For Quick Alerts
ALLOW NOTIFICATIONS  
For Daily Alerts

ಬಟ್ಟೆಯಿಂದ ಇಂಕ್ ಕಲೆಯನ್ನು ಹೋಗಲಾಡಿಸಲು ಸರಳ ವಿಧಾನಗಳು

|

ನಿತ್ಯವೂ ನಿಮ್ಮ ಬಟ್ಟೆ ಹಲವಾರು ಕಾರಣಗಳಿಂದ ಕೊಳೆಯಾಗುತ್ತಿರುತ್ತದೆ. ಕೆಲವೊಮ್ಮೆ ನೀವು ಬಳಸುವಂತಹ ಕೆಲವು ವಸ್ತುಗಳು ಅವುಗಳ ಕಲೆಯನ್ನು ನಿಮ್ಮ ಬಟ್ಟೆಯಲ್ಲಿ ಹಾಗೆಯೇ ಬಿಟ್ಟಿರುತ್ತವೆ. ಬಾಳೆಕಾಯಿ ಕಲೆಯಾಗಿರಬಹುದು, ರಕ್ತದ ಕಲೆಯಾಗಿರಬಹುದು, ಕಾಫಿ ಅಥವಾ ಟೀ ಕಲೆಯಾಗಿರಬಹುದು ಹೀಗೆ ಕಲೆಗಳ ಗಾಢತೆ ಹೆಚ್ಚಿದ್ದಷ್ಟೂ ಅವುಗಳ ಪ್ರಭಾವ ಕೂಡ ದಟ್ಟವಾಗಿರುತ್ತದೆ.

ಬೆಡ್ ಶೀಟ್ ಮೇಲಿನ ರಕ್ತದ ಕಲೆ ತೆಗೆಯಲು ಟಿಪ್ಸ್!

ಇಂದಿನ ಲೇಖನದಲ್ಲಿ ಕೂಡ ನಾವು ಒಂದು ಕಲೆಯ ಬಗ್ಗೆ ಮಾತನಾಡುತ್ತಿದ್ದೇವೆ. ಇಂಕಿನ ಕಲೆ ಸಾಮಾನ್ಯವಾಗಿ ಎಲ್ಲರ ಬಟ್ಟೆಯಲ್ಲಿ ಉಂಟಾಗುವಂಥದ್ದು ಮತ್ತು ಅದನ್ನು ನಿವಾರಿಸುವುದು ತುಂಬಾ ಕಷ್ಟದ ಕೆಲಸ. ನೀವು ಇಂಕು ಕಲೆಯಿರುವ ಬಟ್ಟೆಯನ್ನು ಸಾಕಷ್ಟು ಬಾರಿ ತೊಳೆದರೂ ಕೂಡ ಈ ಕಲೆ ಬೆನ್ನು ಬಿಡದ ಬೇತಾಳನಂತೆ ನಿವಾರಣೆಯಾಗುವುದೇ ಇಲ್ಲ.

ಹಾಗಿದ್ದರೆ ಈ ಕಲೆಯನ್ನು ಹೋಗಲಾಡಿಸಲು ಯಾವುದಾದರೂ ವಿಧಾನ ಇರಲೇಬೇಕಲ್ಲವೇ? ಆ ವಿಧಾನಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ನೀವು ಈ ಇಂಕಿನ ಕಲೆಯನ್ನು ಮನೆಯಲ್ಲೇ ದೊರೆಯಬಹುದಾದ ಗೃಹೋಪಯೋಗಿ ವಸ್ತುಗಳನ್ನು ಬಳಸಿ ತೆಗೆಯಬಹುದು. ಇದರಿಂದ ಸಮಯ, ದುಡ್ಡು ನಿಮಗೆ ಉಳಿತಾಯವಾಗುತ್ತದೆ ಮತ್ತು ಇವುಗಳು ಸರಳ ವಿಧಾನಗಳಾಗಿವೆ.

ನಿಮ್ಮ ಯೋಗ ಮ್ಯಾಟ್ ಅನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ!

ಟೂತ್‌ಪೇಸ್ಟ್:

ಟೂತ್‌ಪೇಸ್ಟ್:

ಜೆಲ್ ಇಲ್ಲದಿರುವಂತಹ ಟೂತ್‌ಪೇಸ್ಟನ್ನು ಕಲೆಯ ಮೇಲೆ ಅನ್ವಯಿಸಿ. ಅದನ್ನು ಒಣಗಲು ಬಿಡಿ ಮತ್ತು ನಿಮ್ಮ ಸಾಮಾನ್ಯ ಬಟ್ಟೆ ಒಗೆಯುವ ಸೋಪಿನಿಂದ ಬಟ್ಟೆ ತೊಳೆಯಿರಿ.

ನೇಲ್ ಪಾಲಿಶ್ ರಿಮೂವರ್:

ನೇಲ್ ಪಾಲಿಶ್ ರಿಮೂವರ್:

ಹತ್ತಿ ಉಂಡೆಯನ್ನು ತೆಗೆದುಕೊಂಡು ರಿಮೂವರ್‌ನಲ್ಲಿ ಅದ್ದಿಕೊಳ್ಳಿ ಹಾಗೂ ಇಂಕಿನ ಕಲೆಯಾಗಿರುವ ಜಾಗದಲ್ಲಿ ಅದನ್ನು ಹರಡಿಸಿ. ಕಲೆ ಮಾಯವಾದೊಡನೆ ಅದನ್ನು ತೊಳೆಯಿರಿ.

ಉಪ್ಪು:

ಉಪ್ಪು:

ಕಲೆ ಇನ್ನೂ ಒದ್ದೆಯಾಗಿರುವಾಗಲೇ ಉಪ್ಪುನ್ನು ಚಿಮುಕಿಸಿ. ಒದ್ದೆ ಪೇಪರ್ ಟಿಶ್ಯೂನಿಂದ ಒರೆಸಿ ಮತ್ತು ಉಪ್ಪನ್ನು ಉಜ್ಜಿ. ಕಲೆ ಹೋಗುವವರೆಗೆ ಹೀಗೆ ಮಾಡಿ.

ಹಾಲು:

ಹಾಲು:

ಹಿಂದಿನ ದಿನ ಹಾಲಿನಲ್ಲಿ ಬಟ್ಟೆಯನ್ನು ನೆನೆಸಿ ಮತ್ತು ಮರುದಿನ ಸೋಪಿನಿಂದ ತೊಳೆಯಿರಿ.

ಕೋರ್ನ್‌ಸ್ಟಾರ್ಕ್:

ಕೋರ್ನ್‌ಸ್ಟಾರ್ಕ್:

ಕೋರ್ನ್‌ಸ್ಟಾರ್ಕ್‌ಗೆ ಸ್ವಲ್ಪ ಹಾಲು ಹಾಕಿ ಅದನ್ನು ಪೇಸ್ಟ್‌ನಂತೆ ತಯಾರಿಸಿ. ಇದನ್ನು ಬಟ್ಟೆಗೆ ಲೇಪಿಸಿ ಮತ್ತು ನಿಮಿಷಗಳ ಕಾಲ ಹಾಗೆಯೇ ಬಿಡಿ. ಒಮ್ಮೆ ಅದು ಒಣಗಿದ ನಂತರ, ಅದಕ್ಕೆ ಬ್ರಶ್ ಹಾಕಿ.

ಸ್ಯಾಂಡ್‌ಪೇಪರ್:

ಸ್ಯಾಂಡ್‌ಪೇಪರ್:

ಸ್ಯಾಂಡ್‌ಪೇಪರ್ ಅನ್ನು ಕಲೆಯಾಗಿರುವ ಜಾಗಕ್ಕೆ ಹಾಕಿ ತಿಕ್ಕಿ ಮತ್ತು ಬಟ್ಟೆಯನ್ನು ತೊಳೆಯಿರಿ.

ಆಲ್ಕೋಹಾಲ್:

ಆಲ್ಕೋಹಾಲ್:

ಸ್ವಲ್ಪ ಆಲ್ಕೋಹಾಲ್ ಅನ್ನು ಕಲೆಯ ಮೇಲೆ ಚಿಮುಕಿಸಿ ಮತ್ತು ಹಾಗೆಯೇ ಬಿಡಿ. ಸೋಪಿನಲ್ಲಿ ಬಟ್ಟೆಯನ್ನು ನೆನೆಸಿ ಮತ್ತು ತೊಳೆಯಿರಿ.

English summary

Tips To Remove Ink Stains From Clothes

Your clothes tend to get stained due to various reasons throughout the day. We get in contact with so many things and some of them leave behind stubborn stains which are difficult to deal with. One such stubborn stain is that of ink.
Story first published: Wednesday, May 28, 2014, 10:41 [IST]
X
Desktop Bottom Promotion