For Quick Alerts
ALLOW NOTIFICATIONS  
For Daily Alerts

ಮನೆಯ ಶೌಚಾಲಯ ಸ್ವಚ್ಛತೆಗೆ ಇಲ್ಲಿದೆ ಸಿಂಪಲ್ ಟಿಪ್ಸ್

By Hemanth
|

ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಲು ಮೊದಲಾಗಿ ನಾವು ಶೌಚಾಲಯವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ತುಂಬಾ ಮುಖ್ಯ. ಶೌಚಾಲಯದ ಸ್ವಚ್ಛತೆಗೆ ನಾವು ಮಾರುಕಟ್ಟೆಯಿಂದ ರಾಸಾಯನಿಕಯುಕ್ತ ಕ್ಲೀನರ್ ಅನ್ನು ತರುತ್ತೇವೆ. ಆದರೆ ಕ್ಲೀನರ್ ಅನ್ನು ತೆಗೆದುಕೊಳ್ಳುವಾಗ ಯಾವತ್ತಾದರೂ ಅದರಲ್ಲಿರುವ ಲೇಬಲ್ ಅನ್ನು ನಾವು ಓದಿದ್ದೇವೆಯಾ? ಇಲ್ಲವೆಂದಾದರೆ ಅದನ್ನು ಓದುವುದು ಅತ್ಯಗತ್ಯವಾಗಿದೆ. ಅದರಲ್ಲೂ ಮನೆಯಲ್ಲಿ ಮಕ್ಕಳು ಇದ್ದವರು ಇದನ್ನು ಕಡ್ಡಾಯವಾಗಿ ಓದಲೇಬೇಕು.

ಯಾಕೆಂದರೆ ಇದರಲ್ಲಿ ಹಲವಾರು ರೀತಿಯ ರಾಸಾಯನಿಕಗಳನ್ನು ಸೇರಿಸಿರುತ್ತಾರೆ. ಇದರಿಂದ ಮಕ್ಕಳು ಹಾಗೂ ನಿಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗಬಹುದು. ಇಂತಹ ರಾಸಾಯನಿಕಗಳನ್ನು ಬಳಸುವ ಬದಲು ಮನೆಯಲ್ಲೇ ತಯಾರಿಸಿದ ಕ್ಲೀನರ್ ಅನ್ನು ಬಳಸಿದರೆ ಅದರಿಂದ ಆರೋಗ್ಯಕ್ಕೂ ಯಾವುದೇ ತೊಂದರೆ ಉಂಟಾಗದು. ಇಲ್ಲಿ ಕೊಟ್ಟಿರುವಂತಹ ಕೆಲವೊಂದು ಕ್ಲೀನರ್‌ಗಳನ್ನು ನೀವು ಆಯ್ಕೆ ಮಾಡಿಕೊಂಡು ನಿಯಮಿತವಾಗಿ ಬಳಸಿಕೊಳ್ಳಿ.

DIY Toilet Cleaner Recipes

ಬಿಳಿ ವಿನೇಗರ್
ವಿನೇಗರ್ ಅನ್ನು ಕೋಳಿ ಮಾಂಸದ ಅಡುಗೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಆದರೆ ಇದರಿಂದ ನಿಮ್ಮ ಶೌಚಾಲಯವು ಸ್ವಚ್ಛವಾಗುತ್ತದೆ ಎಂದು ನಿಮಗೆ ತಿಳಿದಿದೆಯಾ? ಇದರಲ್ಲಿರುವ ಆ್ಯಸಿಡ್ ಗುಣವು ಕಳೆಗಳನ್ನು ತೆಗೆದುಹಾಕುತ್ತದೆ. ಇದು ವಾಸನೆಯನ್ನು ದೂರ ಅಟ್ಟುತ್ತದೆ. ಆರೋಗ್ಯದ ದೃಷ್ಟಿಯಿಂದ ಇದನ್ನು ಬಳಸುವುದು ತುಂಬಾ ಸುರಕ್ಷಿತ.

ಟ್ರೀ ಟ್ರೀ ಎಣ್ಣೆ

ಚಹಾ ಮರದ ಎಣ್ಣೆಯನ್ನು ನೈಸರ್ಗಿಕ ಶೌಚಾಲಯ ಕ್ಲೀನರ್ ಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಅರ್ಧ ಕಪ್ ಬೇಕಿಂಗ್ ಸೋಡಾ ಮತ್ತು ಚಹಾ ಮರದ ಎಣ್ಣೆಗೆ ಒಂದು ಕಪ್ ನೀರು ಹಾಕಿಕೊಳ್ಳಿ. ಇದನ್ನು ಶೌಚಾಲಯಕ್ಕೆ ಸ್ಪ್ರೇ ಮಾಡಿ ಕೆಲವು ನಿಮಿಷದ ಬಳಿಕ ತೊಳೆದರೆ ಹೊಳಪಿನ ಶೌಚಾಲಯವನ್ನು ಕಾಣಬಹುದು. ಶೌಚಾಲಯದ ಬಗ್ಗೆ ನೀವು ತಿಳಿಯದೆ ಇರುವ ಸತ್ಯಾಸತ್ಯತೆ

ವಿನೇಗರ್ ಮತ್ತು ಬೇಕಿಂಗ್ ಸೋಡಾ
ಹೊಳೆಯುವ ಟಾಯ್ಲೆಟ್ ಸೀಟ್ ನಿಮಗೆ ಬೇಕಾಗಿದ್ದರೆ ಬೇಕಿಂಗ್ ಸೋಡಾ ಮತ್ತು ಬಿಳಿ ವಿನೇಗರ್ ನ್ನು ಮಿಶ್ರಣ ಮಾಡಿಕೊಂಡು ಅದನ್ನು ಟಾಯ್ಲೆಟ್ ಸೀಟ್ ಮೇಲೆ ಸಿಂಪಡಿಸಿ. ಶೌಚಾಲಯದ ನೆಲವನ್ನು ತೊಳೆಯಲು ಇದನ್ನು ಬಳಸಬಹುದು. ಸಿಂಪಡಿಸಿದ ಬಳಿಕ ಕೆಲವು ನಿಮಿಷ ಬಿಟ್ಟು ತೊಳೆಯಿರಿ.

ಉತ್ತಮ ದರ್ಜೆಯ ಸೋಪ್
ಯಾವುದೇ ಹಾನಿಕಾರವಿಲ್ಲದೆ ಶೌಚಾಲಯ ಸ್ವಚ್ಛ ಮಾಡಲು ಬಯಸುತ್ತಿದ್ದೀರಾ? ಹಾಗಾದರೆ ¼ ಕಪ್ ಉತ್ತಮ ದರ್ಜೆಯ ಸೋಪ್, ಅದಕ್ಕೆ ¾ ಕಪ್ ನೀರು, 2 ಚಮಚ ಬೇಕಿಂಗ್ ಸೋಡಾ ಮತ್ತು 10 ಹನಿ ಎಣ್ಣೆ ಹಾಕಿದ ಮಿಶ್ರಣವನ್ನು ಟಾಯ್ಲೆಟ್ ಗೆ ಹಾಕಿ ಬ್ರಶ್ ನಿಂದ ಉಜ್ಜಿದರೆ ನಿಮ್ಮ ಟಾಯ್ಲೆಟ್ ಫಲಫಲ ಹೊಳೆಯುವುದು. ರೋಗರುಜಿನಗಳು ಹರಡಲು ಶೌಚಾಲಯಗಳೇ ಮೂಲ ಕಾರಣ! ರೋಗರುಜಿನಗಳು ಹರಡಲು ಶೌಚಾಲಯಗಳೇ ಮೂಲ ಕಾರಣ!

ಶೌಚಾಲಯವನ್ನು ಸ್ವಚ್ಛ ಮಾಡಬಲ್ಲ ಮನೆಯಲ್ಲಿ ತಯಾರಿಸಿ ಟಾಯ್ಲೆಟ್ ಕ್ಲೀನರ್‌ಗಳ ಬಗ್ಗೆ ಇಲ್ಲಿ ಹೇಳಿದ್ದೇವೆ. ದುರ್ವಾಸನೆಯನ್ನು ದೂರ ಮಾಡಲು ಟಾಯ್ಲೆಟ್ ರಿಫ್ರೆಶ್ನರ್‌ ಅನ್ನು ಬಳಸಿ. ವಿವಿಧ ಸುಗಂಧಗಳಲ್ಲಿ ರಿಫ್ರೆಶ್ನರ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರಿಂದ ಶೌಚಾಲಯ ಸ್ವಚ್ಛವಾಗಿರುವುದು ಮಾತ್ರವಲ್ಲದೆ ದುರ್ವಾಸನೆಯೂ ದೂರವಾಗುವುದು.

English summary

DIY Toilet Cleaner Recipes

Have you ever gone through the label of a chemical toilet cleaner? If you have ever checked the ingredients, you will know how dangerous those ingredients can be to your health. Especially, if you have children in your house, you have to be double sure that they stay away from those dangerous products. That's why it is always better to opt for homemade ingredients, which are more safer and inexpensive. Therefore, here are some DIY toilet cleaner recipes that you must have a look at and also use regularly. Have a look.
Story first published: Wednesday, July 13, 2016, 20:36 [IST]
X
Desktop Bottom Promotion