For Quick Alerts
ALLOW NOTIFICATIONS  
For Daily Alerts

ನಾಜೂಕಿನ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಇಲ್ಲಿದೆ ಸರಳ ಟ್ರಿಕ್ಸ್!

By Hemanth
|

ಮನೆಯ ಅಲಂಕಾರದಲ್ಲಿ ಪ್ರಮುಖವಾಗಿ ಇರುವುದು ಅಡುಗೆ ಮನೆಯ ಅಲಂಕಾರ. ಪ್ರತಿಯೊಬ್ಬರು ಬಂದು ವೀಕ್ಷಿಸಿ ಎರಡು ಮಾತು ಹೇಳುವುದು ಮನೆಯ ಅಡುಗೆ ಮನೆಯನ್ನು ನೋಡಿಯೇ. ಅಡುಗೆ ಮನೆಯನ್ನು ತುಂಬಾ ಅಂದ ಹಾಗೂ ಅಚ್ಚುಕಟ್ಟಾಗಿ ಇಡಲು ಸ್ವಲ್ಪ ಜಾಣ್ಮೆ ಕೂಡ ಬೇಕಾಗುತ್ತದೆ. ಅದರಲ್ಲೂ ಸುಂದರವಾಗಿರುವ ಗಾಜಿನ ಸೆಟ್‌ಗಳನ್ನು ಮನೆಯ ಅಡುಗೆಮನೆಯಲ್ಲಿ ಜೋಡಿಸಿಡುವುದು ತುಂಬಾ ಕಠಿಣ ಕೆಲಸವೆನ್ನಬಹುದು.

ನೋಡಲು ಸುಂದರವಾಗಿ ಕಾಣುವ ಮಣ್ಣಿನ ಪಾತ್ರೆ, ಗಾಜಿನ ಮತ್ತು ಪಿಂಗಾಣಿಯ ಸೆಟ್‌ಗಳು (ಪ್ಲೇಟ್‌ಗಳು, ಗ್ಲಾಸ್‌ಗಳು, ಪದಾರ್ಥದ ಬೌಲ್‌ಗಳು) ನಿಮ್ಮ ಅಡುಗೆ ಮನೆಯ ಕೋಣೆಯ ಕಪಾಟು ತುಂಬಿರುವಂತೆ ಮಾಡುತ್ತದೆ. ಆದರೆ ತುಂಬಾ ನಾಜೂಕಾಗಿರುವ ಇವುಗಳನ್ನು ತುಂಬಾ ಜಾಗರೂಕತೆಯಾಗಿ ನಿರ್ವಹಿಸಬೇಕಾಗುತ್ತದೆ ಅಲ್ಲವೇ..?

ಸಾಮಾನ್ಯವಾಗಿ ಗಾಜಿನ ಪಾತ್ರೆಗಳು ಮತ್ತು ಪಿಂಗಾಣಿಗಳು ತುಂಬಾ ನಾಜೂಕು. ಇಂತಹ ಸೆಟ್‌ಗಳನ್ನು ತೊಳೆಯುವ ವಿಧಾನ ತಿಳಿದಿರಬೇಕು. ಯಾಕೆಂದರೆ ಇದಕ್ಕಾಗಿ ಕೆಲವೊಂದು ವಿಶೇಷವಾದ ಟ್ರಿಕ್ಸ್ ಬೇಕಾಗುತ್ತದೆ. ಒಂದು ವೇಳೆ ಸೆಟ್‌ನ ಒಂದು ಪಾತ್ರೆ ತುಂಡಾದರೂ ಸಂಪೂರ್ಣ ಸೆಟ್ ನಿಷ್ಪ್ರಯೋಜಕವಾಗುತ್ತದೆ. ಇಂತಹ ನಾಜೂಕಾಗಿರುವ ಸಾಮಾನುಗಳು ಒಡೆದು ಹೋಗುವುದು ಅದನ್ನು ತೊಳೆಯುವ ಸಂದರ್ಭದಲ್ಲಿ. ಇದನ್ನು ಒಡೆಯದೇ ತೊಳೆಯುವಂತಹ ಟ್ರಿಕ್ಸ್ ಅನ್ನು ನೀವು ಕಲಿತುಕೊಳ್ಳಬೇಕಾಗಿದೆ. ಆದರೆ ಕೆಲವೊಮ್ಮೆ ಕೇವಲ ನೀರಿನಿಂದ ತೊಳೆದರೆ ಸಾಕಾಗುವುದಿಲ್ಲ. ಪಾತ್ರೆಗಳಿಗೆ ಅಂಟಿಕೊಂಡಿರುವಂತಹ ಕಲೆ, ಎಣ್ಣೆಜಿಡ್ಡು ಮತ್ತು ಆಹಾರದ ವಾಸನೆಯನ್ನು ತೆಗೆಯಬೇಕಾಗುತ್ತದೆ. ನಾಜೂಕಾಗಿರುವ ಸೆಟ್‌ಗಳನ್ನು ತೊಳೆಯುವ ವಿಧಾನಗಳನ್ನು ಇಲ್ಲಿ ತಿಳಿದುಕೊಳ್ಳಿ... ಡಿಶ್ ಸೋಪ್‌ ಬಳಸುವ ಮುನ್ನ ಸ್ವಲ್ಪ ಇತ್ತ ಗಮನಿಸಿ

Ways To Clean Delicate Crockery Without Breakage

ಇತರ ಸಾಮಾನುಗಳೊಂದಿಗೆ ತೊಳೆಯಬೇಡಿ
ನಿಮ್ಮ ಅಡುಗೆ ಮನೆಯಲ್ಲಿ ಹಲವಾರು ರೀತಿಯ ಸಾಮಾನುಗಳಿರಬಹುದು. ಆದರೆ ಇವುಗಳನ್ನು ನೀವು ಗಾಜಿನ ಪಾತ್ರೆ ಮತ್ತು ಪಿಂಗಾಣಿಗಳ ಜತೆಯಲ್ಲಿ ತೊಳೆಯಲು ಹೋದರೆ ಆಗ ಪಾತ್ರೆ ಒಡೆದು ಹೋಗುವ ಸಾಧ್ಯತೆಯಿರುತ್ತದೆ. ಇದಕ್ಕಾಗಿ ಕೈಯಿಂದಲೇ ಇಂತಹ ಪಾತ್ರೆಗಳನ್ನು ತೊಳೆಯಿರಿ.

ಡಿಶ್ ವಾಶಿಂಗ್ ಟಿಪ್ಸ್


ನಾಜೂಕಾಗಿರುವ ಸಾಮಾನುಗಳನ್ನು ತೊಳೆಯಲು ನೀವು ಡಿಶ್ ವಾಶರ್ ಬಳಸಲು ನಿರ್ಧರಿಸಿದ್ದರೆ ಆಗ ಯಾವುದೇ ಪಾತ್ರೆಗಳಿಗೆ ತೊಂದರೆಯಾಗದ ರೀತಿಯಲ್ಲಿ ಅದನ್ನು ಸ್ವಚ್ಛಗೊಳಿಸುವ ಟಿಪ್ಸ್ ಇದೆ. ಬಿಸಿ ಮಾಡುವಂತಹ ಯಾವುದೇ ತಂತ್ರವನ್ನು ಬಳಸಬೇಡಿ. ಡಿಶ್ ವಾಶರ್‌ನಲ್ಲಿ ಇಂತಹ ನಾಜೂಕಾದ ಸೆಟ್ ಅನ್ನು ಜೋಡಿಸಲು ತಿಳಿದಿರಬೇಕು. ಪ್ರತೀ ಪಾತ್ರೆಯ ಮಧ್ಯೆ ಅಂತರವನ್ನು ಕಾಯ್ದುಕೊಳ್ಳಿ. ಯಾಕೆಂದರೆ ಅದು ಒಂದಕ್ಕೊಂದು ಬಡಿದು ಒಡೆಯುವುದು ತಪ್ಪುವುದು.

ಕೈಯಲ್ಲಿ ತೊಳೆಯುವ ವಿಧಾನ
ನೀವು ನಾಜೂಕಾಗಿರುವ ಅಡುಗೆ ಪಾತ್ರೆಗಳನ್ನು ತೊಳೆಯಲು ಬಯಸುವಾಗ ಇದು ತುಂಬಾ ಒಳ್ಳೆಯ ವಿಧಾನ. ಒಂದೊಂದನ್ನೇ ತೆಗೆದುಕೊಂಡು ತುಂಬಾ ಜಾಗೃತೆಯಿಂದ ತೊಳೆಯಿರಿ. ನೀವು ಗ್ಲಾಸ್ ಟಂಬ್ಲರ್ ತೊಳೆಯುತ್ತಾ ಇದ್ದರೆ ಅದರೊಳಗೆ ಕೈಹಾಕಲು ಪ್ರಯತ್ನಿಸಬೇಡಿ. ಒಳಗಡೆ ತೊಳೆಯಲು ಬ್ರಶ್ ಬಳಸಿ.

ಬಿಸಿ ನೀರು ಬಳಸಿ


ಗಾಜಿನ ಅಥವಾ ಪಿಂಗಣಿಯ ಸೆಟ್ ಅನ್ನು ಒಡೆಯದೆ ತೊಳೆಯಲು ಒಂದು ತುಂಬಾ ಪರಿಣಾಮಕಾರಿ ವಿಧಾನ. ಬಿಸಿ ನೀರನ್ನು ಬಳಸಿ, ಅದರಲ್ಲೂ ಗಾಜಿನ ಪಾತ್ರೆಗಳಲ್ಲಿರುವ ಎಣ್ಣೆಜಿಡ್ಡು ಹೋಗಲಾಡಿಸಲು ಪ್ರಮುಖ ಪಾತ್ರವಹಿಸುತ್ತದೆ ಅಷ್ಟೇ ಏಕೆ ಕೊಳ್ಳೆಯನ್ನು ಕೂಡ ನಿಮಿಷಾರ್ಧದಲ್ಲಿ ಸ್ವಚ್ಛಗೊಳಿಸುತ್ತದೆ

ಪಿಂಗಾಣಿಗಳಿಗೆ ಬಿಸಿ ಹಾಲು
ಅಡುಗೆ ಮನೆಯ ನಾಜೂಕಾಗಿರುವ ಪಾತ್ರೆಗಳನ್ನು ತೊಳೆಯುವಲ್ಲಿ ನೀವು ಎಷ್ಟೇ ಜಾಗೃತೆ ವಹಿಸಿದರೂ ಪಿಂಗಾಣಿಗಳು ಬೇಗನೆ ಬಿರುಕು ಬಿಡುವುದು. ಇದು ಬಿರುಕು ಬಿಡದಂತೆ ತಡೆಯುವುದು ಹೇಗೆ? ಇದನ್ನು ರಾತ್ರಿ ಬಿಸಿ ಹಾಲಿನಲ್ಲಿ ಅದ್ದಿಡಿ, ತದನಂತರ ಮೃದುವಾದ ಡಿಟರ್ಜೆಂಟ್ ನಿಂದ ತುಂಬಾ ಎಚ್ಚರಿಕೆಯಿಂದ ತೊಳೆಯಿರಿ. ಇದನ್ನು ಕೈಯಿಂದಲೇ ತೊಳೆಯಲು ಮರೆಯದಿರಿ.

English summary

Ways To Clean Delicate Crockery Without Breakage

One of the materials which exemplify the interior decoration of your kitchen are the beautiful crockery sets. Basically, the sophistication of your kitchen decoration depends on the style and type of the crockery sets. The maximum breaking incidents happen while washing. So, you need tips to clean your cookery sets without breaking it. So, read on to know the ways to clean your delicate cookery sets and they will serve you for long time
X
Desktop Bottom Promotion