For Quick Alerts
ALLOW NOTIFICATIONS  
For Daily Alerts

ಅಡುಗೆ ಮನೆಯಲ್ಲಿ ಇಂತಹ ಟಿಪ್ಸ್ ತಪ್ಪದೇ ಪಾಲಿಸಿ

By Su.Ra
|

ಅಡುಗೆ ಮನೆ ಎಂದರೆ ಕೆಲವು ಹೆಂಗಸರಿಗೆ ಎಲ್ಲಿಲ್ಲದ ಪ್ರೀತಿ. ತಾನಾಯಿತು ತನ್ನ ಅಡುಗೆ ಮನೆಯಾಯಿತು ಎಂದುಕೊಳ್ಳುವ ಹೆಂಗಸರೂ ಇದ್ದಾರೆ. ಹೆಚ್ಚಿನವ್ರಿಗೆ ಅನಿವಾರ್ಯ ಕಾರಣಗಳಿಂದ ತಮ್ಮ ಸಮಯವನ್ನು ಅಡುಗೆ ಮನೆಯಲ್ಲಿ ಕಳೆಯುವಂತಾಗುತ್ತೆ... ಮನೆಮಂದಿಗೆಲ್ಲ ಅಡುಗೆ ಮಾಡ್ಬೇಕು ಅಂದ್ರೆ ಸಹಜವಾಗೇ ಅಡುಗೆ ಮನೆಯಲ್ಲಿ ಮಹಿಳೆಯರು ಇರಲೇಬೇಕಾಗುತ್ತೆ. ಅದೂ ಅಲ್ದೆ ಶುಚಿ-ರುಚಿ ಎರಡಕ್ಕೂ ಇಂಪಾರ್ಟೆನ್ಸ್ ನೀಡಬೇಕಲ್ವಾ?

ಇಂತಹ ಅಡುಗೆ ಮನೆಯನ್ನು ಪ್ರೀತಿಸುವ ಹೆಂಗಸರಿಗೆ ಕೆಲವೊಂದು ಬಾರಿ ಅಡುಗೆ ಮನೆಯನ್ನು ಯಾವ ರೀತಿಯಲ್ಲಿ ಶುಚಿಯಾಗಿ ಇಟ್ಟಿರಬೇಕು. ಅಡುಗೆ ಮನೆಯಲ್ಲಿ ಬಳಸುವ ವಸ್ತುಗಳನ್ನು ಯಾವ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕೆಂದು ಗೊತ್ತಿರುವುದಿಲ್ಲ. ಬಟ್ ನಿಮ್ಗೊತ್ತಾ? ಅಡುಗೆ ಮನೆಯಲ್ಲಿ ನೀವು ಪಾಲಿಸಲೇಬೇಕಾದ ಕೆಲವು ನಿಯಮಗಳಿವೆ. ನೀವು ಅಡುಗೆ ಪ್ರವೇಶಿಸುವ ಮುನ್ನ ಮತ್ತು ಅಡುಗೆ ಮನೆಯಲ್ಲಿ ಇವುಗಳನ್ನು ಪಾಲಿಸೋದ್ರಿಂದ ಕಿಚನ್‌ ನಲ್ಲಿ ಸೇಫ್ ಆಗಿ ಮತ್ತು ಬೆಸ್ಟ್ ಆಗಿ ಅಡುಗೆ ಮಾಡೋದಕ್ಕೆ ಸಾಧ್ಯವಾಗುತ್ತೆ.

Safety tips to follow while working in the kitchen

ಒಗ್ಗರಣೆ ಹಾಕುವ ಮುನ್ನ....!
ಯಾವುದೆ ಅಡುಗೆಗೆ ಒಗ್ಗರಣೆಯನ್ನು ಹಾಕುವುದಿದ್ದರೆ ಅಂತಹ ಸಮಯದಲ್ಲಿ ಅಡುಗೆ ಮಸಾಲ ಅಥವಾ ಒಗ್ಗರಣೆ ಸಾಮಾಗ್ರಿಗಳನ್ನು ಕೈಗೆ ಎಟುಕುವ ಜಾಗದಲ್ಲಿ ಇಟ್ಟುಕೊಂಡಿರಿ. ಒಲೆ ಹಚ್ಚಿದ ಮೇಲೆ ಎಲವನ್ನೂ ಜೋಡಿಸುತ್ತಾ ಕೂರಬೇಡಿ. ಆಗ ಒಗ್ಗರಣೆ ತಡವಾಗಿ ಗ್ಯಾಸ್ ವೇಸ್ಟ್ ಆಗುತ್ತೆ. ಅಷ್ಟೇ ಅಲ್ಲ, ಒಗ್ಗರಣೆ ಸೀದು ಹೋಗುವ ಸಾಧ್ಯತೆ ಇರುತ್ತೆ.

ಸಿಮ್‌ನಲ್ಲಿ ಅಡುಗೆ ಮಾಡುವ ಅಭ್ಯಾಸ
ತಡಬಡ ಅಂತ ಫಟಾಫಟ್ ಅಡುಗೆ ಮಾಡೋಕೆ ಟ್ರೈ ಮಾಡುವವರು ಮಾಡುವ ತಪ್ಪು ಗ್ಯಾಸ್ ಉರಿ ದೊಡ್ಡದಾಗಿ ಇಟ್ಟುಕೊಳ್ಳೋದು. ಸಿಮ್‌ನಲ್ಲಿ ಅಡುಗೆ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಸಮಯವಿದ್ದಾಗಲೆಲ್ಲ ಸಿಮ್‌ನಲ್ಲಿ ಅಡುಗೆ ಮಾಡೋದು ಬೆಸ್ಟ್... ಸಾಮಾನ್ಯವಾಗಿ ಗ್ಯಾಸ್ ಸೋರಿಕೆಯಾಗುವ ದೃಷ್ಟಿಯಿಂದ ಅದನ್ನು ತಡೆಗಟ್ಟಲು ಉತ್ತಮ ಗುಣಮಟ್ಟದ ಪೈಪ್ ಅನ್ನೇ ಬಳಸಿ.

ರೆಗ್ಯುಲೇಟರ್ ಆಫ್ ಮಾಡುವ ಅಭ್ಯಾಸ
ಅಡುಗೆ ಮನೆಯಲ್ಲಿ ಮಹಿಳೆಯರು ಮರೆಯದೆ ಮಾಡಬೇಕಿರುವ ಕೆಲ್ಸ ಏನು ಅಂದ್ರೆ ಗ್ಯಾಸ್‌ ಬಗೆಗಿನ ಕಾಳಜಿ. ಹೆಚ್ಚು ಸಮಯ ಅಥ್ವಾ ರಾತ್ರಿ ವೇಳೆ ಗ್ಯಾಸ್ ಬಳಸದೆ ಇರುವ ಸಮಯದಲ್ಲೆಲ್ಲ ರೆಗ್ಯುಲೆಟರ್ ಆಫ್ ಮಾಡಿ ಇಡುವ ಅಭ್ಯಾಸ ಮಾಡ್ಕೊಳ್ಳಿ

ಅಪರೂಪಕ್ಕೊಮ್ಮೆ ಗ್ಯಾಸ್ ಹಚ್ಚದೆ ಮಾಡುವ ಅಡುಗೆ
ಕೇವಲ ಉಳಿತಾಯಕ್ಕಾಗಿ ಮಾತ್ರವಲ್ಲ,. ಬದಲಾಗಿ ಆರೋಗ್ಯದ ದೃಷ್ಟಿಯಿಂದಲೂ ಅಪರೂಪಕ್ಕೊಮ್ಮೆಯೊದ್ರೂ ಗ್ಯಾಸ್ ಬಳಸದೆ ಮಾಡಬಹುದಾದ ಅಡುಗೆಗಳನ್ನು ಮಾಡಲು ಟ್ರೈ ಮಾಡಿ. ಉದಾಹರಣೆಗೆ ಕೋಸಂಬರಿ, ಮೊಸರು, ಅವಲಕ್ಕಿ, ಫ್ರೂಟ್ ಸಲಾಡ್ ಇತ್ಯಾದಿಗಳನ್ನು ಪ್ರಯತ್ನಿಸಿ..

ಹಾಲು ಕಾಯಿಸಲೂ ಕುಕ್ಕರ್ ಇದೆ
ಕುಕ್ಕರ್ ಬಳಸೋದು ಗ್ಯಾಸ್ ಉಳಿತಾಯ ಮಾಡ್ಬಹುದು. ಹಾಲೂ ಕಾಯಿಸಲೂ ಕೂಡ ಕುಕ್ಕರ್ ಲಭ್ಯವಿದೆ. ಇನ್ನು ಒಂದು ಕೂಗು ಕೂಗಿದಾಗ್ಲೂ ಕುಕ್ಕರ್ ಆಫ್ ಮಾಡಿದ್ರೆ ಕೆಲವೊಮ್ಮೆ ತರಕಾರಿಗಳು ಬೇಯುತ್ತವೆ. ಹಾಗಾಗಿ ಸುಮ್ಮನೆ ಕುಕ್ಕರ್ ಫ್ರೆಷರ್ ಕೂಗಿಸುತ್ತಲೇ ಇರಬೇಡಿ..

ತಲೆ ಕೂದಲ ಬಗ್ಗೆ ಹುಷಾರು
ಅಡುಗೆ ಮನೆಯ ಒಳಗೆ ಹೋಗುವಾಗು ಕೂದಲು ಹರಡಿಕೊಂಡು ಹೊಗ್ಬೇಡಿ. ಜಡೆ ಹಾಕಿಕೊಂಡು ಇಲ್ಲವೇ ಕೂದಲು ಟೈ ಮಾಡ್ಕೊಂಡು ಅಡುಗೆ ಮನೆಗೆ ಹೋಗುವ ಅಬ್ಯಾಸ ಒಳ್ಳೇದು. ಇಲ್ಲದೇ ಹೋದಲ್ಲಿ ಕೂದಲುದುರಿ ಅಡುಗೆಯಲ್ಲಿ ಸೇರಿಕೊಳ್ಳುವ ಸಾಧ್ಯತೆ ಇರುತ್ತೆ. ಅದೆಷ್ಟು ಡೇಂಜರ್ ಅನ್ನೋದನ್ನು ಮತ್ತೆ ಹೇಳಬೇಕಿಲ್ಲ ಅಲ್ವಾ?

ಪಾತ್ರೆಗಳನ್ನು ಕಟಪಟ ಅಂತ ಸೌಂಡ್ ಮಾಡ್ಬೇಡಿ
ಕೆಲವರು ಪಾತ್ರೆಗಳನ್ನು ತೆಗೆದುಕೊಳ್ಳುವಾಗ ಅತಿಯಾಗಿ ಶಬ್ಧವಾಗುವಂತೆ ಮಾಡ್ತಾರೆ. ಎಷ್ಟೋ ಸಲ ಇದು ಇತರರಿಗೆ ಕಿರಿಕಿರಿ ಅನ್ನಿಸುತ್ತೆ. ಸರಿಯಾಗಿ ಪಾತ್ರೆಗಳನ್ನು ಜೋಡಿಸಿಟ್ಟುಕೊಳ್ಳಿ. ಆಗ ತೆಗೆಯಲು ಸುಲಭವಾಗುತ್ತೆ. ಪಾತ್ರೆಗಳನ್ನು ತೊಳೆದ ನಂತ್ರ ಯಾವ ಜಾಗದಲ್ಲ ಯಾವ ಪಾತ್ರೆಯನ್ನು ಇಟ್ಟಿರ್ತೀರೋ ಅಲ್ಲೇ ಇಟ್ಟು ಸರಿಯಾದ ರೀತಿಯಲ್ಲಿ ಅಡುಗೆ ಮನೆಯನ್ನು ಅರೇಂಜ್ ಮಾಡ್ಕೊಂಡ್ ಇರಿ. ನೀವು ಕತ್ತಲೆಯಲ್ಲಿ ಅಡುಗೆ ಮನೆ ಪ್ರವೇಶಿಸಿದ್ರೂ ನೀವು ಸೇರಿಸಿಟ್ಟಿರುವ ಪಾತ್ರೆ ನಿಮ್ಮ ಕೈಗೆ ಸಿಗುವಂತಿರಬೇಕು. ಒಟ್ಟಿನಲ್ಲಿ ಕಿಚನ್ ಹೆಚ್ಚಿನ ಮಹಿಳೆಯರು ಜಾಸ್ತಿ ಸಮಯ ಸ್ಪೆಂಡ್ ಮಾಡುವ ಮನೆಯ ಜಾಗ. ಅದು ಶುದ್ಧವಾಗಿರುವಂತೆ ನೋಡಿಕೊಳ್ಳೋದು ನಿಮ್ಮ ಜವಾಬ್ದಾರಿ ಆಗಿರುತ್ತೆ.

English summary

Safety tips to follow while working in the kitchen

Kitchen is the only place in your household, where you have to take a lot of precaution as you deal with a lot of hazardous and inflammatory stuff in the kitchen. You must be really careful while handling things in the kitchen of your Bella Casa.
Story first published: Saturday, November 28, 2015, 13:21 [IST]
X
Desktop Bottom Promotion