಯಿ ಬೆಣ್ಣೆಯನ್ನು ಹಚ್ಚಿರಿ ನಂತರ ಒಣ ಬಟ್ಟೆಯಿಂದ ಅದನ್ನು ಒರೆಸಿ. ಗೀರು ಮಾಯವಾಗಿರುವುದನ್ನು ನಿಮಗೆ ಕಂಡುಕೊಳ್ಳಬಹುದಾಗಿದೆ.

Story first published: Wednesday, April 13, 2016, 20:32 [IST]
X
Desktop Bottom Promotion