For Quick Alerts
ALLOW NOTIFICATIONS  
For Daily Alerts

ಮ್ಯಾಟ್‌ನ ಬೂಸ್ಟ್ ತೆಗೆಯಲು ಕೆಲವೊಂದು ವಿಧಾನಗಳು

|

ನೀವು ಎಷ್ಟೇ ಪ್ರಯತ್ನಿಸಿದರೂ ಕೆಲವೊಂದು ಕಡೆಗಳಲ್ಲಿ ಬೂಸ್ಟ್ ಹಿಡಿಯುತ್ತಿರುತ್ತದೆ. ಮ್ಯಾಟ್‌ಗಳಲ್ಲಿ ಸಾಮಾನ್ಯವಾಗಿ ಬೂಸ್ಟ್ ಕಾಣಿಸಿಕೊಳ್ಳುತ್ತದೆ ಮತ್ತು ಇವುಗಳಲ್ಲಿ ಅದು ಸುಲಭವಾಗಿ ಬರುತ್ತದೆ. ನಿಮ್ಮ ಕುಟುಂಬದ ಸದಸ್ಯರು ಆರೋಗ್ಯಕರವಾಗಿರಬೇಕೆಂದರೆ ಶೌಚಾಲಯ ಮತ್ತು ನೆಲದ ಮೇಲಿರುವ ಮ್ಯಾಟ್‌ಗಳನ್ನು ಸ್ವಚ್ಛವಾಗಿಡುವುದು ತುಂಬಾ ಮುಖ್ಯ.

ಮ್ಯಾಟ್ ಗಳಲ್ಲಿ ಬೂಸ್ಟ್ ಹಿಡಿದರೆ ಅದು ವಯಸ್ಕರು ಮತ್ತು ಮಕ್ಕಳಲ್ಲಿ ಅನಾರೋಗ್ಯ ಉಂಟು ಮಾಡುತ್ತದೆ. ಸ್ವಚ್ಛ ಸ್ಥಳವು ಆರೋಗ್ಯಕರ ಜೀವನಕ್ಕೆ ದಾರಿ. ಮನೆ ಮತ್ತು ಸುತ್ತಮುತ್ತಲು ಇರುವ ವಸ್ತುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ತುಂಬಾ ಮುಖ್ಯ. ಸ್ವಲ್ಪ ಮಟ್ಟಿನ ಕಾಳಜಿಯಿಂದ ಇದನ್ನು ಮಾಡಬಹುದು.

Tips to remove mold from mats

ಬೂಸ್ಟ್ ಹಿಡಿದ ಮ್ಯಾಟ್ ಗಳನ್ನು ಸ್ವಚ್ಛಗೊಳಿಸಿ ನಿರ್ವಹಿಸಬಹುದು. ಇದಕ್ಕೆ ಸ್ವಲ್ಪ ಶ್ರಮ ಬೇಕಾಗುತ್ತದೆ. ಮಾರುಕಟ್ಟೆಯಲ್ಲಿ ಇದನ್ನು ಸ್ವಚ್ಛ ಮಾಡಲು ಹಲವಾರು ರೀತಿಯ ಕ್ಲೀನಿಂಗ್ ಏಜೆಂಟ್ ಗಳು ಸಿಗುತ್ತದೆ. ಇದನ್ನು ನೀವು ಮನೆಯಲ್ಲೇ ಮಾಡಬಹುದು. ಬೂಸ್ಟ್ ಹಿಡಿಯದಂತೆ ಮಾಡಲು ಮ್ಯಾಟ್ ಗಳನ್ನು ಆಗಾಗ ಸ್ವಚ್ಛಗೊಳಿಸುತ್ತಿರಬೇಕು. ನಿಮ್ಮ ಮನೆಯಲ್ಲಿ ತೆವಳುತ್ತಾ ಹೋಗುತ್ತಿರುವ ಮಗುವಿದ್ದರೆ ಮತ್ತಷ್ಟು ಸಮಸ್ಯೆಯಾಗಬಹುದು. ಮನೆಯಲ್ಲಿ ಮಕ್ಕಳಿದ್ದರೆ ಸ್ವಲ್ಪ ಕಾಳಜಿ ತೆಗೆದುಕೊಳ್ಳಿ.

ಅರಶಿನ ಕಲೆಯನ್ನು ನಿವಾರಿಸಲು ಇಲ್ಲಿದೆ ಸುಲಭ ಟಿಪ್ಸ್

ಮಕ್ಕಳಿಗೆ ಇದರ ಬಗ್ಗೆ ತಿಳಿದಿರುವುದಿಲ್ಲ ಮತ್ತು ಇದು ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಮನೆಯಲ್ಲಿ ಮಕ್ಕಳಿದ್ದರೆ ವಿಶೇಷ ಕಾಳಜಿ ವಹಿಸಿ. ಸಣ್ಣ ವಿಷಯಗಳ ಬಗ್ಗೆ ಕಾಳಜಿ ತೆಗೆದುಕೊಂಡರೆ ನೀವು ಮತ್ತು ನಿಮ್ಮ ಮನೆಯವರು ಆರೋಗ್ಯಕರ ಜೀವನ ನಡೆಸಬಹುದು. ಮ್ಯಾಟ್ ನಲ್ಲಿರುವ ಬೂಸ್ಟ್ ನ್ನು ತೆಗೆಯಲು ಕೆಲವೊಂದು ವಿಧಾನಗಳು ಇಲ್ಲಿವೆ.

ಬ್ಲೀಚ್ ಬಳಸಿ
ಬ್ಲೀಚ್ ನಲ್ಲಿ ಮ್ಯಾಟ್ ನ್ನು ಅದ್ದಿಡುವುದರಿಂದ ಬೂಸ್ಟ್ ನ್ನು ಶುಚಿಗೊಳಿಸಬಹುದು. ಮ್ಯಾಟ್ ನ್ನು ಸುಮಾರು 4-5 ಗಂಟೆಗಳ ಕಾಲ ಬ್ಲೀಚ್ ನಲ್ಲಿ ಅದ್ದಿಡಿ. ಬ್ಲೀಚ್ ನಲ್ಲಿ ಮ್ಯಾಟ್ ನ್ನು ಅದ್ದಿಡುವಾಗ ಕೋಣೆಗೆ ಸರಿಯಾಗಿ ಗಾಳಿ ಬರುತ್ತದೆಯಾ ಎಂದು ನೋಡಿ. ಮ್ಯಾಟ್ ನಲ್ಲಿ ಕಲೆಗಳಿದ್ದರೆ ಮತ್ತೆ ಸ್ವಲ್ಪ ಸಮಯ ಅದನ್ನು ಅದ್ದಿಡಿ. ಇದರ ಬಳಿಕ ತೊಳೆಯಿರಿ. ಮ್ಯಾಟ್ ನ್ನು ಕೈಯಲ್ಲೇ ಅಥವಾ ಮೆಷಿನ್ ನಲ್ಲಿ ತೊಳೆಯಬಹುದು.

ಬೇಕಿಂಗ್ ಸೋಡಾ
ಬೂಸ್ಟ್ ಹಿಡಿದ ಮ್ಯಾಟ್ ಗಳನ್ನು ತೊಳೆಯಲು ಬೇಕಿಂಗ್ ಸೋಡಾವನ್ನು ಉಪಯೋಗಿಸಬಹುದು. ಮನೆಯಲ್ಲಿ ಬಳಸುವ ಮ್ಯಾಟ್ ಗಳನ್ನು ಚೆನ್ನಾಗಿ ಶುಚಿಗೊಳಿಸಿ ಒಣಗಿಸಬೇಕು ಮತ್ತು ಸ್ವಲ್ಪ ಬ್ಲೀಚ್ ಅಥವಾ ಬೇಕಿಂಗ್ ಸೋಡಾವನ್ನು ಇದಕ್ಕೆ ಸಿಂಪಡಿಸಬಹುದು. ವಾರದಲ್ಲಿ ಒಂದು ಸಲವಾದರೂ ಈ ವಿಧಾನದಿಂದ ನಿಮ್ಮ ಮನೆಯ ಮ್ಯಾಟ್ ಗಳನ್ನು ತೊಳೆಯಿರಿ. ಇದು ನಿಮ್ಮ ಕುಟುಂಬವನ್ನು ಆರೋಗ್ಯಕರವಾಗಿಡಬಹುದು.

ಬಟ್ಟೆ ಹೊಗೆಯುವ ಸೋಪು
ಈ ವಸ್ತು ಪ್ರತಿಯೊಂದು ಮನೆಯಲ್ಲೂ ಲಭ್ಯವಿರುತ್ತದೆ. ನಿಮಗೆ ಬಟ್ಟೆಗಳನ್ನು ಸ್ವಚ್ಛಗೊಳಿಸಲು ಇರಬಹುದು. ಇದನ್ನೇ ಬಳಸಿಕೊಂಡು ನೀವು ಮನೆಯ ಮ್ಯಾಟ್ ಗಳನ್ನು ಸ್ವಚ್ಛಗೊಳಿಸಬಹುದು. ಬೂಸ್ಟ್ ಹಿಡಿ ಮ್ಯಾಟ್ ಗಳನ್ನು ಈ ಸರಳ ಟಿಪ್ಸ್ ನಿಂದ ಸ್ವಚ್ಛಗೊಳಿಸಬಹುದು. ಸೋಪಿನಲ್ಲಿ ಕೆಲವು ಸಮಯ ಮ್ಯಾಚ್ ನ್ನು ಮುಳುಗಿಸಿಡಿ, ಇದರ ಬಳಿಕ ತೆಗೆದು ಹೊಗೆಯಿರಿ. ಬಳಿಕ ಒಣಗಿಸಿ. ಸೂರ್ಯನ ಬೆಳಕು ಮತ್ತು ಗಾಳಿ ಇರುವ ಕಡೆ ಒಣಗಲು ಹಾಕಿ. ಇದರಿಂದ ಬೂಸ್ಟ್ ನ್ನು ತೆಗೆಯಬಹುದು.

ಶುಷ್ಕವಾಗಿರಿಸಿ
ಮ್ಯಾಟ್‌ಗಳು ಬೂಸ್ಟ್ ಹಿಡಿಯದಂತೆ ತಡೆಯಲು ನೀವು ಅದನ್ನು ಶುಷ್ಕವಾಗಿರುವಂತೆ ನೋಡಿಕೊಳ್ಳಿ. ಮನೆಯಲ್ಲಿ ಉಪಯೋಗಿಸುವ ಮ್ಯಾಟ್ ಗಳು ಯಾವಾಗಲೂ ಒಣಗಿರುವಂತೆ ನೋಡಿಕೊಳ್ಳಿ. ಇದರಿಂದ ಬೂಸ್ಟ್ ಹಿಡಿಯುವುದಿಲ್ಲ. ಮುನ್ನೆಚ್ಚರಿಕೆ ವಹಿಸಿದರೆ ಅದನ್ನು ಸ್ವಚ್ಛ ಮಾಡುವ ಶ್ರಮ ತಪ್ಪುತ್ತದೆ. ಮ್ಯಾಟ್ ಯಾವಾಗಲೂ ಶುಷ್ಕವಾಗಿದ್ದರೆ ಅದು ಸುರಕ್ಷಿತ.

ಕೈಯಲ್ಲೇ ತೊಳೆಯಿರಿ
ಮ್ಯಾಟ್‌ಗಳು ದೀರ್ಘಬಾಳಿಕೆ ಬರಬೇಕಾದರೆ ಅದನ್ನು ಕೈಯಲ್ಲೇ ತೊಳೆಯಿರಿ. ಮೆಷಿನ್ ಒಗೆತಕ್ಕೆ ಹೋಲಿಸಿದರೆ ಕೈಯ ಒಗೆತ ಒಳ್ಳೆಯದು. ಮೆಷಿನ್ ನಲ್ಲಿ ತೊಳೆಯುವುದರಿಂದ ನಿಮ್ಮ ಮ್ಯಾಟ್ ಹಾಳಾಗಬಹುದು. ಕೈಯಲ್ಲೇ ತೊಳೆದರೆ ಇದನ್ನು ತಡೆಯಬಹುದು.

ಮೊದಲು ಮ್ಯಾಟ್‌ನ್ನು ನೀರಿನಲ್ಲಿ ನೆನೆಸಿಡಿ
ಕೆಲವು ನಿಮಿಷಗಳ ನಂತರ ಕೈಗೆ ಗ್ಲೌಸ್ ಹಾಕಿ ಬಟ್ಟೆ ಹೊಗೆಯುವ ಸೋಪಿನಿಂದ ಹೊಗೆಯಿರಿ. ಇದನ್ನು ಸ್ವಚ್ಛಗೊಳಿಸಲು ಬ್ರಶ್ ಬಳಸಬಹುದು. ಇದನ್ನು ಒಗೆದಾದ ಬಳಿಕ ಮತ್ತೊಂದು ಹಂತಕ್ಕೆ ಹೋಗಬೇಕು. ತೊಳೆದ ಮ್ಯಾಟ್‌ನ್ನು ಒಣಗಿಸುವುದು ಅಂತಿಮ ಹಂತ. ಸ್ವಲ್ಪ ಸಮಯ ಇದನ್ನು ನೆರಳಿನಲ್ಲಿ ಒಣಗಿಸಿ. ಇದು ಒಣಗಿದ ಬಳಿಕ ಅದನ್ನು ಮತ್ತೆ ಅದರ ಜಾಗದಲ್ಲಿಡಿ. ವಾರದಲ್ಲಿ ಒಂದು ಸಲ ಹೀಗೆ ಮಾಡಿ.

Story first published: Monday, June 23, 2014, 16:21 [IST]
X
Desktop Bottom Promotion