For Quick Alerts
ALLOW NOTIFICATIONS  
For Daily Alerts

ಅಬ್ಬಬ್ಬಾ..! ಕಾಫಿ ಪುಡಿಯಲ್ಲಿ ಇಷ್ಟೆಲ್ಲಾ ಪ್ರಯೋಜನಗಳಿವೆಯೇ?

By Arshad
|

ನಿತ್ಯದ ಶಕ್ತಿ ನೀಡುವ ಕಾಫಿಯನ್ನು ತಯಾರಿಸಲು ಹೆಚ್ಚಿನವರು ಮಾರುಕಟ್ಟೆಯಲ್ಲಿ ಸಿಗುವ ಪುಡಿ ಅಥವಾ ಇನ್ಸ್ಟಂಟ್ ಪುಡಿಯನ್ನೇ ಉಪಯೋಗಿಸುತ್ತಾರೆ. ಆದರೆ ಅಪ್ಪಟ ಕಾಫಿ ಪ್ರಿಯರು ಕಾಫಿ ಬೀಜವನ್ನು ಹುರಿದು ಪುಡಿಮಾಡದೇ ಬೇಯಿಸಿ ಬಸಿದ ನೀರಿನಿಂದ ಕಾಫಿ ಮಾಡಿಕೊಂಡು ಕುಡಿಯಲು ಇಷ್ಟಪಡುತ್ತಾರೆ. ಅಥವಾ ಅಲ್ಪಪ್ರಮಾಣದಲ್ಲಿ ಕಾಫಿ ಬೀಜವನ್ನು ಹುರಿದು ಪುಡಿಮಾಡಿ ಸದಾ ತಾಜಾ ಇರುವ ಪುಡಿಯನ್ನೇ ಬಳಸುತ್ತಾರೆ.

ಕಾಫಿ ಬೆಳೆಯುವವರು ಈ ವಿಧಾನವನ್ನೇ ಹೆಚ್ಚು ಆಚರಿಸುತ್ತಾರೆ. ಉಳಿದವರು ಪುಡಿಯನ್ನು ತರದೇ ಹುರಿದ ಬೀಜವನ್ನು ಅಥವಾ ಹುರಿದಿರದ ಬೀಜವನ್ನು ತಂದು ತಮಗೆ ಅಗತ್ಯವೆನಿಸಿದಷ್ಟು ಮಾತ್ರ ಹುರಿದು ಪುಡಿಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ಅಗತ್ಯಕ್ಕಿಂತಲೂ ಹೆಚ್ಚು ದಾಸ್ತಾನಿರುವ ಕಾಫಿ ಬೀಜಗಳು ಕಾಲ ಕಳೆದಂತೆ ತಮ್ಮ ತಾಜಾತನವನ್ನು ಕಳೆದುಕೊಳ್ಳುತ್ತವೆ.

ಈ ಕಾಫಿಬೀಜಗಳಿಂದ ಮಾಡಿದ ಪುಡಿಯಿಂದ ಕಾಫಿಯ ನಿಜವಾದ ಸ್ವಾದ ದಕ್ಕದೇ ಇರುವುದರಿಂದ ಹೆಚ್ಚಿನವರು ಈ ಬೀಜಗಳನ್ನು ತ್ಯಾಜ್ಯದಲ್ಲಿ ಎಸೆಯುತ್ತಾರೆ. ಆದರೆ ವಾಸ್ತವವಾಗಿ ಈ ಬೀಜಗಳು ತಮ್ಮ ತಾಜಾತನವನ್ನು ಕಳೆದುಕೊಂಡಿದ್ದರೂ ಇನ್ನೂ ಕೆಲವು ಗುಣಗಳನ್ನು ಉಳಿಸಿಕೊಂಡಿರುತ್ತವೆ. ಈ ಗುಣಗಳನ್ನು ನಮ್ಮ ಉಪಯೋಗಕ್ಕೆ ಹೇಗೆ ಬಳಸಿಕೊಳ್ಳಬಹುದೆಂಬುದನ್ನು ಕೆಳಗಿನ ಮಾಹಿತಿಯನ್ನು ಗಮನಿಸಿ...

Reasons Not To Throw Your Coffee Beans

ಕೀಟಗಳನ್ನು ದೂರವಿರಿಸಲು ಬಳಸಬಹುದು
ಈ ಕಾಫಿಬೀಜಗಳನ್ನು ಇರುವೆಗಳಿದ್ದಲ್ಲಿಟ್ಟರೆ ಇದನ್ನು ತಿಂದ ಇರುವೆಗಳು ಸಾಯುವುದು ಕಂಡುಬಂದಿದೆ. ನಿಮ್ಮ ಮನೆಯಂಗಳದ ಉದ್ಯಾನದಲ್ಲಿರುವ ಹೂಗಿಡಗಳ ಬುಡದಲ್ಲಿ ಯಾವಾಗಲೂ ಇರುವೆ, ಬಸವನಹುಳ, ಮತ್ತಿತರ ಕೀಟಗಳು ಧಾಳಿ ಇಡುತ್ತಿದ್ದರೆ ಕೆಲವು ಕಾಫಿ ಬೀಜಗಳನ್ನು ಬುಡದಿಂದ ಕೊಂಚ ದೂರದಲ್ಲಿರುವಂತೆ ಹರಡಿ. ಇನ್ನು ಮುಂದೆ ಯಾವ ಕೀಟವೂ ನಿಮ್ಮ ನೆಚ್ಚಿನ ಹೂಗಿಡದ ಬುಡದತ್ತ ಧಾವಿಸಲಾರದು!

ನಿಮ್ಮ ಉದ್ಯಾನಕ್ಕೆ ಉತ್ತಮ ಗೊಬ್ಬರವಾಗಬಲ್ಲದು
ಉದ್ಯಾನದ ಮಣ್ಣಿಗೆ ಸಾರಜನಕ ನೀಡುವಲ್ಲಿ ಕಾಫಿಬೀಜಗಳ ಪಾತ್ರ ಮಹತ್ತರವಾಗಿದೆ. ಈ ಬೀಜಗಳನ್ನು ಕುಟ್ಟಿಪುಡಿಮಾಡಿ ಮಣ್ಣಿನ ಮೇಲ್ಪದರದಲ್ಲಿ ನೇರವಾಗಿಯೂ ಹಾಕಬಹುದು, ಇಲ್ಲದಿದ್ದರೆ ಕೊಂಚ ಉಗುರುಬೆಚ್ಚನೆಯ ನೀರಿನಲ್ಲಿ ಬೀಜಗಳ ಪುಡಿಯನ್ನು ಕಲಕಿ ಈ ನೀರನ್ನು ಉದ್ಯಾನದಾದ್ಯಂತ ಸ್ಪ್ರೇ ಮಾಡಿ ಗಿಡಗಳ ಮತ್ತು ಹೂವುಗಳ ಮೇಲೆ ಚಿಮುಕಿಸಲೂಬಹುದು. ಇದರಿಂದ ಅನಗತ್ಯವಾದ ಕೃತಕ ರಾಸಾಯನಿಕಗಳ ಬಳಕೆಯಾಗುವುದನ್ನು ತಪ್ಪಿಸಿದಂತಾಗುತ್ತದೆ. ಇರುವೆ ಬಾರದಿರಲು ಕಾಫಿ ಪುಡಿ ಹಾಕಿದರೆ ಸಾಕು

ಕಾಫಿಬೀಜಗಳು ಕೆಟ್ಟವಾಸನೆಯನ್ನು ಹೀರುತ್ತವೆ
ಸುಗಂಧ ದ್ರವ್ಯದ ಅಂಗಡಿಗೆ ಎಂದಾದರೂ ಭೇಟಿ ನೀಡಿದ್ದೀರಾ? ಕೆಲವು ಸುಗಂಧಗಳನ್ನು ಪರಿಶೀಲಿಸಿದ ಬಳಿಕ ನಮ್ಮ ಮೂಗು ಕಟ್ಟಿಕೊಂಡು ಹೊಸ ಸುಗಂಧವನ್ನು ಆಘ್ರಾಣಿಸಲು ಅಸಮರ್ಥವಾಗುತ್ತದೆ. ಆಗ ಅಂಗಡಿಯವರು ನಿಮಗೆ ಕಾಫಿ ಬೀಜಗಳಿರುವ ಪೊಟ್ಟಣವೊಂದನ್ನು ಆಘ್ರಾಣಿಸಲು ನೀಡುತ್ತಾರೆ. ಏನಾಶ್ಚರ್ಯ, ನಿಮ್ಮ ಮೂಗು ಈಗ ಹೊಸ ಸುಗಂಧವನ್ನು ಗುರುತಿಸಲು ಸಮರ್ಥವಾಗಿದೆ. ಹೌದು, ಕಾಫಿಬೀಜಗಳು ವಾಸನೆಯನ್ನು ನಿವಾರಿಸುವ ಗುಣವನ್ನು ಹೊಂದಿದೆ. ನಿಮ್ಮ ಮನೆಯಲ್ಲಿರುವ ವಿವಿಧ ವಾಸನೆಗಳನ್ನೂ ಈ ಬೀಜಗಳು ಹೀರಿಕೊಂಡು ಮನೆಯೊಳಕ್ಕೆ ತಾಜಾ ಹವೆಯಾಡಲು ನೆರವಾಗುತ್ತದೆ.


ಗಾಳಿಯಾಡುವ ಸೆಣಬಿನ ಅಥವಾ ಹತ್ತಿಯ ಚೀಲದಲ್ಲಿ ಕೆಲವು ಬೀಜಗಳನ್ನಿಟ್ಟು ಫ್ರಿಜ್, ಕಪಾಟು, ಅಡುಗೆಮನೆಯ ಓಡೆ, ಅಲಮಾರು ಮೊದಲಾದೆಡೆ ಇರಿಸುವುದರಿಂದ ದುರ್ವಾಸನೆ ಮಾಯವಾಗುತ್ತದೆ. ವಿವಿಧ ಅಡುಗೆ ಮಾಡಿದ ಬಳಿಕ ಮೈಕ್ರೋವೇವ್ ಅವನ್ ನೊಳಗೆ ವಾಸನೆಯಿದ್ದಲ್ಲಿ ಕೆಲವು ಬೀಜಗಳನ್ನು ಕೆಲವು ಸೆಕೆಂಡುಗಳ ವರೆಗೆ ಬಿಸಿ ಮಾಡಿ (ಗ್ರಿಲ್ ಆಯ್ಕೆ ಇದ್ದರೆ ಉತ್ತಮ) ಹೊರತೆಗೆದರೆ ವಾಸನೆ ಇಲ್ಲವಾಗುತ್ತದೆ.

ತಲೆಗೂದಲಿಗೆ ಕಂದು ಬಣ್ಣ ನೀಡಲು ನೆರವಾಗುತ್ತದೆ
ನಿಮ್ಮ ತಲೆಗೂದಲಿಗೆ ಕೊಂಚ ಕಂದು ಬಣ್ಣದ ಹೊಳಪು ಬೇಕೇ? ಈ ಕಾಫಿಬೀಜಗಳನ್ನು ಕುಟ್ಟಿ ನಯವಾದ ಪುಡಿಮಾಡಿ ನಿಮ್ಮ ಕಂಡೀಶನರ್ ಶಾಂಪೂವಿನಲ್ಲಿ ಬೆರೆಸಿ ಸ್ನಾನ ಮಾಡುವುದರಿಂದ ಕೂದಲಿನಲ್ಲಿದ್ದ ಎಣ್ಣೆ ಮತ್ತು ಕೊಳೆ ಸುಲಭವಾಗಿ ನಿವಾರಣೆಯಾಗುವ ಜೊತೆಗೇ ನಿಧಾನವಾಗಿ ನಿಮ್ಮ ಕೂದಲಿಗೆ ಕಂದು ಬಣ್ಣದ ಹೊಳಪನ್ನೂ ನೀಡುತ್ತದೆ.

English summary

Reasons Not To Throw Your Coffee Beans

As we all know that coffee provides us with a quick boost of energy to start our day or to even stay up late at night. But do you know about coffee beans usage? Well, read on to know the other uses of coffee beans. Coffee beans are useful after your morning fix and it can work in some interesting useful ways.
X
Desktop Bottom Promotion