For Quick Alerts
ALLOW NOTIFICATIONS  
For Daily Alerts

ಅಡುಗೆ ಮನೆಯಲ್ಲಿರುವ ಅಕ್ಕಿ,ಧಾನ್ಯ ಕೀಟಗಳ ಪಾಲಾಗುತ್ತಿವೆಯೇ?

By Deepak
|

ನಾವು ಪ್ರತಿನಿತ್ಯ ಬಳಸುವ ಅಕ್ಕಿ, ಧಾನ್ಯ, ಕಾಳುಗಳು, ಕಾರ್ನ್‍ಮೀಲ್ ಇತ್ಯಾದಿ ಆಹಾರ ಪದಾರ್ಥಗಳು ಅಡುಗೆಮನೆಯಲ್ಲಿ ಕಪ್‍ಬೋರ್ಡ್‌ನಲ್ಲಿ ಇಟ್ಟುಕೊಳ್ಳುವುದು ಸಹಜ. ಆದರೆ ನಮ್ಮ ದುರಾದೃಷ್ಟಕ್ಕೆ ಕೆಲವೊಮ್ಮೆ ಇವುಗಳೆಲ್ಲವೂ ಕೀಟಗಳ ಪಾಲಾಗುತ್ತವೆ..ಅದರಲ್ಲೂ ಜಿರಳೆಗಳು, ಗೆದ್ದಲುಗಳು, ಮುಂತಾದ ಹುಳುಗಳ ಉಪದ್ರವವಂತೂ ಹೇಳತೀರದು..!

ಇವುಗಳು ನಿಮ್ಮ ಆಹಾರ ಧಾನ್ಯಗಳ ಮೇಲೆ ದಾಳಿ ಮಾಡಿದರೆ, ಸುಮ್ಮನೆ ಹೋಗುವುದಿಲ್ಲ. ಇಂತಹ ಸಮಯದಲ್ಲಿ ನಿಮ್ಮ ಆಹಾರ ಧಾನ್ಯಗಳು ಹಾಳಾಗಿ ಹೋಗುತ್ತವೆ. ಆಗ ಅದಕ್ಕೆ ನೀವು ನೀಡಿರುವ ಹಣವು ವ್ಯರ್ಥವಾಗುತ್ತದೆ. ಅದರಲ್ಲೂ ಅಕ್ಕಿಯು ಈ ಕೀಟಗಳ ದಾಳಿಗೆ ಹೆಚ್ಚಾಗಿ ತುತ್ತಾಗುತ್ತದೆ. ಆದ್ದರಿಂದ ಈ ಕೀಟಗಳ ದಾಳಿಯಿಂದ ಅಕ್ಕಿಯನ್ನು ಜಾಗರೂಕವಗಿ ಕಾಪಾಡುವ ಜವಾಬ್ದಾರಿ ನಮ್ಮ ಮೇಲೆ ಇರುತ್ತದೆ. ಬನ್ನಿ ಇಂದು ನಾವು ಕೀಟಾಣುಗಳಿಂದ ಅಕ್ಕಿಯನ್ನು ಕಾಪಾಡುವ ಮಾರ್ಗೋಪಾಯಗಳ ಕುರಿತು ನಿಮಗೆ ತಿಳಿಸಿಕೊಡುತ್ತೇವೆ. ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಮುಂದೆ ಓದಿ:

Ways To Protect Rice From Insect Attack

ಅಕ್ಕಿಯನ್ನು ಫ್ರಿಜ್‌ನಲ್ಲಿರಿಸಿ
ಅಕ್ಕಿಯನ್ನು 4-5 ದಿನದ ಮಟ್ಟಿಗೆ ಫ್ರಿಜ್‌ನಲ್ಲಿರಿಸಿ. ಈ ಪ್ರಕ್ರಿಯೆಯು ಕೀಟಾಣುಗಳನ್ನು ಕೊಲ್ಲುತ್ತದೆ. ಈ ವಿಧಾನವು ಇತರೆ ಕೀಟಗಳ ದಾಳಿಯಿಂದ ಸಹ ನಿಮ್ಮ ಅಕ್ಕಿಯನ್ನು ಕಾಪಾಡುತ್ತದೆ. ಅಕ್ಕಿಯ ಜೊತೆಗೆ ಇತರೆ ಧಾನ್ಯಗಳನ್ನು ಸಹ ನೀವು ಹೀಗೆಯೇ ನೀವು ಕಾಪಾಡಿಕೊಳ್ಳಬಹುದು. ಇದು ಅಕ್ಕಿ ಮತ್ತು ಇತರೆ ಧಾನ್ಯಗಳನ್ನು ಕಾಪಾಡಿಕೊಳ್ಳಲು ಇರುವ ಅತ್ಯುತ್ತಮ ಮಾರ್ಗವಾಗಿರುತ್ತದೆ.

ಅಕ್ಕಿಯನ್ನು ಪ್ಲಾಸ್ಟಿಕ್ ಬ್ಯಾಗ್‌ನಲ್ಲಿರಿಸಿ
ಅಕ್ಕಿಯನ್ನು ಕಾಪಾಡಿಕೊಳ್ಳಲು ಜಿಪ್ ಮಾಡಿರುವ ಪ್ಲಾಸ್ಟಿಕ್ ಬ್ಯಾಗ್‌ಗಳಲ್ಲಿ ಸಂಗ್ರಹಿಸಿ. ನಿಮ್ಮ ಬಳಿ ಅಧಿಕ ಪ್ರಮಾಣದ ಅಕ್ಕಿಯಿದ್ದಲ್ಲಿ, ಅದನ್ನು ಕೀಟಗಳಿಂದ ರಕ್ಷಿಸಲು, ಅದನ್ನು ನೀವು ಫ್ರಿಜ್‌ನಲ್ಲಿಡಲು ಆಗುವುದಿಲ್ಲ. ಆಗ ನೀವು ಇದನ್ನು ಪ್ಲಾಸ್ಟಿಕ್ ಬ್ಯಾಗ್‌ಗಳಲ್ಲಿ ಸಂಗ್ರಹಿಸಿಡಬಹುದು.

ನಿಮ್ಮ ಆಹಾರದ ಕಬೋರ್ಡನ್ನು ಖಾಲಿ ಮಾಡಿ
ಒಂದು ವೇಳೆ ನಿಮ್ಮ ಮನೆಯಲ್ಲಿರುವ ಅಕ್ಕಿಗೆ ಈಗಲೇ ಕೀಟಗಳು ಬಂದಿದ್ದಲ್ಲಿ, ತಕ್ಷಣ ಆಹಾರ ಸಂಗ್ರಹಿಸುವ ಕಬೋರ್ಡನ್ನು ಖಾಲಿ ಮಾಡಿ. ಅಕ್ಕಿಯ ಯಾವ ಭಾಗವು ಕೀಟಗಳ ದಾಳಿಗೆ ಒಳಗಾಗಿರುತ್ತದೆಯೋ, ಅದನ್ನು ತಡ ಮಾಡದೆ ಹೊರಗೆ ಎಸೆಯಿರಿ. ನಿಮಗೆ ಗೊಂದಲವನ್ನುಂಟು ಮಾಡುವ ಭಾಗಗಳನನು 4-5 ದಿನಗಳ ಮಟ್ಟಿಗೆ ಫ್ರಿಜ್‌ನಲ್ಲಿರಿಸಿ. ಪರವಾಗಿಲ್ಲ ಎಂಬ ಭಾಗಗಳನ್ನು ಪ್ಲಾಸ್ಟಿಕ್ ಬ್ಯಾಗ್‌ಗಳಲ್ಲಿರಿಸಿ.

ನಿಮ್ಮ ಪ್ಯಾಂಟ್ರಿ ಕ್ಯಾಬಿನೆಟ್‌ಗೆ ಕೀಟ ನಾಶಕ ಸಿಂಪಡಿಸಿ
ಫುಡ್ ಕಬೋರ್ಡ್ ಸ್ವಚ್ಛಗೊಳಿಸಿದ ಮೇಲೆ, ನಿಮ್ಮ ಪ್ಯಾಂಟ್ರಿ ಕ್ಯಾಬಿನೆಟ್‌ಗೆ ಕೀಟ ನಾಶಕ ಸಿಂಪಡಿಸಿ. ಅದನ್ನು ಸೋಪ್ ಬೆರೆಸಿದ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಪ್ಯಾಂಟ್ರಿಯನ್ನು ಡಿಶ್ ರ‍್ಯಾಗ್ ಅಥವಾ ಸ್ಪಾಂಜ್‌ನಿಂದ ತೊಳೆಯಿರಿ. ಕ್ಯಾಬಿನೆಟ್‌ಗಳನ್ನು ಒಣಗಲು ಬಿಡಿ. ಇದಕ್ಕಾಗಿ ಪರಿಣಾಮಕಾರಿಯಾದ ಕೀಟ ನಾಶಕವನ್ನು ಕೊಂಡುಕೊಂಡು ಸೋಪ್ ನೀರಿನ ಭಾಗ ಒಣಗಿದ ಮೇಲೆ ಸಿಂಪಡಿಸಿ. ಇದನ್ನು ಸಿಂಪಡಿಸಿದ ಮೇಲೆ 4-6 ಗಂಟೆಗಳ ಕಾಲ ಇದನ್ನು ಮುಚ್ಚಿಡಿ. ಹೀಗೆ ಮೇಲಿನ ಸಲಹೆಗಳನ್ನು ಪಾಲಿಸುವ ನಿಮ್ಮ ಮನೆಯಲ್ಲಿರುವ ಅಕ್ಕಿ ಮತ್ತು ಇತ್ಯಾದಿ ಧಾನ್ಯಗಳನ್ನು ಕಾಪಾಡಿಕೊಳ್ಳಬಹುದು. ಈ ಸಲಹೆಗಳು ನಿಮ್ಮ ಧಾನ್ಯಗಳನ್ನು ಕಾಪಾಡಿ, ನಿಮ್ಮ ಹಣವನ್ನು ಉಳಿಸುತ್ತವೆ.

English summary

Ways To Protect Rice From Insect Attack

Is your kitchen cupboard exposed to insects? The cereals that you consume daily like rice, flour, spices, cornmeal etc. are the important food stuff that you keep in your kitchen closets. However sometimes there are some harmful insects like weevils, cockroaches and termites etc. which attack them and destroy them.
X
Desktop Bottom Promotion