For Quick Alerts
ALLOW NOTIFICATIONS  
For Daily Alerts

ಬಹುಪಯೋಗಿ ಸಿಟ್ರಸ್ ಹಣ್ಣುಗಳ ಜಾದೂಗೆ ತಲೆದೂಗಲೇ ಬೇಕು!

|

ನಾವು ಸಾಧಾರಣವಾಗಿ ಸಿಪ್ಪೆ ತಿನ್ನಲಾಗದ ಹಣ್ಣುಗಳ ತಿರುಳನ್ನು ಸೇವಿಸಿ ಸಿಪ್ಪೆಯನ್ನು ತಿಪ್ಪೆಗೆಸೆಯುತ್ತೇವೆ. ಆದರೆ ಲಿಂಬೆಹಣ್ಣಿನ ಜಾತಿಗೆ ಸೇರಿದ ಕಿತ್ತಳೆ, ಮೂಸಂಬಿ, ಮೊದಲಾದ ಹಣ್ಣುಗಳ ಸಿಪ್ಪೆಯಲ್ಲಿ ಅದ್ಭುತ ಗುಣಗಳಿವೆ.

ಈ ಸಿಪ್ಪೆಯಲ್ಲಿ ವಿಟಮಿನ್‌ಗಳ ಸಹಿತ ಹಲವು ರಸಾಯನಿಕಗಳಿರುವುದರಿಂದ ಚರ್ಮಕ್ಕೆ ಕಳೆ ನೀಡಲು ಸೌಂದರ್ಯ ಪ್ರಸಾದನವಾಗಿಯೂ, ಗ್ಯಾಸ್ ಸ್ಟವ್‌ನ ಕಲೆಗಳನ್ನು ಹೋಗಲಾಡಿಸುವ ಮಾರ್ಜಕವಾಗಿಯೂ, ಬಟ್ಟೆಗಳ ಕಪಾಟಿನೊಳಗೆ ಸುವಾಸನೆಯನ್ನು ಸೂಸುವ ವಾಯು ಶುದ್ಧಕನಾಗಿಯೂ, ಇಲಿ-ಜಿರಲೆಗಳನ್ನು ಓಡಿಸುವ ಕೀಟನಾಶಕನಾಗಿಯೂ ಇದರ ಬಳಕೆ ಅಪಾರ.

Uses Of Citrus Fruits For Cleaning

ಸಾಮಾನ್ಯವಾಗಿ ಕಿತ್ತಳೆ, ಹಾಗೂ ಮೂಸಂಬಿ ಹಣ್ಣುಗಳ ಸಿಪ್ಪೆಗಳನ್ನು ಸುಲಿದ ಹಾಗೆಯೇ ಬಳಸುವುದು ಒಳಿತಲ್ಲ. ಏಕೆಂದರೆ ಗಾಳಿಯಲ್ಲಿ ಕೆಲಕಾಲ ಕಳೆದ ಬಳಿಕ ಸಿಪ್ಪೆ ಕೊಳೆತು ಇದರ ಎಲ್ಲಾ ಗುಣಗಳು ನಾಶವಾಗುತ್ತದೆ. ಸಿಪ್ಪೆ ಸುಲಿದ ಬಳಿಕ ಮೊದಲು ಈ ಸಿಪ್ಪೆಗಳನ್ನು ಗಾಳಿಯಾಡದ ಗಾಜಿನ ಜಾಡಿ ಅಥವಾ ಭರಣಿಯೊಳಗೆ ಹಾಕಿ ಗಟ್ಟಿಯಾಗಿ ಮುಚ್ಚಿಡಬೇಕು. ಈ ಸಿಪ್ಪೆಗಳು ತಾಜಾ ಇರಬೇಕು ಹಾಗೂ ಕೊಳೆತಿರುವ ಭಾಗಗಳನ್ನು ಕತ್ತರಿಸಿ ಬೇರ್ಪಡಿಸಬೇಕು.

ತಾಜಾತನ ಹೆಚ್ಚು ದಿನ ಉಳಿಯಲು ಲಿಂಬೆ ಎಣ್ಣೆಯನ್ನು (citrus oil) ಸೇರಿಸಬಹುದು. ಉಪಯೋಗಿಸಬೇಕಾದಾಗ ಅಗತ್ಯವಿದ್ದುದಷ್ಟನ್ನು ತೆಗೆದು ಉಳಿದುದನ್ನು ಮತ್ತೆ ಗಟ್ಟಿಯಾಗಿ ಮುಚ್ಚಿಡಬೇಕು. ಈ ಸಿಪ್ಪೆಗಳ ಅಪಾರ ಉಪಯೋಗಗಳಲ್ಲಿ ಪ್ರಮುಖವಾದ ಉಪಯೋಗಗಳನ್ನು ಇಲ್ಲಿ ವಿವರಿಸಲಾಗಿದೆ.. ಮುಂದೆ ಓದಿ ಬೆಳ್ಳಿ ವಸ್ತುಗಳು ಹೊಳೆಯಲು ಕೆಲವೊಂದು ಸಲಹೆಗಳು

ತಾಮ್ರ ಹಾಗೂ ಬೆಳ್ಳೆ ಪಾತ್ರೆಯ ಹೊಳಪನ್ನು ಹೆಚ್ಚಿಸುತ್ತದೆ
ತಾಮ್ರ ಮತ್ತು ಬೆಳ್ಳಿಯ ಪಾತ್ರೆಗಳಿಗೆ ಹೊಳಪು ನೀಡುತ್ತದೆ ನಿಮ್ಮ ಮನೆಯ ತಾಮ್ರ, ಹಿತ್ತಾಳೆ, ಬೆಳ್ಳಿ, ಸ್ಟೀಲ್ ಮೊದಲಾದ ಪಾತ್ರೆಗಳು ಕಾಲಕ್ರಮೇಣ ಹೊಳಪು ಕಳೆದುಕೊಳ್ಳುತ್ತವೆ. ಲಿಂಬೆಹಣ್ಣಿನ ಹೋಳನ್ನು ಸಿಪ್ಪೆಸಹಿತ ಒಂದು ಬೋಗುಣಿಯಲ್ಲಿ ನೀರಿಗೆ ಹಾಕಿ ಉಪ್ಪು ಅಥವಾ ಅಡಿಗೆ ಸೋಡಾ ಸೇರಿಸಿ. ಕೊಂಚ ಕಾಲ ಕಳೆದ ಬಳಿಕ ಈ ಲಿಂಬೆಯನ್ನು ಅದೇ ನೀರಿನಲ್ಲಿ ಮುಳುಗಿಸಿ ಪಾತ್ರೆಗಳನ್ನು ತಿಕ್ಕುತ್ತಾ ಬನ್ನಿ. ಬಳಿಕ ಸ್ವಚ್ಛವಾದ ಬಟ್ಟೆಯಿಂದ ಒರೆಸಿದರೆ ಪಾತ್ರೆಗಳು ತಮ್ಮ ನೈಜಹೊಳಪು ಪಡೆಯುತ್ತವೆ.

ಎಣ್ಣೆಕಲೆಗಳನ್ನು ತ್ವರಿತವಾಗಿ ತೆಗೆಯಲು
ಸಾಮಾನ್ಯವಾಗಿ ಎಣ್ಣೆಯಲ್ಲಿ ಕರಿದ, ಹುರಿದ ಬಳಿಕ ಒಲೆಯ ಮೇಲ್ಭಾಗದ ಗೋಡೆಯಲ್ಲಿ, ಕಿಟಕಿಯಲ್ಲಿ, ಸ್ಟವ್‌ನ ಭಾಗಗಳಲ್ಲಿ ಎಣ್ಣೆಯ ಜಿಡ್ಡು ಕುಳಿತುಕೊಳ್ಳುತ್ತದೆ. ಸೋಪಿಗೂ ಬಗ್ಗದ ಈ ಕಲೆಗಳು ಕಿತ್ತಳೆ, ಲಿಂಬೆ ಸಿಪ್ಪೆಗಳ ಒತ್ತಡಕ್ಕೆ ಮಣಿಯುತ್ತವೆ.

ಮೇಜಿನ ಡ್ರಾವರ್‌ನ ತಾಜಾ ಸುವಾಸನೆಗಾಗಿ


ಮೇಜಿನ ಡ್ರಾವರ್ ಅಥವಾ ಕಪಾಟಿನ ಒಳಗೆ ಕೆಲವು ಕಿತ್ತಳೆ ಸಿಪ್ಪೆಗಳನ್ನಿಡುವುದರಿಂದ ಕ್ರಿಮಿಗಳನ್ನು ದೂರವಿಡಬಹುದು ಮಾತ್ರವಲ್ಲದೇ ತಾಜಾ ಲಿಂಬೆಯ ವಾಸನೆಯಿರುವಂತೆ ಮಾಡಬಹುದು. ಆದರೆ ಸಿಪ್ಪೆ ಒಣಗಿದ ಬಳಿಕ ಕೂಡಲೇ ತ್ಯಜಿಸಿ ಬೇರೆ ಸಿಪ್ಪೆಯನ್ನಿಡಬೇಕು. ಇಲ್ಲದಿದ್ದರೆ ಒಣಗಿದ ಸಿಪ್ಪೆಗೆ ಕ್ರಿಮಿಗಳು ಮತ್ತೆ ಧಾಳಿ ಇಡುತ್ತವೆ. ಗ್ಯಾಸ್ ನ ಗ್ರಿಲ್ ಗಳನ್ನು ಸ್ವಚ್ಚಗೊಳಿಸುವುದು ಹೇಗೆ?

ಇಲಿಗಳ ಕಾಟದಿಂದ ಮುಕ್ತಿ ಹೊಂದಬಹುದು
ಸಾಧಾರಣವಾಗಿ ಇಲಿಗಳಿಗೆ ತುಂಬಾ ಸೂಕ್ಷ್ಮವಾದ ಘ್ರಾಣಶಕ್ತಿ ಇರುತ್ತದೆ. ಆದುದರಿಂದ ಅದು ತನ್ನ ಆಹಾರವನ್ನು ಕತ್ತಲೆಯಲ್ಲಿಯೂ ಹುಡುಕಿ ತೆಗೆಯುತ್ತದೆ. ಆದರೆ ಕಿತ್ತಳೆಯ ಮತ್ತು ಲಿಂಬೆಯ ವಾಸನೆ ಅದಕ್ಕೆ ಅಸಹ್ಯ. ಕಿತ್ತಳೆಯ ಸಿಪ್ಪೆಗಳನ್ನು ಅಥವಾ ಲಿಂಬೆಯ ಸಿಪ್ಪೆಗಳನ್ನು ಅಡುಗೆಮನೆ, ನಡುಮನೆ ಹಾಗೂ ಹಿತ್ತಲಲ್ಲಿ ಅಲ್ಲಲ್ಲಿ ಹಾಗೂ ಕಿಟಕಿ ಬಾಗಿಲಿರುವ ಕಡೆ ಹರಡಿಸಿರುವುದರಿಂದ ಇಲಿ ಹತ್ತಿರ ಬರುವುದನ್ನು ತಡೆದಂತಾಗುತ್ತದೆ.

ನಿಮ್ಮ ಸೌಂದರ್ಯವೃದ್ಧಿಗೆ!

ಕೆಲವರಿಗೆ ಸುಲಭವಾಗಿ ದಕ್ಕುವ ವಸ್ತುಗಳನ್ನೇ ಉಪಯೋಗಿಸಿ ತಯಾರಿಸಿದ ಅಲಂಕಾರಿಕ ಒಡವೆ, ಹಾರಗಳನ್ನು ಧರಿಸುವ ಹವ್ಯಾಸವಿರುತ್ತದೆ. ಈ ಹವ್ಯಾಸಕ್ಕೆ ಕಿತ್ತಳೆಸಿಪ್ಪೆ ಒಂದು ಹೊಸ ಆಯಾಮವನ್ನು ನೀಡಬಹುದು. ಕಿತ್ತಳೆ ಸಿಪ್ಪೆಗಳನ್ನು ಚಿಕ್ಕದಾದ ಪಟ್ಟಿಗಳನ್ನಾಗಿ ಕತ್ತರಿಸಿ ಉಂಗುರಗಳನ್ನಾಗಿ ಮಾಡಿ ಹಾರದಂತೆ ಧರಿಸಿ ಮೆರೆಯಬಹುದು. ಆದರೆ ಈ ವಿಧಾನಕ್ಕೆ ಕಿತ್ತಳೆ ಸಿಪ್ಪೆ ಪೂರ್ಣವಾಗಿ ಒಣಗಿದ್ದು ಪಾಲಿಶ್ ಮಾಡಿರಬೇಕು. ಉಪ್ಪು ಕೇವಲ ರುಚಿಗಷ್ಟೇ ಅಲ್ಲ, ಶುಚಿತ್ವಕ್ಕೂ ಬೇಕು!

ಪಾತ್ರೆ ಹೊಳೆಯುವಂತೆ ಮಾಡುತ್ತದೆ
ಸಾಮಾನ್ಯವಾಗಿ ಪಾತ್ರೆ ತೊಳೆಯುವ ಸ್ಟೀಲಿನ ತೊಟ್ಟಿ ಕೆಲಕಾಲದ ಬಳಿಕ ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ. ಈ ಹೊಳಪನ್ನು ಮತ್ತೆ ಪಡೆಯಲು ರಾಸಾಯನಿಕ ಮಾರ್ಜಕ ಹಾಗೂ ಧೃಢವಾದ ಬ್ರಷ್‌ಗಳನ್ನು ಉಪಯೋಗಿಸಿದರೆ ಸೂಕ್ಷ್ಮವಾದ ಗೆರೆಗಳು ಬಿದ್ದು ಹೊಳಪು ಪಡೆಯುತ್ತದೆ. ಬದಲಿಗೆ ಕಿತ್ತಳೆ ಸಿಪ್ಪೆಗಳನ್ನು ಅಥವಾ ಲಿಂಬೆಯ ಸಿಪ್ಪೆಯನ್ನು ಬಿಸಿನೀರಿನಲ್ಲಿ ಹಾಕಿ ಕೊಂಚ ಕಾಲದ ಬಳಿಕ ಈ ನೀರನ್ನು ತೊಟ್ಟಿಯ ಎಲ್ಲೆಡೆ ಚಿಮುಕಿಸಿ ಕೆಲಕಾಲದ ಬಳಿಕ ಮೃದುವಾದ ಬ್ರಷ್ ಅಥವಾ ಬಟ್ಟೆಯಿಂದ ಒರೆಸಿದರೆ ಯಾವುದೇ ಗೀರು ಬೀಳದೇ ತೊಟ್ಟಿ ಥಳಥಳನೆ ಹೊಳೆಯುತ್ತದೆ.


ಹೆಚ್ಚು ಹೊಳಪು ಕಳೆದುಕೊಂಡ ಸ್ಥಳಗಳಲ್ಲಿ (ನೀರು ಹೊರಹೋಗುವೆಡೆ) ಈ ಸಿಪ್ಪೆಗಳನ್ನೇ ಬ್ರಷ್ ನಂತೆ ಉಪಯೋಗಿಸಿ ಉಜ್ಜುವ ಮೂಲಕ ಇಡಿಯ ತೊಟ್ಟಿ ಸ್ವಚ್ಛವಾಗುತ್ತದೆ. ಕಣ್ಣೀರು ಬರದೆಯೇ ಈರುಳ್ಳಿ ಹಚ್ಚಲು ಇಲ್ಲಿದೆ ಸರಳ ಪರಿಹಾರ!

ಮೈಕ್ರೋವೇವ್‌ನ ಒಳಭಾಗವನ್ನು ಸ್ವಚ್ಛಗೊಳಿಸುತ್ತದೆ
ಮೈಕ್ರೋವೇವ್‌ನ ಒಳಭಾಗವನ್ನು ಪೂರ್ಣವಾಗಿ ಸ್ವಚ್ಛಗೊಳಿಸಲು ಕಿತ್ತಳೆ ಸಿಪ್ಪೆ ಹಾಗೂ ಲಿಂಬೆ ಉಪಯೋಗಕ್ಕೆ ಬರುತ್ತದೆ. ಇದಕ್ಕಾಗಿ ಒಂದು ಗಾಜಿನ ಪಾತ್ರೆಯಲ್ಲಿ ನೀರು ಭರ್ತಿ ಮಾಡಿ ಆ ನೀರಿನಲ್ಲಿ ಕಿತ್ತಳೆ, ಲಿಂಬೆಗಳ ಸಿಪ್ಪೆಗಳನ್ನು ಮುಳುಗಿಸಿಡಿ. ಈ ಪಾತ್ರೆಯನ್ನು ಸುಮಾರು ಐದು ನಿಮಿಷಗಳವರೆಗೆ ಮೈಕ್ರೋವೇವ್ ನಲ್ಲಿ ಬೇಯಿಸಿ (ಗ್ರಿಲ್ ಅಗತ್ಯವಿಲ್ಲ).


ಐದು ನಿಮಿಷ ಕಳೆದ ಬಳಿಕ ಬಾಗಿಲು ತೆಗೆಯದೇ ಸುಮಾರು ಹತ್ತು ಹದಿನೈದು ನಿಮಿಷ ಹಾಗೇ ಬಿಡಿ. ಬಳಿಕ ಬಾಗಿಲು ತೆಗೆದು ಬಿಸಿಯಾಗಿರುವ ಗಾಜಿನ ಬೋಗುಣಿಯನ್ನು ಹೊರತೆಗೆದು ನೀರು ಚೆಲ್ಲಿ. ಮೈಕ್ರೋವೇವ್ ನ ಒಳಭಾಗವೆಲ್ಲಾ ತೇವವಾಗಿರುತ್ತದೆ. ಈ ತೇವವನ್ನು ಲಿಂಬೆಯ ಅಥವಾ ಕಿತ್ತಳೆಯ ಸಿಪ್ಪೆಯಿಂದ ಒರೆಸಿ ತೆಗೆಯಿರಿ. ಬಳಿಕ ಸ್ವಚ್ಛವಾದ ಒಣಬಟ್ಟೆಯಿಂದ ಇಡಿಯ ಒಳಭಾಗವನ್ನು ಸ್ವಚ್ಛವಾಗಿ ಒರೆಸಿ ಸ್ವಲ್ಪ ಹೊತ್ತು ಬಾಗಿಲು ತೆರೆದಿಟ್ಟು ನಂತರ ಮುಚ್ಚಿರಿ. ಈಗ ಒಳಭಾಗ ಹೊಸತ್ತಾಗಿಯೇ ಇರುತ್ತದೆ.
English summary

Uses Of Citrus Fruits For Cleaning

Citrus fruits are filled with healthy proteins, nutrients and vitamins. Citrus fruits like lemon, orange, lime, grapes etc can be used to lose weight and stay healthy. However, there are many more benefits of citrus fruits. Be it for the skin, or for cleaning the house, you can use the peels or pulp of citrus fruits for many other uses. Lets check out some amazing uses of citrus fruits cleaning the house.
Story first published: Wednesday, July 22, 2015, 17:25 [IST]
X
Desktop Bottom Promotion