For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿ ಇರುವೆಗಳ ಕಾಟವೇ? ಚಿಂತಿಸಬೇಡಿ ಇಲ್ಲಿದೆ ಪರಿಹಾರ

|

ನಿಮ್ಮ ಮನೆಯ ಕಪಾಟಿನಲ್ಲಿರುವ ವಸ್ತುಗಳಿಂದ ಇರುವೆಗಳನ್ನು ಓಡಿಸಬಹುದು ಎಂದು ನಿಮಗೆ ಗೊತ್ತೆ. ಮನೆಯಲ್ಲಿಯೇ ದೊರೆಯುವ ಈ ಸುಲಭವಾದ ಪದಾರ್ಥಗಳನ್ನು ಬಳಸಿ ಇರುವೆಗಳನ್ನು ಓಡಿಸುವುದರಿಂದ ಇರುವೆಗಳನ್ನು ಸುಲಭವಾಗಿ ಕೊಲ್ಲಬಹುದು. ಇದು ಪರಿಸರಕ್ಕೆ ಪೂರಕ, ನಿಮ್ಮ ಜೇಬಿಗು ಸಹ ಪೂರಕ ಹಾಗು ಇದನ್ನು ಬಳಸುವುದು ತೀರಾ ಸುಲಭ. ವಿಶ್ವದಲ್ಲಿ ಸುಮಾರು ಸಾವಿರಾರು ಬಗೆಯ ಇರುವೆಗಳ ಪ್ರಕಾರವಿದೆ.

ಅದೃಷ್ಟವಶಾತ್ ಕೇವಲ ಕೆಲವು ಬಗೆಯ ಇರುವೆಗಳು ಮಾತ್ರ ನಿಮ್ಮ ಮನೆಗೆ ಬಂದು ವಾಸಿಸುತ್ತವೆ, ಇಲ್ಲವೆ ಏನಾದರು ರುಚಿಕರವಾಗಿರುವುದು ಸಿಗುತ್ತವೆಯೋ, ಎಂದು ಹುಡುಕಿಕೊಂಡು ಬರುತ್ತವೆ.

ಇನ್ನೂ ಒಂದು ವಿಚಾರವೇನೆಂದರೆ ಕೆಲವು ಬಗೆಯ ಇರುವೆಗಳು ನಮಗೂ ಮತ್ತು ನಮ್ಮ ಪರಿಸರ ಎರಡಕ್ಕೂ ಒಳ್ಳೆಯದು ಮಾಡುತ್ತವೆ. ಇವು ನಿಮ್ಮ ಹಾಸಿಗೆಯಲ್ಲಿರುವ ತಿಗಣೆಗಳು, ಪುಸ್ತಕಗಳಲ್ಲಿರುವ ಸಿಲ್ವರ್ ಫಿಶ್, ಚಿಗಟಗಳು ಮತ್ತು ಜೇಡಗಳ ಮೊಟ್ಟೆಗಳನ್ನು ತಿಂದು ನಿಮಗೆ ಉಪಕಾರ ಮಾಡುತ್ತವೆ. ಇರುವೆಗಳು ನಿರಂತರವಾಗಿ ನಿಮ್ಮ ಮನೆಗೆ ಬರುತ್ತಲೆ ಇರುತ್ತವೆ. ಇವುಗಳನ್ನು ಶಾಶ್ವತವಾಗಿ ಹೊರದಬ್ಬಲು ನಿಮ್ಮಿಂದ ಸಾಧ್ಯವಾಗುವುದಿಲ್ಲ. ಇರುವೆ ಬಾರದಿರಲು ಕಾಫಿ ಪುಡಿ ಹಾಕಿದರೆ ಸಾಕು

ಇರುವೆಗಳನ್ನು ನಿವಾರಿಸಿಕೊಳ್ಳಲು ಕೀಟನಾಶಕಗಳ ಮೊರೆ ಹೋಗಬೇಡಿ. ಇವುಗಳ ಪ್ರಭಾವ ಕಡಿಮೆಯಾದ ಕೂಡಲೆ ಇರುವೆಗಳು ಪುನಃ ಬರುತ್ತವೆ. ಇದರ ಜೊತೆಗೆ ನೀವು ಕೀಟನಾಶಕಗಳ ಬಳಕೆಯಿಂದ ಪರಿಸರದ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುವಿರಿ. ಇರುವೆಗಳನ್ನು ಸ್ವಾಭಾವಿಕವಾಗಿ ಕೊಲ್ಲಲು ಹಲವಾರು ಮಾರ್ಗಗಳಿವೆ. ಹಾಗಾದರೆ ಹೇಗೆ ಕೊಲ್ಲುವುದು? ಎಂಬ ನಿಮ್ಮ ಪ್ರಶ್ನೆಗೆ ಬೋಲ್ಡ್‌ಸ್ಕೈ ಇಂದು ಇರುವೆಗಳನ್ನು ಕೊಲ್ಲಲು ಇರುವ ಕೆಲವು ಮನೆಮದ್ದುಗಳನ್ನು ನಿಮಗೆ ತಿಳಿಸಿಕೊಡಲಿದೆ.

ವಿನೀಗರ್

Home Remedies To Get Rid Of Ants Naturally And Cheaply

ವಿನೀಗರ್ ಎಂಬುದು ಒಂದು ಸ್ವಾಭಾವಿಕ ಇರುವೆ ನಿರೋಧಕ. ಸ್ವಲ್ಪ ವಿನೀಗರ್ ಅನ್ನು ಸ್ಪ್ರೇ ಇರುವ ಬಾಟಲಿನಲ್ಲಿ ಹಾಕಿ. ಇರುವೆಗಳು ಎಲ್ಲೆಲ್ಲಿ ಒಳ ನುಗ್ಗುತ್ತವೆಯೋ, ಅಲ್ಲಲ್ಲಿ ಇದನ್ನು ಸಿಂಪಡಿಸಿ. ವಿನೀಗರ್ ಒಣಗಿದ ಮೇಲೆ ಈ ಪ್ರಕ್ರಿಯೆಯನ್ನು ಕೆಲ ದಿನಗಳ ಕಾಲ ಪುನರಾವರ್ತಿಸಿ. ಇವುಗಳು ಇರುವೆಗಳನ್ನು ನಿಮ್ಮ ಮನೆಯಿಂದ ದೂರವಿಡುತ್ತದೆ.

ಸೋಪ್ ನೀರು


ಇದು ಇರುವೆಗಳನ್ನು ಹೊರ ಓಡಿಸಲು ಇರುವ ಒಂದು ಒಳ್ಳೆಯ ಉಪಾಯವಾಗಿದೆ. ಇದು ಅತ್ಯಂತ ಸುಲಭವಾದ ಮತ್ತು ಜನಪ್ರಿಯವಾದ ಮನೆ ಮದ್ದಾಗಿ ಬಳಕೆಯಲ್ಲಿದೆ. ಒಂದು ಸ್ಪ್ರೇ ಬಾಟಲಿನಲ್ಲಿ ಸೋಪ್ ಹಾಗು ಬಿಸಿ ನೀರನ್ನು ತುಂಬಿ. ಇದು ಇರುವೆಗಳನ್ನು ಕೊಂದು ಹಾಕುತ್ತವೆ. ಇದು ತೇವವಾಗಿದ್ದಾಗ ಮಾತ್ರ ಕೆಲಸ ಮಾಡುತ್ತದೆ. ಹಾಗಾಗಿ ಕೆಲ ದಿನಗಳ ಕಾಲ ಮತ್ತೆ ಮತ್ತೆ ಪುನರಾವರ್ತಿಸಿ. ಜೇನಿಗೆ ಇರುವೆ ಬರದಂತೆ ತಡೆಯುವುದು ಹೇಗೆ?

ಚಾಕ್ ಅಥವಾ ಸೀಮೆ ಸುಣ್ಣ


ಅಚ್ಚರಿಯಾಗಬಹುದು, ಇರುವೆಗಳು ಸೀಮೆಸುಣ್ಣದ ಗೆರೆಯನ್ನು ದಾಟುವುದಿಲ್ಲ. ಇದಕ್ಕೆ ಕಾರಣ ತಿಳಿದು ಬಂದಿಲ್ಲ. ಆದರೂ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುವುದನ್ನು ನಾವು ಗಮನಿಸಬಹುದು. ಒಂದು ಸಾಧಾರಣವಾದ ಸೀಮೆ ಸುಣ್ಣವನ್ನು ತೆಗೆದುಕೊಂಡು ಅದನ್ನು ಇರುವೆಗಳು ಬರುವ ದಾರಿಯಲ್ಲಿ ಗೆರೆ ಎಳೆಯಲು ಬಳಸಿ. ಇರುವೆಗಳು ನೋಡಿ ಆ ಲಕ್ಷ್ಮಣ ರೇಖೆಯನ್ನು ದಾಟಿ ಬರುವುದಿಲ್ಲ.

ಬೇಬಿ ಪೌಡರ್


ಇದು ಮನೆಯಲ್ಲಿರುವ ಇರುವೆಗಳನ್ನು ಕೊಲ್ಲಲು ಇರುವ ಅತ್ಯುತ್ತಮ ಮಾರ್ಗವಾಗಿದೆ. ಇರುವೆಗಳು ಬರುವ ಹಾದಿಯಲ್ಲಿ ಸ್ವಲ್ಪ ಬೇಬಿ ಪೌಡರನ್ನು ಚಿಮುಕಿಸಿ. ಇದು ಇರುವೆಗಳು ನಿಮ್ಮ ಮನೆಗೆ ಪ್ರವೇಶ ಮಾಡದಂತೆ ದಿಗ್ಬಂಧನ ವಿಧಿಸುತ್ತದೆ.

ಕಾಫಿ


ಇರುವೆಗಳನ್ನು ಹೇಗೆ ಕೊಲ್ಲುವುದು? ಇರುವೆಗಳಿಗೆ ಕಾಫಿಯ ವಾಸನೆ ಆಗಿ ಬರುವುದಿಲ್ಲ. ಒಂದು ವೇಳೆ ನೀವು ಕಾಫಿಯ ಗಸಿಯನ್ನು ಇರುವೆಗಳು ಬರುವ ಜಾಗದಲ್ಲಿ ಹಾಕಿದರೆ, ಆ ಇರುವೆಗಳು ಅದನ್ನು ದಾಟುವುದಿಲ್ಲ. ಕಾಫಿ ಗಸಿಯನ್ನು ನಿಮ್ಮ ಮನೆಯ ಕೈತೋಟದಲ್ಲಿ ಸಹ ಹಾಕಬಹುದು. ಆಗ ಇರುವೆಗಳು ಆ ಗಿಡಗಳ ಪಕ್ಕಕ್ಕೆ ಸಹ ಬರುವುದಿಲ್ಲ.
English summary

Home Remedies To Get Rid Of Ants Naturally And Cheaply

You can get rid of ants naturally by using ingredients that you may already have in your cupboard. These home remedies to kill ants in house are safe for the environment, cheap and easily available. There are thousands of species of ants in the world. There are 12,000 species of ants on the earth.
Story first published: Friday, February 13, 2015, 14:23 [IST]
X
Desktop Bottom Promotion