For Quick Alerts
ALLOW NOTIFICATIONS  
For Daily Alerts

ರೆಫ್ರಿಜಿರೇಟರ್‌ನ ಸಹಾಯವಿಲ್ಲದೇ ತರಕಾರಿಗಳನ್ನು ಶೇಖರಿಸಿಡಬಹುದೇ?

|

ರೆಫ್ರಿಜಿರೇಟರನ್ನು ಕೆಲವು ಜನ 'ತಂಗಳ ಪೆಟ್ಟಿಗೆ' ಎಂತಲೇ ಕರೆಯುವುದುಂಟು. ಅಂದರೆ ಹಿಂದಿನ ದಿನದ ಆಹಾರವನ್ನು ಕೆಡದಂತೆ ಶೇಖರಿಸಿಡುವ ಪೆಟ್ಟಿಗೆ. ಆದರೆ ಕೆಲವರಿಗೆ ಈ ಫ್ರಿಡ್ಜಿನಲ್ಲಿ ಆಹಾರ ಇಡುವುದೆಂದರೆ ಆಗುವುದಿಲ್ಲ. ಅದಕ್ಕೆ ಅವರದ್ದೇ ಆದ ಕಾರಣಗಳೂ ಇರುತ್ತವೆ. ಫ್ರಿಡ್ಜನ್ನು ಕೊಳ್ಳುವಾಗ ಹಣ ವ್ಯಯಿಸುವುದಲ್ಲದೇ ಅದರ ಬಳಕೆಯಲ್ಲೂ ನಮ್ಮ ಜೇಬಿಗೆ ಕತ್ತರಿಯೇ.

ಇದಕ್ಕೆಲ್ಲ ಹಣ ಖರ್ಚು ಮಾಡಲು ನಿಮಗೆ ಇಷ್ಟವಿಲ್ಲದಿದ್ದರೆ ರೆಫ್ರಿಜಿರೇಟರ ಇಲ್ಲದೆಯೆ ಆಹಾರ ಪದಾರ್ಥಗಳನ್ನು ಕೆಡದಂತೆ ಕಾಪಾಡುವ ಕೆಲವು ವಿಧಾನಗಳಿವೆ ಅವುಗಳನ್ನು ಪಾಲಿಸಿದರಾಯಿತು. ಮಾಂಸ ಮತ್ತು ಹಾಲಿನ ಉತ್ಪನ್ನಗಳನ್ನು ರೆಫ್ರಿಜಿರೇಟರ್ ಇಲ್ಲದೆ ಸಂರಕ್ಷಿಸುವುದು ನಿಜಕ್ಕೂ ಕಷ್ಟದ ಕೆಲಸ. ಇವನ್ನು ಹೊರತು ಪಡಿಸಿ ಹಣ್ಣು, ತರಕಾರಿ ಹಾಗು ಇತರೆ ದೈನಂದಿನ ಸಾಮಗ್ರಿಗಳನ್ನು ರೆಫ್ರಿಜಿರೇಟರ್ ಇಲ್ಲದೆ ಸಂರಕ್ಷಿಸಿ ಇಡಬಹುದು. ಅವುಗಳ ಗುಣಮಟ್ಟದಲ್ಲಿ ಯಾವುದೇ ವ್ಯತ್ಯಾಸವಾಗದಂತೆ ಕಾಪಾಡಬಹುದು. ಯಾವುದು ಅ ವಿಧಾನಗಳು? ಬನ್ನಿ ನೋಡೋಣ.....

Tips To Store Food Without A Fridge

ಬಟ್ಟಲು ನೀರು
ಹಣ್ಣು ಮತ್ತು ತರಕಾರಿಗಳನ್ನು ಸಂರಕ್ಷಿಸುವ ಉತ್ತಮ ಪದ್ಧತಿಯೆಂದರೆ ಅವುಗಳನ್ನು ಒಂದು ಬಟ್ಟಲು ನೀರಿನಲ್ಲಿಡುವುದು. ನೀರು ತಣ್ಣಗಿದ್ದರೆ ತುಂಬಾ ಒಳ್ಳೆಯದು. ನೀರಿನಲ್ಲಿಡುವುದರಿಂದ ತರಕಾರಿಗಳು ಕೊಳೆಯುವುದಿಲ್ಲ. ಆದರೆ ಮುಂದಿನ ಒಂದೆರಡು ದಿನಗಳಲ್ಲಿ ಅವುಗಳನ್ನು ಬಳಸಬೇಕು. ಏಕೆಂದರೆ ನೀರು ಅವುಗಳನ್ನು ಹೆಚ್ಚು ಕಾಲ ತಾಜಾವಾಗಿಡುವುದಿಲ್ಲ.

ತಂಪಾದ ಗಾಳಿಯ ಕೆಳಗೆ
ಇದು ಆಹಾರ ಪದಾರ್ಥಗಳನ್ನು ರೆಫ್ರಿಜಿರೇಟರ್ ಇಲ್ಲದೆ ಸಂರಕ್ಷಿಸಿ ಇಡಬಹುದಾದ ಮತ್ತೊಂದು ವಿಧಾನ. ತಣ್ಣನೆ ಗಾಳಿ ಬಡಿಯುವ ಸ್ಥಳದಲ್ಲಿ ನೀವು ಆಹಾರ ಪದಾರ್ಥಗಳನ್ನಿಟ್ಟಲ್ಲಿ, ಈ ಗಾಳಿಯು ನಿಮ್ಮ ಆಹಾರ ಪದಾರ್ಥಗಳನ್ನು ಸ್ವಲ್ಪ ದಿನಗಳವರೆಗೆ ತಾಜಾ ಆಗಿರುವಂತೆ ನೋಡಿಕೊಳ್ಳಬಲ್ಲದು. ಆಹಾರ ಪದಾರ್ಥಗಳನ್ನು ತೆಳುವಾದ ಬಟ್ಟೆಯ ಕವರುಗಳಲ್ಲಿ ಹಾಕಿ ರಾತ್ರಿಯ ಹೊತ್ತು ಕಿಟಕಿಯ ಬಳಿ ಇಡುವುದರಿಂದ ಆಹಾರಕ್ಕೆ ತಣ್ಣನೆಯ ಗಾಳಿ ಚನ್ನಾಗಿ ತಗುಲುವುದು. ಗ್ಯಾಸ್ ಸಿಲಿಂಡರ್ ಸುರಕ್ಷತೆ: ತಪ್ಪದೇ ಇಂತಹ ಸೂಚನೆಗಳನ್ನು ಪಾಲಿಸಿ!

ಸೂರ್ಯನ ಶಾಖದಲ್ಲಿ ಒಣಗಿಸುವುದು
ಕೆಲವು ಆಹಾರ ಪದಾರ್ಥಗಳನ್ನು ಸೂರ್ಯನ ಶಾಖದಲ್ಲಿ ಒಣಗಿಸುವ ಮೂಲಕ ಸಂರಕ್ಷಿಸುತ್ತಾರೆ. ಆದರೆ ಈ ಪದ್ಧತಿಯಲ್ಲಿ ಎಲ್ಲಾ ರೀತಿಯ ಹಣ್ಣು, ತರಕಾರಿಗಳನ್ನು ಶೇಖರಿಸಿಡಲಾಗದು. ಆದರೆ ಕೆಲವು ಆಹಾರ ಪದಾರ್ಥಗಳನ್ನು ಒಣಗಿಸುವುದರಿಂದ ಸಂರಕ್ಷಿಸಬಹುದು. ನೋಡಿದಿರಾ ಮನೆ ಎಂದರೆ ಫ್ರಿಡ್ಜ್ ಬೇಕೇ ಬೇಕು ಎಂದೇನಿಲ್ಲ. ಅದು ಇಲ್ಲದೆಯೂ ಆಹಾರ, ಹಣ್ಣು, ತರಕಾರಿಗಳನ್ನು ಕೆಡದಂತೆ ಜೋಪಾನವಾಗಿಡಬಹುದು. ಹಾಗೂ ತಾಜಾವಾಗಿ ಕೂಡ ಸೇವಿಸಬಹುದು.

English summary

Tips To Store Food Without A Fridge

There are quite a few reasons why you'd want to store food without a refrigerator. The operating expenses for a refrigerator are quite huge with the refrigerator itself making a gaping hole in your pocket. Let us look at these ways to store food without a fridge. Read on.....
Story first published: Tuesday, January 27, 2015, 18:11 [IST]
X
Desktop Bottom Promotion