For Quick Alerts
ALLOW NOTIFICATIONS  
For Daily Alerts

ನಿಬ್ಬೆರಗಾಗಿಸುವ ಎಳೆ ಲಿಂಬೆಹಣ್ಣಿನ ಅದ್ಭುತ ಗುಣಗಳು

|

ಹೌದು..! ಲಿಂಬೆ ಹಣ್ಣಿನ ಅವಶ್ಯಕತೆಯು ನಿಮಗೆ ಯಾವಾಗ ಉ೦ಟಾಗುತ್ತದೆಯೋ ಖ೦ಡಿತ ಹೇಳಲಾಗದು. ಲಿ೦ಬೆ ಹಣ್ಣಿನ ರಸ ಹಾಗೂ ಲಿ೦ಬೆಯ ಇತರ ಭಾಗಗಳ ಕೆಲವೊ೦ದು ಪ್ರಯೋಜನಗಳ ಬಗ್ಗೆ ನಿಮಗೀಗಾಗಲೇ ಸ್ವಲ್ಪ ಮಟ್ಟಿಗೆ ತಿಳಿದಿರಬಹುದು. ಆದರೆ, ಇದರ ಪ್ರಯೋಜನಗಳ ಕುರಿತಾದ ನಿಮ್ಮ ಪಟ್ಟಿಯು ಮತ್ತಷ್ಟು ಹಿಗ್ಗುವ ಸಾಧ್ಯತೆಯಿದೆ.

ಲಿ೦ಬೆಹಣ್ಣಿನ ಕುರಿತು ಗೌಪ್ಯವಾಗಿರಿಸಲಾಗಿರುವ ಅತ್ಯುತ್ತಮವಾದ ಪ್ರಯೋಜನಗಳನ್ನು ಇಲ್ಲಿ ಪ್ರಸ್ತಾವಿಸಲಾಗಿದೆ. ಇವುಗಳನ್ನು ಅವಲೋಕಿಸಿದ ಮೇಲ೦ತೂ ನೀವು ಲಿ೦ಬೆ ಹಣ್ಣನ್ನು ಬಳಿಯಲ್ಲಿರಿಸಿಕೊಳ್ಳದಿರಲು ಯಾವುದೇ ಕಾರಣವಿರುವುದಿಲ್ಲ.

ತುಕ್ಕು ಹಿಡಿದ ವಸ್ತು
ನಿಂಬೆ ರಸ ಹಾಗೂ ಸ್ವಲ್ಪ ಉಪ್ಪು ಬೆರೆಸಿ ತುಕ್ಕು ಹಿಡಿದ ವಸ್ತುವಿನ ಮೇಲೆ ಹಚ್ಚಿ.ಸ್ವಲ್ಪ ಸಮಯ ಬಿಟ್ಟು ಅದನ್ನು ಉಜ್ಜಿ ತೊಳೆಯುವುದರಿಂದ ಸ್ವಚ್ಛವಾಗುತ್ತದೆ. ತುಕ್ಕು ಪೂರ್ಣ ಪ್ರಮಾಣದಲ್ಲಿ ಹೋಗದಿದ್ದರೆ ಮತ್ತೆ ಮತ್ತೆ ಹೀಗೆ ನಿಂಬೆ ರಸ, ಉಪ್ಪಿನ ಮಿಶ್ರಣ ಬಳಸಿ ಶುದ್ಧ ಮಾಡಬಹುದು. ಮನೆಯಲ್ಲಿ ಇರುವೆಗಳ ಕಾಟವೇ? ಚಿಂತಿಸಬೇಡಿ ಇಲ್ಲಿದೆ ಪರಿಹಾರ

Things you can clean with lemon

ಹಿತ್ತಾಳೆ
ಒಂದು ನಿಂಬೆ ಹಣ್ಣನ್ನು ಅರ್ಧ ಕತ್ತರಿಸಿ ನೀವು ಶುದ್ಧ ಮಾಡಬೇಕೆಂದಿರುವ ಪಾತ್ರೆಯ ಮೇಲೆ ಅದನ್ನು ಹಿಂಡಿ ಅದಕ್ಕೆ ಚಿಟಕಿ ಉಪ್ಪು ಬೆರೆಸಿ ಪಾತ್ರೆ ಬೆಳಗಿದರೆ ಅದು ಪಳಪಳನೆ ಹೊಳೆಯುತ್ತದೆ.ನಿಂಬೆ ಹಣ್ಣಿನ ಸಿಪ್ಪೆಯನ್ನು ಹಿತ್ತಾಳೆ ವಸ್ತುವಿನ ಮೇಲೆ ಉಜ್ಜಿ.ಪಾತ್ರ ತೊಳೆಯಲು ಹಿಂದಿನ ಕಾಲದಿಂದಲೂ ಬಂದಿರುವ ಒಂದು ರೂಢಿಯಾಗಿದೆ.

ಗಾಜಿನ ಬಾಗಿಲುಗಳು
ಗಾಜಿನ ವಸ್ತುಗಳನ್ನು ಸಂಪೂರ್ಣ ಸ್ವಚ್ಛ ಮಾಡುವ ನೈಸರರ್ಗಿಕ ಗುಣ ಹೊಂದಿದೆ.ನಿಂಬೆ ಮಿಶ್ರಿತ ಸೋಪಿನಿಂದ ಗಾಜನ್ನು ಶುದ್ಧ ಮಾಡಿದಾಗ ಅದು ಮಂಕಾಗಿದ್ದರೆ, ನಿಂಬೆ ಹಣ್ಣನ್ನು ಅರ್ಧ ಕತ್ತರಿಸಿ ಅದನ್ನು ಗಾಜಿನ ಮೇಲೆ ಉಜ್ಜಿ ಸ್ವಚ್ಛವಾಗುತ್ತದೆ. ನಿಂಬೆ ರಸವನ್ನು ಶುದ್ಧ ನೀರಿನಲ್ಲಿ ಮಿಶ್ರ ಮಾಡಿ ಅದನ್ನು ಸ್ಪ್ರೇ ಬಾಟಲಿನಲ್ಲಿ ಹಾಕಿ ಗಾಜಿನ ಮೇಲ ಸ್ಪ್ರೇ ಸ್ವಲ್ಪ ಸಮಯ ಹಾಗೇ ಬಿಡಿ. ಅರ್ಧಗಂಟೆ ಬಿಟ್ಟು ಮತ್ತೆ ಗಾಜಿನ ಬಾಗಿಲನ್ನು ತೇವ ಮಾಡಿ ನಂತರ ನೀರಿನ ಸ್ಪಂಜಿನಿಂದ ಅದನ್ನು ವರೆಸಿ.

ತಲೆಹೊಟ್ಟಿಗೆ ಮ೦ಗಳ ಹಾಡಿರಿ
ತಲೆಹೊಟ್ಟಿನ ಸಮಸ್ಯೆಗೂ ಲಿ೦ಬೆ ಹಣ್ಣಿನ ಬಳಕೆ ಎ೦ಬ ಲಿ೦ಬೆ ಹಣ್ಣಿನ ಈ ಪ್ರಯೋಜನದ ಬಗ್ಗೆ ತಿಳಿದಿರುವುದು ತುಸು ಕಡಿಮೆಯೇ. ಇದಕ್ಕಾಗಿ ನೀವು ಒ೦ದು ಚಮಚದಷ್ಟು ಲಿ೦ಬೆ ರಸವನ್ನು ಒದ್ದೆಯಾದ ಕೂದಲಿಗೆ ಹಚ್ಚಬೇಕು. ಈ ಚಿಕಿತ್ಸೆಯನ್ನು ಶಾ೦ಪೂವಿನೊ೦ದಿಗೆ ಕೈಗೊಳ್ಳಿರಿ. ತದನ೦ತರ ಎರಡು ಟೀ ಚಮಚದಷ್ಟು ಲಿ೦ಬೆ ರಸ ಮತ್ತು ಎರಡು ಕಪ್ ಗಳಷ್ಟು ನೀರಿನ ಮಿಶ್ರಣವನ್ನು ಕೂದಲಿಗೆ ಹಚ್ಚಿರಿ. ದಿನ ಬಿಟ್ಟು ದಿನ ಹೀಗೆ ನಿಮ್ಮ ತಲೆಹೊಟ್ಟು ಸ೦ಪೂರ್ಣ ನಿವಾರಣೆಯಾಗುವವರೆಗೂ ಇದನ್ನು ಮು೦ದುವರಿಸಿರಿ. ಗ್ಯಾಸ್ ಸಿಲಿಂಡರ್ ಸುರಕ್ಷತೆ: ತಪ್ಪದೇ ಇಂತಹ ಸೂಚನೆಗಳನ್ನು ಪಾಲಿಸಿ!

ತುರಿಮಣೆಯನ್ನು ಸ್ವಚ್ಛಗೊಳಿಸಲು
(Food Grater) ತುರಿಮಣೆಯ ರ೦ಧ್ರಗಳಲ್ಲಿ ಸಿಲುಕಿಕೊಳ್ಳುವ ಆಹಾರವಸ್ತುವಿನ ಸಣ್ಣ ಸಣ್ಣ ತುಣುಕುಗಳನ್ನು ಪೂರ್ಣವಾಗಿ ಸ್ವಚ್ಚಗೊಳಿಸುವುದು ಅಸಾಧ್ಯವೇ ಎ೦ದೆನಿಸಬಹುದು. ಮು೦ದಿನ ಬಾರಿ ನಿಮ್ಮ ತುರಿಮಣೆಯನ್ನು ತೊಳೆಯುವ ಕಿರಿಕಿರಿಯಾದ ಕೆಲಸವನ್ನು ಕೈಗೊಳ್ಳುವಾಗ, ತುರಿಮಣೆಯ ಎರಡೂ ಬದಿಗಳಿಗೆ ಅರ್ಧ ಲಿ೦ಬೆಯ ಹೋಳಿನಿ೦ದ ಚೆನ್ನಾಗಿ ಉಜ್ಜಿರಿ. ಹೀಗೆ ಮಾಡಿದಾಗ, ಆ ಚಿಕ್ಕ ಚಿಕ್ಕ ತುಣುಕುಗಳು ಸುಲಭವಾಗಿ ಹೊರಬರುತ್ತವೆ ಹಾಗೂ ಬಲುಬೇಗನೆ ನಿಮ್ಮ ತುರಿಮಣೆಯು ಮತ್ತೊ೦ದು ಬಾರಿ ಉಪಯೋಗಕ್ಕೆ ಸಿದ್ಧವಾಗಿರುತ್ತದೆ.

English summary

Things you can clean with lemon

Lemons are one of the most versatile fruits out there. And no, we’re not just talking about in cooking! Lemon juice is an acid, a natural disinfectant, and a nutritional powerhouse.Read on for incredible ways to use lemons. Have a favorite use of your own?
Story first published: Tuesday, March 3, 2015, 19:46 [IST]
X
Desktop Bottom Promotion