For Quick Alerts
ALLOW NOTIFICATIONS  
For Daily Alerts

ಮನೆ ಸ್ವಚಗೊಳಿಸಲು ಚಳಿಗಾಲದ ಟಿಪ್ಸ್

By Hemanth P
|

ಆರೋಗ್ಯ ಹಾಗೂ ಸಂತೋಷವಾಗಿರಲು ಮನೆಯನ್ನು ಶುಚಿಯಾಗಿಟ್ಟುಕೊಳ್ಳುವುದು ತುಂಬಾ ಮುಖ್ಯ. ಚಳಿಗಾಲದಲ್ಲಿ ಮನೆಯನ್ನು ಸ್ವಚ್ಛಗೊಳಿಸಲು ಸ್ವಲ್ಪ ಹೆಚ್ಚು ಕಾಳಜಿ ಮತ್ತು ಗಮನ ಬೇಕಾಗುತ್ತದೆ. ಹವಾಮಾನ ಬದಲಾವಣೆಯಿಂದಾಗಿ ಚಳಿಗಾಲದಲ್ಲಿ ಮನೆಯನ್ನು ಶುಚಿಗೊಳಿಸುವುದು ದೊಡ್ಡ ಸವಾಲಾಗುತ್ತದೆ. ಚಳಿಗಾಲದಲ್ಲಿ ಶುಚಿಗೊಳಿಸುವ ಕೆಲಸ ತುಂಬಾ ಕಷ್ಟ. ಯಾಕೆಂದರೆ ನಿಮ್ಮ ಶೂನಲ್ಲಿ ಬರುವ ಮಂಜು, ಕೆಸರು, ಕೋಣೆಯಲ್ಲಿನ ತೇವಾಂಶ, ಪೀಠೋಪಕರಣ, ಕನ್ನಡಿ ಅಥವಾ ಕಿಟಕಿ ಗಾಜುಗಳನ್ನು ಆವರಿಸಿರುವ ಮಬ್ಬು ಇತ್ಯಾದಿ. ಆರ್ದ್ರತೆ ವಿರುದ್ಧ ಹೋರಾಡಲು ಕೆಲವೊಂದು ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.

ಹೊರಗಡೆ ತುಂಬಾ ಚಳಿಯ ವಾತಾವರಣವಿರುವಾಗ ಮನೆಯಲ್ಲಿ ಕುಳಿತುಕೊಂಡು ಏನು ಮಾಡಬೇಕೆಂಬ ಬಗ್ಗೆ ಅಚ್ಚರಿಯಾಗುತ್ತಿದೆಯಾ? ಹಾಗಿದ್ದರೆ ನಿಮ್ಮ ಮನೆಯ ಒಳಗಿನ ಪಿಠೋಪಕರಣಗಳನ್ನು ಸಂಪೂರ್ಣವಾಗಿ ಬದಲಾಯಿಸಬೇಕಾಗಿದೆ. ಮನೆಯೊಳಗಿನ ಪೀಠೋಪಕರಣ, ಕಾರ್ಪೆಟ್, ಕುಷನ್ ಅಥವಾ ಕರ್ಟೈನ್ ಗಳನ್ನು ಬದಲಾಯಿಸಿ. ಆದರೆ ಮನೆ ನಿರ್ಮಲ ಮತ್ತು ಶುಚಿಯಾಗಿರದಿದ್ದರೆ ಯಾವುದೇ ಪರಿಣಾಮವಿಲ್ಲ.

ಚಳಿಗಾಲದಲ್ಲಿ ನೀವು ಕಡೆಗಣಿಸಬಾರದ ಕೆಲವೊಂದು ವಿಷಯಗಳಿವೆ. ಚಳಿಗಾಲದಲ್ಲಿ ನಿಮ್ಮ ಮನೆಯನ್ನು ಸ್ವಚ್ಛ ಹಾಗೂ ನೈರ್ಮಲ್ಯವಾಗಿಡುವುದು ಕಠಿಣ ಸವಾಲು. ಆದರೆ ಕೆಲವೊಂದು ಟಿಪ್ಸ್ ಹಾಗೂ ತಂತ್ರಗಳಿಂದ ಇದನ್ನು ಸರಳವಾಗಿಸಬಹುದು. ಚಳಿಗಾಲದಲ್ಲಿ ಮನೆ ಸ್ವಚ್ಛಗೊಳಿಸಲು ಕೆಲವೊಂದು ಟಿಪ್ಸ್ ಗಳಿವೆ.

ನೆಲ ಸ್ವಚ್ಛವಾಗಿಡಿ

ನೆಲ ಸ್ವಚ್ಛವಾಗಿಡಿ

ಕೋಣೆಗಳಲ್ಲಿ ತೇವಾಂಶವಿದ್ದರೆ ಆಗ ನೆಲ ಜಾರುವ ಸಾಧ್ಯತೆ ಹೆಚ್ಚಿದೆ. ಅದರಲ್ಲೂ ಮನೆಯಲ್ಲಿ ಮಕ್ಕಳಿದ್ದರೆ ಆಗ ನೆಲವನ್ನು ಒಣಗಿರುವಂತೆ ಇಡುವುದು ತುಂಬಾ ಮುಖ್ಯ. ಇದಕ್ಕಾಗಿ ಒಣ ಮೊಪ್ ನೊಂದಿಗೆ ನೆಲವನ್ನು ಸ್ವಚ್ಛಗೊಳಿಸಿ.

ಕಿಟಿಕಿ ಸ್ವಚ್ಛಗೊಳಿಸಿ

ಕಿಟಿಕಿ ಸ್ವಚ್ಛಗೊಳಿಸಿ

ಕಿಟಕಿಯ ಗಾಜುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ ಎನ್ನುವುದು ಚಳಿಗಾಲದಲ್ಲಿ ಮನೆಯನ್ನು ಸ್ವಚ್ಛವಾಗಿಡಲು ನೀಡುವ ಪ್ರಮುಖ ಟಿಪ್ಸ್. ಕಿಟಕಿಯ ಗಾಜುಗಳು ಶೀತ ಗಾಳಿಗೆ ತುತ್ತಾಗುತ್ತದೆ. ಈ ವೇಳೆ ನೀವು ಕೋಣೆಯಲ್ಲಿ ಇಡುವ ಹೀಟರ್ ನಿಂದಾಗಿ ಅದು ನೀರಾಗಿ ಹರಿಯುತ್ತದೆ.

ಪೀಠೋಪಕರಣಗಳನ್ನು ಪಾಲಿಶ್ ಮಾಡಿ

ಪೀಠೋಪಕರಣಗಳನ್ನು ಪಾಲಿಶ್ ಮಾಡಿ

ಚಳಿಗಾಲದಲ್ಲಿ ನಿಮ್ಮ ಮನೆಯಲ್ಲಿರುವ ಪೀಠೋಪಕರಣಗಳಿಗೆ ಶಿಲೀಂಧ್ರಗಳು ಅಂಟಿಕೊಳ್ಳುತ್ತದೆ. ಚಳಿಗಾಲ ಬರುವ ಮೊದಲೇ ಮನೆಯಲ್ಲಿನ ಎಲ್ಲಾ ಪೀಠೋಪಕರಣಗಳಿಗೆ ಪಾಲಿಶ್ ಮಾಡುವುದು ತುಂಬಾ ಮುಖ್ಯವಾದ ಚಳಿಗಾಲದ ಮನೆ ಸ್ವಚ್ಛಗೊಳಿಸುವ ಟಿಪ್ಸ್.

ಗಾಜಿನ ಬಾಗಿಲು ಶುಚಿಗೊಳಿಸಿ

ಗಾಜಿನ ಬಾಗಿಲು ಶುಚಿಗೊಳಿಸಿ

ನಿಮ್ಮ ಮನೆಯಲ್ಲಿನ ಬೆಂಕಿಗೂಡಿನ ಬಳಿಯಲ್ಲೇ ಗಾಜಿನ ಬಾಗಿಲು ಇದ್ದರೆ ಆಗ ಮಬ್ಬು ಅಂಟಿಕೊಳ್ಳುವ ಸಾಧ್ಯತೆ ತುಂಬಾ ಹೆಚ್ಚು. ಇದರಿಂದ ನಿಮ್ಮ ಕೋಣೆಗೆ ಸೂರ್ಯನ ಬೆಳಕು ಬೀಳುವುದು ತಪ್ಪುತ್ತದೆ. ಮನೆಯ ಒಳಗಡೆ ಇರುವ ಗಾಜಿನ ಬಾಗಿಲನ್ನು ಶುಚಿಗೊಳಿಸಬೇಕೆನ್ನುವುದು ಚಳಿಗಾಲದ ಶುಚಿತ್ವದ ಅತೀ ಮಹತ್ವದ ಟಿಪ್ಸ್.

ಕನ್ನಡಿಗಳನ್ನು ಒಣ ಕಾಗದದಿಂದ ಒರೆಸಿ

ಕನ್ನಡಿಗಳನ್ನು ಒಣ ಕಾಗದದಿಂದ ಒರೆಸಿ

ಕನ್ನಡಿಯಲ್ಲಿ ನಿಮ್ಮ ಮುಖ ಸರಿಯಾಗಿ ಕಾಣುತ್ತಿಲ್ಲವೆಂಬ ಭಾವನೆ ನಿಮಗಾಗುತ್ತಿದೆಯಾ? ಇದಕ್ಕೆ ಮುಖ್ಯ ಕಾರಣ ಕನ್ನಡಿಯಲ್ಲಿರುವ ತೇವಾಂಶ. ಕನ್ನಡಿಯನ್ನು ಒಣಗಿರುವ ನ್ಯೂಸ್ ಪೇಪರ್ ನಿಂದ ಒರಸಿ ಮತ್ತು ಇದರ ಬಳಿಕ ಸ್ವಲ್ಪ ಟಾಲ್ಕಂ ಪೌಡರ್ ಸಿಂಪಡಿಸಿ.

ಶೌಚಾಲಯ ಶುಚಿಯಾಗಿಡಿ

ಶೌಚಾಲಯ ಶುಚಿಯಾಗಿಡಿ

ಶೌಚಾಲಯವನ್ನು ಸ್ವಚ್ಛ ಹಾಗೂ ಒಣಗಿರುವುವಂತೆ ಇಡುವುದು ಚಳಿಗಾಲದಲ್ಲಿ ಮನೆ ಸ್ವಚ್ಛತೆಗೆ ಅತೀ ಮುಖ್ಯ ಟಿಪ್ಸ್. ನಿಂಬೆ ಎಣ್ಣೆಯನ್ನು ಬಳಸುವುದರಿಂದ ಟೈಲ್ಸ್ ಮೇಲೆ ಇರುವ ಶಿಲೀಂಧ್ರವನ್ನು ತೆಗೆಯಬಹುದು.

ಕಾರ್ಪೆಟ್

ಕಾರ್ಪೆಟ್

ತೇವಾಂಶದಿಂದಾಗಿ ಕಾರ್ಪೆಟ್ ನಲ್ಲಿ ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾ ಇರುತ್ತದೆ. ಇದರಿಂದ ಮನೆಯನ್ನು ಸ್ವಚ್ಛಗೊಳಿಸುವ ಚಳಿಗಾಲದ ಟಿಪ್ಸ್ ಗಳಲ್ಲಿ ಕಾರ್ಪೆಟ್ ನ್ನು ಆಗಾಗ ಶುಚಿಗೊಳಿಸುವುದು ಅತೀ ಮುಖ್ಯ.

ಕಪಾಟುಗಳನ್ನು ನಿರ್ಮಲವಾಗಿಡುವುದು

ಕಪಾಟುಗಳನ್ನು ನಿರ್ಮಲವಾಗಿಡುವುದು

ನಿಮ್ಮ ಬಟ್ಟೆಗಳನ್ನು ಇಡುವ ಕ್ಯಾಬಿನೆಟ್ ನ್ನು ತುಂಬಾ ನಿರ್ಮಲವಾಗಿಡಿ. ನಿಮ್ಮ ಬಟ್ಟೆಗಳನ್ನು ಇಡುವ ಮೊದಲ ಕ್ಯಾಬಿನೆಟ್ ಡ್ರಾವರ್ ನಲ್ಲಿ ನ್ಯೂಸ್ ಪೇಪರ್ ಹಾಕಿ. ಇದು ಅತ್ಯಂತ ಸುಲಭ ಟಿಪ್ಸ್.

ಚಳಿಗಾಲದ ಬ್ಲಾಕೆಂಟ್ ಗಳನ್ನು ಒಗೆಯಿರಿ

ಚಳಿಗಾಲದ ಬ್ಲಾಕೆಂಟ್ ಗಳನ್ನು ಒಗೆಯಿರಿ

ಚಳಿಗಾಲದಲ್ಲಿ ಮನೆಯನ್ನು ಶುಚಿಗೊಳಿಸುವ ಟಿಪ್ಸ್ ಗಳಲ್ಲಿ ಚಳಿಗಾಲದ ಬ್ಲಾಂಕೆಟ್ ನ್ನು ಒಗೆಯುವುದು ಅತೀ ಮುಖ್ಯ. ನಿಮ್ಮ ಬೆಡ್ ನ್ನು ನಿರ್ಮಲವಾಗಿಡುವುದು ಮೂಲ ಅಗತ್ಯ. ಇದರಿಂದ ಅಲರ್ಜಿ ಹಾಗೂ ಅಸ್ತಮಾದಿಂದ ದೂರ ಉಳಿಯಬಹುದು.

ಪರದೆ ಮತ್ತು ಅಲಂಕಾರಿಕ ವಸ್ತುಗಳು

ಪರದೆ ಮತ್ತು ಅಲಂಕಾರಿಕ ವಸ್ತುಗಳು

ಪರದೆ ಮತ್ತು ಅಲಂಕಾರಿಕ ವಸ್ತುಗಳು ಕೆಟ್ಟ ವಾಸನೆ ಬೀರುತ್ತದೆ. ಇವುಗಳಲ್ಲಿ ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾ ಅಂಟಿಕೊಂಡಿರುತ್ತದೆ. ಇದರಿಂದ ಅಲಂಕಾರಿಕ ವಸ್ತುಗಳು ಹಾಗೂ ಪರದೆಗಳನ್ನು ನಿರ್ಮಲವಾಗಿಡುವುದು ಮನೆಯನ್ನು ಶುಚಿಗೊಳಿಸಲು ಇರುವ ಅಗ್ರ ಟಿಪ್ಸ್ ಗಳಲ್ಲಿ ಒಂದಾಗಿದೆ.

English summary

Winter Cleaning Tips For House

Keeping your house clean is very important to keep yourself healthy and happy. Cleaning your house during winter needs a little more care and attention. This is due to the impact of the changing climate.
Story first published: Monday, January 6, 2014, 9:51 [IST]
X
Desktop Bottom Promotion