For Quick Alerts
ALLOW NOTIFICATIONS  
For Daily Alerts

ಮನೆಯ ಬಾತ್‌ರೂಮ್‌‌ ಸ್ವಲ್ಪ ದೊಡ್ಡದಾಗಿ ಕಾಣುವಂತೆ ಮಾಡಬೇಕೇ?

|

ನಮ್ಮ ಮನೆಯಲ್ಲಿ ದಿನವಿಡೀ ಬಳಸಲ್ಪಡುವಂತಹ ಕೆಲವೊಂದು ಸ್ಥಳಗಳಲ್ಲಿ ಬಾತ್‍ರೂಮ್ (ಸ್ನಾನಗೃಹ) ಸಹ ಒಂದು. ಇದನ್ನು ಸ್ವಚ್ಛವಾಗಿರಿಸಿಕೊಳ್ಳುವ ಕೆಲಸದ ಜೊತೆಗೆ, ಇದನ್ನು ಅಂದವಾಗಿ ಸಹ ಇಡುವ ಹೊಣೆ ನಮ್ಮ ಮೇಲೆ ಇರುತ್ತದೆ. ಇದಕ್ಕಾಗಿಯೇ ನಾವು ಬಾತ್‍ರೂಮ್ ಸಿದ್ಧಪಡಿಸುವ ಸಮಯದಲ್ಲಿಯೇ ವಿಶೇಷವಾದ ಕಾಳಜಿಗಳನ್ನು ತೋರುತ್ತೇವೆ.

ಕಮೋಡ್ ಮತ್ತು ವಾಟರ್ ಔಟ್‍ಲೆಟ್ ಅಳವಡಿಸುವಾಗಲೇ ಅದು ಸೋರದಿರುವಂತೆ ಎಚ್ಚರಿಕೆಯನ್ನು ವಹಿಸುತ್ತೇವೆ. ಇನ್ನೂ ನೀರು ಬೀಳದಂತೆ ಎಲೆಕ್ಟ್ರಾನಿಕ್ ಸಾಧನಗಳನ್ನು ದೂರವಿಡುತ್ತೇವೆ, ನೆಲ ಬೇಗ ಒಣಗಲು ಅನುಕೂಲವಾಗುವಂತಹ ಟೈಲ್ಸ್ ಖರೀದಿಸುತ್ತೇವೆ.

ಹಾಗಾಗಿ ಬಾತ್‌ರೂಮ್ ಸ್ವಲ್ಪ ಅಗಲವಾಗಿ ಮತ್ತು ದೊಡ್ಡದಾಗಿ ಇರುವುದು ಐಶಾರಾಮಿತನದ ಸಂಕೇತ. ಇತರ ಕೋಣೆಗಳ ರೀತಿಯೇ ಬಾತ್‌ರೂಮ್ ಸಹ ನಮ್ಮ ಮನೆಯಲ್ಲಿ ಅತ್ಯಂತ ಮುಖ್ಯವಾದ ಭಾಗವಾಗಿರುತ್ತದೆ. ಇಂದಿನ ಕಾಲದಲ್ಲಿ ಅಡಿಗೆ ಹತ್ತಾರು ಸಾವಿರ ಪಾವತಿಸಿ ಕೊಂಡ ಸ್ಥಳದಲ್ಲಿ ನಾವು ಬೆಡ್‌ರೂಮ್, ಹಾಲ್, ಅಡುಗೆ ಮನೆ ಎಂದು ಎಲ್ಲವಕ್ಕೂ ಜಾಗ ನೀಡಿ ಬಾತ್‌ರೂಮ್ ಬಗ್ಗೆ ಯೋಚಿಸುವಷ್ಟರಲ್ಲಿ ಅದರ ಸ್ಥಳ ಚಿಕ್ಕದಾಗಿ ಬಿಡುತ್ತದೆ. ಆದರೆ ಏನು ಮಾಡುವುದು ಅದಕ್ಕಾಗಿ ನಾವು ನಿಮಗೆ ಕೆಲವೊಂದು ಸುಲಭವಾದ ಸಲಹೆಗಳನ್ನು ನೀಡುತ್ತಿದ್ದೇವೆ. ಇದನ್ನು ಬಳಸಿಕೊಂಡು ನಿಮ್ಮ ಬಾತ್ ರೂಮ್ ದೊಡ್ಡದಾಗಿ ಕಾಣುವಂತೆ ಮಾಡಿಕೊಳ್ಳಿ. ಸ್ನಾನದ ಕೊಠಡಿಯನ್ನು ಅಂದವಾಗಿಸಲು ಸರಳ ಟಿಪ್ಸ್

/home-garden/decor/2014/7-tips-on-how-light-bathroom-008698.html

ಈಗಾಗಲೆ ಸಣ್ಣದಾಗಿ ಇರುವ ಬಾತ್‌ರೂಮನ್ನು ಹೇಗೆ ದೊಡ್ಡದಾಗಿ ಕಾಣುವಂತೆ ಮಾಡುವುದು ಹೇಗೆ ಎಂದು ನೀವು ಆಲೋಚಿಸುತ್ತಿದ್ದೀರಾ? ಅದಕ್ಕಾಗಿ ಕೆಲವೊಂದು ಅಂಶಗಳ ಕಡೆಗೆ ಗಮನ ನೀಡಬೇಕು.

ಬಾತ್‌ರೂಮ್‍ನಲ್ಲಿರುವ ಟೈಲ್ಸ್, ಫ್ಲೋರಿಂಗ್, ಲೈಟಿಂಗ್, ಫಿಟ್ಟಿಂಗ್ ಮತ್ತು ಅಲ್ಲಿನ ಅಗತ್ಯ ಪೀಠೋಪಕರಣಗಳ ಕಡೆಗೆ ಗಮನ ಹರಿಸಿದರೆ ಅದನ್ನು ಅಗಲವಾಗಿ ಕಾಣುವಂತೆ ಮಾಡುವುದು ಕಷ್ಟವಲ್ಲ. ಜೊತೆಗೆ ಇಲ್ಲಿ ಮುಖ್ಯವಾಗಿ ಬೇಕಾದ ಸಿಂಕ್, ಫಾಸೆಟ್, ಇತ್ಯಾದಿಗಳನ್ನು ಸಹ ಕಡ್ಡಾಯವಾಗಿ ಇರುವಂತೆ ನೋಡಿಕೊಳ್ಳಬೇಕಾದುದು ಅತ್ಯಗತ್ಯ.

ಬಣ್ಣ
ಒಂದೇ ಬಣ್ಣ ಮತ್ತು ಟೋನ್ ಬಾತ್‌ರೂಮಿಗೆ ಅತ್ಯಗತ್ಯ. ಆಗ ಇದು ನಿಮ್ಮ ಬಾತ್‍ರೂಮ್ ವಿಶಾಲವಾಗಿ ಕಾಣಲು ನೆರವಾಗುತ್ತದೆ. ಕಾಂಟ್ರಾಸ್ಟ್ ಅಥವಾ ತದ್ವಿರುದ್ಧ ಬಣ್ಣಗಳು ಬಾತ್‌ರೂಮ್ ಚಿಕ್ಕದಾಗಿ ಕಾಣುವಂತೆ ಮಾಡುತ್ತವೆ.

ಸೀಲಿಂಗ್ ಬಣ್ಣ
ಇದಕ್ಕೂ ಸಹ ಪ್ರಾಮುಖ್ಯತೆಯನ್ನು ನೀಡಬೇಕಾದುದು ಅತ್ಯಗತ್ಯ. ಗೋಡೆಯ ಬಣ್ಣಗಳನ್ನು ಇದು ಪ್ರತಿಫಲಿಸುವುದರಿಂದ ಇದು ಬಾತ್‌ರೂಮನ್ನು ದೊಡ್ಡದಾಗಿ ಕಾಣುವಂತೆ ಮಾಡುತ್ತವೆ. ಒಂದು ವೇಳೆ ಇದು ಕೋನಾಕಾರದಲ್ಲಿದ್ದರೆ ಅಥವಾ ವಿಚಿತ್ರ ವಿನ್ಯಾಸವನ್ನು ಪಡೆದಿದ್ದರೆ, ಒಂದೇ ಬಣ್ಣವನ್ನು ಸಂಪೂರ್ಣವಾಗಿ ಬಳಿಯುವುದರಿಂದ ಪ್ರಯೋಜನವನ್ನು ಪಡೆಯಬಹುದು.

ಟೈಲ್ ಕಲರ್
ಇದೊಂದು ಮತ್ತೊಂದು ಸುಲಭವಾದ ಸಲಹೆಯಾಗಿದ್ದು, ಇದು ಖಂಡಿತವಾಗಿ ನಿಮ್ಮ ಬಾತ್‌ರೂಮನ್ನು ದೊಡ್ಡದಾಗಿ ಕಾಣುವಂತೆ ಮಾಡುತ್ತದೆ. ಗೋಡೆ ಮತ್ತು ನೆಲಕ್ಕೆ ಒಂದೇ ಬಣ್ಣದ ಟೈಲ್ ಆರಿಸಿಕೊಳ್ಳಿ. ಇದರಿಂದ ನಿಮ್ಮ ಬಾತ್‌ರೂಮ್ ಇರುವುದಕ್ಕಿಂತ ಎರಡು ಪಟ್ಟು ದೊಡ್ಡದಾಗಿ ಕಾಣುತ್ತದೆ.

ಕನ್ನಡಿಗಳು
ಬಾತ್‍ರೂಮಿನಲ್ಲಿ ನೀವು ತಪ್ಪದೆ ಕನ್ನಡಿಗಳನ್ನು ಬಳಸುತ್ತೀರಿ. ಬಾತ್‌ರೂಮಿಗಾಗಿ ಕನ್ನಡಿಗಳನ್ನು ಖರೀದಿಸುವಾಗ ದೊಡ್ಡ ಗಾತ್ರದ ಕನ್ನಡಿಗಳನ್ನು ಖರೀದಿಸಿ. ಇದರ ಜೊತೆಗೆ ಲೈಟಿಂಗನ್ನು ಹೊಂದಾಣಿಕೆ ಮಾಡಿದರೆ ಆಗ ನಿಮ್ಮ ಬಾತ್‍ರೂಮ್ ದೊಡ್ಡದಾಗಿ ಕಾಣಲು ಸಹಕಾರಿಯಾಗುತ್ತದೆ. ಇದನ್ನು ಕಿಟಕಿಗೆ ವಿರುದ್ಧವಾಗಿ ಫಿಟ್ ಮಾಡಿದರೆ, ಆಗ ನಿಮ್ಮ ಬಾತ್‌ರೂಮ್ ಮತ್ತಷ್ಟು ದೊಡ್ಡದಾಗಿ ಕಾಣುತ್ತದೆ.

ಸ್ವಾಭಾವಿಕ ಬೆಳಕು
ಬಾತ್‍ರೂಮನ್ನು ದೊಡ್ಡದಾಗಿ ಕಾಣಿಸಲು ಪ್ರಯತ್ನಿಸುವಾಗ ಸ್ವಾಭಾವಿಕ ಬೆಳಕು ಸುಗಮವಾಗಿ ಒಳಗೆ ಬರುವಂತಹ ಅವಕಾಶವನ್ನು ಮಾಡಿಕೊಡಿ. ಬೆಳಕು ಬರುವ ಸ್ಥಳದಲ್ಲಿ ಅರೆಪಾರದರ್ಶಕ ವಿಂಡೋ ಶೇಡ್‍ಗಳನ್ನು ಬಳಸಿ ಇದರಿಂದ ಸ್ವಾಭಾವಿಕ ಬೆಳಕನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದು. ಈ ಮೇಲಿನ ಸಲಹೆಗಳ ಮೂಲಕ ನಿಮ್ಮ ಬಾತ್‌ರೂಮನ್ನು ನೀವು ದೊಡ್ಡದಾಗಿ ಕಾಣುವಂತೆ ಮಾಡಿಕೊಳ್ಳಬಹುದು.

English summary

Easy Tips To Make Bathroom Look Bigger

Having adequate space in the bathroom is more of a necessity than a luxury. Just like all other rooms, bathroom also needs to be given equal importance. To have bathrooms with a huge space is more like a dream come true. The bright side is that there are tips to make bathroom spacious.
Story first published: Thursday, April 23, 2015, 10:01 [IST]
X
Desktop Bottom Promotion