For Quick Alerts
ALLOW NOTIFICATIONS  
For Daily Alerts

ಸಣ್ಣ ಅಡುಗೆ ಕೋಣೆಯಲ್ಲೂ ಮಾಡಿ ಕಮಾಲಿನ ಕೈಚಳಕ!

By Jaya
|

ಗೃಹಿಣಿಯರಿಗೆ ತಮ್ಮ ಅಡುಗೆ ಮನೆ ಎಂಬುದು ಬರಿಯ ಆಹಾರವನ್ನು ಮಾತ್ರ ತಯಾರಿಸುವ ಸ್ಥಳವಾಗಿರುವುದಿಲ್ಲ. ತಮ್ಮ ಮನೆಮಂದಿಯ ಆರೋಗ್ಯವನ್ನು ಕಾಪಾಡುವ, ರುಚಿಯಾದ ಶುಚಿಯಾದ ಭಕ್ಷ್ಯ ಭೋಜನಗಳನ್ನು ತಯಾರಿಸುವ ಈ ಜಾಗ ಅವರಿಗೆ ಪೂಜನೀಯವಾಗಿರುತ್ತದೆ. ಆದ್ದರಿಂದಲೇ ಅವರುಗಳು ಅಡುಗೆ ಮಾಡುವುದರ ಜೊತೆಗೆ ಅಲ್ಲಿನ ಸ್ವಚ್ಛತೆಗೂ ಪ್ರಾಮುಖ್ಯತೆಯನ್ನು ನೀಡುತ್ತಾರೆ.

How To Manage Things In A Small Kitchen

ಮನೆಯಲ್ಲಿರುವ ಗೃಹಿಣಿಯರಿಗೆ ಅಡುಗೆ ಮನೆಯ ಕ್ಲೀನಿಂಗ್ ಪ್ರಮುಖ ಕೆಲಸವಾಗಿರುವುದಿಲ್ಲ. ಆದರೆ ಕೆಲಸಕ್ಕೆ ಹೋಗುವ ಹೆಂಗಳೆಯರಿಗೆ ಅಡುಗೆ ಮಾಡುವುದೇ ಹರಸಾಹಸವಾಗಿರುವಾಗ ಅಡುಗೆ ಮನೆಯನ್ನು ಸ್ವಚ್ಛಗೊಳಿಸುವುದು ತಲೆನೋವಿನ ಕೆಲಸವಾಗಿರುತ್ತದೆ. ಅಚ್ಚುಕಟ್ಟಾದ ಅಡುಗೆಮನೆಯ ಅಂದಕ್ಕಾಗಿ ಟಾಪ್ ಸಲಹೆಗಳು

ಹಾಗಿದ್ದರೆ ಈ ತಲೆನೋವಿಗೆ ಉಪಶಮನವನ್ನು ನೀಡುವ ಪರಿಹಾರದೊಂದಿಗೆ ನಾವು ಬಂದಿದ್ದೇವೆ. ಈ ಕೆಲಸ ಅಷ್ಟೇನೂ ತಲೆನೋವಿದ್ದಲ್ಲ. ಕೆಲವೊಂದು ವ್ಯವಸ್ಥೆಗಳನ್ನು ನಿಯೋಜಿಸುವುದರ ಮೂಲಕ, ನಿಯಮಗಳನ್ನು ಪಾಲಿಸುವುದರ ಮೂಲಕ ಅಡುಗೆ ಮನೆಯನ್ನು ವ್ಯವಸ್ಥಿತಿವಾಗಿ ಇರಿಸಿಕೊಳ್ಳಬಹುದಾಗಿದೆ. ಬನ್ನಿ ಅದೇನು ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ.

ಗೋಡೆಗಳನ್ನು ಬಳಸಿಕೊಳ್ಳಿ
ನಿಮ್ಮ ಪ್ಲಾಟ್‎ಫಾರ್ಮ್‎ನಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಜೋಡಿಸುವುದರ ಬದಲಿಗೆ ಗೋಡೆಗಳನ್ನು ಬಳಸಿಕೊಳ್ಳಿ. ಸ್ವಚ್ಛ ಬಟ್ಟೆಗಳು, ಸ್ಪೂನ್‎ಗಳು, ಕಟ್ಟಿಂಗ್ ಬೋರ್ಡ್, ಹುಕ್ಸ್‎ನೊಂದಿಗಿರುವ ಪ್ಯಾನ್ಸ್, ಚಾಕು ಅಥವಾ ಲೈಟರ್‎ಗಳನ್ನು ತೂಗುಹಾಕಿ. ಇದಕ್ಕೆ ಗೋಡೆಯನ್ನು ಬಳಸಿ. ಅಡುಗೆಯ ಬಳಿಕ, ಮನೆ ಸಾಮಗ್ರಿಗಳ ಸ್ವಚ್ಛತೆ ಹೀಗಿರಲಿ

ಪರಿಕರಗಳನ್ನು ಜೋಡಿಸಿ
ನಿಮ್ಮ ಅಡುಗೆ ಮನೆಯಲ್ಲಿ ಸಾಕಷ್ಟು ಪರಿಕರಗಳಿರುತ್ತವೆ. ಇವುಗಳಲ್ಲಿ ಹೆಚ್ಚಿನದನ್ನು ನೀವು ಬಳಸಿರುವುದಿಲ್ಲ. ನಿಮ್ಮ ಅಡುಗೆ ಮನೆಯಲ್ಲಿ ಪರಿಕರಗಳನ್ನು ಜೋಡಿಸುವಾಗ ಅವುಗಳನ್ನು ನೀವು ಹೇಗೆ ಬಳಸುತ್ತೀರಿ ಎಂಬುದನ್ನು ಆಧರಿಸಿ ಅವುಗಳನ್ನು ಬಳಸಿ.

ಸಿಂಕ್‎ನ ಕೆಳಗಿನ ಸ್ಥಳವನ್ನು ಬಳಸಿಕೊಳ್ಳಿ
ಸಿಂಕ್‎ನ ಕೆಳಗಿರುವ ಜಾಗವನ್ನು ಸಣ್ಣ ಅಡುಗೆ ಮನೆಯಲ್ಲಿ ಬಳಸಿಕೊಳ್ಳಬಹುದಾಗಿದೆ. ಇಲ್ಲಿ ಸಣ್ಣ ಕ್ಯಾಬಿನೇಟ್ ಡೋರ್ ಅನ್ನು ಅಳವಡಿಸುವುದರ ಮೂಲಕ ವಸ್ತುಗಳನ್ನು ಇರಿಸಿಕೊಳ್ಳಬಹುದಾಗಿದೆ. ಸ್ವಚ್ಛಮಾಡುವ ಬ್ರಶ್‎‎ಗಳು, ದ್ರಾವಣಗಳು ಮತ್ತು ಲೋಶನ್‎ಗಳು ಅಥವಾ ಇತರ ಸ್ವಚ್ಛತಾ ಸಾಮಾಗ್ರಿಗಳನ್ನು ಈ ಸ್ಥಳದಲ್ಲಿ ಇರಿಸಿ.

ಕ್ಯಾಬಿನೇಟ್ ಮೇಲೆ
ಸಣ್ಣ ಅಡುಗೆ ಕೋಣೆಯಲ್ಲಿ ನಿಮಗೆ ಸ್ಥಳಾವಕಾಶ ಕೂಡ ಕಡಿಮೆ ಇರುತ್ತದೆ. ನಿಮ್ಮ ಸಣ್ಣ ಅಡುಗೆ ಕೋಣೆಯನ್ನು ನಿರ್ವಹಿಸುವುದು ಹೇಗೆ ಎಂಬುದನ್ನು ನೀವು ಅರಿತಿದ್ದರೆ, ಇಲ್ಲಿದೆ ಉತ್ತಮ ಉಪಾಯ! ಕ್ಯಾಬಿನೇಟ್ ಮೇಲ್ಭಾಗವನ್ನು ಅಲ್ಲಿನ ಸ್ಥಳವನ್ನು ಅರಿತುಕೊಂಡು ವಸ್ತುಗಳನ್ನು ಇರಿಸಲು ಬಳಸಿಕೊಳ್ಳಿ

ಬಾಸ್ಕೆಟ್‎ಗಳು ಮತ್ತು ಹೋಲ್ಡರ್‎ಗಳು
ನಿಮ್ಮ ಕ್ಯಾಬಿನೇಟ್‎ಗಳ ಬದಿಯಲ್ಲಿ ಬಾಸ್ಕೆಟ್ಸ್ ಅಥವಾ ಹೋಲ್ಡರ್‎ಗಳನ್ನು ಇರಿಸಿಕೊಳ್ಳಿ. ನಿಮ್ಮ ಸಣ್ಣ ಅಡುಗೆ ಮನೆಯಲ್ಲಿ ಇದೊಂದು ಉತ್ತಮ ಸಂಗ್ರಹಣಾ ಸ್ಥಳವಾಗಿ ಕಾರ್ಯನಿರ್ವಹಿಸಲಿದೆ. ಇಂತಹವುಗಳನ್ನು ಇಲ್ಲಿ ಅಳವಡಿಸಿಕೊಳ್ಳುವುದು ನಿಮ್ಮ ಸಾಕಷ್ಟು ವಸ್ತುಗಳನ್ನು ಇಲ್ಲಿ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ.

ಲೇಜಿ ಸುಸಾನ್ ಕ್ಯಾಬಿನೇಟ್
ಲೇಜಿ ಸುಸಾನ್ ಕ್ಯಾಬಿನೇಟ್ ಅನ್ನು ಅಳವಡಿಸುವುದು ಅದ್ಭುತ ಉಪಾಯವಾಗಿದೆ. ನಿಮ್ಮ ಕ್ಯಾಬಿನೇಟ್‎ಗಳ ಮೂಲೆಯನ್ನು ಇಲ್ಲಿ ಬಳಸಿಕೊಳ್ಳಬಹುದು. ದೊಡ್ಡ ಅಡುಗೆ ಮನೆಯ ಪರಿಕರಗಳನ್ನು ಇರಿಸಲು ಇದು ನಿಮಗೆ ಸ್ಥಳಾವಕಾಶವನ್ನು ಒದಗಿಸುತ್ತದೆ. ಜಾಗ ಸಿಕ್ಕಂತೆ, ವಸ್ತುಗಳನ್ನು ಜೋಡಿಸಿಕೊಳ್ಳಲು ಸಣ್ಣ ವಿಭಾಗಗಳನ್ನಾಗಿ ಮಾಡಿಕೊಳ್ಳಬಹುದಾಗಿದೆ. ಅಡುಗೆ ಸೋಡಾದಿಂದ ಅಡುಗೆ ಮನೆ ಸಿಂಕ್ ಶುಚಿಗೊಳಿಸುವುದು

ಫೋಲ್ಡ್ ಮಾಡಬಹುದಾದ ಟೇಬಲ್
ಬ್ರೇಕ್‎ಫಾಸ್ಟ್ ಟೇಬಲ್ ಬೇಡ ಎಂದಾದಲ್ಲಿ ನಿಮ್ಮ ಸಣ್ಣ ಅಡುಗೆ ಕೋಣೆಯಲ್ಲಿ ಇದನ್ನು ಇರಿಸಿಕೊಳ್ಳಬೇಡಿ. ಫೋಲ್ಡ್ ಮಾಡಬಹುದಾದ ಕುರ್ಚಿಯನ್ನು ಗೋಡೆಯಲ್ಲಿ ಅಳವಡಿಸಿ ಮತ್ತು ನಿಮಗೆ ಬೇಕಾದಾಗ ಇದನ್ನು ಬಳಸಿಕೊಳ್ಳಬಹುದಾಗಿದೆ. ಅಡುಗೆ ಕೋಣೆಯಲ್ಲಿ ನಿಮ್ಮ ಕುಟುಂಬದ ಸ್ವಲ್ಪ ಹೊತ್ತು ಕಳೆಯಲು ಇಲ್ಲಿ ಅನುಕೂಲಕರವಾಗಿರುತ್ತದೆ.

English summary

Tips To Manage Things In A Small Kitchen

Kitchen is the space where women spend the major part of their day. It is natural that you would want it to be more convenient and spacious. However, unfortunately, this might not be true for some of you. This usually happens when you are living in a flat or a rented house, when you cannot build a kitchen as per your plan. But, don’t worry! You still have wise options and ways to manage things in a small kitchen.
X
Desktop Bottom Promotion