For Quick Alerts
ALLOW NOTIFICATIONS  
For Daily Alerts

ಅರೆರೆ, ಬೆಣ್ಣೆಯಿಂದ ಇಷ್ಟೆಲ್ಲಾ ಪ್ರಯೋಜನಗಳಿವೆಯೇ?

By Super
|

ಸಾಮಾನ್ಯವಾಗಿ ಯಾವುದಾದರೂ ಕೆಲಸವಾಗಬೇಕಾದರೆ ಈ ಅಗತ್ಯವನ್ನು ಮನಗಾಣಿಸುವ ಕ್ರಿಯೆಗೆ 'ಬೆಣ್ಣೆ ಹಚ್ಚುವುದು' ಎಂಬ ಪದವನ್ನು ನಾವು ಬಳಸುತ್ತೇವೆ. ಏಕೆಂದರೆ ಬೆಣ್ಣೆ ಅತ್ಯಂತ ನಯವಾದ, ಸ್ವಾದಿಷ್ಟ ಮತ್ತು ಯಾವುದೇ ಖಾದ್ಯದ ರುಚಿಯನ್ನು ಹೆಚ್ಚಿಸುವುದರಿಂದ ಎಲ್ಲರ ನೆಚ್ಚಿನ ಆಹಾರವಾಗಿದೆ. ಆದರೆ ಇದೊಂದು ಆರೋಗ್ಯಕರವಾದ ಕೊಬ್ಬು. ತೂಕ ಹೆಚ್ಚಿಸಲು ನೇರವಾಗಿ ತನ್ನ ಸಹಕಾರವನ್ನು ನೀಡುವ ಬೆಣ್ಣೆ ಅಪಾರವಾದ ಶಕ್ತಿಯನ್ನೂ ನೀಡುತ್ತದೆ. ಇದೇ ಕಾರಣಕ್ಕೆ ತೂಕ ಹೆಚ್ಚಿಸಿಕೊಳ್ಳುವವರಿಗೆ ಇದು ಒಂದು ಪ್ರಶಸ್ತ ಆಹಾರವಾಗಿದೆ. ಆದರೆ ಉಳಿದವರಿಗೆ? ರುಚಿಯನ್ನು ಬಿಡಲಾಗದೇ, ತೂಕ ಹೆಚ್ಚುವುದನ್ನು ನೋಡಲಾಗದೇ ಇರುವ ತೊಳಲಾಟ.

ಈ ಅಗತ್ಯವನ್ನು ಮನಗಂಡ ಸಂಸ್ಥೆಗಳು ಹಲವಾರು ಉತ್ಪನ್ನಗಳನ್ನು ಹೊರತಂದಿವೆ. ಶೇಂಗಾಬೀಜವನ್ನು ನುಣ್ಣಗೆ ಅರೆದು ಬೆಣ್ಣೆಯಲ್ಲಿನ ಕೊಬ್ಬಿನ ಪ್ರಮಾಣವನ್ನು ತಗ್ಗಿಸಿ ಮಿಶ್ರಣಮಾಡಿ ಪೀನಟ್ ಬಟರ್ ಎಂಬ ಹೆಸರಿನಲ್ಲಿ ಮಾರಾಟ ಮಾಡುವ ಈ ಅಹಾರ ತೂಕ ಹೆಚ್ಚಿಸಿಕೊಳ್ಳದಿರುವವರಿಗೆ ಮತ್ತು ಬೆಣ್ಣೆಯ ರುಚಿಯನ್ನು ಕಳೆದುಕೊಳ್ಳಲಿಚ್ಛಿಸದವರಿಗೆ ಯೋಗ್ಯವಾಗಿದೆ. ಅಂತೆಯೇ ಇನ್ನೂ ಹಲವು ಉತ್ಪನ್ನಗಳು ಲೋ ಫ್ಯಾಟ್ ಎಂಬ ಹೆಸರನ್ನು ಹೊತ್ತು ಮಾರಾಟಕ್ಕೆ ಲಭ್ಯವಿವೆ.

ಬೆಣ್ಣೆ ಹಚ್ಚುವ ಮತ್ತು ಆಹಾರಕ್ಕಾಗಿ ಉಪಯೋಗಿಸುವ ಹೊರತಾಗಿಯೂ ಬೆಣ್ಣೆಯಿಂದ ಹಲವು ಪ್ರಯೋಜನಗಳಿವೆ. ಉದಾಹರಣೆಗೆ ಬೆರಳಿನ ಉಂಗುರ ಹೊರಬರಲು ತಕರಾರು ಮಾಡುತ್ತಿದ್ದರೆ ಕೊಂಚ ಬೆಣ್ಣೆ ಸವರಿ ನಿಧಾನವಾಗಿ ಎಳೆದುಕೊಂಡರೆ ಜಾರಿ ಹೊರಬರುತ್ತದೆ. ಚಳಿಗಾಲದಲ್ಲಿ ತುಟಿ ಒಡೆದಿದೆಯೇ, ಒಣಗಿದೆಯೇ, ರಾತ್ರಿ ಮಲಗುವ ಮುನ್ನ ಕೊಂಚ ಬೆಣ್ಣೆ ಹಚ್ಚಿದರೆ ಸಾಕು ಬೆಳಗಾಗುವಷ್ಟರಲ್ಲಿ ತುಟಿಗಳು ಎಂದಿನ ಆರೋಗ್ಯ ಹೊಂದಿರುತ್ತವೆ. ಬೆಣ್ಣೆಯಲ್ಲಿ ಅಂತದ್ದೇನಿದೆ ವಿಶೇಷತೆ?

ನಿಮ್ಮ ನೆಚ್ಚಿನ ಬಟ್ಟೆ, ಪರ್ಸ್, ಬೆಲ್ಟ್ ಮೊದಲಾದವುಗಳ ಮೇಲೆ ಏನಾದರೂ ಬಿದ್ದು ಕಲೆಯಾಗಿದ್ದರೆ ಬೆಣ್ಣೆ ಹಚ್ಚುವ ಮೂಲಕ ಸುಲಭವಾಗಿ ನಿವಾರಿಸಬಹುದು. ನಿಮ್ಮ ಮನೆಯ ಅಲಂಕಾರಿಕ ಲೋಹದ ವಸ್ತುಗಳ ಹೊಳಪನ್ನು ಹೆಚ್ಚಿಸುತ್ತದೆ. ಇಂತಹ ಪ್ರಯೋಜನಕಾರಿಯಾದ ಆರು ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ. ಇವು ನಿಮ್ಮ ಬೇಸರತರಿಸುವ ನಿತ್ಯದ ಕೆಲಸಗಳಿಗೆ ಒಂದು ಹೊಸ ಆಯಾಮವನ್ನೇ ನೀಡಬಹುದು, ಪ್ರಯತ್ನಿಸಿ...

ಮೀನು ತೊಳೆದ ದುರ್ವಾಸನೆಯನ್ನು ನಿವಾರಿಸುತ್ತದೆ

ಮೀನು ತೊಳೆದ ದುರ್ವಾಸನೆಯನ್ನು ನಿವಾರಿಸುತ್ತದೆ

ಬೆಣ್ಣೆಯನ್ನು ದುರ್ಗಂಧ ನಿವಾರಕವಾಗಿ ಬಳಸಿಕೊಳ್ಳಬಹುದೆಂಬುದು ಇದರ ಇನ್ನೊಂದು ವಿಚಿತ್ರವಾದ ಪ್ರಯೋಜನಗಳಲ್ಲಿ ಒಂದಾಗಿದೆ. ತಾಜಾ ಮೀನು ಕೊಂಡು ತರುವುದು ದೊಡ್ಡದಲ್ಲ, ಇದನ್ನು ಸ್ವಚ್ಛಗೊಳಿಸುವುದೇ ಹೆಚ್ಚಿನವರು ಒಲ್ಲದ ಕೆಲಸ. ಆದರೆ ಯಾರು ಇದನ್ನು ಕತ್ತರಿಸಿದರೂ ಅವರ ಕೈ ಬಹಳ ಹೊತ್ತಿನವರೆಗೆ ಮೀನಿನ ವಾಸನೆಯನ್ನು ಸೂಸುತ್ತಾ ಇರುತ್ತದೆ. ಎಷ್ಟು ಸೋಪು ಹಾಕಿ ತೊಳೆದುಕೊಂಡರೂ ಕೊಂಚವಾದರೂ ವಾಸನೆ ಇದ್ದೇ ಇರುತ್ತದೆ. ಈ ಹೊತ್ತಿನಲ್ಲಿ ಅತಿಥಿಗಳು ಬಂದರೆ, ಅಥವಾ ಹೊರಗೆ ಯಾರನ್ನಾದರೂ ಭೇಟಿಯಾಗಬೇಕಿದ್ದರೆ ಈ ಸ್ಥಿತಿ ಮುಜುಗರ ತರಿಸುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮೀನು ತೊಳೆದ ದುರ್ವಾಸನೆಯನ್ನು ನಿವಾರಿಸುತ್ತದೆ

ಮೀನು ತೊಳೆದ ದುರ್ವಾಸನೆಯನ್ನು ನಿವಾರಿಸುತ್ತದೆ

ಇದಕ್ಕೆ ಕೈ ತೊಳೆದ ಬಳಿಕ ಕೊಂಚವೇ ಬೆಣ್ಣೆಯನ್ನು ಹಚ್ಚಿ ಎರಡೂ ಕೈಗಳನ್ನು ಉಜ್ಜಿಕೊಳ್ಳಿ. ಸುಮಾರು ಅರ್ಧ ನಿಮಿಷ ಬಿಟ್ಟು ಉಗುರುಬೆಚ್ಚನೆಯ ನೀರು ಮತ್ತು ಸೋಪು ಉಪಯೋಗಿಸಿ ತೊಳೆದುಕೊಳ್ಳಿ. ಮೀನಿನ ವಾಸನೆ ಕೊಂಚವೂ ಇರುವುದಿಲ್ಲ. ಅಂತೆಯೇ ಮೀನಿನ ಅಥವಾ ಇತರ ಖಾದ್ಯಗಳನ್ನು ತಯಾರಿಸಿ ತೊಳೆದ ಪಾತ್ರೆಗಳಲ್ಲಿಯೂ ವಾಸನೆ ಸೂಸುತ್ತಿದ್ದರೆ ಅಲ್ಲಿಯೂ ಬೆಣ್ಣೆ ಹಚ್ಚಿ ತೊಳೆದುಕೊಳ್ಳುವ ಮೂಲಕ ವಾಸನೆಯನ್ನು ನಿವಾರಿಸಬಹುದು.

ಮರದ ಗೋಂದನ್ನು ನಿವಾರಿಸುತ್ತದೆ

ಮರದ ಗೋಂದನ್ನು ನಿವಾರಿಸುತ್ತದೆ

ಮರದ ತೊಗಟೆಯಿಂದ ಸೂಸುವ ದ್ರವ ಗಾಳಿಗೆ ಬಂದೊಡನೆ ಗಟ್ಟಿಯಾಗುತ್ತದೆ. ಕೆಲವೊಮ್ಮೆ ಇದು ತೊಟ್ಟಿಕ್ಕಿ ಕೆಳಗೆ ನೆರಳಿನಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಬಿದ್ದು ಅಲ್ಲಿಯೇ ಗಟ್ಟಿಯಾಗುತ್ತದೆ. ಇದನ್ನು ನಿವಾರಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ಬಲವಂತವಾಗಿ ಎಬ್ಬಿಸಲು ಹೋದರೆ ಅದರ ತಳಭಾಗದಲ್ಲಿ ಅಂಟಿಕೊಂಡಿದ್ದ ಕಾರಿನ ಬಣ್ಣದ ಒಂದು ತುಂಡೇ ಕಿತ್ತು ಬರುತ್ತದೆ ಹಾಗೂ ನಿಮ್ಮ ಕಾರಿನ ಸೌಂದರ್ಯವನ್ನೇ ಹಾಳು ಮಾಡುತ್ತದೆ. ಅಷ್ಟೇ ಭಾಗಕ್ಕೆ ಬಣ್ಣ ಹಚ್ಚಲು ಯಾವ ಪೇಂಟರ್ ಕೂಡಾ ಒಪ್ಪುವುದಿಲ್ಲ. ಏಕೆಂದರೆ ಅದರ ಅಕ್ಕಪಕ್ಕ ಇರುವ ಕೊಂಚ ಭಾಗವನ್ನು ಕೆರೆದು ತಳದಿಂದ ಹೊರಪದರವರೆಗೆ ಹೊಸತಾಗಿ ಕೆಲಸ ಮಾಡಬೇಕಾಗುತ್ತದೆ. ಇದು ನಿಮ್ಮ ಹಣವನ್ನೂ ಸಮಯವನ್ನೂ ಪೋಲು ಮಾಡುತ್ತದೆ. ಇದಕ್ಕೂ ಬೆಣ್ಣೆ ಹಚ್ಚಬಹುದಾದ ಉಪಾಯವೊಂದಿದೆ, ಅಂದರೆ ಅದೇ, ಬೆಣ್ಣೆ ಹಚ್ಚುವುದು.

ಮರದ ಗೋಂದನ್ನು ನಿವಾರಿಸುತ್ತದೆ

ಮರದ ಗೋಂದನ್ನು ನಿವಾರಿಸುತ್ತದೆ

ಗೋಂದಿನ ಮೇಲೆ ಕೊಂಚ ಬೆಣ್ಣೆಯನ್ನು ಹಚ್ಚಿ ಒಂದು ನಯವಾದ ಬಟ್ಟೆಯಿಂದ ನಿಧಾನವಾಗಿ ಉಜ್ಜುತ್ತಾ ಬನ್ನಿ. ಇದು ಗೋಂದನ್ನು ನಿಧಾನವಾಗಿ ಕರಗಿಸುತ್ತಾ ಹೋಗುತ್ತದೆ. ಎಲ್ಲಾ ಗೋಂದು ಕರಗಿದ ಬಳಿಕ ಕಾರಿನ ಶಾಂಪೂ (ಕೆಲವರು ಪಾತ್ರೆ ತೊಳೆಯುವ ದ್ರವ ಅಥವಾ ಮೈಸೋಪು ಅಥವಾ ಬಟ್ಟೆಗೆ ಹಾಕುವ ಪೌಡರ್ ಬಳಸುತ್ತಾರೆ. ಇವು ಕಾರಿನ ಬಣ್ಣವನ್ನು ನಿಧಾನವಾಗಿ ಕರಗಿಸುತ್ತವೆ) ಬಳಸಿ ಸಾಕಷ್ಟು ನೀರು ಸುರಿಸಿ ಒರೆಸಿ. ಗೋಂದು ಮಾಯವಾಗಿರುತ್ತದೆ ಹಾಗೂ ಕಾರಿನ ಮೇಲ್ಮೈ ಮೊದಲಿದ್ದ ಹಾಗೆಯೇ ಇರುತ್ತದೆ.

ಕೇಕ್ ಸುಲಭವಾಗಿ ಕತ್ತರಿಸಲು ನೆರವಾಗುತ್ತದೆ

ಕೇಕ್ ಸುಲಭವಾಗಿ ಕತ್ತರಿಸಲು ನೆರವಾಗುತ್ತದೆ

ಹುಟ್ಟುಹಬ್ಬ ಮೊದಲಾದ ವಿಶೇಷ ಸಂದರ್ಭಗಳಲ್ಲಿ ಕೇಕ್ ಕತ್ತರಿಸಲು ಬಳಸುವ ಕತ್ತಿಗೆ ಮೊದಲೇ ಎರಡೂ ಬದಿಗಳಲ್ಲಿ ಕೊಂಚ ಬೆಣ್ಣೆ ಸವರಿಡಿ. ಏಕೆಂದರೆ ತೀರಾ ಒಣಗಿರುವ ಕತ್ತಿಯಿಂದ ಕೇಕ್ ಕತ್ತರಿಸಲು ಪ್ರಯತ್ನಿಸಿದರೆ ಕತ್ತಿಯ ಎರಡೂ ಬದಿಗಳಲ್ಲಿ ಕೇಕ್ ನ ಭಾಗ ಅಂಟಿಕೊಂಡು ಚಿಕ್ಕ ತುಂಡು ಅಂಟಿಕೊಂಡೇ ಬರುತ್ತದೆ. ಇದು ಕೇಕ್ ಕತ್ತರಿಸಿದವರಿಗಿಂತಲೂ ಮನೆಯವರಿಗೆ ಹೆಚ್ಚು ಮುಜುಗರ ತರುತ್ತದೆ.

ಕೇಕ್ ಸುಲಭವಾಗಿ ಕತ್ತರಿಸಲು ನೆರವಾಗುತ್ತದೆ

ಕೇಕ್ ಸುಲಭವಾಗಿ ಕತ್ತರಿಸಲು ನೆರವಾಗುತ್ತದೆ

ಕತ್ತರಿಸಿದ ಕೇಕ್ ತುಂಡು ಸರಿಯಾದ ಅಕಾರದಲ್ಲಿರದೇ ನಡುವಿನ ಭಾಗ ಕತ್ತಿನೊಂದಿಗೆ ಹೋಗಿರುವುದರಿಂದ ಅಲ್ಲಿ ದೃಢತೆ ಸಾಕಾಗದೇ ಕೇಕ್ ತುಂಡನ್ನು ಬಾಯಿಗಿಡಲು ಹೋದಾಗ ಕೇಕಿನ ಮುಂಭಾಗ ತುಂಡಾಗಿ ಕೆಳಗೆ ಬಿದ್ದು ಈ ಮುಜುಗರ ಅತಿರೇಕಕ್ಕೆ ಹೋಗುವ ಸಾಧ್ಯತೆ ಇದೆ. ಇದನ್ನು ತಪ್ಪಿಸಲು ಕೊಂಚ ಬೆಣ್ಣೆ ಹಚ್ಚಿದರೆ ಕೇಕಿನ ಭಾಗ ಕತ್ತಿಗೆ ಅಂಟದೇ ಹುಟ್ಟುಹಬ್ಬದ ಸಂಭ್ರಮವನ್ನು ಎಲ್ಲರೂ ಪೂರ್ಣ ಪ್ರಮಾಣದಿಂದ ಅನುಭವಿಸಲು ಸಾಧ್ಯವಾಗುತ್ತದೆ.

ಗಂಟು ಹಾಕಿಕೊಂಡಿರುವ ಆಭರಣಗಳನ್ನು ಸುಲಭವಾಗಿ ಬಿಡಿಸುತ್ತದೆ

ಗಂಟು ಹಾಕಿಕೊಂಡಿರುವ ಆಭರಣಗಳನ್ನು ಸುಲಭವಾಗಿ ಬಿಡಿಸುತ್ತದೆ

ಕೆಲವೊಮ್ಮೆ ನಿಮ್ಮ ನೆಚ್ಚಿನ ಆಭರಣಗಳು, ಅದರಲ್ಲೂ ವಿಶೇಷವಾಗಿ ಕುತ್ತಿಗೆಯ ಸರ, ಬ್ರೇಸ್ಲೆಟ್, ಕಾಲ್ಗೆಜ್ಜೆ, ಡಾಬು, ಮೊದಲಾದವು ಒಂದರ ಒಳಗೊಂದು ಸೇರಿಕೊಂಡು ಬಿಡಿಸುವುದು ಕಷ್ಟವಾಗುತ್ತದೆ. ಗಂಟುಗಳನ್ನು ಬಿಡಿಸಲು ಅಪಾರವಾದ ತಾಳ್ಮೆ ಮತ್ತು ಕೊಂಚ ಬೆಣ್ಣೆಯ ಅಗತ್ಯವಿದೆ. ಏಕೆಂದರೆ ಬೆಣ್ಣೆಯಿಲ್ಲದೇ ಬಲವಂತ ಮಾಡಿದರೆ ನಿಮ್ಮ ನೆಚ್ಚಿನ ಆಭರಣಗಳು ಘಾಸಿಗೊಳ್ಳುವ ಆತಂಕವಿದೆ.

ಗಂಟು ಹಾಕಿಕೊಂಡಿರುವ ಆಭರಣಗಳನ್ನು ಸುಲಭವಾಗಿ ಬಿಡಿಸುತ್ತದೆ

ಗಂಟು ಹಾಕಿಕೊಂಡಿರುವ ಆಭರಣಗಳನ್ನು ಸುಲಭವಾಗಿ ಬಿಡಿಸುತ್ತದೆ

ಬದಲಿಗೆ ಈ ಗಂಟುಗಳಿರುವಲ್ಲಿ ಕೊಂಚ ಬೆಣ್ಣೆ ಹಚ್ಚಿದರೆ ಸರಾಗಿವಾಗಿ ಹೊರತೆಗೆಯಲು ಸಾಧ್ಯವಾಗುತ್ತದೆ. ಅಗತ್ಯವಿದ್ದರೆ ಗಂಟು ಬಿಡಿಸಲು ದಪ್ಪಸೂಜಿ ಅಥವಾ ದಬ್ಬಣವನ್ನು ಉಪಯೋಗಿಸಿ. ಎಲ್ಲಾ ಆಭರಣಗಳನ್ನು ಬಿಡಿಸಿಕೊಂಡ ಬಳಿಕ ಸ್ವಲ್ಪವೇ ಸೋಪು ಸೇರಿಸಿದ ನೀರಿನಿಂದ ಪ್ರತ್ಯೇಕವಾಗಿ ತೊಳೆದುಕೊಂಡು ಸ್ವಚ್ಛವಾದ ಬಟ್ಟೆಯಿಂದ ಒರೆಸಿಕೊಳ್ಳಿ.

ನಿಮ್ಮ ಬೆಕ್ಕಿಗೆ ಹೊಸಸ್ಥಳವನ್ನು ಪರಿಚಯಿಸುತ್ತದೆ

ನಿಮ್ಮ ಬೆಕ್ಕಿಗೆ ಹೊಸಸ್ಥಳವನ್ನು ಪರಿಚಯಿಸುತ್ತದೆ

ನಿಮ್ಮ ಸಾಕುಪ್ರಾಣಿಗಳು ನಿಮ್ಮ ಮನೆಗೆ ಒಗ್ಗಿಕೊಂಡಿರುವಷ್ಟು ಸುಲಭವಾಗಿ ಹೊಸ ಸ್ಥಳಕ್ಕೆ ಒಗ್ಗಲಾರವು. ಹೊಸ ಸ್ಥಳದಲ್ಲಿ ಕಳೆದು ಹೋಗುವ ಸಂಭವವೂ ಹೆಚ್ಚು. ಇದನ್ನು ತಡೆಯಲು ನಿಮ್ಮ ಬೆಕ್ಕಿನ ನಾಲ್ಕೂ ಪಾದಗಳ ಅಡಿ ಕೊಂಚ ಬೆಣ್ಣೆ ಹಚ್ಚಿ. ಬೆಕ್ಕು ಈ ಬೆಣ್ಣೆಯನ್ನು ನೆಕ್ಕುತ್ತಿರುವಷ್ಟೂ ಹೊತ್ತು ಹೊಸ ಸ್ಥಳದಲ್ಲಿಯೇ ಇದ್ದು ಹೊಸ ಸ್ಥಳವನ್ನು ಗುರುತಿಸಿಕೊಳ್ಳಲು ಸಮಯಾವಕಾಶ ಸಿಗುತ್ತದೆ. ಇದರಿಂದ ಬೆಕ್ಕು ಕಳೆದುಹೋಗುವ ಸಂಭವ ಇಲ್ಲವಾಗುತ್ತದೆ. ಇದು ನಿಮ್ಮ ರಜಾದಿನವನ್ನು ನಿರಾತಂಕದಿಂದ ಕಳೆಯಲು ನೆರವಾಗುತ್ತದೆ.

English summary

Weird Household Uses Of Butter

Butter is one of the most important foods in your daily life. Yes, it is true that the saturated fat in it can lead you to obesity. But how can you avoid dishes like chicken butter masala or butter pudding? Still, you have to think of your health first. But, instead of eating it, use it in other ways. Here are weird household uses of butter listed below-
X
Desktop Bottom Promotion