For Quick Alerts
ALLOW NOTIFICATIONS  
For Daily Alerts

ಮನೆಯ ಗೋಡೆಯ ಸ್ವಚ್ಛತೆಗೂ ಸ್ವಲ್ಪ ಆದ್ಯತೆ ನೀಡಿ

By Jaya subramanya
|

ಮನೆ ಮಂದಿರದಂತೆ ಇರಬೇಕೆಂಬ ಮಾತಿದೆ. ಮಂದಿರವೆಂದರೆ ನಾವು ದೇವರನ್ನು ಪೂಜಿಸುವಂತಹ ಸ್ಥಳ. ಅಲ್ಲಿ ಎಲ್ಲವೂ ಅಚ್ಚುಕಟ್ಟಾಗಿ ಹಾಗೂ ಸ್ವಚ್ಛವಾಗಿರುತ್ತದೆ. ಮನೆ ಕೂಡ ಅದೇ ರೀತಿಯಲ್ಲಿ ಇರಬೇಕೆಂದು ಪ್ರತಿಯೊಬ್ಬರು ಬಯಸುತ್ತಾರೆ. ಅಷ್ಟೇ ಏಕೆ ಮನೆಯ ಒಳಾಂಗಣ ಅಲಂಕಾರಕ್ಕೆ ಪೀಠೋಪಕರಣ, ಕಿಟಕಿ ಪರದೆಗಳು, ಟೀವಿ ಸ್ಟ್ಯಾಂಡ್, ಅಲಂಕಾರಿಕಾ ವಸ್ತುಗಳನ್ನು, ಸ್ವಚ್ಛಗೊಳಿಸುವುದರ ಜೊತೆಗೆ ಶಿಸ್ತು ಬದ್ಧವಾಗಿಟ್ಟುಕೊಳ್ಳಲು ಹೆಚ್ಚಿನ ಪ್ರಾಮುಖ್ಯತೆಯನ್ನು ವಯಿಸುತ್ತಾರೆ.

ಪ್ರತಿಯೊಬ್ಬರ ಮನೆಯಲ್ಲೂ ಅಷ್ಟೇ, ಮನೆಯ ಸ್ವಚ್ಛತೆ ವಿಷಯಕ್ಕೆ ಬಂದಾಗ, ಇವೆಲ್ಲಾ ಮಾಮೂಲು, ಆದರೆ ಇವುಗಳನ್ನೆಲ್ಲಾ ಅಚ್ಚುಕಟ್ಟಾಗಿ ಇಟ್ಟುಕೊಂಡ ಮಾತ್ರಕ್ಕೆ, ಮನೆಯ ಅಂದ ಹೆಚ್ಚಲಿದೆ ಎಂದು ಹೇಳಿಕೊಳ್ಳಲಾಗದು. ಯಾಕೆಂದರೆ, ಇದಕ್ಕಿಂತಲೂ ಹೆಚ್ಚಾಗಿ, ಗೋಡೆಯ ಮೇಲಿನ ಕೊಳೆ, ಧೂಳನ್ನು ನಿವಾರಿಸಲು ಕೂಡ ಅಷ್ಟೇ ಪ್ರಾಮುಖ್ಯತೆಯನ್ನು ನೀಡುವುದು ಅತ್ಯಗತ್ಯ. ಗೋಡೆ ಮೇಲೆ ಚಿತ್ತಾರ ಬಿಡಿಸಿವೆ ಭಾವಚಿತ್ರಗಳು
ಅದರಲ್ಲೂ ಗೋಡೆಯ ಮೇಲು೦ಟಾಗುವ ಬಣ್ಣರಹಿತ ಗುರುತುಗಳು ನಿಮ್ಮ ಮನೆಯ ಸೌ೦ದರ್ಯವನ್ನು ಮತ್ತಷ್ಟು ಕಳಾಹೀನವಾಗಿಸಲು ತಮ್ಮದೇ ಕಾಣಿಕೆಯನ್ನು ನೀಡುತ್ತವೆ ಎಂಬುದನ್ನು ಮರೆಯದಿರಿ. ಹಾಗಾದರೆ ಇದಕ್ಕೆ ಪರಿಹಾರವಿಲ್ಲವೇ? ಖಂಡಿತವಾಗಿಯೂ ಇದೆ ಈ ಎಲ್ಲಾ ಕಿರಿಕಿರಿಯನ್ನು ತಪ್ಪಿಸಲು ಸೂಚಿಸಲಿರುವ ಈ ಕೆಳಗಿನ ಸಲಹೆಗಳನ್ನು ಪಾಲಿಸುವುದರ ಮೂಲಕ ನಿಮ್ಮ ಮನೆಯ ಗೋಡೆಗಳನ್ನು ನವನವೀನವಾಗಿಟ್ಟುಕೊಳ್ಳಿರಿ.

How To Clean Painted Walls With Vinegar

ವಿನೆಗರ್ ಮತ್ತು ನೀರು
ನಿಮ್ಮ ತ್ವಚೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡುವ ವಿನೇಗರ್ ಗೋಡೆಯ ಸ್ವಚ್ಛತೆಯನ್ನು ಕಾಪಾಡುತ್ತದೆ. 1/4 ಕಪ್ ಬಿಳಿ ವಿನೇಗರ್‌ಗೆ 1 ಕಾಲು ಭಾಗದಷ್ಟು ಬೆಚ್ಚಗಿನ ನೀರನ್ನು ಬೆರೆಸಿಕೊಂಡು ಮಿಶ್ರಣವನ್ನು ಸಿದ್ಧಪಡಿಸಿಕೊಳ್ಳಿ. ಇದನ್ನು ಚೆನ್ನಾಗಿ ಮಿಶ್ರ ಮಾಡಿಕೊಂಡು ಬಟ್ಟೆಯನ್ನು ಈ ದ್ರಾವಣದೊಳಗೆ ಅದ್ದಿಕೊಂಡು ಗೋಡೆಗಳನ್ನು ಒರೆಸಿ. ಮನೆಯ ಬಿಳಿ ಗೋಡೆಗಳ ಮೇಲಿನ ಕಲೆಗಳನ್ನು ನಿವಾರಿಸುವುದು ಹೇಗೆ?

ವಿನೆಗರ್ ಮತ್ತು ಡಿಟರ್ಜೆಂಟ್
ನಿಮ್ಮ ಮನೆಯ ಗೋಡೆಗಳಲ್ಲಿ ಹೆಚ್ಚು ಕಲೆ ಮತ್ತು ಧೂಳು ಉಂಟಾಗಿದೆ ಎಂದಾದಲ್ಲಿ, ಕ್ಲೀನಿಂಗ್ ಡಿರ್ಟರ್ಜೆಂಟ್ ಅನ್ನು ಬಳಸಿಕೊಂಡು ಗೋಡೆಯ ಸ್ವಚ್ಛತೆಯನ್ನು ಮಾಡಬಹುದಾಗಿದೆ. ಬಿಳಿ ವಿನೆಗರ್ ಮತ್ತು ನೀರು ಈ ಕೆಲಸವನ್ನು ಸೂಕ್ತವಾಗಿ ಮಾಡುತ್ತವೆ. ಈ ಮಿಶ್ರಣವನ್ನು 10 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ಅದನ್ನು ತೊಳೆಯಿರಿ.

ವಿನೆಗರ್ ಸ್ಪಾಟ್ ಟ್ರೀಟ್‌ಮೆಂಟ್
ವಿನೆಗರ್ ಮತ್ತು ನೀರಿನ ದ್ರಾವಣ ಮಿಶ್ರಣವನ್ನು ಸಿದ್ಧಪಡಿಸಿ. ಸ್ಪ್ರೇ ಬಾಟಲ್‌ನಲ್ಲಿ ಇದನ್ನು ಸಂಗ್ರಹಿಸಿ. ಸ್ಪ್ರೇ ಮಾಡಿದ ನಂತರ, ಗೋಡೆಯಲ್ಲಿ ಹಾಗೆಯೇ ಬಿಟ್ಟು ಬಿಡಿ ಇದರಿಂದ ಕೊಳೆ ತೆಗೆಯುವ ನಿಮ್ಮ ಕ್ರಿಯೆಯನ್ನು ಸುಲಭವಾಗಿ ಮಾಡಬಹುದಾಗಿದೆ.

ವಿನೆಗರ್ ಮತ್ತು ಬೇಕಿಂಗ್ ಸೋಡಾ

ಕ್ಲೀನಿಂಗ್ ಏಜೆಂಟ್‌ನಂತೆ ಕೆಲಸ ಮಾಡಲು, ವಿನೆಗರ್ ಮತ್ತು ಬೇಕಿಂಗ್ ಸೋಡಾ ಅತ್ಯುತ್ತಮವಾದುದಾಗಿದೆ. ಇವೆರಡನ್ನೂ ಮಿಶ್ರ ಮಾಡಿಕೊಂಡು ನಿಮ್ಮ ಕೆಲಸವನ್ನು ನೆರವೇರಿಸಿಕೊಳ್ಳಬಹುದಾಗಿದೆ. ವಿನೆಗರ್‌ನ ಎರಡು ಭಾಗದಷ್ಟನ್ನು ತೆಗೆದುಕೊಂಡು, ಒಂದು ಭಾಗದಷ್ಟು ಬೇಕಿಂಗ್ ಸೋಡಾವನ್ನು ಮಿಶ್ರ ಮಾಡಿಕೊಳ್ಳಿ ಇದಕ್ಕೆ ಮೂರು ಭಾಗದಷ್ಟು ಬೆಚ್ಚಗಿನ ನೀರನ್ನು ಬಳಸಿ ಇದರಿಂದ ಕ್ಲೀನಿಂಗ್ ದ್ರಾವಣವನ್ನು ಸಿದ್ಧಪಡಿಸಿಕೊಳ್ಳಬಹುದಾಗಿದೆ.

ಕರ್ವ್ಸ್ ಮತ್ತು ಕಾರ್ವಿಂಗ್ಸ್
ಮೂಲೆಯನ್ನು ಸ್ವಚ್ಛಮಾಡಲು ಸ್ಪ್ರೇ ಬಾಟಲ್ ಅತ್ಯುತ್ತಮವಾದುದು. ಸ್ಪ್ರೇ ಮಾಡಿದ ನಂತರ ದ್ರಾವಣವನ್ನು ಹಾಗೆಯೇ ಬಿಡಿ. ಆ ಪ್ರದೇಶವನ್ನು ಸ್ವಚ್ಛಮಾಡಲು ಬಟ್ಟೆಯನ್ನು ಬಳಸಿಕೊಳ್ಳಿ. ಬಟ್ಟೆಯ ಬ್ರಶ್ ಅನ್ನು ಬಳಸಿಕೊಂಡು ಸ್ವಚ್ಛತೆಯನ್ನು ಮಾಡಿಕೊಳ್ಳಿ.

ಮರದ ಫಲಕ ಜೋಡಣೆ
ನೀವು ಮರದ ಫಲಕ ಜೋಡಣೆಯನ್ನು ಹೊಂದಿದ್ದು ಪೇಂಟ್ ಮಾಡಿದ ಗೋಡೆಯನ್ನು ಸ್ವಚ್ಛಮಾಡಬೇಕು ಎಂದಾದಲ್ಲಿ ತೆಳುವಾದ ವಿನೇಗರ್ ಅನ್ನು ಬಳಸಿಕೊಳ್ಳಿ ಈ ವಿನೆಗರ್ ದ್ರಾವಣಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ ಇದು ಮರವನ್ನು ಕಾಪಾಡುತ್ತದೆ ಮತ್ತು ಹೊಳೆಯುವಂತೆ ಮಾಡುತ್ತದೆ.

ಆಯಿಲ್ ಆಧಾರಿತ ಪೇಂಟ್

ಆಯಿಲ್ ಆಧಾರಿತ ಪೇಂಟ್‌ಗಳಿಗೆ ವಿನೆಗರ್ ಅತ್ಯುತ್ತಮವಾಗಿದೆ. ರಚನೆಯುಳ್ಳ ಪೇಂಟ್ ಮಾಡಿದ ಗೋಡೆಗಳು ಹೆಚ್ಚು ಧೂಳು ಮತ್ತು ಕೊಳೆಯನ್ನು ಹೊಂದಿರುತ್ತದೆ. ವಿನೆಗರ್ ದ್ರಾವಣವನ್ನು ಬಳಸಿಕೊಂಡು ಆಳವಾದ ಕ್ಲೀನಿಂಗ್ ಅನ್ನು ಮಾಡಬೇಕಾಗುತ್ತದೆ. ವಿನೆಗರ್‌ನಿಂದ ಪೇಂಟ್ ಮಾಡಿದ ಗೋಡೆಯನ್ನು ಹೇಗೆ ಸ್ವಚ್ಛಮಾಡುವುದು ಎಂಬುದು ನಿಮ್ಮ ಸಮಸ್ಯೆಯಾಗಿದೆ ಎಂದಾದಲ್ಲಿ, ಮೊದಲಿಗೆ ಗೋಡೆಯನ್ನು ಮೇಲಿನಿಂದ ಕೆಳಕ್ಕೆ ಒರೆಸಿ. ಇದು ಕೊಳೆಯಾದ ಗೋಡೆಯನ್ನು ಸ್ವಚ್ಛಮಾಡುತ್ತದೆ.
English summary

How To Clean Painted Walls With Vinegar

Clean and beautiful walls are the direct reflection of your attitude towards housekeeping. Chances are more that you will face difficulties in keeping your walls neat if you have kids around. So, try out these tips to clean painted walls with some instant homemade vinegar formula to keep your walls clean and shining.
Story first published: Tuesday, July 26, 2016, 20:12 [IST]
X
Desktop Bottom Promotion