For Quick Alerts
ALLOW NOTIFICATIONS  
For Daily Alerts

ಪಾತ್ರೆ ತೊಳೆಯುವುದೇ ಸಮಸ್ಯೆ ಆಗಿ ಬಿಟ್ಟಿದೆ! ಏನು ಮಾಡ್ಲಿ?

By Arshad
|

ಟೀವಿಯಲ್ಲಿ ಹೊಸರುಚಿಯನ್ನು ತೋರಿಸುವವರು ಅಡುಗೆಯ ಎಲ್ಲಾ ವಿಧಾನವನ್ನು ತೋರಿಸಿದರೂ ತೋರದಿರುವುದೆಂದರೆ ತರಕಾರಿ ತೊಳೆಯುವುದು, ಕತ್ತರಿಸುವುದು ಮತ್ತು ಬಳಿಕ ಪಾತ್ರೆ ತೊಳಯುವುದು! ಈ ಅಡುಗೆ ಇಷ್ಟು ಬೇಗ ಸಿದ್ಧವಾಗುತ್ತದೆ, ಇಷ್ಟೇ ನಿಮಿಷ ಸಾಕು ಎಂದೆಲ್ಲಾ ಅಡುಗೆಯ ಬಗ್ಗೆ ಹೇಳಿರುವವರು ಈ ತರಕಾರಿ ತೊಳೆಯುವ, ಕತ್ತರಿಸುವ, ಬಳಿಕ ಪಾತ್ರೆ ತೊಳೆಯುವ ಸಮಯವನ್ನು ಪರಿಗಣಿಸಿರುವುದೇ ಇಲ್ಲ.

ವಾಸ್ತವವಾಗಿ ಯಾವುದೇ ಅಡುಗೆಯಲ್ಲಿ ಇವೂ ಸಹಾ ಸಮಯವನ್ನು ಕಬಳಿಸುವ, ಆದರೆ ಅತಿ ಅಗತ್ಯವಾದ ಕೆಲಸಗಳಾಗಿವೆ. ತರಕಾರಿ ಕತ್ತರಿಸಲು ಮತ್ತು ತೊಳೆಯಲು ಯಾರಾದರೂ ಸಹಾಯಕ್ಕೆ ಬಂದರೂ ಪಾತ್ರೆ ತೊಳೆಯಲು ಮಾತ್ರ ಯಾರೂ ಹತ್ತಿರ ಸುಳಿಯುವುದಿಲ್ಲ. ಊಟದ ಬಳಿಕ ಗುಡ್ಡೆ ಬಿದ್ದಿರುವ ಪಾತ್ರೆ, ತಟ್ಟೆ ಲೋಟಗಳನ್ನು ನೋಡಿದಾಗ ಗುಡ್ಡದ ತುದಿಯಲ್ಲಿರುವ ದೇವಸ್ಥಾನಕ್ಕೆ ಮೆಟ್ಟಿಲು ಹತ್ತುವ ಮೊದಲು ಆಗುವ ಅನುಭವವೇ ಆಗುತ್ತದೆ. ನಂಬಿದರೆ ನಂಬಿ ಬಿಟ್ಟರೆ ಬಿಡಿ: ಅಡುಗೆ ಪಾತ್ರೆ ಕೂಡ ಸುರಕ್ಷಿತವಲ್ಲ!

ಸಾಮಾನ್ಯವಾಗಿ ನಮ್ಮೆಲ್ಲರಿಗೆ ಊಟವಾದ ತಕ್ಷಣ ದೈಹಿಕವಾದ ಯಾವುದೇ ಕೆಲಸವನ್ನು ಮಾಡಲು ಮನಸ್ಸು ಬರುವುದಿಲ್ಲ. ಏಕೆಂದರೆ ನಮ್ಮ ರಕ್ತಪರಿಚಲನೆಯ ಸಿಂಹಪಾಲು ಜೀರ್ಣಾಂಗಗಳಿಗೆ ಸಾಗುವುದರಿಂದ ಇತರ ಅಂಗಗಳಲ್ಲಿ ಶಕ್ತಿ ಕಡಿಮೆಯಾಗುತ್ತದೆ. ಆದ್ದರಿಂದ ಎಲ್ಲರೂ 'ಸ್ವಲ್ಪ ಹೊತ್ತು ಬಿಟ್ಟು ತೊಳೆಯುವಾ' ಎಂಬ ನಿರ್ಧಾರವನ್ನೇ ತೆಗೆದುಕೊಳ್ಳುತ್ತಾರೆ. ಆದರೆ ಈ ಅವಧಿಯಲ್ಲಿ ಪಾತ್ರೆಗಳಲ್ಲಿ ಸಾಕಷ್ಟು ನೀರು ಇಲ್ಲದೇ ಇದ್ದರೆ ಅದು ಒಣಗಿದ್ದು ತೊಳೆಯಲು ಹೆಚ್ಚಿನ ಶ್ರಮ ತೆಗೆದುಕೊಳ್ಳುತ್ತದೆ. ಪಾತ್ರೆಗಳ ಸುಟ್ಟ ಕಲೆಯನ್ನು ತೆಗೆಯುವ ವಿಧಾನ ಹೇಗೆ?

ಇದು ಪಾತ್ರೆ ತೊಳೆಯಲು ಇದ್ದ ರೇಜಿಗೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಆದರೆ ಕೊಂಚ ಮುನ್ನೆಚ್ಚರಿಕೆಗಳನ್ನು ಕೈಗೊಂಡರೆ ಪಾತ್ರೆ ತೊಳೆಯುವಂತಹ ಮಹಾಕಾರ್ಯವನ್ನು ನೀರು ಕುಡಿದಷ್ಟು ಸುಲಭವಾಗಿ ಮುಗಿಸಿಬಿಡಬಹುದು. ಹೇಗೆ ಎಂಬ ಕುತೂಹಲ ಮೂಡಿತೇ, ಕೆಳಗಿನ ಸ್ಲೈಡ್ ಶೋ ಅನ್ನು ಕೊನೆಯವರೆಗೂ ನೋಡುತ್ತಾ ಹೋಗಿ, ಹಾಗೇ ಅನುಸರಿಸಿ...

ಒಂದು ಅವಧಿಯನ್ನು ಮೀಸಲಾಗಿಡಿ

ಒಂದು ಅವಧಿಯನ್ನು ಮೀಸಲಾಗಿಡಿ

ಊಟದ ಬಳಿಕ ಅಥವಾ ನಿಮಗೆ ಸೂಕ್ತವಾದ ಅವಧಿಯನ್ನು ಮೊದಲೇ ನಿಗದಿಪಡಿಸಿ. ಇದಕ್ಕೊಂದು ಅಲಾರಾಂ ಇಟ್ಟು ಇಷ್ಟು ಪಾತ್ರೆಗಳನ್ನು ಇಷ್ಟು ಸಮಯದೊಳಕ್ಕೆ ಖಂಡಿತಾ ಮುಗಿಸುವೆ ಎಂದು ನಿಮಗೆ ನೀವೇ ಪ್ರೋತ್ಸಾಹಿಸಿಕೊಳ್ಳಿ. ಅಂತೆಯೇ ಆ ಹೊತ್ತಿನಲ್ಲಿ ಬೇರೇನನ್ನೂ ಮಾಡದೇ ಕೇವಲ ಪಾತ್ರೆ ತೊಳೆಯುವ ಕೆಲಸವೊಂದನ್ನೇ ಮಾಡಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಒಂದು ಅವಧಿಯನ್ನು ಮೀಸಲಾಗಿಡಿ

ಒಂದು ಅವಧಿಯನ್ನು ಮೀಸಲಾಗಿಡಿ

ನಡುವೆ ಫೋನ್ ಬಂದರೂ ಅತ್ಯಗತ್ಯವಿಲ್ಲದೇ ಇದ್ದರೆ ಉತ್ತರಿಸಲು ಹೋಗದಿರಿ. ಇದರಿಂದ ಬೆಟ್ಟದಷ್ಟಿದ್ದ ಕೆಲಸ ಕೆಲ ಸಮಯದಲ್ಲಿಯೇ ಸಾಸಿವೆಯಷ್ಟಾಗುತ್ತದೆ. ಅಚ್ಚುಕಟ್ಟಾಗಿ ಮಾಡಿದ ಕೆಲಸದ ಮೂಲಕ ಮನವೂ ಹಗುರಾಗುತ್ತದೆ.

ಪಾತ್ರೆಗಳನ್ನು ಆದಷ್ಟು ಬೇಗ ತೊಳೆದುಬಿಡಿ

ಪಾತ್ರೆಗಳನ್ನು ಆದಷ್ಟು ಬೇಗ ತೊಳೆದುಬಿಡಿ

ಇನ್ನೊಂದು ಸುಲಭ ಮತ್ತು ಅತ್ಯಂತ ಫಲಪ್ರದ ವಿಧಾನವೆಂದರೆ ಪಾತ್ರೆಗಳು ತೊಳೆಯುವ ಸ್ಥಳಕ್ಕೆ ಬಂದ ಬಳಿಕ ಎಷ್ಟು ಬೇಗ ಸಾಧ್ಯವೋ ಅಷ್ಟರಲ್ಲಿಯೇ ತೊಳೆದು ಒಣಗಿಸಿ ಅದರ ಯಥಾಸ್ಥಾನದಲ್ಲಿಟ್ಟುಬಿಡಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪಾತ್ರೆಗಳನ್ನು ಆದಷ್ಟು ಬೇಗ ತೊಳೆದುಬಿಡಿ

ಪಾತ್ರೆಗಳನ್ನು ಆದಷ್ಟು ಬೇಗ ತೊಳೆದುಬಿಡಿ

ಹೀಗೇ ಒಂದೊಂದಾಗಿ ಎಲ್ಲಾ ಪಾತ್ರೆಗಳನ್ನು ತೊಳೆದಾದ ಬಳಿಕ ಕಡೆಯಲ್ಲಿ ಮುಖ್ಯ ಅಡುಗೆಯ ಪಾತ್ರೆ (ಅನ್ನ, ಸಾರಿನ ಪಾತ್ರೆಗಳು, ಮುಖ್ಯ ಖ್ಯಾದ್ಯ ತಯಾರಿಸಿದ್ದ ದೊಡ್ಡಪಾತ್ರೆ)ಗಳನ್ನು ತೊಳೆಯಲು ಹೆಚ್ಚು ತ್ರಾಸು ಬೇಕಾಗಿಲ್ಲ.

ಕನಿಷ್ಠ ಪಾತ್ರೆಗಳನ್ನು ಉಪಯೋಗಿಸಿ

ಕನಿಷ್ಠ ಪಾತ್ರೆಗಳನ್ನು ಉಪಯೋಗಿಸಿ

ಮನೆಯವರೆಲ್ಲರೂ ಜೊತೆಗೆ ಊಟಕ್ಕೆ ಕುಳಿತು ನಡುವಣ ಒಂದೇ ದೊಡ್ಡ ಬೋಗುಣಿ ಅಥವಾ ಪಾತ್ರೆಯಿಂದ ತಮ್ಮ ತಮ್ಮ ತಟ್ಟೆಗಳಿಗೆ ಬಡಿಸಿಕೊಳ್ಳುವುದು ಪಾತ್ರೆಗಳ ಕನಿಷ್ಟ ಉಪಯೋಗಕ್ಕೆ ಮತ್ತು ಮನೆಯ ಸದಸ್ಯರ ನಡುವೆ ಉತ್ತಮ ಬಾಂಧವ್ಯಕ್ಕೆ ಪೂರಕವಾಗಿದೆ. ಸಾಧ್ಯವಾದಷ್ಟು ಪಾತ್ರೆಗಳನ್ನು ಒಂದಕ್ಕಿಂತ ಹೆಚ್ಚಿನ ಉಪಯೋಗಕ್ಕೆ ಬಳಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕನಿಷ್ಠ ಪಾತ್ರೆಗಳನ್ನು ಉಪಯೋಗಿಸಿ

ಕನಿಷ್ಠ ಪಾತ್ರೆಗಳನ್ನು ಉಪಯೋಗಿಸಿ

ಉದಾಹರಣೆಗೆ ಸಾರು ಹಾಕಿದ್ದ ಬೋಗುಣಿಯನ್ನೇ ಕೇವಲ ನೀರು ತೆಗೆದು ಸಿಹಿಯನ್ನು ತಿನ್ನಲು ನೀಡಬಹುದು. ಮನೆಯ ಎಲ್ಲಾ ಸದಸ್ಯರೂ ಇದನ್ನು ಅನುಸರಿಸಿದರೆ ಅಷ್ಟರ ಮಟ್ಟಿಗೆ ಪಾತ್ರೆಗಳು ಕಡಿಮೆಯಾದಂತೆ.

ಎಲ್ಲಾ ಪಾತ್ರೆಗಳನ್ನು ತೊಳೆಯುವ ಸಿಂಕಿನೊಳಗಿರಿಸಬೇಡಿ

ಎಲ್ಲಾ ಪಾತ್ರೆಗಳನ್ನು ತೊಳೆಯುವ ಸಿಂಕಿನೊಳಗಿರಿಸಬೇಡಿ

ಕೆಲವರು ಊಟವಾದ ತಕ್ಷಣ ಎಲ್ಲಾ ಪಾತ್ರೆಗಳನ್ನು ಸಿಂಕಿನೊಳಗೆ ತುರುಕಿಸಿ ಬಿಡುತ್ತಾರೆ. ಇದನ್ನು ನೋಡಿದ ಕೂಡಲೇ ತೊಳೆಯುವ ರೇಜಿಗೆ ಹೆಚ್ಚಾಗುತ್ತದೆ. ಬದಲಿಗೆ ಪಾತ್ರೆಗಳನ್ನು ಸಿಂಕಿನ ಪಕ್ಕದಲ್ಲಿ ಹರಡಿ ಇಟ್ಟು ಒಂದೇ ಬಗೆಯ ಪಾತ್ರೆಗಳನ್ನು ಜೊತೆಯಾಗಿಸಿಡಿ. ಉದಾಹರಣೆಗೆ ತಟ್ಟೆಗಳನ್ನು ಒಂದರ ಮೇಲೊಂದರಂತೆ, ಒಂದೇ ಗಾತ್ರದ ಬೋಗುಣಿಗಳನ್ನು ಒಂದರ ಮೇಲೊಂದರಂತೆ ಇಡುವುದರಿಂದ ತೊಳೆಯುವಾಗ ಒಂದು ಬಗೆಯ ಪಾತ್ರೆಗಳನ್ನು ಮುಗಿಸುತ್ತಾ ಹೋದಂತೆ ಅಚ್ಚುಕಟ್ಟಾಗಿ ಜೋಡಿಸಿಡಲು ಅನುವಾಗುತ್ತದೆ.

ಪಾತ್ರೆಗಳನ್ನು ಒಣಗಲು ಬಿಡಬೇಡಿ

ಪಾತ್ರೆಗಳನ್ನು ಒಣಗಲು ಬಿಡಬೇಡಿ

ಒಂದು ವೇಳೆ ಪಾತ್ರೆಗಳು ಸಿಂಕ್ ಅಥವ ತೊಟ್ಟಿಯ ಬಳಿ ಸಂಗ್ರಹವಾದ ಬಳಿಕ ತಕ್ಷಣ ತೊಳೆಯಲಾಗದಿದ್ದರೆ ದೊಡ್ಡ ಪಾತ್ರೆಯಲ್ಲಿ ಚಿಕ್ಕಪಾತ್ರೆ, ಅದರೊಳಗೆ ಇನ್ನೂ ಚಿಕ್ಕ ಪಾತ್ರೆ ಹೀಗೆ ಜೋಡಿಸಿ ನೀರು ತುಂಬಿಸಿಡಿ.ಒಂದೆರಡು ತೊಟ್ಟು ಡಿಶ್ ವಾಶಿಂಗ್ ಲಿಕ್ವಿಡ್ ದ್ರವವನ್ನು ಈ ನೀರಿಗೆ ಸೇರಿಸಿ. ಅಥವಾ ಸಿಂಕಿನ ನೀರು ಹೋಗುವ ಸ್ಥಳದಲ್ಲಿ ಮುಚ್ಚಳ ಮುಚ್ಚಿ ಇಡಿಯ ತೊಟ್ಟಿಯನ್ನು ನೀರಿನಿಂದ ತುಂಬಿಸಿ ಎಲ್ಲಾ ಪಾತ್ರೆಗಳು ಮುಳುಗುವಂತಿಡಿ. ಕೊಂಚ ಸಮಯದ ಬಳಿಕ ಮುಚ್ಚಳ ತೆಗೆದು ನೀರನ್ನು ಹೊರಹಾಕಿ ತೊಳೆಯಲು ಪ್ರಾರಂಭಿಸಿದರೆ ಪಾತ್ರೆಗಳ ಒಳಗಣ ಆಹಾರ ತುಂಬಾ ಸಡಿಲವಾಗಿದ್ದು ಸುಲಭವಾಗಿ ತೊಲಗುತ್ತದೆ. ಆದರೆ ಈ ನೀರನ್ನು ಒಂದು ಘಂಟೆಗಿಂತ ಹೆಚ್ಚು ಇಡಬೇಡಿ, ಬಳಿಕ ವಾಸನೆ ಬರಲು ಪ್ರಾರಂಭವಾಗುತ್ತದೆ.

English summary

Tips To Make Dishwashing Easier

Kitchen after dinner is quite messy and doing the dishwashing is a great task. We usually tend to avoid doing it at the moment. This creates chaos in the kitchen. We are here to share some brilliant tips to make dishwashing easier. Cleaning the bowls after meals is tiresome task. But, when you do it with a positive attitude and with a twist then diswashing is interesting! Check our tips on how you can make your dishwashing interesting.
X
Desktop Bottom Promotion