For Quick Alerts
ALLOW NOTIFICATIONS  
For Daily Alerts

ಕಾಫಿ ಕಲೆಯನ್ನು ಚಕ್ಕನೆ ನಿವಾರಿಸಲು ಸರಳ ಟಿಪ್ಸ್

By Jaya subramanya
|

ಅಬ್ಬಾ ಕಾಫಿಯ ಸಣ್ಣ ಹನಿ ನಮ್ಮ ಬಟ್ಟೆಗೆ ಬಿತ್ತೆಂದರೆ ಕಥೆ ಮುಗಿದಂತೆಯೆ! ಆ ಕಲೆಯನ್ನು ನೀಗಿಸುವುದು ಅಷ್ಟು ಸುಲಭವಾಗಿರುವುದಿಲ್ಲ. ನೀವು ಈ ವಿಷಯದಲ್ಲಿ ಎಷ್ಟೇ ಜಾಗರೂಕತೆಯನ್ನು ವಹಿಸಿದರೂ ಕಾಫಿ ಕಲೆ ಬಟ್ಟೆಯಲ್ಲಿ ಮಾಸದ ಗುರುತನ್ನು ಅಚ್ಚೊತ್ತಿರುತ್ತದೆ. ನೀವು ಆದಷ್ಟು ಬೇಗನೇ ಈ ಕಲೆಯನ್ನು ನೀಗಿಸಿದಷ್ಟೂ ಕಲೆಯನ್ನು ತಕ್ಷಣ ನಿವಾರಿಸಿಕೊಳ್ಳಬಹುದಾಗಿದೆ. ಕಲೆಯನ್ನು ಹಾಗೆಯೇ ಬಿಟ್ಟಲ್ಲಿ ಅದನ್ನು ತೆಗೆಯಲು ಹರಸಾಹಸ ಪಡಬೇಕಾಗುತ್ತದೆ. ಬಟ್ಟೆಗಳಿಂದ ಗ್ರೀಸ್ ಕಲೆ ತೆಗೆಯಲು ಸುಲಭೋಪಾಯಗಳು

ಕಾಫಿಯ ಕಲೆ ಬಿಳಿ ಬಟ್ಟೆಯಲ್ಲಿ ಬಿದ್ದಾಗ ಮತ್ತು ಅದು ಒಣಗಿ ಗಟ್ಟಿ ಕೂತಾಗ ಮಾತ್ರ ಬರುವಂತಹ ಸಿಟ್ಟು ಅಷ್ಟಿಷ್ಟಲ್ಲ. ಏನೋ ಒಂದು ರೀತಿಯ ತಳಮಳ ಉಂಟಾಗುತ್ತದೆ. ಕಲೆಯನ್ನು ನೀಗಿಸುವರೆಗೂ ನಮಗೆ ಸಮಾಧಾನ ಎನ್ನುವುದು ಇರುವುದಿಲ್ಲ. ಇನ್ನಷ್ಟು ಹಳೆಯ ಕಲೆ ಎಂದರೆ ನೆನೆಸುವುದು ಅದನ್ನು ಉಜ್ಜುವುದು ಮಾಡಲೇಬೇಕಾಗುತ್ತದೆ. ಮಕ್ಕಳ ಸಮವಸ್ತ್ರಗಳ ಮೇಲಿನ ಕಲೆಗಳ ನಿವಾರಣೆಗೆ ಸೂಕ್ತ ಸಲಹೆ
ಕಾಫಿ ಕಲೆಯಾಗುತ್ತದೆ ಎಂದು ಬೆಳಗ್ಗಿನ ಜಾವ ಅದನ್ನು ಸವಿಯುವ ಪ್ರಕ್ರಿಯೆಯನ್ನು ಕೈಬಿಡಲಾಗುವುದಿಲ್ಲ ಅಲ್ಲವೇ? ಹಾಗಿದ್ದರೆ ಕಾಫಿ ಕಲೆಯನ್ನು ನೀಗಿಸಲು ಕೈಗೊಳ್ಳಬೇಕಾದ ಕ್ರಮಗಳೇನು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ. ಈ ಮಾಹಿತಿಗಳು ಅತಿ ಸರಳವಾಗಿದ್ದು ಅತಿ ಸುಲಭದಲ್ಲಿ ಬಟ್ಟೆಯ ಮೇಲಿನ ಕಾಫಿ ಕಲೆಯನ್ನು ನಿವಾರಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಬನ್ನಿ ಆ ಮಾಹಿತಿಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‎ಗಳಿಂದ ಅರಿತುಕೊಳ್ಳೋಣ...

ತಣ್ಣಗಿನ ನೀರು

ತಣ್ಣಗಿನ ನೀರು

ತಣ್ಣಗಿನ ನೀರನ್ನು ಬಳಸಿ ಬಟ್ಟೆಯ ಮೇಲಿನಿಂದ ಕಾಫಿ ಕಲೆಯನ್ನು ಹೋಗಲಾಡಿಸಬಹುದಾಗಿದೆ. ಕಲೆಯ ಮೇಲೆ ಶುದ್ಧವಾದ ನೀರನ್ನು ಹರಿಯಲು ಬಿಡಿ ಮತ್ತು ಅದು ತನ್ನಷ್ಟಕ್ಕೆ ಹೋಗುತ್ತದೆ.

ಬಿಯರ್

ಬಿಯರ್

ಬಿಯರ್ ಸಹಾಯದಿಂದ ಕೂಡ ಕಾಫಿ ಕಲೆಯನ್ನು ನಿವಾರಿಸಿಕೊಳ್ಳಬಹುದು. ಕಲೆಯಾಗಿರುವ ಜಾಗದಲ್ಲಿ ಬಿಯರ್ ಬಳಸಿ ಅದನ್ನು ಉಜ್ಜಿ. ಇದೇ ಪ್ರಕ್ರಿಯೆಯನ್ನು ಮುಂದುವರಿಸುವುದರ ಮೂಲಕ ಕಲೆ ನಿವಾರಣೆ ಮಾಡಿಕೊಳ್ಳಬಹುದು.

ವಿನೇಗರ್

ವಿನೇಗರ್

ವಿನೇಗರ್ ಅನ್ನು ಬಳಸಿ ಕೂಡ ಕಾಫಿಯ ಕಲೆಯನ್ನು ನೀಗಿಸಿಕೊಳ್ಳಬಹುದು. ಕಲೆಯಾದ ಬಟ್ಟೆಯನ್ನು ವಿನೇಗರ್‎ನಲ್ಲಿ ನೆನೆಸಿಡಿ ಮತ್ತು ನಿಮ್ಮ ದೈನಂದಿನ ವಿಧಾನದಲ್ಲಿ ಅದನ್ನು ತೊಳೆಯಿರಿ. ಕಲೆ ದೊಡ್ಡದಾಗಿದೆ ಎಂದಾದಲ್ಲಿ ಕಲೆಯಾದ ಭಾಗವನ್ನು ಮೂರು ಭಾಗದಷ್ಟು ವಿನೇಗರ್‎ಗೆ ಒಂದು ಭಾಗ ನೀರು ಸೇರಿಸಿದ ದ್ರಾವಣದಲ್ಲಿ ಸ್ವಲ್ಪ ಕಾಲ ನೆನೆಸಿಡಿ.

ಬೇಕಿಂಗ್ ಸೋಡಾ

ಬೇಕಿಂಗ್ ಸೋಡಾ

ಬಟ್ಟೆಗಳಲ್ಲಿರುವ ಕಾಫಿ ಕಲೆ ನಿವಾರಣೆಗೆ ಸೋಡಾ ಸಹಕಾರಿ. ಸ್ವಲ್ಪ ಬೆಚ್ಚಗಿನ ನೀರನ್ನು ಕಲೆಯ ಮೇಲೆ ಹಾಕಿ ಮತ್ತು ಸ್ವಲ್ಪ ಬೇಕಿಂಗ್ ಹುಡಿಯನ್ನು ಉದುರಿಸಿ ನಂತರ ಸ್ವಲ್ಪ ಹೊತ್ತಿನ ಬಳಿಕ ಅದನ್ನು ತೊಳೆದುಕೊಳ್ಳಿ. ಹೆಚ್ಚು ಸೂಕ್ಷ್ಮ ಬಟ್ಟೆಗಳ ಮೇಲೆ ಈ ಪ್ರಯೋಗವನ್ನು ಮಾಡಬೇಡಿ.

ಮೊಟ್ಟೆಯ ಹಳದಿ

ಮೊಟ್ಟೆಯ ಹಳದಿ

ಮೊಟ್ಟೆಯ ಹಳದಿ ಭಾಗ ಕೂಡ ಕಲೆಯನ್ನು ಕೂಡಲೇ ನಿವಾರಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಮೊಟ್ಟೆಯ ಹಳದಿ ಭಾಗವನ್ನು ಬಟ್ಟೆಯ ಸಹಾಯದಿಂದ ಕಲೆಯಾದ ಜಾಗದ ಮೇಲೆ ಉಜ್ಜಿಕೊಳ್ಳಿ.

ಕ್ಲಬ್ ಸೋಡಾ

ಕ್ಲಬ್ ಸೋಡಾ

ಕಾಫಿ ಕಲೆ ನಿವಾರಣೆಗೆ ಕ್ಲಬ್ ಸೋಡಾ ಸಹಕಾರಿ. ಕಲೆಯಾದ ಜಾಗದಲ್ಲಿ ಇದನ್ನು ಹಾಕಿ ಮತ್ತು ಉಜ್ಜಿ. ಕಲೆ ಸಂಪೂರ್ಣ ಹೋಗುವವರೆಗೆ ಈ ಪ್ರಕ್ರಿಯೆಯನ್ನು ನಡೆಸಿ.

ಡಿಟರ್ಜೆಂಟ್

ಡಿಟರ್ಜೆಂಟ್

ದ್ರವಯುಕ್ತ ಡಿಟರ್ಜೆಂಟ್ ಅನ್ನು ಬಳಸಿ ಕೂಡ ಕಲೆಯನ್ನು ಹೋಗಲಾಡಿಸಬಹುದಾಗಿದೆ. ಹೊಸ ಕಲೆಗೆ ಇದರಲ್ಲಿ ಬಟ್ಟೆಯನ್ನು 5 ನಿಮಿಷ ಮುಳುಗಿಸಿಟ್ಟರೆ ಸಾಕು. ಇನ್ನು ಕಲೆ ಹಳತಾಗಿದೆ ಎಂದಾದಲ್ಲಿ ಅರ್ಧ ಗಂಟೆ ಕಾಲ ಬಟ್ಟೆಯನ್ನು ನೆನೆಸಿ ಆದರೆ ಇದನ್ನು ಒಣಗಲು ಬಿಡಬೇಡಿ.

ಕಲೆನಿವಾರಕ

ಕಲೆನಿವಾರಕ

ಕಾಫಿ ಕಲೆಯನ್ನು ನಿವಾರಿಸಲು ಸ್ಟೇನ್ ರಿಮೂವರ್ ಸಹಕಾರಿಯಾದುದು. ಸ್ಟೇನ್ ರಿಮೂವರ್ ಹಚ್ಚಿ ಇದನ್ನು 5 ನಿಮಿಷಗಳ ಕಾಲ ಬಿಡಿ ನಂತರ ಅದನ್ನು ತೊಳೆದುಕೊಳ್ಳಿ.

English summary

8 Easy Ways To Get Rid Of The Stubborn Coffee Stains

what do we do when we spill a little bit of it on our clothes or upholstery? Well, there are a number of ways to deal with this tough spot. So, here we bring to you some tried and tested ways to remove coffee stains from clothes. Read on further to know more about methods to get rid of the coffee stains.
X
Desktop Bottom Promotion