For Quick Alerts
ALLOW NOTIFICATIONS  
For Daily Alerts

ಗೃಹಿಣಿಯರೇ ಎಚ್ಚರ, ಸಮಸ್ಯೆಯನ್ನು ಬರಮಾಡಿಕೊಳ್ಳಬೇಡಿ!

By Super
|

ಮನೆಯ ಸ್ವಚ್ಛತೆಗೆ ಆದ್ಯತೆ ನೀಡುವ ಯಾವುದೇ ಗೃಹಿಣಿ ಸ್ವಚ್ಛತೆಗೆ ಅಗತ್ಯವಿರುವ ಅಗತ್ಯ ಸಾಮಾಗ್ರಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಮನೆಯಲ್ಲಿರಿಸಿಕೊಂಡಿರುತ್ತಾರೆ. ಪ್ರತಿದಿನ ಮನೆಯ ನೆಲ, ಶೌಚಾಲಯ, ಹಜಾರ, ಜಗಲಿಗಳನ್ನು ಮಾರುಕಟ್ಟೆಯಲ್ಲಿ ಸಿಗುವ ಪ್ರಬಲ ರಾಸಾಯನಿಕ ದ್ರವಗಳನ್ನು ಬಳಸಿ ಸ್ವಚ್ಛಗೊಳಿಸುತ್ತಾರೆ. ಲಕಲಕನೆ ಹೊಳೆಯುವ ಮನೆಯ ನೆಲವನ್ನು ಕಂಡ ಬಳಿಕವೇ ಸಂತೃಪ್ತಿಯನ್ನು ಅನುಭವಿಸುತ್ತಾರೆ.

ಅಂತೆಯೇ ಮನೆಯಲ್ಲಿ ಸುವಾಸನೆ ಮೂಡಿಸುವ ಮೇಣದ ಬತ್ತಿ, ಏರ್ ಫ್ರೆಶ್ನರ್ ಮೊದಲಾದವು ಸಹಾ ಮನೆಯ ವಾತಾವರಣವನ್ನು ಉತ್ತಮಗೊಳಿಸಲು ನೆರವಾಗುತ್ತವೆ. ಆದರೆ ಎಲ್ಲಾ ಸಾಮಾಗ್ರಿಗಳು ಸ್ವಚ್ಛತೆಯಲ್ಲಿ ಮತ್ತು ಪರಿಮಳ ನೀಡಲು ನೆರವಾದರೂ ಆರೋಗ್ಯದ ದೃಷ್ಟಿಯಿಂದ ತೊಂದರೆ ನೀಡಬಹುದು. ಏಕೆಂದರೆ ಈ ಸಾಮಾಗ್ರಿಗಳಲ್ಲಿ ಹಾನಿಕಾರಕ ರಾಸಾಯನಿಕಗಳನ್ನು ಉಪಯೋಗಿಸಲಾಗುತ್ತಿದ್ದು ಬಳಕೆಯ ಬಳಿಕ ಒಣಗಿ ಗಾಳಿಯಲ್ಲಿ ನಿಧಾನವಾಗಿ ಸೂಕ್ಷ್ಮ ಕಣಗಳ ರೂಪದಲ್ಲಿ ನಮ್ಮ ದೇಹ ಸೇರಬಹುದು. ಇವು ಕೆಲವು ಬಗೆಯ ಕ್ಯಾನ್ಸರ್ ಬರಲು ಕಾರಣವಾಗಬಹುದು ಎಂದು ಇತ್ತೀಚಿನ ಸಂಶೋಧನೆಯೊಂದು ಎಚ್ಚರಿಸಿದೆ.

Cleaning Agents To Get Rid Of At Home

ಇವುಗಳ ಸತತ ಸೇವನೆಯಿಂದ ಶ್ವಾಸಕೋಶದ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚುತ್ತದೆ. ಆಸ್ಪತ್ರೆಯ ನೆಲವನ್ನು ಇಡಿಯ ದಿನ ಫಿನಾಯಿಲ್ ಮೊದಲಾದ ಸ್ವಚ್ಛತಾ ಸಾಮಗ್ರಿಗಳನ್ನು ಬಳಸಿ ತೊಳೆಯುತ್ತಾ ಜೀವನ ಸವೆಸಿದವರಲ್ಲಿ ಕ್ಯಾನ್ಸರ್ ಪ್ರಮಾಣ ಹೆಚ್ಚಿರುವ ಅಂಕಿ ಅಂಶಗಳನ್ನು ಪರಿಶೀಲಿಸಿದ ಬಳಿಕ ಈ ಆಘಾತಕಾರಿ ಮಾಹಿತಿ ಈಗ ಹೊರಬಂದಿದೆ. ಈ ಅಂಕಿಅಂಶಗಳನ್ನು ಗಂಭೀರವಾಗಿ ಪರಿಗಣಿಸಿದ

ಅಮೇರಿಕಾ ಮತ್ತಿತರ ರಾಷ್ಟ್ರಗಳಲ್ಲಿ ಆಸ್ಪತ್ರೆಗಳಿಗೆಂದೇ ವಿಶೇಷವಾದ ಸ್ವಚ್ಛತಾ ದ್ರವಗಳನ್ನು ನೀಡುತ್ತಿವೆ ಹಾಗೂ ಮುಖದ ಮಾಸ್ಕ್ ಧರಿಸುವುದು ಕಡ್ದಾಯವಾಗಿದೆ. ಆದರೆ ಭಾರತದಂತಹ ದೇಶಗಳಲ್ಲಿ ಈ ಬಗ್ಗೆ ಹೆಚ್ಚಿನ ಅರಿವು ಇನ್ನೂ ಮೂಡಿಲ್ಲ. ಮಾರುಕಟ್ಟೆಯಲ್ಲಿ ದೊರಕುವ ಸಾಮಾಗ್ರಿಗಳು ಅಪ್ಪಟವೇ ಎಂಬುದಕ್ಕೆ ಯಾವುದೇ ಪ್ರಮಾಣಪತ್ರವಿಲ್ಲ. ಗೊತ್ತಿರದ ಅಪಾಯಕಾರಿ ರಾಸಾಯನಿಕವನ್ನು ಬಳಸುವ ಬದಲು ಮನೆಯಲ್ಲಿ ಲಭಿಸುವ ಸುಲಭ ವಸ್ತುಗಳಿಂದ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಜಾಣತನದ ಮತ್ತು ಆರೋಗ್ಯಕರ ನಿರ್ಧಾರವಾಗಿದೆ.

ನೆಲ ಒರೆಸಲು ಲಿಂಬೆ, ಪಾತ್ರೆ ತೊಳೆಯಲು ಶಿರ್ಕಾ (ವಿನೆಗರ್) ಮೊದಲಾದ ಸುಲಭ ವಸ್ತುಗಳನ್ನು ಬಳಸುವುದರಿಂದ ಅಪಾಯವನ್ನು ಕಡಿಮೆಗೊಳಿಸಬಹುದು. ನಿಮ್ಮ ಮನೆಯಲ್ಲಿ ನಿಮಗೆ ಅರಿವಿರದೇ ಅಪಾಯವನ್ನುಂಟು ಮಾಡುವ ವಸ್ತುಗಳು ಮನೆಯವರ ಆರೋಗ್ಯವನ್ನು ಕೆಡಿಸಬಹುದು. ಇವುಗಳ ಬಳಕೆಯಿಂದ ದೂರವಿರಲು ಕೆಳಗೆ ನೀಡಿರುವ ಮಾಹಿತಿ ನೆರವಿಗೆ ಬರಲಿದೆ. ಮನೆ ಶುಚಿತ್ವದಲ್ಲಿ ನಿಂಬೆ ಹಣ್ಣಿನ 10 ಮ್ಯಾಜಿಕ್

ಸುವಾಸಿತ ಮೇಣದ ಬತ್ತಿಗಳು
ಇತ್ತೀಚೆಗೆ ಉರಿಯುತ್ತಿದ್ದಂತೆಯೇ ಕೋಣೆಯಲ್ಲಿ ಸುವಾಸನೆಯನ್ನು ಹರಡುವ ಮೇಣದ ಬತ್ತಿಗಳು ಜನಪ್ರಿಯತೆ ಕಂಡುಕೊಳ್ಳುತ್ತಿವೆ. ಇವು ಉರಿದಾಗ ಕೆಲವು ಕಣಗಳು ಪೂರ್ಣವಾಗಿ ಉರಿಯದೇ ಸೂಕ್ಷ್ಮಕಣದ ರೂಪ ಪಡೆದು ಗಾಳಿಯಲ್ಲಿ ಸೇರುತ್ತವೆ. ಮೂಗಿಗೆ ಇವು ಸುವಾಸನೆಯಂತೆ ಕಂಡರೂ ವಾಸ್ತವವಾಗಿ ಇವು ಕ್ಯಾನ್ಸರ್‌ಗೆ ಕಾರಣವಾಗಬಹುದಾದ ಲಕ್ಷಣಗಳನ್ನು ಹೊಂದಿವೆ.
ಈ ಮೇಣದ ಬತ್ತಿ ಆರೋಗ್ಯಕ್ಕೆ ಉತ್ತಮ ಹೌದೋ ಅಲ್ಲವೋ ಎಂದು ಪರಿಶೀಲಿಸಲು ಒಂದು ಸುಲಭ ಮಾರ್ಗವಿದೆ. ಇದರ ಬತ್ತಿಯನ್ನು ಒಂದು ಬಿಳಿಯ ಕಾಗದದ ಮೇಲೆ ಒತ್ತಿ ಒಂದು ಗೆರೆ ಎಳೆಯಿರಿ. ಒಂದು ವೇಳೆ ಈ ಗೆರೆ ಬೂದುಬಣ್ಣದ್ದಾಗಿದ್ದರೆ ಈ ಮೇಣದ ಬತ್ತಿ ಆರೋಗ್ಯಕ್ಕೆ ಮಾರಕ. ಯಾವುದೇ ಬಣ್ಣವಿಲ್ಲದೇ ಇದ್ದರೆ ಸುರಕ್ಷಿತ ಎಂದು ಭಾವಿಸಬಹುದು.

ಶವರ್ ಕರ್ಟನ್
ನಿಮ್ಮ ಸ್ನಾನಗೃಹದಲ್ಲಿ ಅಡ್ಡಲಾಗಿ ನೇತುಹಾಕುವ ಪ್ಲಾಸ್ಟಿಕ್ಕಿನ ಪರದೆ ಸಹಾ ಆರೋಗ್ಯಕ್ಕೆ ಮಾರಕವಾಗಬಲ್ಲುದು. ಏಕೆಂದರೆ ಇದನ್ನು ತಯಾರಿಸುವಾಗ ಸೇರಿಸಿರುವ ಕೆಲವು ವಸ್ತುಗಳು ನಿಧಾನವಾಗಿ ಪ್ಲಾಸ್ಟಿಕ್ಕಿನಿಂದ ಬಿಡುಗಡೆಯಾಗುತ್ತಾ ಗಾಳಿಗೆ ಸೇರುತ್ತವೆ. ಇದು ಕ್ಯಾನ್ಸರ್‌ಗೂ ಕಾರಣವಾಗಬಹುದು. ವರ್ಷ ಕಳೆದ ಬಳಿಕ ಈ ಕರ್ಟನ್ ಬಟ್ಟೆಯನ್ನು ಕಾಗದದಂತೆ ಸುಲಭವಾಗಿ ಹರಿಯಬಹುದು. ಇದೇ ಇದರಲ್ಲಿರುವ ಕಣಗಳು ಹೊರಹೋಗಿರುವುದಕ್ಕೆ ಸಾಕ್ಷಿಯಾಗಿದೆ.

ಏರ್ ಫ್ರೆಶ್ನರ್
ನಿಮ್ಮ ಶೌಚಾಲಯವನ್ನು ಸುವಾಸನೆಯುಕ್ತವಾಗಿರಿಸಲು ಇಂದು ಹಲವು ವಿಧದ ಏರ್ ಫ್ರೆಶ್ನರ್ ಅಥವಾ ವಾಯುಸುವಾಸಿತಗಳನ್ನು ಬಳಸಲಾಗುತ್ತಿದೆ. ಇವು ಒಂದು ನಿರ್ದಿಷ್ಟ ಪ್ರಮಾಣದ ಸುವಾಸನೆ ನೀಡುವ ದ್ರವವನ್ನು ಒತ್ತಡದಿಂದ ಗಾಳಿಗೆ ದಬ್ಬುವುದರಿಂದ ಕೋಣೆಯಲ್ಲೆಲ್ಲಾ ಹರಡಿ ಸುವಾಸನೆಯನ್ನು ಮೂಡಿಸುತ್ತವೆ. ಕೆಲವು ಉತ್ಪನ್ನಗಳಲ್ಲಿ ಇವು ನೈಸರ್ಗಿಕ ಮತ್ತು ಯಾವುದೇ ವಾಸನೆ ಇಲ್ಲದ ಉತ್ಪನ್ನ ಎಂದೂ ಬರೆದಿರುತ್ತದೆ. ಆದರೆ ಇವೆಲ್ಲಾ ಉತ್ಪನ್ನಗಳಲ್ಲಿ ಥಾಲೇಟ್ (phthalates) ಎಂಬ ರಾಸಾಯನಿಕ ಸಾಮಾನ್ಯವಾಗಿದ್ದು ಆರೋಗ್ಯಕ್ಕೆ ಅತ್ಯಂತ ಮಾರಕವಾಗಿದೆ.
ಇದರ ಬದಲಿಗೆ ಲಿಂಬೆ ಅಥವಾ ಕಿತ್ತಳೆಯ ಸಿಪ್ಪೆಯನ್ನು ಸುವಾಸಿತವಾಗಿ ಬಳಸಬಹುದು. ಅಲ್ಪಪ್ರಮಾಣದಲ್ಲಿ ಅಗರಬತ್ತಿ ಸಹಾ ಉಪಯೋಗಿಸಬದುದಾದರೂ ಅಗರಬತ್ತಿಯ ಹೊಗೆಯೂ ಅನಾರೋಗ್ಯಕರವಾದುದರಿಂದ ಅಗತ್ಯವಿದ್ದಷ್ಟು (ಉದಾಹರಣೆಗೆ ಪೂಜೆಯ ವೇಳೆ) ಸಮಯ ಮಾತ್ರ ಉರಿಸುವುದು ಉತ್ತಮ.

ಕಾರ್ಪೆಟ್ ಕ್ಲೀನರ್
ಮನೆಯ ನೆಲದ ಮೇಲೆ ಹಾಸಿರುವ ರತ್ನಗಂಬಳಿ ಅಥವಾ ಕಾರ್ಪೆಟ್ ತೊಳೆಯುವುದು ಅತ್ಯಂತ ಕಠಿಣವಾದ ಕೆಲಸವಾಗಿದೆ. ಇದನ್ನು ತೊಳೆಯಲು ಕಾರ್ಪೆಟ್ ಕ್ಲೀನರ್ ಎಂಬ ದ್ರವ ದೊರಕುತ್ತದೆ. ಇದು ಕಾರ್ಪೆಟ್ ಮೇಲೆ ನೊರೆಯಂತೆ ಕುಳಿತು ಕಸವನ್ನು ಆಕರ್ಷಿಸುತ್ತದೆ. ಬಳಿಕ ವ್ಯಾಕ್ಯೂಂ ಕ್ಲೀನರ್ ಬಳಸಿ ಇದನ್ನು ಸ್ವಚ್ಛಗೊಳಿಸಿದರೆ ರತ್ನಗಂಬಳಿ ಸ್ವಚ್ಛವಾಗುತ್ತದೆ. ಆದರೆ ಇದರಲ್ಲಿ ಬಳಸಲಾಗಿರುವ ರಾಸಾಯನಿಕಗಳು ಅತ್ಯಂತ ಪ್ರಬಲವಾಗಿದ್ದು ಗಾಳಿಯ ಮೂಲಕ ದೇಹ ಸೇರಿ ಅನಾರೋಗ್ಯಕ್ಕೆ ಕಾರಣವಾಗಬಹುದು. ಇದರಿಂದ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚುತ್ತದೆ.

English summary

Cleaning Agents To Get Rid Of At Home

Cleaning agents.... well, this is one of the common things that are present in almost every home. Most of us purchase a whole lot of agents every month to get rid of pesticides, to clean our bathroom tiles, to clean the floor and to keep our home spic and span. But, did you know there are some cleaning agents which are chemically based that brings on one of the most deadliest diseases in the world, cancer?
Story first published: Wednesday, August 26, 2015, 14:21 [IST]
X
Desktop Bottom Promotion