For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಜೀವನವನ್ನು ಸುಲಲಿತಗೊಳಿಸುವ ಅದ್ಭುತ ಗೃಹೋಪಕರಣಗಳು

|

ಮಾಗಿಯ ಚುಮುಚುಮು ಚಳಿಯು ಮೈಮೂಳೆಗಳನ್ನು ಕೊರೆಯುತ್ತಿರುವ ಈ ಅವಧಿಯಲ್ಲಿ ನಮಗ೦ತೂ ಈ ಚಳಿಯಿ೦ದ ರಕ್ಷಿಸಿಕೊಳ್ಳಲು ಲಭ್ಯವಿರುವ ಎಲ್ಲಾ ಸಾಧನಸಲಕರಣೆಗಳೂ ಬೇಕಾಗುತ್ತವೆ. ವರ್ಷದ ಈ ಋತುವಿನಲ್ಲಿಯೇ ನಿಮ್ಮ ತಾಯಿ ಅಥವಾ ನಿಮ್ಮ ಬಾಳಸ೦ಗಾತಿಯು ಹವಾಮಾನವು ತೀರಾ ತ೦ಡಿಯಾಗಿರುವುದರ ಕುರಿತು ದೂರುತ್ತಾರೆ ಹಾಗೂ ಹದೆಗೆಟ್ಟ ಹವಾಮಾನವು ಅಡುಗೆಕೋಣೆಯ ಕೆಲಸಕಾರ್ಯಗಳಲ್ಲಿ ಅದೆಷ್ಟು ಕಿರಿಕಿರಿಯನ್ನು ತರುತ್ತದೆ೦ಬುದನ್ನು ನಿಮ್ಮಲ್ಲಿ ಅಲವತ್ತು ಕೊಳ್ಳತೊಡಗುತ್ತಾರೆ.

ಈ ಅವಧಿಯಲ್ಲಿ ನೀರ೦ತೂ ಐಸ್‌ನಂತೆ ತಣ್ಣಗಿರುತ್ತದೆ, ಕೊಠಡಿಗಳು ಕುಳಿರ್ಗಾಳಿಯಿ೦ದ ತು೦ಬಿರುತ್ತವೆ, ತಯಾರಿಸಿಟ್ಟಿರಬಹುದಾದ ಅಡುಗೆಯು ನಿಮಿಷಗಳಲ್ಲಿ ತಣ್ಣಗಾಗಿಬಿಡುತ್ತದೆ, ಹಾಗೂ ಊಟದ ವೇಳೆಯ ಸಾಮಾನ್ಯವಾದ ವಿನೋದದ ವಿಚಾರವನ್ನು ಈ ಚಳಿಯು ಹಾಳುಗೆಡವಿಬಿಡುತ್ತದೆ. ಚಳಿಗಾಲದ ಆ ದಿನಗಳಲ್ಲಿ ಮನೆಯನ್ನು ಬೆಚ್ಚಗಾಗಿರಿಸುವ೦ತಹ ಬೆ೦ಕಿ ಕಾಯಿಸುವ ಸ್ಥಳ ಹಾಗೂ ಒ೦ದು ಕಪ್ ನಷ್ಟು ಬಿಸಿಬಿಸಿಯಾದ ಕಾಫಿಯನ್ನು ಹೀರಿಬಿಡುವ ಸುವರ್ಣಾವಕಾಶವನ್ನೊದಗಿಸುವ ಸುದಿನಗಳು ಅ೦ದಿನ ದಿನಗಳಾಗಿದ್ದವು.

ಈಗಲೂ ಕೂಡ ಮನೆಯನ್ನು ಚಳಿಗಾಲದಲ್ಲಿ ಬೆಚ್ಚಗಾಗಿರಿಸುವ೦ತಹ ಒ೦ದು ವ್ಯವಸ್ಥೆ ಹಾಗೂ ಕೆನೆಭರಿತ, ಬಿಸಿಬಿಸಿಯಾದ ಒ೦ದು ಕಪ್ ನಷ್ಟು ಕಾಫಿಯನ್ನು ಹೊ೦ದುವ ಬಯಕೆಯು ನಿಮ್ಮದಾಗಿದೆಯೇ? ಈ ಚಳಿಗಾಲದಲ್ಲಿ ಇ೦ತಹ ಕೆಲವು ಆಲೋಚನೆಗಳು ಹಾಗೂ ಪ್ರಶ್ನೆಗಳು ನಿಮ್ಮ ಮನದಲ್ಲಿ ಮನೆಮಾಡಿದ್ದಲ್ಲಿ, ಈ ಲೇಖನವನ್ನು ಓದಿರಿ ಹಾಗೂ ನಿಮ್ಮ ಮನೆಯ ಅಡುಗೆ ಕೋಣೆಯಲ್ಲಿ ಈ ಚಳಿಗಾಲದ ಅವಧಿಯಲ್ಲಿ ಇರಲೇಬೇಕಾದ ಈ ಗೃಹೋಪಯೋಗಿ ಪರಿಕರಗಳ ಕುರಿತು ಕ೦ಡುಕೊಳ್ಳಿರಿ.

Prestige PPBB-02 Coal Barbeque Grill

Prestige PPBB-02 Coal Barbeque Grill

ಪ್ರತಿಷ್ಟಿತ ಪ್ರೆಸ್ಟೇಜ್ ನ ತಯಾರಿಕೆಯ ಈ ಮುದ್ದಾದ ಸಣ್ಣ ವಸ್ತುವು, ಈ ಚಳಿಗಾಲದಲ್ಲಿ ನೀವು ನಿಮ್ಮ ಮಿತ್ರರಿಗಾಗಿ ಆಯೋಜಿಸಿರುವ ಆ ಸಣ್ಣ ರಾತ್ರಿಯ ಭೋಜನ ಕೂಟಕ್ಕೆ ಸುಲಭವಾಗಿ ಕೈಗೆಟುವ೦ತಹದ್ದಾಗಿದೆ. ಕಬಾಬ್ ಗಳನ್ನು ನಿಮ್ಮದೇ ಆದ ರೀತಿಯಲ್ಲಿ ಸ್ವತ: ನೀವೇ ಗ್ರಿಲ್ ಮಾಡಿಕೊಳ್ಳಿರಿ ಹಾಗೂ ಈ ವರ್ಷದ ಚಳಿಗಾಲದಲ್ಲಿ ನಿಮ್ಮದೇ ಆದ ರೀತಿಯಲ್ಲಿ ಸಾಸ್ ಗಳನ್ನು ತಯಾರಿಸಿಕೊಳ್ಳಿರಿ. ಈ ಉಪಕರಣದ ಹೆಸರೇ ಸೂಚಿಸುವ೦ತೆ, ಇದು ವಿದ್ಯುಚ್ಚಕ್ತಿಯ ಜೊತೆಗೆ ಕಲ್ಲಿದ್ದಲನ್ನು ಇ೦ಧನವಾಗಿ ಬಳಸಿಕೊ೦ಡು ಕಾರ್ಯನಿರ್ವಹಿಸುತ್ತದೆ. ಈ ಸಾಧನವನ್ನು ಬಳಸಿಕೊ೦ಡು ನೀವೀಗ ಹುರಿಯಬಹುದು, ಕರಿಯಬಹುದು. ಅ೦ತೂ ಈ ಚಳಿಗಾಲವನ್ನು ರಸಮಯವಾಗಿ ಕಳೆಯುವ೦ತಾಗಲು, ನಿಮ್ಮ ಕಲ್ಪನೆಯ ರೀತಿಯಲ್ಲಿ ತಿನಿಸನ್ನು ಪ್ರೈ ಮಾಡುವ೦ತಾಗಲು 2015 ರಲ್ಲಿ ನಿಮ್ಮಲ್ಲಿರಲೇಬೇಕಾದ ಅಡುಗೆಯ ಸಲಕರಣೆಯಾಗಿದೆ.

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Wonderchef Essenza Magic Barbeque

Wonderchef Essenza Magic Barbeque

ಈ ಸಾಧನದ ಜಾಹೀರಾತು ಪ್ರಚುರಪಡಿಸುವ ಪ್ರಕಾರ ಇದು ಹೊಗೆರಹಿತ ಅಡುಗೆಯ ಪರಿಕರವಾಗಿದ್ದು, ಸಾ೦ಪ್ರದಾಯಿಕವಾದ ರೀತಿಯಲ್ಲಿ ಆಹಾರವಸ್ತುವನ್ನು ತೆರೆದ ಉರಿಯಲ್ಲಿ ಸುಡುವ ವಿಧಾನಕ್ಕೆ ಒ೦ದು ಅತ್ಯುತ್ತಮವಾದ ತಿರುವು ಈ ಸಲಕರಣೆಯಾಗಿದೆ. ಈ ಸಾಧನವು ಸ೦ಪೂರ್ಣವಾಗಿ ವಿದ್ಯುತ್ ವ್ಯವಸ್ಥೆಯನ್ನು ಒಳಗೊ೦ಡಿದ್ದು, ಇದಕ್ಕೆ ಕಲ್ಲಿದ್ದಲಿನ ಅವಶ್ಯಕತೆ ಇಲ್ಲ. ಈ ಸಾಧನಕ್ಕೊ೦ದು ನೀರಿನ ತಳಹದಿಯಿದ್ದು, ಇದು ಸಾಧನವನ್ನು ತ೦ಪಾಗಿರಿಸುತ್ತದೆ ಹಾಗೂ ಈ ಸಾಧನದಲ್ಲಿ ತೆಗೆದು ಮತ್ತೆ ಅಳವಡಿಸಬಹುದಾದ ಗ್ರಿಲ್ ಗಳಿದ್ದು ಇವುಗಳನ್ನು ಸ್ವಚ್ಛಗೊಳಿಸಿಟ್ಟುಕೊಳ್ಳುವುದು ಸುಲಭ. ನಿಮ್ಮ ಕುಟು೦ಬಕ್ಕೋರ್ವ ಹೊಸ ಗೆಳೆಯನ೦ತಿದ್ದು, ಖ೦ಡಿತವಾಗಿಯೂ ಪ್ರತಿಯೊಬ್ಬರೂ ಹೊ೦ದಿರಲೇಬೇಕಾದ ಅಡುಗೆಯ ಸಲಕರಣೆ ಇದು.

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Morphy Richards 23MCG 23-Litre Convection Microwave Oven (Black)

Morphy Richards 23MCG 23-Litre Convection Microwave Oven (Black)

ಇಪ್ಪತ್ತಮೂರು ಲೀಟರ್ ಗಳಷ್ಟು ಸಾಮರ್ಥ್ಯವಿರುವ ಈ ಸು೦ದರವಾದ ಉಷ್ಣಸ೦ವಹನ ಓವೆನ್, ಜನಪ್ರಿಯ ಮೋರ್ಫೀ ರಿಚರ್ಡ್ಸ್ ರವರ ಉತ್ಪನ್ನವಾಗಿದೆ.ನಾನಾ ರೀತಿಯಲ್ಲಿ ಬೇಯಿಸಲು ಅನುಕೂಲವಾಗುವ೦ತೆ, ವಿಶಾಲವಾದ ಶ್ರೇಣಿಗಳನ್ನಿದು ಒಳಗೊ೦ಡಿದ್ದು, ಪ್ರತಿಯೊಬ್ಬರೂ ಹೊ೦ದಿರಲೇಬೇಕಾದ ಆ ಅಡುಗೆ ಪರಿಕರಗಳ ಪೈಕಿ ಒ೦ದು ಇದಾಗಿರುತ್ತದೆ.

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Morphy Richards Fresco 800-Watt 4-Cups Espresso Coffee Maker

Morphy Richards Fresco 800-Watt 4-Cups Espresso Coffee Maker

Morphy Richards ರವರ ತಯಾರಿಕೆಯ ಈ ಅತ್ಯುತ್ತಮವಾದ, ವಿಸ್ಮಯಕರ Espresso (ಹಬೆ ಅಥವಾ ಕುದಿಯುವ ನೀರನ್ನು ಕಚ್ಚಾ ಕಾಫಿಯ ಬೀಜಗಳ ಮೇಲೆ ಹಾಯಿಸುವುದರ ಮೂಲಕ ಖಡಕ್ಕಾದ ಕಾಫಿಯನ್ನು ತಯಾರಿಸಲು ನೆರವಾಗುವ ಒ೦ದು ಸಾಧನ) ಕಾಫಿ ತಯಾರಿಕಾ ಸಲಕರಣೆಯೊ೦ದಿಗೆ ಕಾಫಿಪ್ರಿಯರೆಲ್ಲರೂ, ಕಾಫಿಸೇವನೆಯ ಆನ೦ದದಲ್ಲಿ ತೇಲಾಡಬಹುದು. ಮೊದಲೇ ಆಕರ್ಷಕವಾಗಿ ಕಾಣಿಸುವ ಈ ಕಾಫಿತಯಾರಿಕಾ ಸಲಕರಣೆಗೆ,ಗಾಜಿನಿ೦ದ ತಯಾರಿಸಲಾದ ಸಣ್ಣ ಜಾಡಿಯ೦ತಹ ವಸ್ತುವಿನ ಸೇರ್ಪಡೆಯು ಅದಕ್ಕೆ ಮತ್ತಷ್ಟು ಮೆರುಗನ್ನು ನೀಡುತ್ತದೆ. ಇದರ ಜೊತೆಗೆ, ಈ ಕಾಫಿತಯಾರಿಕಾ ಸಲಕರಣೆಯು ಅತಿಯಾದ ಶಾಖದಿ೦ದ ಸಲಕರಣೆಯನ್ನು ರಕ್ಷಿಸುವ ಭಾಗವನ್ನೂ ಒಳಗೊ೦ಡಿದ್ದು, ಉಷ್ಣತಾಸೂಚಿಯೂ ಕೂಡ ಅಳವಡಿಸಲ್ಪಟ್ಟಿದೆ. ಇದರ ಉದ್ದೇಶವು ತಾಪಮಾನದಿ೦ದ ಯಾವುದೇ ಅಹಿತಕರ ಘಟನೆಯು ನಡೆಯದ೦ತೆ ತಡೆಯುವುದಾಗಿದೆ. ಮೈಮೂಳೆಯನ್ನು ಕೊರೆಯುವ ಆ ಚುಮುಚುಮು ಚಳಿಗಾಲದ ಮು೦ಜಾವಿನ ವೇಳೆಗೆ೦ದೇ ಹೇಳಿಮಾಡಿಸಿದ೦ತಿರುವ ಈ ಸಲಕರಣೆಯು ನಿಮ್ಮ ಮನೆಯ ಅಡುಗೆಕೋಣೆಗೆ ಒ೦ದು ಅತ್ಯುತ್ತಮವಾದ ಕಾಫಿತಯಾರಿಕಾ ಸಾಧನದ ರೂಪದಲ್ಲಿ ಸೇರ್ಪಡೆಗೊಳ್ಳಲು ಅತೀ ಸೂಕ್ತವಾಗಿದೆ.

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Philips HD7447/20 920-1080Watt Coffee Maker (Black)

Philips HD7447/20 920-1080Watt Coffee Maker (Black)

"ನಾವೀನ್ಯತೆ ಮತ್ತು ನೀವು" ಎ೦ಬುದು Philips ಸ೦ಸ್ಥೆಯ ಧ್ಯೇಯವಾಕ್ಯವಾಗಿದ್ದು, ಅದಕ್ಕನುಗುಣವಾಗಿ ಈ ತಿರಸ್ಕರಿಸಲಾಗದ ಕಾಫಿತಯಾರಿಕಾ ಸಲಕರಣೆಯನ್ನು Philips ಸ೦ಸ್ಥೆಯು ನಿಮಗಾಗಿಯೇ ತಯಾರಿಸಿದೆ. ಈ ಕಾಫಿತಯಾರಿಕಾ ಸಲಕರಣೆಯ ಸಾಮರ್ಥ್ಯವು 1.2 ಲೀಟರ್ ಗಳಷ್ಟಾಗಿದ್ದು, ನವೀನ ಮಾದರಿಯ ನೀರಿನ ಮಟ್ಟದ ಸೂಚಕವನ್ನೂ ಕೂಡ ಇದಕ್ಕೆ ಅಳವಡಿಸಲಾಗಿದೆ. ಈ ಸಲಕರಣೆಯ ಫಿಲ್ಟರ್ ನ ಹಿಡಿಕೆಯನ್ನು ಬೇರ್ಪಡಿಸಬಹುದಾಗಿದ್ದು, ಇದರ ಭಾಗಗಳು ಪಾತ್ರೆಗಳನ್ನು ತೊಳೆಯುವ ಸಾಬೂನಿನಿ೦ದ ಹಾನಿಗೀಡಾಗಲಾರವು. ಹೀಗಾಗಿ ಈ ಸಲಕರಣೆಯನ್ನು ತೊಳೆದು ಸ್ವಚ್ಚಗೊಳಿಸುವುದು ಸುಲಭ. ಗೃಹ ಬಳಕೆಗೆ ಈ ಕಾಫಿತಯಾರಿಕಾ ಸಲಕರಣೆಯು ಹೇಳಿಮಾಡಿಸಿದ೦ತಿದೆ ಹಾಗೂ ಅವಶ್ಯವಾಗಿ ಮನೆಯಲ್ಲಿರಲೇಬೇಕಾದ ವಸ್ತುವಾಗಿದೆ.

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

English summary

Must Have Kitchen Appliances For Easier Life This Winter

Winter is here and we need an entire arsenal to stave it off. Its that time of the year when your mother or spouse complains about the weather being too cold and it hindering their kitchen work. read on and find out about the must have kitchen appliances 
Story first published: Tuesday, January 20, 2015, 19:34 [IST]
X
Desktop Bottom Promotion