For Quick Alerts
ALLOW NOTIFICATIONS  
For Daily Alerts

ಪೀಠೋಪಕರಣಗಳಿಗೆ ಫಂಗಸ್ ಬರದಂತೆ ನೋಡಿಕೊಳ್ಳುವುದು ಹೇಗೆ?

|

ನಮ್ಮಲ್ಲಿ ಕೆಲವರಿಗೆ ಲೋಹದ ಪೀಠೋಪಕರಣಗಳು ಪ್ರಿಯವಾದರೂ ಕೂಡ, ಬಹುತೇಕರಿಗೆ ಈಗಲೂ ಸಹ ಮರದ ಪೀಠೋಪಕರಣಗಳೇ ಇಷ್ಟ. ಲೋಹದ ಪೀಠೋಪಕರಣಗಳಿಗೆ ಹೋಲಿಸಿದರೆ, ಮರದ ಪೀಠೋಪಕರಣಗಳ ಬಾಳಿಕೆ ಕಮ್ಮಿ ಎಂಬುದು ಒಂದು ವಾದವಾಗಿದೆ. ಇದರ ಕಡಿಮೆ ಆಯುಸ್ಸಿಗೆ ಅಚ್ಚು ಮತ್ತು ಶಿಲೀಂಧ್ರ ಎಂದರೆ ಫಂಗಸ್ ಕಾರಣವೆಂದು ಹೇಳಲಾಗುತ್ತದೆ.

ಇದು ನಿಮ್ಮ ಪೀಠೋಪಕರಣದ ಆರೋಗ್ಯವನ್ನು ಹಾಳು ಮಾಡಿಬಿಡುತ್ತದೆ. ಆದ್ದರಿಂದ ನಿಮ್ಮ ಪೀಠೋಪಕರಣದ ಮೇಲೆ ಕಾಣಿಸಿಕೊಳ್ಳುವ ಸಣ್ಣ ಸಣ್ಣ ಗುಳ್ಳೆಗಳಂತಹ ಶಿಲೀಂಧ್ರಗಳನ್ನು (ಫಂಗಸ್) ಕಡೆಗಣಿಸಬೇಡಿ. ಇವುಗಳು ಸೂಕ್ಷ್ಮಾಣು ಜೀವಿಗಳ ಸಲುವಾಗಿ ಕಾಣಿಸಿಕೊಳ್ಳುತ್ತವೆ. ಪೀಠೋಪಕರಣದಲ್ಲಿರುವ ತೇವಾಂಶದ ಕಾರಣವಾಗಿ ಇವು ಅಭಿವೃದ್ಧಿ ಹೊಂದುತ್ತವೆ.

How to Prevent Your Furniture From Fungus

ನಿಮ್ಮ ಪೀಠೋಪಕರಣಗಳನ್ನು ಸುಮ್ಮನೆ ಒದ್ದೆ ಬಟ್ಟೆಯಲ್ಲಿ ಒರೆಸುವ ಮೂಲಕ ಅಥವಾ ಅದರ ಮೇಲೆ ಯಾವುದಾದರು ದ್ರವಗಳು ಚೆಲ್ಲಿದಾಗ, ಅದನ್ನು ಪೀಠೋಪಕರಣವು ಹೀರಿಕೋಳ್ಳುತ್ತದೆ. ಹೀಗೆ ಕಾಲ ಕ್ರಮೇಣ ಶಿಲೀಂಧ್ರವು ಬೆಳವಣಿಗೆಯನ್ನು ಹೊಂದುತ್ತದೆ. ಮುಂದೆ ಇದು ಅಪಾಯಕಾರಿಯಾಗಿ ಪೀಠೋಪಕರಣವನ್ನು ಹಾಳು ಮಾಡುವ ಮಟ್ಟಕ್ಕೆ ಹೋಗುತ್ತದೆ.

ಇದನ್ನು ನೀವು ಬ್ರಷ್‌ನಲ್ಲಿ ಸ್ವಚ್ಛಗೊಳಿಸಲು ಹೋದಾಗ ಅದು ಗಾಳಿಯಲ್ಲಿ ಹಾರಾಡಿ ನಿಮಗೆ ಉಸಿರಾಟದ ಸಮಸ್ಯೆ, ತಲೆನೋವು, ಗಂಟಲಿನಲ್ಲಿ ಕೆರೆತ, ಸೈನಸ್ ಹಾಗು ಇತ್ಯಾದಿ ಸಮಸ್ಯೆಗಳನ್ನು ಸಹ ತರಬಹುದು. ಮರದ ಪೀಠೋಪಕರಣಗಳು ಹೊಳೆಯಲು ಸಲಹೆಗಳು

ಹಾಗಾದರೆ ಪೀಠೋಪಕರಣಗಳನ್ನು ಶಿಲೀಂಧ್ರದಿಂದ ಹೇಗೆ ರಕ್ಷಿಸುವುದು ಎಂಬ ಕುರಿತು ನಿಮಗೆ ಚಿಂತೆಯಾಗಿದೆಯೇ? ಇದು ಯಾವುದು ತಮ್ಮಷ್ಟಕ್ಕೆ ತಾವೇ ಸರಿಹೋಗುವುದಿಲ್ಲ. ಅದೇ ಸಮಯದಲ್ಲಿ ನೀವು ಶಿಲೀಂಧ್ರವನ್ನು ನಿವಾರಿಸಲು ನಿಮ್ಮ ಮನೆಯವರ ಸಹಾಯವನ್ನು ಸಹ ಕೋರಬಹುದು. ಏಕೆಂದರೆ ಇವುಗಳನ್ನು ನಿವಾರಿಸಲು ಭಾರೀ ಸಮಯ ವ್ಯರ್ಥವಾಗುತ್ತದೆ ಮತ್ತು ಇದಕ್ಕೆ ತುಂಬಾ ದಿನಗಳ ಕಾಲ ಕಾಯಬೇಕಾಗುತ್ತದೆ.

ಇದರ ಜೊತೆಗೆ ಇದು ಮುಂದೆ ಪಸರಿಸಿದಂತೆ ಕಾಪಾಡುವ ಸಲುವಾಗಿಯಾದರು ನಾವು ಇದನ್ನು ಜಾಗರೂಕತೆಯಿಂದ ನೋಡಿಕೊಳ್ಳಬಹುದು. ಇದಕ್ಕಾಗಿ ನೀವು ಮಾಡಬೇಕಾಗಿರುವುದು: ನಿಮ್ಮ ಕೋಣೆ/ಬಾತ್‍ರೂಮ್/ ಅಡುಗೆ ಮನೆಗಳನ್ನು ಗಾಳಿಯಾಡುವಂತೆ ಇರಿಸಿಕೊಳ್ಳಿ. ನಿಮ್ಮ ಪೀಠೋಪಕರಣಗಳನ್ನು ಇರಿಸಿರುವ ಕೋಣೆಗಳು ಗಾಳಿಯಾಡುವಂತಿದ್ದರೆ ಒಳ್ಳೆಯದು. ಶಿಲೀಂಧ್ರವು ತೇವಾಂಶವಿರುವ ಮತ್ತು ಕಡಿಮೆ ಗಾಳಿಯಾಡುವ ಕೋಣೆಗಳಲ್ಲಿ ಭೇಗ ಬೆಳೆಯುತ್ತವೆ. ಈ ಶಿಲೀಂಧ್ರಗಳು ಬೇಗ ಬೆಳೆಯಲು ನೀವೇ ಕಾರಣರಾಗುತ್ತೀರಿ ಎಂಬುದು ವಿಚಿತ್ರವಾದರು ಸತ್ಯ.

ನಿಮ್ಮ ಸುತ್ತಮುತ್ತಲ ಪರಿಸರವನ್ನು ಶುಚಿಯಾಗಿರಿಸಿಕೊಳ್ಳಿ
ಶಿಲೀಂಧ್ರವು ನಿಮ್ಮ ಮನೆಯಲ್ಲಿಯೇ ಬೆಳೆಯುತ್ತದೆ. ಇದರ ಜೊತೆಗೆ ಇವು ನಿಮ್ಮ ಮನೆಗೆ ಹೊರಗಿನಿಂದಲು ಹಾರಿಕೊಂಡು ಬಂದು ನೆಲೆಸಬಹುದು. ಹೀಗೆಂದು ನೀವು ನಿಮ್ಮ ಮನೆಯ ಅಕ್ಕ ಪಕ್ಕದ ಬೀದಿಯನ್ನು ಗುಡಿಸಿರಿ ಎಂದು ನಾವು ಹೇಳುವುದಿಲ್ಲ. ಕನಿಷ್ಠ ನಿಮ್ಮ ಮನೆಯ ಹುಲ್ಲು ಹಾಸು ಭಾಗವನ್ನು ಶುಚಿಯಾಗಿರಿಸಿಕೊಳ್ಳಿ. ಜೊತೆಗೆ ನಿಮ್ಮ ಮನೆಯ ಬಾಗಿಲ ಬಳಿ ಸಹ ಶುಚಿಯಾಗಿರಿಸಿಕೊಳ್ಳಿ.

ತೇವಾಂಶವು ನೆಲೆಗೊಳ್ಳಲು ಬಿಡಬೇಡಿ
ಒಂದು ವೇಳೆ ನೀವೇನಾದರು ದ್ರವವನ್ನು ಚೆಲ್ಲಿದರೆ, ಅದು ಅಲ್ಲಿಯೇ ನೆಲೆಗೊಳ್ಳಲು ಬಿಡಬೇಡಿ. ನಿಮ್ಮ ಪೀಠೋಪಕರಣಗಳನ್ನು ಆಗಾಗ ಚೆನ್ನಾಗಿ ಒರೆಸುತ್ತ ಇರಿ. ಶಿಲೀಂಧ್ರವು ಅದರ ಮೇಲೆ ನೆಲೆಗೊಳ್ಳದಂತೆ ಜಾಗರೂಕರಾಗಿರಿ. ಮರದ ಪೀಠೋಪಕರಣಗಳಿಗೆ ಹೊಸ ಲುಕ್ ನೀಡಲು ಟಿಪ್ಸ್

ಸ್ವಚ್ಛವಾಗಿರಿಸಲು ಮೊದಲು ಸಿದ್ಧರಾಗಿ
ಒಂದು ವೇಳೆ ನಿಮ್ಮ ಪೀಠೋಪಕರಣಕ್ಕೆ ಶಿಲೀಂಧ್ರವು ಬಂದರೆ, ಅದನ್ನು ಶುಚಿಗೊಳಿಸಲು ರಬ್ಬರ್ ಗವಸು, ವ್ಯಾಕ್ಯೂಮ್ ಕ್ಲೀನರ್, ಬ್ರಷ್, ಡಿಸ್‌ಇನ್‌ಫೆಕ್ಟೆಟೆಂಟ್, ಡಿಟರ್ಜೆಂಟ್ ಮತ್ತು ಮಾಪ್‌ಗಳನ್ನು ತೆಗೆದುಕೊಂಡು ಸಿದ್ಧರಾಗಿ.

ಶಿಲೀಂಧ್ರದ ಬೀಜಗಳನ್ನು ಸ್ವಚ್ಛಗೊಳಿಸಿ
ನಿಮ್ಮ ಪೀಠೋಪಕರಣಗಳ ಮೇಲೆ ಇರುವ ಶಿಲೀಂಧ್ರದ ಬೀಜಗಳನ್ನು ಸ್ವಚ್ಛಗೊಳಿಸಿ. ಅದರ ಮೇಲೆ ಪೌಡರ್ ಚೆಲ್ಲಿ ಶಿಲೀಂಧ್ರದ ಬೀಜಗಳನ್ನು ದೂರ ಎಸೆಯಿರಿ. ಯಾವುದೇ ಕಾರಣಕ್ಕು ಶಿಲೀಂಧ್ರವು ಮತ್ತೆ ಬರದಂತೆ ಮುಂಜಾಗರೂತೆ ವಹಿಸಿ. ನೀವು ಸರಿಯಾಗಿ ಸ್ವಚ್ಛಗೊಳಿಸಲಿಲ್ಲವಾದಲ್ಲಿ ಅದು ಖಂಡಿತ ಮತ್ತೆ ಬೆಳೆಯುತ್ತದೆ ಎಂಬುದನ್ನು ಮರೆಯಬೇಡಿ.

English summary

How to Prevent Your Furniture From Fungus

While metal furniture may interest a few, most of us would usually go for wooden furniture owing to their various advantages over those of metal. At the same time, wooden furniture are said to have shorter life cycle than those made out of metal.
Story first published: Sunday, February 1, 2015, 11:51 [IST]
X
Desktop Bottom Promotion