For Quick Alerts
ALLOW NOTIFICATIONS  
For Daily Alerts

ಟೆನಿಸ್ ಚೆಂಡು: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು..!

By Arshad
|

ನಮ್ಮ ನಿತ್ಯ ಬಳಕೆಯ ವಸ್ತುಗಳ ಬಳಕೆಯ ಬಳಿಕ ಅಥವಾ ಅದರ ಜೊತೆಗೆ ಬರುವ ಇತರ ಉತ್ಪನ್ನಗಳನ್ನು ಹೆಚ್ಚಿನವರು ಪರ್ಯಾಯ ಬಳಕೆಗೆ ಯೋಚಿಸದೇ ಕಸದೊಡನೆ ಎಸೆಯುತ್ತಾರೆ.

ಕೊಂಚ ತಾಳ್ಮೆ, ಇದನ್ನು ಉಪಯೋಗಿಸುವ ಬಳಕೆಯ ಚಿಂತನೆ ಮತ್ತು ಕೆಲವು ಸುಲಭ ಕಚ್ಚಾವಸ್ತುಗಳನ್ನು ಬಳಸಿದರೆ ಕಸವಾಗಿ ಯಾರಿಗೂ ಬೇಡವಾಗಿದ್ದ ಈ ವಸ್ತು ಒಂದು ಸುಂದರ, ಉಪಯುಕ್ತ, ಹಣವುಳಿಸುವ ಮತ್ತು ನಿಮ್ಮ ಕಲಾವಂತಿಕೆಯನ್ನು ಸೃಜನಗೊಳಿಸುವ ವಸ್ತುವೊಂದು ನಿಮ್ಮ ಮನೆಗೆ ಭೂಷಣ ನೀಡುವ ಜೊತೆಗೇ ಅದನ್ನು ನೋಡುತ್ತಿದ್ದಂತೆ ಸಾರ್ಥಕ ಮನೋಭಾವವನ್ನೂ ನೀಡುತ್ತದೆ. ಕಸ ರಸವಾಗುವುದು ಅಂದ್ರೆ ಹೀಗೆ...

ಟೆನಿಸ್ ಆಟಕ್ಕಿಂತಲೂ ಕ್ರಿಕೆಟ್ಟಿಗೇ ಹೆಚ್ಚಾಗಿ ಬಳಸಲ್ಪಡುವ ಚೆಂಡುಗಳ ಕಥೆಯೂ ಅಷ್ಟೇ. ಮಕ್ಕಳು ಕೊಂಚಕಾಲ ಆಡಿ ಬಳಿಕ ಒಳಗೆಲ್ಲೋ ಮೂಲೆಯಲ್ಲಿ, ಮಂಚದಡಿ, ಸೋಫಾದಡಿ ಕಳೆದುಹೋಗುವುದೇ ಹೆಚ್ಚು. ಎಂದೋ ಸೋಫಾ ಅಡಿಗೆ ಕಸತೆಗೆಯುವಾಗ ಸಿಕ್ಕ ಈ ಟೆನಿಸ್ ಚೆಂಡನ್ನು ಎಸೆಯುವ ಬದಲು ಇದನ್ನು ಹೇಗೆ ವಿವಿಧ ದಿನಬಳಕೆಯ ಉಪಯೋಗಗಳಲ್ಲಿ ಬಳಸಬಹುದೆಂದು ಕೆಳಗಿನ ಸ್ಲೈಡ್ ಶೋ ಕಲಿಸುತ್ತದೆ...

ದುಬಾರಿ ಪೀಠೋಪಕರಣಗಳನ್ನು ಸ್ಯಾಂಡ್ ಪೇಪರ್‌ನಿಂದ ಉಜ್ಜಲು

ದುಬಾರಿ ಪೀಠೋಪಕರಣಗಳನ್ನು ಸ್ಯಾಂಡ್ ಪೇಪರ್‌ನಿಂದ ಉಜ್ಜಲು

ನಿಮ್ಮ ದುಬಾರಿ ಪೀಠೋಪಕರಣಗಳ ಅಂಚು ಕೊಂಚ ಕಡಿದು ಎನ್ನಿಸಿದ್ದು ಅದನ್ನು ಸ್ಯಾಂಡ್ ಪೇಪರ್ (ಉಜ್ಜುಕಾಗದ) ನಿಂದ ಉಜ್ಜಿ ಅಂಚುಗಳನ್ನು ನಯವಾಗಿಸಲು ಟೆನಿಸ್ ಬಾಲ್ ನೆರವಿಗೆ ಬರುತ್ತದೆ. ಹೇಗೆಂದರೆ ಈ ಅಂಚುಗಳನ್ನು ಬರೆಯ ಕಾಗದ ಅಥವಾ ಮರದ ತುಂಡಿಗೆ ಸುತ್ತಿ ಉಜ್ಜುವ ಬದಲು ಟೆನಿಸ್ ಚೆಂಡೊಂದಕ್ಕೆ ಸುತ್ತಿ ಉಜ್ಜಿದರೆ ಕೆಲಸದಲ್ಲಿ ನಯವಂತಿಕೆಯೂ ಬರುತ್ತದೆ, ಕೆಲಸವೂ ಸುಲಭವಾಗುತ್ತದೆ.

ಬಾಟಲ್ ಓಪನರ್ ಇಲ್ಲವೇ? ಟೆನಿಸ್ ಬಾಲ್ ಇದೆಯೆಲ್ಲಾ

ಬಾಟಲ್ ಓಪನರ್ ಇಲ್ಲವೇ? ಟೆನಿಸ್ ಬಾಲ್ ಇದೆಯೆಲ್ಲಾ

ಕೆಲವು ಲಘು ಪಾನೀಯಗಳಿಗೆ ಲೋಹದ ಮುಚ್ಚಳವಿದ್ದು ಇದನ್ನು ತೆರೆಯಲು ಕ್ಯಾನ್ ಓಪನರ್ ಎಂಬ ಉಪರಣದ ಅವಶ್ಯಕತೆ ಇದೆ. ಕೆಲವೊಮ್ಮೆ ಈ ಓಪನರ್ ಇಲ್ಲದೇ ಇದ್ದು ಅಥವಾ ಆ ಸಮಯದಲ್ಲಿ ಕೈಗೆ ಸಿಗದೇ ಇದ್ದರೆ ಟೆನಿಸ್ ಚೆಂಡೊಂದನ್ನು ಕತ್ತರಿಸಿ ಅರ್ಧ ಹೋಳಾಗಿಸಿ. ಈ ಅರ್ಧ ಹೋಳನ್ನು ಮುಚ್ಚಳದ ಮೇಲೆ ಟೊಪ್ಪಿಯಂತೆ ಕೂರಿಸಿ ಸಾಮಾನ್ಯ ಬಾಟಲಿಯ ಮುಚ್ಚಳ ತೆರೆಯುವಂತೆ ಒತ್ತಿ ತೆರೆಯಿಸಿ. ಓಪನರ್ ಅಗತ್ಯವಿದೆ ಎಂದು ನಿಮಗೆ ಈಗ ಅನ್ನಿಸುತ್ತಿದೆಯೇ?

ಪುಟ್ಟ ಸಲಕರಣಾ ಪೆಟ್ಟಿಗೆಯಾಗಿಸಿ

ಪುಟ್ಟ ಸಲಕರಣಾ ಪೆಟ್ಟಿಗೆಯಾಗಿಸಿ

ಮನೆಯಲ್ಲಿ ಒಂದು ಸಲಕರಣೆಗಳ ಪೆಟ್ಟಿಗೆ ಇರುವುದು ಅಗತ್ಯ. ಏಕೆಂದರೆ ಯಾವ ವಸ್ತು ಯಾವಾಗ ಕೆಲಸಕ್ಕೆ ಬೀಳುತ್ತದೆ ಎಂದು ಹೇಳುವಂತಿಲ್ಲ. ಮಾರುಕಟ್ಟೆಯಲ್ಲಿ ಸಿಗುವ ಟೂಲ್ ಬಾಕ್ಸ್ ಕೊಳ್ಳಿ ಅಥವಾ ಖಾಲಿ ಪೆಟ್ಟಿಗೆಯೊಂದನ್ನು ಇದೇ ಉದ್ದೇಶಕ್ಕಾಗಿಟ್ಟು ಅಗತ್ಯ ಉಪಕರಣಗಳನ್ನು ಶೇಖರಿಸಿ. ಆದರೆ ಪುಟ್ಟ ಕುಕ್ಕುಮೊಳೆ, ಪಿನ್ನು, ಮೊದಲಾದ ಚೂಪಾದ ಸಾಧನಗಳನ್ನು ಸಂಗ್ರಹಿಸುವುದು ಕಷ್ಟ, ಅಲ್ಲದೇ ಚುಚ್ಚುವ ಅಪಾಯವೂ ಇದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪುಟ್ಟ ಸಲಕರಣಾ ಪೆಟ್ಟಿಗೆಯಾಗಿಸಿ

ಪುಟ್ಟ ಸಲಕರಣಾ ಪೆಟ್ಟಿಗೆಯಾಗಿಸಿ

ಬದಲಿದೆ ನಿಮಗೆ ಅಗತ್ಯ ಬೀಳಬಹುದು ಅನ್ನಿಸಿದ ಮೊಳೆ, ಪಿನ್ನುಗಳನ್ನು ಹಳೆಯ ಟೆನಿಸ್ ಬಾಲ್‌ಗೆ ಚುಚ್ಚಿ ಪೆಟ್ಟಿಗೆಯೊಳಗಿಡಿ. ಇದು ಸುರಕ್ಷಿತವೂ, ಮೊಳೆ ಕಳೆದುಹೋಗುವ ಸಂಭವದಿಂದಲೂ ತಪ್ಪಿಸುತ್ತದೆ. ಇನ್ನೂ ಉತ್ತಮವೆಂದರೆ ಟೆನಿಸ್ ಚೆಂಡಿನ ಮೇಲೆ ಬರೆಯಲು ಸಾಧ್ಯವಿರುವುದರಿಂದ ವಿವಿಧ ಗಾತ್ರದ ಮೊಳೆಗಳನ್ನು ಚುಚ್ಚಿ ಅದರ ಮೇಲೆ ಬರೆಯುವುದರಿಂದ ಅಗತ್ಯ ಬಿದ್ದಾಗ ಥಟ್ಟನೇ ಪಡೆಯಲು ಸಾಧ್ಯವಾಗುತ್ತದೆ.

ಬೆನ್ನಿನ ಮಸಾಜ್ ಗೆ ಬಳಸಬಹುದು

ಬೆನ್ನಿನ ಮಸಾಜ್ ಗೆ ಬಳಸಬಹುದು

ಹಳೆಯ ಕಾಲುಚೀಲವೊಂದರಲ್ಲಿ ಕೆಲವು ಹಳೆಯ ಟೆನ್ನಿಸ್ ಚೆಂಡುಗಳನ್ನು ತುಂಬಿಸಿ ತುದಿಯನ್ನು ಒಂದು ದಾರದಿಂದ ಮೂಟೆಕಟ್ಟಿ. ಇದನ್ನು ಬೆನ್ನಿಗೆ ಮಸಾಜ್ ಮಾಡುವ ಉಪಕರಣದಂತೆ ಬಳಸಬಹುದು.

ದಣಿದ ಪಾದಗಳಿಗೆ ಆರಾಮ ನೀಡಲು ಬಳಸಬಹುದು

ದಣಿದ ಪಾದಗಳಿಗೆ ಆರಾಮ ನೀಡಲು ಬಳಸಬಹುದು

ಇಡಿಯ ದಿನದ ಚಟುವಟಿಕೆಯಿಂದ ಪಾದಗಳು ನೋಯುತ್ತಿದ್ದರೆ ಕುರ್ಚಿಯಲ್ಲಿ ಕುಳಿತು ಹಳೆಯ ಟೆನಿಸ್ ಚೆಂಡೊಂದರ ಮೇಲೆ ಪಾದವನ್ನಿಟ್ಟು ಹಿಂದೆ ಮುಂದೆ ಆಡಿಸುವುದರಿಂದ ಪಾದಗಳಿಗೆ ಆರಾಮ ದೊರಕುತ್ತದೆ. ಆದರೆ ಪಕ್ಕಕ್ಕೆ ಹೊರಳುವುದರಿಂದ ಕೊಂಚ ಎಚ್ಚರ ವಹಿಸಬೇಕು. ನಿಂತು ಮಾಡಲು ಹೋಗಬೇಡಿ.

English summary

Amazing Uses Of Tennis Balls

We all love to make the best use of household items in our daily chores. Instead of spending a lot of money in buying products from markets one can make the best use of house items. Today we are here to share some simple and amazing uses of tennis balls. Read on to know more about the amazing uses of tennis balls in our daily life.
X
Desktop Bottom Promotion