For Quick Alerts
ALLOW NOTIFICATIONS  
For Daily Alerts

ಮನೆಯ ಕೀಟಗಳನ್ನು ನಾಶಮಾಡಲು ಈ ವಿಧಾನ ಅನುಸರಿಸಿ

By CM prasad
|

ನಿಮ್ಮ ಮನೆಯು ಸದಾ ಸ್ವಚ್ಛವಾಗಿದ್ದರೆ ಯಾವುದೇ ಕೀಟಗಳು, ಸೊಳ್ಳೆಗಳು ಹತ್ತಿರ ಸುಳಿಯುವುದಿಲ್ಲ. ಸ್ವಚ್ಛತೆಯನ್ನು ಉದಾಸೀನ ಮಾಡಿದರೆ ಅನವಶ್ಯಕ ಕೀಟಗಳು ತಾನಾಗಿಯೇ ಮನೆಗೆ ಆಗಮಿಸುತ್ತವೆ. ಕೀಟಗಳು ಹೆಚ್ಚಾದರೆ ಹೆಚ್ಚು ಕಿರಿಕಿರಿಯುಂಟಾಗುತ್ತದೆ. ಇದರಿಂದ ಮನಸ್ಸಿಗೂ ಕರಿಕಿರಿ ಅನುಭವವಾಗುತ್ತದೆ. ಕೀಟಗಳನ್ನು ನಾಶಮಾಡಲು ಸ್ವಲ್ಪ ತಲೆ ಉಪಯೋಗಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಕೀಟಗಳನ್ನು ನಾಶಮಾಡಲು ಅನೇಕ ಮಾರ್ಗಗಳಿವೆ. ಹೆಚ್ಚಿನವರು ರಾಸಾಯನಿಕ ಉತ್ಪನ್ನಗಳನ್ನು ಬಳಸಲು ಹಿಂಜರಿಯುತ್ತಾರೆ. ಅಡುಗೆ ಮನೆಯಲ್ಲಿರುವ ಅಕ್ಕಿ,ಧಾನ್ಯ ಕೀಟಗಳ ಪಾಲಾಗುತ್ತಿವೆಯೇ?

ರಾಸಾಯನಿಕ ಅಂಶಗಳು ಆಹಾರ ಪದಾರ್ಥಗಳಿಗೆ ಬೆರೆತುಕೊಂಡರೆ ಅಪಾಯ ಎಂದು ಅವುಗಳಿಂದ ದೂರವಿರುತ್ತಾರೆ ಜೊತೆಗೆ ಮಕ್ಕಳಿದ್ದರೂ ಸಹ ಅಪಾಯ ಉಂಟಾಗಬಹುದೆಂದು ಹಿಂಜರಿಯುತ್ತಾರೆ. ಹೀಗಿರುವಾಗ ನೈಸರ್ಗಿಕ ವಿಧಾನಗಳನ್ನು ಅನುಸರಿಸಿ ಸುಲಭವಾಗಿ ಕೀಟಗಳನ್ನು ನಾಶಮಾಡಬಹುದು. ನಾವು ತಿಳಿಸುವ ಕೆಲವು ಅವಶ್ಯಕ ಎಣ್ಣೆಗಳನ್ನು ಬಳಸಿ ಕೀಟಗಳಿಂದ ನಿಮ್ಮ ಮನೆಯನ್ನು ಮುಕ್ತಗೊಳಿಸಿರಿ. ವಿವರಗಳಿಗೆ ಮುಂದೆ ಓದಿ...

Essential oils that are effective pest repellents

ಪುದೀನಾ ಎಣ್ಣೆ
ನಿಮಗೆ ಇರುವೆಗಳ ಬರುವ ತೊಂದರೆಯಿದ್ದಲ್ಲಿ, 10 ಹನಿ ಅವಶ್ಯಕ ಎಣ್ಣೆಯನ್ನು ಇರುವೆಗಳು ಬರುವ ಮೂಲ ಸ್ಥಳದಲ್ಲಿ ಸಿಂಪಡಿಸಿ. ಇದನ್ನು ಸೊಳ್ಳೆನಾಶಕವಾಗಿಯೂ ಬಳಸಬಹುದು. ಆದರೆ ಇದರಿಂದ 60 ರಿಂದ 180 ನಿಮಿಷಗಳು ಮಾತ್ರ ಸೊಳ್ಳೆಗಳಿಂದ ದೂರವಿರಬಹುದು. ಈ ಎಣ್ಣೆಯನ್ನು ತೆಂಗಿನ ಎಣ್ಣೆ ಅಥವಾ ಆಲಿವ್ ತೈಲದ ಜೊತೆಗೆ ಬೆರೆಸಿ ಉಪಯೋಗಿಸುವುದನ್ನು ಮರೆಯದಿರಿ.

ಟ್ರೀ ಟ್ರೀ ತೈಲ
ಸಿಡ್ನಿ ವಿಶ್ವವಿದ್ಯಾಲಯದ ಸಂಶೋಧಕರು ಹೇಳುವ ಪ್ರಕಾರ, ಟೀ ಟ್ರೀ ತೈಲವನ್ನು ಸಿಟ್ರೊನೆಲ್ಲಾ ತೈಲದೊಂದಿಗೆ ಮಿಶ್ರಣ ಮಾಡಿಕೊಂಡರೆ, ಬೆನ್ಸೈಲ್ ಬೆನ್ಸೊವೇಟ್ ಅಂಶಕ್ಕಿಂತ ಪರಿಣಾಮಕಾರಿಯಾದ ಮಿಶ್ರಣವಾಗಲಿದ್ದು, ಇವುಗಳಿಂದ ನಿಮ್ಮ ಮನೆಯಲ್ಲಿ ಅಡಗಿರುವ ಕೀಟಗಳು ಮತ್ತು ಇತರೆ ಸೂಕ್ಷ್ಮ ಜೀವಿಗಳನ್ನು ಸುಲಭವಾಗಿ ನಾಶಮಾಡಬಹುದಾಗಿದೆ. ಕೈತೋಟದಲ್ಲಿ ಕೀಟಗಳ ಕಾಟವೇ? ಇನ್ನು ಚಿಂತೆ ಬಿಡಿ!

ಥೈಮ್ ತೈಲ

ನಿಮ್ಮ ಮನೆಯಲ್ಲಿ ವಿಶೇಷವಾಗಿ ಸಾಕುಪ್ರಾಣಿಗಳಿದ್ದಲ್ಲಿ, ಕೀಟ ಬಾದೆಯು ನಿಮ್ಮನ್ನು ಕಾಡುತ್ತಿದ್ದಲ್ಲಿ ಥೈಮ್ ತೈಲದ ಬಳಕೆ ಉತ್ತಮ ಉಪಾಯ ಗಳಲ್ಲೊಂದು. ಥೈಮ್ ತೈಲದಲ್ಲಿ ಅಡಗಿರುವ ಥೈಮೊಲ್ ಎಂಬ ಅಂಶವು ನಿಮ್ಮ ಮನೆಯ ಕೀಟಗಳನ್ನು ನಾಶಮಾಡಿ ಬರದಂತೆ ತಡೆಯುತ್ತದೆ ಎಂದು ಸಂಶೋಧಕರು ಅಭಿಪ್ರಾಯ ಪಡುತ್ತಾರೆ. ಅಲ್ಲದೇ ಇದು ಸೊಳ್ಳೆ ನಾಶಕವಾಗಿಯೂ ಬಳಸಬಹುದಾಗಿದೆ.

ಲ್ಯಾವೆಂಡರ್ ತೈಲ

ಅವಶ್ಯಕ ತೈಲಗಳು ದೇಹಕ್ಕೆ ಮತ್ತು ಮನಸ್ಸಿಗೆ ಹೆಚ್ಚು ಆಹ್ಲಾದಕರವನ್ನು ಉಂಟು ಮಾಡುತ್ತವೆ. ಅಲ್ಲದೇ ಇವುಗಳಿಂದ ಮನೆಯ ಕೀಟಗಳನ್ನು ಸಹ ನಾಶಮಾಡಬಹುದಾಗಿದೆ. ಈ ತೈಲದೊಂದಿಗೆ ಸೂರ್ಯಕಾಂತಿ ಎಣ್ಣೆಯನ್ನು ಬೆರೆಸಿಕೊಂಡು ಬಳಸಬಹುದಾಗಿದೆ. ಇಲ್ಲವಾದಲ್ಲಿ ನೀರು ಮಿಶ್ರಿತ ಲ್ಯಾವೆಂಡರ್ ತೈಲದ 10 ಹನಿಗಳನ್ನು ಕೀಟಗಳು ಮತ್ತು ಇರುವೆಗಳು ಬರುವ ಜಾಗಕ್ಕೆ ಸಿಂಪಡಿಸಿದರೆ ಸಾಕು ನಿಮ್ಮ ಮನೆಯು ಕೀಟಗಳಿಂದ ಮುಕ್ತವಾಗಲಿದೆ.
English summary

Essential oils that are effective pest repellents

Dealing with pests in your household can be an extremely nerve-wracking activity, especially if one has to call pest control services. However, most of us are hesitant with using chemicals or synthetic substances around the house, especially if there are kids or pets around. Instead, you could consider going green and using these seven essential oils to keep pests away from your house.
Story first published: Thursday, February 11, 2016, 16:54 [IST]
X
Desktop Bottom Promotion