For Quick Alerts
ALLOW NOTIFICATIONS  
For Daily Alerts

ಅಡುಗೆಯ ಬಳಿಕ, ಮನೆ ಸಾಮಗ್ರಿಗಳ ಸ್ವಚ್ಛತೆ ಹೀಗಿರಲಿ

By Super
|

ಮನೆಯ ಇತರ ಕೋಣೆಗಳಂತೆಯೇ ಅಡುಗೆ ಮನೆಯೂ ಸ್ವಚ್ಛ, ಒಪ್ಪ ಓರಣವಾಗಿರಬೇಕೆಂದು ಪ್ರತಿ ಗೃಹಿಣಿಯೂ ಬಯಸುತ್ತಾಳೆ. ಅಂತೆಯೇ ಅಡುಗೆ ತಯಾರಾದ ಬಳಿಕ ಡೈನಿಂಗ್ ಟೇಬಲ್ ಮೇಲೆ ಬಡಿಸಿದ ಬಳಿಕ ಮನೆಯ ಸದಸ್ಯರು ಆಗಮಿಸಿ ಅರ್ಧ ಊಟ ಮುಗಿಸಿದರೂ ಮನೆಯೊಡತಿ ಮಾತ್ರ ಇನ್ನೂ ಪಾತ್ರೆ, ಮೈಕ್ರೋವೇವ್, ಒಲೆಗಳನ್ನು ಸ್ವಚ್ಛಗೊಳಿಸುತ್ತಾ ಇರುತ್ತಾಳೆ. ಏಕೆಂದರೆ ಒಮ್ಮೆ ಊಟ ಮುಗಿಸಿದರೆ ಅಡುಗೆ ಮನೆ ಸ್ವಚ್ಛಗೊಳಿಸಲು ಸೋಮಾರಿತನ ಆವರಿಸುತ್ತದೆ. ಆದ್ದರಿಂದ ಅಡುಗೆಯ ಕಲೆಗಳು ಹಸಿಯಿದ್ದಾಗಲೇ ಸ್ವಚ್ಛಗೊಳಿಸಿಬಿಡುವುದು ಸುಲಭ ಮತ್ತು ಆಗಿಂದಾಗಲೇ ಸ್ವಚ್ಛಗೊಳಿಸುತ್ತಾ ಇರುವುದು ಪ್ರತಿ ಮನೆಯಲ್ಲಿಯೂ ಕಂಡುಬರುವ ವಿದ್ಯಮಾನವಾಗಿದೆ. ಅಡುಗೆ ಮನೆಯ ಸಿಂಕ್‌ನ ಸ್ವಚ್ಛತೆಗೆ ಇಲ್ಲಿದೆ ಸರಳ ಟಿಪ್ಸ್

ಆದರೆ ಸ್ವಚ್ಛಗೊಳಿಸಲು ನಾವು ಬಳಸುವ ಸೋಪು, ರಾಸಾಯನಿಕಗಳು ಮತ್ತು ಇತರ ಮಾರ್ಜಕಗಳು ಕೊಂಚವಾದರೂ ಇಲ್ಲೆಲ್ಲಾ ಉಳಿದುಬಿಡಬಹುದು. ಬಳಿಕ ಆ ಸ್ಥಳವನ್ನು ಆಹಾರವನ್ನು ತಯಾರಿಸಲು ಅಥವಾ ಬಿಸಿಯಾಗಿಸಲು ಉಪಯೋಗಿಸುವಾಗ (ಉದಾಹರಣೆಗೆ ಮೈಕ್ರೋವೇವ್ ಒಳಭಾಗ) ಈ ರಾಸಾಯನಿಕಗಳು ಆಹಾರದೊಡನೆ ಸೇರಿಬಿಡಬಹುದು. ಇದನ್ನು ತಡೆಯಲು ಉತ್ತಮ ವಿಧಾನವೆಂದರೆ ನೈಸರ್ಗಿಕ ವಸ್ತುಗಳ ಬಳಕೆ ಮತ್ತು ಸುರಕ್ಷತಾ ವಿಧಾನವನ್ನು ಅನುಸರಿಸುವುದು. ಮನೆ ಸಣ್ಣದಾದರೂ ಪರವಾಗಿಲ್ಲ, ಅಚ್ಚುಕಟ್ಟಾಗಿ ಇಟ್ಟುಕೊಳ್ಳಿ

ಕೆಳಗಿನ ಸ್ಲೈಡ್ ಶೋ ಮೂಲಕ ಹಲವು ಸುಲಭವಾದ ಮತ್ತು ನಿರಪಾಯಕಾರಿಯಾದ ವಿಧಾನಗಳನ್ನು ನೀಡಲಾಗಿದೆ. ಇದಕ್ಕಾಗಿ ಬಳಸಲಾಗುವ ಸಾಮಗ್ರಿಗಳೂ ನಿಮ್ಮ ಅಡುಗೆ ಮನೆಯಲ್ಲಿಯೇ ಇದ್ದು ಅಂಗಡಿಗಳಿಗೆ ಎಡತಾಕಬೇಕಾಗಿಲ್ಲ. ಇವು ಅಗ್ಗವೂ, ಸುಲಭವಾಗಿ ಲಭ್ಯವಾಗುವಂತಹದ್ದೂ ಆಗಿರುವುದರಿಂದ ನಿಮ್ಮ ತಿಂಗಳ ವೆಚ್ಚದಲ್ಲಿ ಉಳಿತಾಯವೂ ಸಾಧ್ಯವಾಗುತ್ತದೆ.

ರೆಫ್ರಿಜರೇಟರ್ ಸ್ವಚ್ಛಗೊಳಿಸುವ ಬಗೆ

ರೆಫ್ರಿಜರೇಟರ್ ಸ್ವಚ್ಛಗೊಳಿಸುವ ಬಗೆ

ತಂಗಳು ಪೆಟ್ಟಿಗೆ ಎಂಬ ಅನ್ವರ್ಥನಾಮವನ್ನು ಪಡೆದುಕೊಂಡ ಫ್ರಿಜ್ ಸಹಾ ಆಗಾಗ ಸ್ವಚ್ಛತೆ ಬೇಡುತ್ತದೆ. ಫ್ರಿಜ್ಜಿನೊಳಗಿದ್ದ ಆಹಾರವನ್ನು ಹೊರತೆಗೆಯುವಾಗ ಪಕ್ಕದ ಒಳಗೋಡೆಗಳಿಗೆ ಆಹಾರ ಅಂಟಿಕೊಳ್ಳುವುದು ಸರ್ವೇ ಸಾಮಾನ್ಯ. ಫ್ರಿಜ್ಜಿನೊಳಗಿನ ಶೀತಲತೆಯ ಕಾರಣ ಇದು ಗಟ್ಟಿಯಾಗಿ ಅಂಟಿಕೊಂಡುಬಿಡುತ್ತದೆ. ಇದನ್ನು ಬಲವಂತವಾಗಿ ಕೆರೆಯಲು ಹೋದರೆ ಒಳಗೋಡೆಗಳಲ್ಲಿ ಶಾಶ್ವತವದ ಗೀರುಗಳು ಬಿದ್ದು ನೋಡಲು ಅಸಹ್ಯವಾಗಿ ಕಾಣಬಹುದು. ಅಲ್ಲದೇ ಸ್ವಚ್ಛಗೊಳಿಸಲು ಇಡಿಯ ಫ್ರಿಜ್ಜಿನ ಅಷ್ಟೂ ವಸ್ತುಗಳನ್ನು ಹೊರಗಿಟ್ಟು ಆದಷ್ಟು ಬೇಗನೇ ಒಳಗಿಡಬೇಕೆಂಬ ಧಾವಂತದಲ್ಲಿಯೇ ಒರಟು ಒರಟಾಗಿ ಸ್ವಚ್ಛಗೊಳಿಸುವುದು ನಾವೆಲ್ಲಾ ಅನುಸರಿಸಿಕೊಂಡು ಬರುತ್ತಿರುವ ವಿಧಾನ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ರೆಫ್ರಿಜರೇಟರ್ ಸ್ವಚ್ಛಗೊಳಿಸುವ ಬಗೆ

ರೆಫ್ರಿಜರೇಟರ್ ಸ್ವಚ್ಛಗೊಳಿಸುವ ಬಗೆ

ಇದರ ಬದಲಿಗೆ ಇನ್ನೊಂದು ಸುಲಭ ಮಾರ್ಗವಿದೆ. ಒಂದು ಲೋಟ ಶಿರ್ಕಾ (ವಿನೆಗರ್)ಮತ್ತು ಎರಡು ಲೋಟ ನೀರು ಬೆರೆಸಿ ಕೆಲವು ಹನಿ ಲಿಂಬೆಯ ರಸ (ಸುಮಾರು ಕಾಲು ಲಿಂಬೆ) ಸೇರಿಸಿ. ಈ ಮಿಶ್ರಣವನ್ನು ಫ್ರಿಜ್ಜಿನ ಒಳಭಾಗಕ್ಕೆ ಸಿಂಪಡಿಸುವ ಬಾಟಲಿಯ ಮೂಲಕ ಸಿಂಪಡಿಸಿ ತಕ್ಷಣವೇ ಸ್ವಚ್ಛ ಬಟ್ಟೆಯಿಂದ ಒರೆಸಿದರೆ ಸಾಕು. ಇದಕ್ಕೆ ಫ್ರಿಜ್ಜಿನ ಎಲ್ಲಾ ವಸ್ತುಗಳನ್ನು ಹೊರಗಿಡುವ ಅಗತ್ಯವಿಲ್ಲ. ಯಾವ ಸ್ಥಳದಲ್ಲಿ ಸಿಂಪಡಿಸುತ್ತೀರೋ ಅಲ್ಲಿ ಮಾತ್ರ ಖಾಲಿ ಮಾಡಿ ಸ್ವಚ್ಛಗೊಳಿಸಿದ ಬಳಿಕ ಇನ್ನೊಂದೆಡೆ ಇದ್ದ ವಸ್ತುಗಳನ್ನು ಈ ಬದಿಗೆ ಸರಿಸಿ ಆ ಬದಿಯನ್ನು ಸ್ವಚ್ಛಗೊಳಿಸಿದರೆ ಸಾಕು. ಇದಕ್ಕೆ ಸುಮಾರು ಮೂರರಿಂದ ಐದೇ ನಿಮಿಷ ಸಾಕು.

ಮರದ ಹಲಗೆ/ಕತ್ತರಿಸುವ ಬೋರ್ಡ್ ಸ್ವಚ್ಛಗೊಳಿಸುವ ಬಗೆ

ಮರದ ಹಲಗೆ/ಕತ್ತರಿಸುವ ಬೋರ್ಡ್ ಸ್ವಚ್ಛಗೊಳಿಸುವ ಬಗೆ

ತರಕಾರಿ ಮತ್ತು ಇತರ ಆಹಾರ ಸಾಮಾಗ್ರಿಗಳನ್ನು ಕತ್ತರಿಸಲು ಬಳಸುವ ಕಟ್ಟಿಂಗ್ ಬೋರ್ಡ್ ನಲ್ಲಿ ಕತ್ತಿಯ ಅಲುಗು ತಾಕಿ ಗೆರೆಗಳು ಮೂಡಿರುತ್ತವೆ. ಇದರೊಳಗೆ ಸಿಕ್ಕಿಕೊಂಡಿರುವ ಆಹಾರಕಣಗಳು ಸುಲಭವಾಗಿ ಹೋಗುವುದಿಲ್ಲ. ಇದನ್ನು ನಿವಾರಿಸಲು ಬೋರ್ಡ್ ಮೇಲೆ ಕೊಂಚ ನೀರು ಹಾಕಿ ತೇವಗೊಳಿಸಿ ಇಡಿಯ ಬೋರ್ಡ್ ಮೇಲೆ ಉಪ್ಪು ಸಿಂಪಡಿಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮರದ ಹಲಗೆ/ಕತ್ತರಿಸುವ ಬೋರ್ಡ್ ಸ್ವಚ್ಛಗೊಳಿಸುವ ಬಗೆ

ಮರದ ಹಲಗೆ/ಕತ್ತರಿಸುವ ಬೋರ್ಡ್ ಸ್ವಚ್ಛಗೊಳಿಸುವ ಬಗೆ

ಬಳಿಕ ಒಂದು ಲಿಂಬೆ ಹಣ್ಣನ್ನು ಅರ್ಧವಾಗಿ ಕತ್ತರಿಸಿ ಒಳಭಾಗ ತಾಗುವಂತೆ ಕೊಂಚ ಒತ್ತಡದಿಂದ ಇಡಿಯ ಹಲಗೆಯನ್ನು ಉಜ್ಜಿ. ಒಂದು ಹಲಗೆಗೆ ಒಂದು ಲಿಂಬೆ ಸಾಕು. ಕೊಂಚ ಸಮಯ ಬಿಟ್ಟು ಗೋಡೆಯುಜ್ಜುವ ಸ್ಕ್ರಾಪರ್ ಅಥವಾ ಅಂತಹ ಯಾವುದಾದರೂ ಸಲಕರಣೆ ಬಳಸಿ ಉಪ್ಪನ್ನು ಕೆರೆದು ತೆಗೆಯಿರಿ. ಬಳಿಕ ಕೊಂಚ ಬಿಸಿಯಿರುವ ನೀರು ಹಾಕಿ ಪಾತ್ರೆಯುಜ್ಜುವ ಸ್ಪಂಜ್ ಬಳಸಿ ಸ್ವಚ್ಛಗೊಳಿಸಿ. ತದನಂತರ ಗೋಡೆಗೆ ಒರಗಿಸಿ ಕೊಂಚ ಹೊತ್ತು ಒಂದು ಭಾಗ ಒಣಗಿದ ಬಳಿಕ ಮಗುಚಿ ಇನ್ನೊಂದು ಭಾಗ ಒಣಗುವಂತೆ ಮಾಡಿ.

ನಿಮ್ಮದೇ ಒರಸುಬಟ್ಟೆಯನ್ನು ಸಿದ್ಧಪಡಿಸಿ

ನಿಮ್ಮದೇ ಒರಸುಬಟ್ಟೆಯನ್ನು ಸಿದ್ಧಪಡಿಸಿ

ಮಾರುಕಟ್ಟೆಯಲ್ಲಿ ಸಿದ್ಧರೂಪದ ಒರೆಸುಬಟ್ಟೆ (cleansing wipes) ಲಭ್ಯವಿದೆ. ಇವುಗಳ ಬಳಕೆ ಸುಲಭ ಮತ್ತು ಸ್ವಚ್ಛವಾದರೂ ಇವು ಅಗ್ಗವೇನಲ್ಲ. ಪ್ರತಿದಿನ ಇವನ್ನೇ ಉಪಯೋಗಿಸುತ್ತಾ ಬಂದರೆ ತಿಂಗಳ ಖರ್ಚಿನಲ್ಲಿ ಗಣನೀಯ ಭಾಗ ಇವು ನುಂಗುವುದು ಖಂಡಿತ. ಆದ್ದರಿಂದ ಮಾರುಕಟ್ಟೆಯಿಂದ ತಂದವುಗಳನ್ನು ವಿಶೇಷ ಸಂದರ್ಭಗಳಿಗೆ ಮೀಸಲಿರಿಸಿ ನಿತ್ಯದ ಕೆಲಸಗಳಿಗೆ ಮನೆಯಲ್ಲಿಯೇ ತಯಾರಿಸಿದ ಒರೆಸುಬಟ್ಟೆಯನ್ನು ಬಳಸುವುದು ಜಾಣೆಯರ ಲಕ್ಷಣ. ಜಾಣೆಯಾಗಬೇಕಿದ್ದರೆ ನಿಮ್ಮ ಮನೆಯ ಸದಸ್ಯರು ಉಪಯೋಗಿಸಿ ಹಳೆಯದಾಗಿರುವ ಬನಿಯನ್ ಮತ್ತು ಬನಿಯನ್ ಬಟ್ಟೆಯನ್ನು ಬಳಸಿದ ವಸ್ತ್ರಗಳನ್ನು ಉಪಯೋಗಿಸಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ನಿಮ್ಮದೇ ಒರಸುಬಟ್ಟೆಯನ್ನು ಸಿದ್ಧಪಡಿಸಿ

ನಿಮ್ಮದೇ ಒರಸುಬಟ್ಟೆಯನ್ನು ಸಿದ್ಧಪಡಿಸಿ

ಇವನ್ನು ಒಗೆದು ಒಣಗಿಸಿದ ಬಳಿಕ ನಿಮಗೆ ಅಗತ್ಯವಿರುವ ಗಾತ್ರದಲ್ಲಿ ಕತ್ತರಿಸಿಕೊಳ್ಳಿ. ಯಾವಾಗ ಈ ಬಟ್ಟೆಯ ಅಗತ್ಯ ಬೀಳುತ್ತದೋ ಆಗ ಒಂದು ಪಾತ್ರೆಯಲ್ಲಿ ಕೊಂಚ ಉಗುರುಬೆಚ್ಚನೆಯ ನೀರಿಗೆ ಕೊಂಚ ಶಿರ್ಕಾ ಮತ್ತು ನಿಮ್ಮಲ್ಲಿರುವ ಯಾವುದಾದರೂ ಅವಶ್ಯಕ ತೈಲದ ಕೆಲವು ಹನಿಗಳನ್ನು ಸೇರಿಸಿ ಬಟ್ಟೆಯನ್ನು ಮುಳುಗಿಸಿ ಹಿಂಡಿ ಒರೆಸಿ. ಇದು ಮಾರುಕಟ್ಟೆಯ ಬಟ್ಟೆಗಿಂತಲೂ ಸ್ವಚ್ಛಗೊಳಿಸುವುದು ಮಾತ್ರವಲ್ಲದೇ ನಿಮ್ಮ ನೆಚ್ಚಿನ ಅವಶ್ಯಕ ತೈಲದ ಪರಿಮಳವನ್ನೂ ಬೀರುತ್ತಾ ನಿಮ್ಮ ಮನೆಯನ್ನು ಸ್ವರ್ಗಸಮಾನವಾಗಿಸುತ್ತದೆ.

ಮನೆಯಲ್ಲಿಯೇ ತಯಾರಿಸಿ - ನೈಸರ್ಗಿಕ ಕ್ರಿಮಿನಾಶಕ

ಮನೆಯಲ್ಲಿಯೇ ತಯಾರಿಸಿ - ನೈಸರ್ಗಿಕ ಕ್ರಿಮಿನಾಶಕ

ಒಂದು ಸಂಶೋಧನೆಯ ಪ್ರಕಾರ ಸೊಳ್ಳೆ ಮತ್ತಿತರ ಕೀಟಗಳನ್ನು ಓಡಿಸಲು ಬಳಸುವ ಯಾವುದೇ ರಾಸಾಯನಿಕ ಆಧಾರಿತ ಉತ್ಪನ್ನ ಮನುಷ್ಯರಿಗೆ ಕ್ಷೇಮವಲ್ಲ. ಅಲ್ಲದೆ ನಮ್ಮ ನೆಚ್ಚಿನ ಮಾಸ್ಕಿಟೋ ಕಾಯಿಲ್ ಸಹಾ ಸುರಕ್ಷಿತವಲ್ಲ. ನಿತ್ಯ ಬಳಸುವ ಶೌಚಾಲಯ ಸ್ವಚ್ಛಗೊಳಿಸುವ ಫಿನಾಯಿಲ್ ಆಧಾರಿತ ರಾಸಾಯನಿಕಗಳೂ ಸುರಕ್ಷಿತವಲ್ಲ. ಹಾಗಾದರೆ ಸುರಕ್ಷಿತವಾದುದು ಯಾವುದು? ಇದಕ್ಕೆ ಉತ್ತರ ಹೀಗಿದೆ:

ಮನೆಯಲ್ಲಿಯೇ ತಯಾರಿಸಿ - ನೈಸರ್ಗಿಕ ಕ್ರಿಮಿನಾಶಕ

ಮನೆಯಲ್ಲಿಯೇ ತಯಾರಿಸಿ - ನೈಸರ್ಗಿಕ ಕ್ರಿಮಿನಾಶಕ

ಲಿಂಬೆ ಹಣ್ಣಿನ ಸಿಪ್ಪೆಯನ್ನು ಚೆನ್ನಾಗಿ ಒಣಗಿಸಿ ಕುಟ್ಟಿ ಮಾಡಿದ ಪುಡಿ, ಮತ್ತು ಬೋರಾಕ್ಸ್ ಪೌಡರ್ ಸಮಪ್ರಮಾಣದಲ್ಲಿ ಬೆರೆಸಿ ಇದರ ಎರಡರಷ್ಟು ಪ್ರಮಾಣದಲ್ಲಿ ಶಿರ್ಕಾ ಸೇರಿಸಿ ದ್ರಾವಣ ತಯಾರಿಸಿ. ಇದನ್ನು ಸ್ಪ್ರೇ ಮಾಡುವ ಬಾಟಲಿಯಲ್ಲಿ ತುಂಬಿ ಶೌಚಾಲಯ, ಮನೆಯ ಇತರ ಕೋಣೆಗಳ ನೆಲ, ಅಡುಗೆ ಮನೆಯ ಕಟ್ಟೆ, ಒಲೆಯ ಹಿಂಭಾಗದ ಗೋಡೆ ಮೊದಲಾದವುಗಳ ಮೇಲೆಲ್ಲಾ ಸಿಂಪಡಿಸಿ ಸ್ವಚ್ಛಗೊಳಿಸುವ ಮೂಲಕ ಆವರಣವನ್ನು ಕ್ರಿಮಿರಹಿತವಾಗಿರಿಸಬಹುದು. ಅಲ್ಲದೇ ಮನೆಯ ತಿಂಗಳ ವೆಚ್ಚವನ್ನೂ ಕಡಿಮೆಗೊಳಿಸಬಹುದು.

ಮೈಕ್ರೋವೇವ್ ಓವನ್ ಒಳಭಾಗವನ್ನು ಸ್ವಚ್ಛಗೊಳಿಸಲು

ಮೈಕ್ರೋವೇವ್ ಓವನ್ ಒಳಭಾಗವನ್ನು ಸ್ವಚ್ಛಗೊಳಿಸಲು

ಮೈಕ್ರೋವೇವ್ ನಲ್ಲಿ ಬಿಸಿಮಾಡಲು ಒಂದು ಮುಚ್ಚಳದಂತಹ ಪಾತ್ರೆ ಸಿಗುತ್ತದೆ. ಇದನ್ನು ಆಹಾರದ ಮೇಲೆ ಮುಚ್ಚಿಯೇ ಮೈಕ್ರೋವೇವ್ ಪ್ರಾರಂಭಿಸಬೇಕು. ಆದರೆ ಹೆಚ್ಚಿನವರಿಗೆ ಇದರ ಅರಿವಿರದೇ ನೇರವಾಗಿ ಆಹಾರವನ್ನು ಒಳಗಿಡುತ್ತಾರೆ. ಪರಿಣಾಮವಾಗಿ ಇದರಿಂದ ಸಿಡಿದ ಚೂರುಗಳು ಮೈಕ್ರೋವೇವ್ ಒಳಭಾವನ್ನೆಲ್ಲಾ ಆವರಿಸಿರುತ್ತವೆ. ಕ್ರಮೇಣ ಇವು ಗಟ್ಟಿಯಾಗಿ ಸುಲಭವಾಗಿ ಕೆರೆದು ತೆಗೆಯಲು ಸಾಧ್ಯವಿಲ್ಲ. ಇವನ್ನು ಕರಗಿಸಬಲ್ಲ ಮೈಕ್ರೋವೇವ್ ಸ್ಪ್ರೇ ಬಲು ದುಬಾರಿಯಾಗಿದೆ. ಇದಕ್ಕೊಂದು ಸುಲಭ ಉಪಾಯವಿದೆ.

ಮೈಕ್ರೋವೇವ್ ಓವನ್ ಒಳಭಾಗವನ್ನು ಸ್ವಚ್ಛಗೊಳಿಸಲು

ಮೈಕ್ರೋವೇವ್ ಓವನ್ ಒಳಭಾಗವನ್ನು ಸ್ವಚ್ಛಗೊಳಿಸಲು

ಲವು ದೊಡ್ಡಚಮಚ ನೀರಿನಲ್ಲಿ ಅರ್ಧ ಕಪ್ ಅಡುಗೆ ಸೋಡಾ (baking soda) ಸೇರಿಸಿ ದಪ್ಪನೆಯ ಲೇಪನ ತಯಾರಿಸಿ. ಈಗ ರಬ್ಬರ್ ಅಥವಾ ಪ್ಲಾಸ್ಟಿಕ್ಕಿನ ಕೈವಸು ಧರಿಸಿ ಪಾತ್ರೆಯುಜ್ಜುವ ಸ್ಪಂಜು ಬಳಸಿ ಈ ಲೇಪನವನ್ನು ಮೈಕ್ರೋವೇವ್ ಒಳಭಾವನ್ನೆಲ್ಲಾ ನಯವಾಗಿ ಹಚ್ಚುತ್ತಾ ಹೋಗಿ. ಆಹಾರ ಒಣಗಿ ಗಟ್ಟಿಯಾಗಿದ್ದ ಕಡೆ ನಾಲ್ಕಾರು ಬಾರಿ ಉಜ್ಜಬೇಕಾಗಬಹುದು. ಆದರೆ ಹೆಚ್ಚಿನ ಒತ್ತಡ ಹಾಕಬೇಡಿ. ಬಳಿಕ ಉಗುರುಬೆಚ್ಚನೆಯ ನೀರಿನಲ್ಲಿ ಮುಳುಗಿಸಿದ ಸ್ವಚ್ಛ ಬಟ್ಟೆ ಅಥವಾ ಟವೆಲ್ ಉಪಯೋಗಿಸಿ ಒರೆಸಿ ಲೇಪನವನ್ನು ತೆಗೆಯಿರಿ. ಕಡೆಯದಾಗಿ ಒಣಬಟ್ಟೆ ಉಪಯೋಗಿಸಿ ನೀರನ್ನು ಒರೆಸಿ. ಮೈಕ್ರೋವೇವ್ ತಳದಲ್ಲಿರುವ ಭಾಗದ ಅಡಿಗೂ ಬಟ್ಟೆಯ ಅಂಚು ನುಸುಳುವಂತೆ ಮಾಡಿ ಸ್ವಚ್ಛಗೊಳಿಸಿ. ಮೈಕ್ರೋವೇವ್ ಹೊಸತಾಗಿ ತಂದ ಸ್ಥಿತಿಯಲ್ಲಿರುತ್ತದೆ.

English summary

Simple Tricks To Clean The Kitchen Essentials

Doing kitchen tasks, such as cooking, is easy; however, cleaning the kitchen belongings can be a tough job to do sometimes. Cleaning your fridge, microwave and other kitchen belongings is time consuming and can be hectic. Moreover, the chemicals that we use in cleaning the kitchen belongings can be harmful. In this article, we will help you clean your kitchen essentials in a safe and natural way. 
X
Desktop Bottom Promotion