ಹಣ್ಣನ್ನು ಆಕ್ರಮಿಸುವ ನೊಣಗಳಿಂದ ಸಂರಕ್ಷಣೆ ಹೇಗೆ?

By: Jaya subramanya
Subscribe to Boldsky

ನೀವು ಸೇವಿಸುವ ಆಹಾರಗಳನ್ನು ಎಷ್ಟೇ ತಾಜಾತನದಿಂದ ಕಾಪಾಡಿದರೂ ಅವುಗಳನ್ನು ಮುತ್ತುವ ಕ್ರಿಮಿಕೀಟಗಳು ಮತ್ತು  ನೊಣಗಳಿಂದ ರಕ್ಷಣೆಗಳನ್ನು ಪಡೆದುಕೊಳ್ಳಲು ನೀವು ಹರಸಾಹಸವನ್ನೇ ಪಡುತ್ತಿದ್ದೀರಿ ಎಂಬುದು ನಮಗೆ ತಿಳಿದಿದೆ.

ಇವುಗಳು ಹಣ್ಣು ಮತ್ತು ತರಕಾರಿಗಳಿಗೆ ಆಕರ್ಷಿತವಾಗಿ ಬಂದು ಅವುಗಳನ್ನು ಆಕ್ರಮಿಸಿಕೊಂಡರೂ ನಾವು ಸೇವಿಸುವ ಇದೇ ಹಣ್ಣು ತರಕಾರಿಗಳು ವಿಷಕಾರಿಯಾಗಿ ಪರಿಣಮಿಸಬಹುದಾಗಿದೆ. ಇವುಗಳು ಎಷ್ಟು ಬೇಗನೇ ಬಂದು ತಮ್ಮ ಕೆಲಸಗಳನ್ನು ಮುಗಿಸಿಕೊಂಡು ಹೋಗುತ್ತವೆ ಎಂದರೆ ನಮಗೆ ಇದರ ಬಗ್ಗೆ ಅರಿವೇ ಇರುವುದಿಲ್ಲ. ನೊಣಗಳನ್ನು ಹೋಗಲಾಡಿಸಲು 16 ಮನೆಮದ್ದುಗಳು   

fruits
 

ಇವುಗಳಿಗೆ ರಾಸಾಯನಿಕಗಳು ಬಿಸಿ ಮುಟ್ಟಿಸುತ್ತವೆಯಾದರೂ ಇದರಿಂದ ನಮ್ಮ ಆರೋಗ್ಯ ಇನ್ನಷ್ಟು ಹದಗೆಡುವುದಂತೂ
ಗ್ಯಾರಂಟಿ. ಹಾಗಿದ್ದರೆ ಮನೆಯಲ್ಲೇ ದೊರೆಯುವ ಸಾಮಾಗ್ರಿಗಳನ್ನು ಬಳಸಿಕೊಂಡು ಇಂತಹ ನೊಣಗಳ ಮತ್ತು ಕೀಟಗಳ ಮೇಲೆ ನಿಯಂತ್ರಣವನ್ನು ಸಾಧಿಸುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ. ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ಈ ಪರಿಹಾರ ಕ್ರಮಗಳು ಅಷ್ಟೊಂದು ಖರ್ಚನ್ನು ಉಂಟುಮಾಡದೇ ಮಿತದರದಲ್ಲಿ ನಿಮಗೆ ಸಹಕಾರವನ್ನು ನೀಡಲಿದೆ.

apple cider vinegar
 

ಆಪಲ್ ಸೀಡರ್ ವಿನೇಗರ್
ಹಣ್ಣನ್ನು ಆಕ್ರಮಿಸುವ ನೊಣಗಳಿಗೆ ಇದು ಪರಿಹಾರವನ್ನೊದಗಿಸುತ್ತದೆ. ಜಾರ್‎ಗೆ ಆಪಲ್ ಸೀಡರ್ ವಿನೇಗರ್ ಅನ್ನು ಹಾಕಿ. ಇದು ಪರಿಮಳ ಬೀರಲು ಇದನ್ನು ಬಿಸಿ ಮಾಡಿಕೊಳ್ಳಿ. ಪಾತ್ರೆ ತೊಳೆಯುವ ಸೋಪ್ ಅನ್ನು ಇದಕ್ಕೆ ಅದ್ದಿಕೊಳ್ಳಿ. ಇದು ನೊಣಗಳನ್ನು ಕೊಲ್ಲುತ್ತದೆ. ಪ್ಲಾಸ್ಟಿಕ್‎ನಿಂದ ಇದನ್ನು ಸುತ್ತಿ ಮತ್ತು ಫೋರ್ಕ್ ಬಳಸಿ ಸಣ್ಣ ತೂತು ಮಾಡಿ ಇದರಿಂದ ನೊಣ ಒಳಪ್ರವೇಶಿಸುತ್ತದೆ.

ಕೊಳೆತ ಹಣ್ಣುಗಳು
ಕೊಳೆತ ಹಣ್ಣುಗಳನ್ನು ಸೇವಿಸಲು ಸಾಧ್ಯವಿಲ್ಲ ಆದರೆ ಇವುಗಳನ್ನು ನೊಣ ಹಿಡಿಯಲು ಬಳಸಿಕೊಳ್ಳಬಹುದಾಗಿದೆ. ಇವುಗಳನ್ನು ತುಂಡುಗಳನ್ನಾಗಿ ಮಾಡಿ ಮತ್ತು ಮಾಸನ್‎ಗೆ ಹಾಕಿ. ಪ್ಲಾಸ್ಟಿಕ್‎ನಿಂದ ಸುತ್ತಿ ಮತ್ತು ಅದಕ್ಕೆ ತೂತು ಮಾಡಿ. ಸ್ವಲ್ಪ ಹೊತ್ತಿನ ಬಳಿಕ ನೊಣಗಳನ್ನು ಇಲ್ಲಿ ಕಾಣುತ್ತೀರಿ. ನಂತರ ಸೋಪು ನೀರಿನಲ್ಲಿ ಇದನ್ನು ಮುಳುಗಿಸಿ. 

milk
 

ಹಾಲು, ಸಕ್ಕರೆ ಮತ್ತು ಕಾಳುಮೆಣಸಿನ ದ್ರಾವಣ
ಹಣ್ಣುಗಳ ನೊಣಗಳಿಂದ ಪರಿಹಾರವನ್ನು ಕಂಡುಕೊಳ್ಳಲು ನೈಸರ್ಗಿಕ ವಿಧಾನ ನಿಮಗೆ ಬೇಕಾದಲ್ಲಿ ಇಲ್ಲಿದೆ ಪರಿಹಾರ. ಹಾಲು, ಹುಡಿಮಾಡಿದ ಕಾಳುಮೆಣಸು ಮತ್ತು ಸಕ್ಕರೆಯನ್ನು ಬಳಸಿ ದ್ರಾವಣ ಸಿದ್ಧಪಡಿಸಿ. ಮಂದ ಉರಿಯಲ್ಲಿ 10-12 ನಿಮಿಷ ಬಿಸಿ ಮಾಡಿ. ಹೆಚ್ಚಿನ ನೊಣಗಳನ್ನು ಕಾಣುವ ಸ್ಥಳದಲ್ಲಿ ಈ ದ್ರಾವಣವನ್ನು ಇರಿಸಿ. ಸ್ವಲ್ಪ ಸಮಯದಲ್ಲೇ ನೊಣಗಳ ಹಿಂಡನ್ನೇ ಈ ದ್ರಾವಣದಲ್ಲಿ ಕಾಣುತ್ತೀರಿ. ನಂತರ ಅದನ್ನು ತೊಳೆದುಕೊಳ್ಳಿ.  

Red wine
 

ಕೆಂಪು ವೈನ್
ಆಪಲ್ ಸೀಡರ್ ವಿನೇಗರ್ ಅನ್ನು ನೀವು ಹೇಗೆ ಬಳಸಿಕೊಂಡಿದ್ದಿರೋ ಅಂತೆಯೇ ಕೆಂಪು ವೈನ್ ಅನ್ನು ನೊಣಗಳ ನಾಶಕ್ಕಾಗಿ ಬಳಸಿ. ಕೆಂಪು ವೈನ್‎ನ ಸುವಾಸನೆ ನೊಣಗಳಿಗೆ ಇಷ್ಟವಾಗುತ್ತದೆ. ನೀರು ಮತ್ತು ವೈನ್ ಅನ್ನು ಬಳಸಿಕೊಂಡು ದ್ರಾವಣವನ್ನು ಸಿದ್ಧಪಡಿಸಿ ಮತ್ತು ಜಾರ್‎ಗೆ ಇದನ್ನು ಹಾಕಿ. ಸತ್ತ ನೊಣಗಳನ್ನು ನೀವು ಜಾರ್‎ನಲ್ಲಿ ಕಂಡೊಡನೆ ಪಾತ್ರೆಯನ್ನು ನೀರಿನಿಂದ ತೊಳೆದುಕೊಳ್ಳಿ.

ಲಿಂಬೆ ಸುವಾಸನೆಯ ಸೋಪು
ನೊಣಗಳಿಂದ ಸಂರಕ್ಷಣೆಯನ್ನು ಪಡೆದುಕೊಳ್ಳಲು ಇದು ಸರಳ ವಿಧಾನವಾಗಿದೆ. ಸೋಪಿನ ಸುವಾಸನೆಯು ಹೆಚ್ಚು ಪ್ರಮಾಣದಲ್ಲಿ ನೊಣಗಳನ್ನು ಆಕರ್ಷಿಸುತ್ತದೆ. ಸೋಪಿನ ದ್ರಾವಣವನ್ನು ಮಾಡಿಕೊಳ್ಳಿ ಮತ್ತು ಸ್ಪ್ರೇ ಬಾಟಲಿಗೆ ಇದನ್ನು ಹಾಕಿ. ನಿಮ್ಮ ಮನೆಯ ಮೂಲೆಗೂ ಇದನ್ನು ಸ್ಪ್ರೇ ಮಾಡಿ.

vegetable oil
 

ವೆಜಿಟೇಬಲ್ ಆಯಿಲ್
ನಿಮ್ಮ ಅಡುಗೆ ಮನೆಯ ಸಿಂಕ್ ಮೂಲೆಯಿಂದ ನೊಣಗಳು ಬರುತ್ತವೆ ಎಂದಾದಲ್ಲಿ ವೆಜಿಟೇಬಲ್ ಆಯಿಲ್ ನಿಮಗೆ
ಸಹಕಾರಿಯಾಗಿದೆ. ತೂತಿಗೆ 1/2 ಕಪ್‎ನಷ್ಟು ವೆಜಿಟೇಬಲ್ ಆಯಿಲ್ ಅನ್ನು ಸುರಿಯಿರಿ ಮತ್ತು ಟೇಪ್‎ನಿಂದ ಇದನ್ನು ಕವರ್ ಮಾಡಿ. ಟೇಪ್‎ನಲ್ಲಿ ಸತ್ತಿರುವ ನೊಣಗಳನ್ನು ನೀವು ಕಾಣುತ್ತೀರಿ. ಇದೇ ಕ್ರಿಯೆಯನ್ನು ಮುಂದುವರಿಸಿ. ಹಣ್ಣಿನ ನೊಣಗಳಿಂದ ಸಂರಕ್ಷಣೆಯನ್ನು ಪಡೆದುಕೊಳ್ಳಲು ಇವುಗಳು ಸುರಕ್ಷಿತ ವಿಧಾನಗಳಾಗಿವೆ ಅಲ್ಲವೇ? ಇವುಗಳನ್ನು ಪ್ರಯೋಗಿಸುವ ಮೂಲಕ ನಿಮ್ಮ ಸುತ್ತಲಿನ ಪರಿಸರವನ್ನು ನೀವು ಸ್ವಚ್ಛವಾಗಿರಿಸಬಹುದು ಅಲ್ಲವೇ?

English summary

Home Ingredients To Get Rid Of Fruit Flies

Dealing with fruit flies is really annoying. It is not difficult to kill them always easily. People use toxic ingredients to get rid of them; however, those chemicals are harmful to you too, especially if you have kids, elderly persons or pets in your house. Why not use home ingredients to get rid of fruit flies then? have a look
Please Wait while comments are loading...
Subscribe Newsletter