For Quick Alerts
ALLOW NOTIFICATIONS  
For Daily Alerts

ದುರ್ವಾಸನೆ ಬೀರುವ ಬಾತ್‌ರೂಮ್‍‌ನ ಸ್ವಚ್ಛತೆಗೆ ಸರಳ ಟಿಪ್ಸ್

By Deepak
|

ಸಾಮಾನ್ಯವಾಗಿ ಒಂದು ಮನೆಯ ಸ್ವಚ್ಛತೆಯನ್ನು ಅವರ ಶೌಚಾಲಯದ ಸ್ಥಿತಿಯ ಮೂಲಕ ಅಳೆಯುವುದು ಹಿರಿಯರು ಅನುಸರಿಸಿಕೊಂಡು ಬಂದಂತಹ ರೀತಿ. ಏಕೆಂದರೆ ಮನೆಯನ್ನು ಚೊಕ್ಕಟವಾಗಿಟ್ಟುಕೊಳ್ಳಲು ಸಾಕಷ್ಟು ಸಮಯಾವಕಾಶ ದೊರಕದೇ ಇದ್ದರೂ ಶೌಚಾಲಯವನ್ನು ಕಡ್ಡಾಯವಾಗಿ ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಮನೆಯವರು ವಹಿಸುವ ಕಾಳಜಿಯನ್ನು ಹಿರಿಯರು ಗಮನಿಸುತ್ತಾರೆ.

ಮನೆ ಎಂದರೆ ಎಲ್ಲರಿಗೂ ತಮ್ಮ ಪಾಲಿನ ಸ್ವರ್ಗವಾಗಿದೆ. ದಿನದ ಜಂಜಾಟಗಳಿಂದ ಸಂಜೆ ಮನೆಗೆ ಹಿಂದಿರುಗಿದ ಬಳಿಕ ಇಡಿಯ ಮನೆಯನ್ನು ಸ್ವಚ್ಛಗೊಳಿಸಲು ತ್ರಾಣವಿಲ್ಲದಿದ್ದರೂ ಶೌಚಾಲಯವನ್ನು ಮಾತ್ರ ಕಡ್ಡಾಯವಾಗಿ ದಿನಕ್ಕೊಮ್ಮೆಯಾದರೂ ಸ್ವಚ್ಛಗೊಳಿಸಲೇಬೇಕು. ಆಗಲೇ ದುರ್ಗಂಧದಿಂದ ಪೂರ್ಣವಾಗಿ ಮುಕ್ತಿ ದೊರಕುತ್ತದೆ.

Simple Ways To Get Rid Of Bathroom Odours

ಹೌದು, ಬಾತ್‌ರೂಮಿನಿಂದ ಬರುವ ದುರ್ವಾಸನೆಯನ್ನು ಯಾರೂ ಸಹ ಸಹಿಸಿಕೊಳ್ಳಲು ಸಾಧ್ಯವಿರುವುದಿಲ್ಲ. ಅದರಲ್ಲಿಯೂ ಮನೆಗೆ ಅತಿಥಿಗಳು ಬಂದಾಗ, ಇದರಿಂದ ತೀವ್ರತರದಲ್ಲಿ ಮುಜುಗರವುಂಟಾಗುತ್ತದೆ. ಒಂದು ವೇಳೆ ನಿಮ್ಮ ಬಾತ್‌ರೂಮ್ ತಾಜಾತನದಿಂದ ಒಳ್ಳೆಯ ಸುವಾಸನೆಯಿಂದ ಕೂಡಿರಬೇಕು ಎಂದಾದಲ್ಲಿ, ಅದಕ್ಕೆ ಅಗತ್ಯವಾಗಿರುವ ಕೆಲವೊಂದು ಪದಾರ್ಥಗಳನ್ನು ಮತ್ತು ಅದನ್ನು ಬಳಸಿಕೊಂಡು, ಬಾತ್‍ರೂಮ್ ದುರ್ವಾಸನೆಯನ್ನು ನಿವಾರಿಸಿಕೊಳ್ಳುವ ಬಗೆಯನ್ನು ನಾವು ಇಂದು ನಿಮಗೆ ಹೇಳಿಕೊಡುತ್ತೇವೆ.

ನಾವು ಇಂದು ತಿಳಿಸಿಕೊಡುತ್ತಿರುವ ಮಾರ್ಗಗಳು, ದುರ್ವಾಸನೆಯನ್ನು ಹೋಗಲಾಡಿಸುವ ಜೊತೆಗೆ, ನಿಮ್ಮ ಶೌಚಾಲಯವು ಶುಭ್ರವಾಗಿ ಕಾಣುವಂತೆ ಮಾಡುತ್ತದೆ. ಕಮೋಡ್ ಮೇಲೆ ಇರುವ ಕಲೆಗಳು, ಇತ್ಯಾದಿಗಳು ಸಹ ಈ ಪರಿಹಾರಗಳ ಮೂಲಕ ನಿವಾರಿಸಿಕೊಳ್ಳಬಹುದು. ಬನ್ನಿ ಇನ್ನು ತಡ ಮಾಡದೆ ಆ ಪರಿಹಾರ ಮಾರ್ಗಗಳು ಯಾವುವು ಎಂದು ತಿಳಿದುಕೊಂಡು ಬರೋಣ. ಮನೆಯ ಬಾತ್‌ರೂಮ್‌‌ ಸ್ವಲ್ಪ ದೊಡ್ಡದಾಗಿ ಕಾಣುವಂತೆ ಮಾಡಬೇಕೇ?

ಲಿಂಬೆರಸ

ಬಾತ್‌ರೂಮಿನಲ್ಲಿರುವ ದುರ್ವಾಸನೆಯನ್ನು ತಡೆಯಲು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುವ ಒಂದು ಪದಾರ್ಥ ಇದಾಗಿದೆ. ಇದಕ್ಕಾಗಿ ನೀವು ಮಾಡಬೇಕಾದುದು ಇಷ್ಟೇ, ಲಿಂಬೆ ರಸವನ್ನು ನೆಲದ ಮೇಲೆ ಮತ್ತು ಶೌಚಾಲಯದ ಕಮೋಡ್‌ನ ಮೇಲೆ ಚಿಮುಕಿಸಿ. ಕಮೋಡ್‌ನ ಮುಚ್ಚಳವನ್ನು ಮತ್ತು ಬಾತ್‌ರೂಮಿನ ಬಾಗಿಲನ್ನು ಮುಚ್ಚಿ. ಸ್ವಲ್ಪ ಸಮಯದ ನಂತರ ಬಾತ್‌ರೂಮ್ ಅನ್ನು ಸ್ವಚ್ಛ ನೀರಿನಿಂದ ತೊಳೆಯಿರಿ.

ಅಡುಗೆ ಸೋಡಾ ಬಳಸಿ

ಶೌಚಾಲಯದಲ್ಲಿ ಶೌಚದ ಕಮೋಡ್ (commode) ಸ್ವಚ್ಛಗೊಳಿಸುವುದೇ ಹೆಚ್ಚಿನ ಶ್ರಮ ಬೇಡುವ ಕೆಲಸವಾಗಿದೆ. ಇದಕ್ಕೆ ಇನ್ನೂ ಸುಲಭ ಉಪಾಯವಿದೆ. ಮೊದಲು ನೀರನ್ನು ಫ್ಲಶ್ ಮಾಡಿ ಖಾಲಿ ಮಾಡಿ. ಬಳಿಕ ಒಂದು ಕಪ್ ಅಡುಗೆ ಸೋಡಾ ಬೆರೆಸಿದ ನೀರು ಹಾಕಿ ಮುಚ್ಚಳ ಮುಚ್ಚಿ. ಒಂದು ಗಂಟೆಯ ಬಳಿಕ ಮುಚ್ಚಳ ಮುಚ್ಚಿಯೇ ಇದ್ದಂತೆ ಮತ್ತೊಮ್ಮೆ ಫ್ಲಶ್ ಮಾಡಿ. ಕಲೆ, ದುರ್ಗಂಧ ಯಾವುದೂ ಇರುವುದಿಲ್ಲ. ಇದು ಸುಲಭವಾದ ಮತ್ತು ಶ್ರಮವಿಲ್ಲದೇ ಸ್ವಚ್ಛಗೊಳಿಸುವ ಒಂದು ವಿಧಾನವಾಗಿದೆ

ವಿನೀಗರ್
ಕಪ್ಪು ಅಥವಾ ಆಪಲ್ ಸಿಡೆರ್ ವಿನೀಗರ್ ಅನ್ನು ನಿಮ್ಮ ಬಾತ್‍ರೂಮ್ ತೊಳೆಯಲು ಬಳಸಿಕೊಳ್ಳಬಹುದು. ಇದರ ಸುವಾಸನೆಯು ಬಾತ್‍ರೂಮಿನ ದುರ್ಗಂಧವನ್ನು ಹೋಗಲಾಡಿಸಿದರೆ, ಇದರಲ್ಲಿರುವ ರಾಸಾಯನಿಕ ಅಂಶಗಳು, ಬಾತ್‌ರೂಮಿನ ಕಲೆಗಳನ್ನು ನಿವಾರಿಸಿ, ಫಳಫಳ ಹೊಳೆಯುವಂತೆ ಮಾಡುತ್ತದೆ.

ಸೋಪ್ ವಾಟರ್
ಇದು ಅತ್ಯಂತ ಸುಲಭವಾದ ಪರಿಹಾರವಾಗಿದೆ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ, ಸೋಪ್ ನೀರನ್ನು ನಿಮ್ಮ ಬಾತ್‌ರೂಮಿನ ನೆಲದ ಮೇಲೆ ಹಾಕಿ ತೊಳೆಯಿರಿ ಸಾಕು. ಸ್ವಲ್ಪ ಸುವಾಸನೆಯಿರುವ ಸೋಪನ್ನು ಇದಕ್ಕಾಗಿ ಬಳಸಿದರೆ ನಿಮಗೆ ಮತ್ತಷ್ಟು ಸಹಾಯವಾಗಬಹುದು. ಸ್ನಾನದ ಕೊಠಡಿಯನ್ನು ಅಂದವಾಗಿಸಲು ಸರಳ ಟಿಪ್ಸ್

ಉಪ್ಪು

ನಿಮ್ಮ ಬಾತ್‌ರೂಮ್ ನೆಲವನ್ನು ತೊಳೆಯಲು ಬಳಸುವ ಇನ್ನೊಂದು ನೈಸರ್ಗಿಕ ವಿಧಾನವಾಗಿದೆ ಉಪ್ಪು. ನಿಮ್ಮ ಟೈಲ್ಸ್‌ನಲ್ಲಿ ಅಂಟಿಕೊಂಡಿರುವ ಹಳದಿ ಕಲೆಯನ್ನು ಹೋಗಲಾಡಿಸಲು ಇದು ಉತ್ತಮ ಪರಿಹಾರಕ. ಉಪ್ಪನ್ನು ಹಳದಿಗಟ್ಟಿರುವ ಟೈಲ್ಸ್ ಮೇಲೆ ಚಿಮುಕಿಸಿ ನಂತರ ಬಿಸಿ ನೀರಿನಿಂದ ಅರ್ಧ ಗಂಟೆ ಬಿಟ್ಟು ತೊಳೆಯಿರಿ.

ಕಿಟಕಿಗಳನ್ನು ತೆರೆದಿಡಿ
ಸಾಮಾನ್ಯವಾಗಿ ಎಲ್ಲಾ ಶೌಚಾಲಯದಲ್ಲಿಯೂ ಕಿಟಕಿಯನ್ನು ನೀಡಲಾಗಿದ್ದರೂ ಕೆಲವೊಮ್ಮೆ ದುರ್ಗಂಧದ ಇದರ ಮೂಲಕ ಹೊರಹೋಗಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ದುರ್ಗಂಧ ಹಾಗೆ ಉಳಿದು ಬಿಡುತ್ತದೆ. ಇದಕ್ಕಾಗಿ ನೀವು ಮನೆಯಲ್ಲಿರದ ಸಮಯದಲ್ಲಿ ಶೌಚಾಲಯದ ಬಾಗಿಲು ಮತ್ತು ಕಿಟಕಿಗಳನ್ನು ಪೂರ್ಣವಾಗಿ ತೆರೆದಿಟ್ಟು ಹೋಗುವುದರಿಂದ ತಾಜಾಹವೆ ಒಳಬರುತ್ತದೆ ಮತ್ತು ದುರ್ಗಂಧ ಕಿಟಕಿಯ ಮೂಲಕ ಹೊರಹೋಗುತ್ತದೆ.

English summary

Simple Ways To Get Rid Of Bathroom Odours

Bathroom odours can be quite a hassle, especially when you have guests at home. If you want your bathroom to smell good and fresh, then here are some of the kitchen remedies or ingredients you can use to get rid of the nasty odour in your toilet. Please remember that these ingredients that are mentioned below will take time to show its effects, cause they are not that powerful when it comes to the chemically based products available in the market.
X
Desktop Bottom Promotion