For Quick Alerts
ALLOW NOTIFICATIONS  
For Daily Alerts

ಅಡುಗೆಮನೆ ಟವೆಲ್ ಸ್ವಚ್ಛವಾಗಿಡಲು ಕೆಲವೊಂದು ಟಿಪ್ಸ್

By Hemanth P
|

ಅಡುಗೆ ಮನೆಯಲ್ಲಿರುವ ಅತ್ಯಂತ ಪ್ರಾಮುಖ್ಯ ವಸ್ತುಗಳಲ್ಲಿ ಅಡುಗೆಮನೆಯ ಟವೆಲ್ ಕೂಡ ಒಂದು. ಇದಕ್ಕೆ ಕೊಳೆಯಾಗಿ ಕೆಟ್ಟ ವಾಸನೆ ಉಂಟುಮಾಡುತ್ತದೆ. ಈ ಟವೆಲ್ ಬಗ್ಗೆ ಗಮನಹರಿಸದೆ ಅದನ್ನು ಸ್ವಚ್ಛ ಮತ್ತು ನೈರ್ಮಲ್ಯದಿಂದ ಇಡದಿದ್ದರೆ ಆಗ ಅದು ಆರೋಗ್ಯ ಸಮಸ್ಯೆಗೆ ಕಾರಣವಾಗಹುದು.

ಕೆಳಗೆ ಕೊಟ್ಟಿರುವ ಕೆಲವೊಂದು ಸರಳ ಟಿಪ್ಸ್ ಗಳನ್ನು ಬಳಸಿಕೊಂಡು ಅಡುಗೆ ಮನೆಯ ಟವೆಲ್ ನ್ನು ಸ್ವಚ್ಛವಾಗಿಟ್ಟು ಮನೆಗೆ ಬರುವ ಅತಿಥಿಗಳಿಂದ ಪ್ರಶಂಸೆ ಪಡೆಯಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬಟ್ಟೆಗಳಿಂದ ಗ್ರೀಸ್ ಕಲೆ ತೆಗೆಯಲು ಸುಲಭೋಪಾಯಗಳು

Tips To Keep Kitchen Towels Clean

1.ಅಡುಗೆ ಮನೆಗೆ ಟವೆಲ್ ಖರೀದಿಸಿದ ಬಳಿಕ ಅದನ್ನು ಒಳ್ಳೆಯ ಡಿಟರ್ಜೆಂಟ್ ಹಾಕಿ ಸರಿಯಾಗಿ ತೊಳೆಯಬೇಕು. ಯಾಕೆಂದರೆ ಅದನ್ನು ಉತ್ಪಾದಿಸುವ ವೇಳೆ ರಾಸಾಯನಿಕ ಮತ್ತು ಕ್ರಿಮಿಗಳು ಅದಕ್ಕೆ ಅಂಟಿಕೊಂಡಿರಬಹುದು.

2.ಟವೆಲ್ ನ್ನು ಸ್ವಚ್ಛಗೊಳಿಸುವ ಡಿಟರ್ಜೆಂಟ್ ನಲ್ಲಿ ಸೂಕ್ಷ್ಮಜೀವಿ ಪ್ರತಿರೋಧಕ ಅಂಶಗಳಿರಲಿ. ಇದು ಶಿಲೀಂಧ್ರ ರಚನೆ ತಡೆಯುವುದು ಮಾತ್ರವಲ್ಲದೆ ವಾಸನೆ ದೂರವಿಡುತ್ತದೆ.

3.ಅಡುಗೆಮನೆಯ ಟವೆಲ್ ಗಳನ್ನು ಸ್ವಚ್ಛ ಹಾಗೂ ಕ್ರಿಮಿಗಳಿಂದ ದೂರವಿಡಲು ಒಳ್ಳೆಯ ತಂತ್ರವೆಂದರೆ ಅದರನ್ನು ಒಳ್ಳೆಯ ರೀತಿಯಿಂದ ಒಗೆಯಬೇಕು ಮತ್ತು 30 ಸೆಕೆಂಡುಗಳ ಕಾಲ ಅದನ್ನು ಮೈಕ್ರೋವೇವ್ ನಲ್ಲಿಡಬೇಕು. ಇದು ಎಲ್ಲಾ ರೀತಿಯ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ.

4.ಅಡುಗೆ ಮನೆಯ ಟವೆಲ್ ಗಳನ್ನು ಒಗೆದ ಬಳಿಕ ಅದನ್ನು ಸರಿಯಾಗಿ ಒಣಗಿಸಿ. ಒದ್ದೆಯಾಗಿದ್ದರೆ ಮತ್ತೆ ಅದರಲ್ಲಿ ಕ್ರಿಮಿಗಳು ಮನೆ ಮಾಡುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪಾತ್ರೆಗಳಿಂದ ಮೊಟ್ಟೆ ವಾಸನೆಯನ್ನು ತೆಗೆಯುವುದು ಹೇಗೆ?

5.ಯಾವಾಗಲೂ ಶೇ. 100ರಷ್ಟು ಹತ್ತಿಯ ಬಿಳಿ ಟವೆಲ್ ಖರೀದಿಸಿ. ಇದಕ್ಕೆ ಬೇಗನೆ ಕೊಳೆಯಾಗುತ್ತದೆ ಮತ್ತು ಕಲೆಗಳು ಸುಲಭವಾಗಿ ಕಾಣುತ್ತದೆ ಎಂದು ಹೆಚ್ಚಿನವರು ಭಾವಿಸಬಹುದು. ಆದರೆ ಬಿಳಿಬಟ್ಟೆ ಬ್ಲೀಚ್ ಮಾಡಲು ಸುಲಭವಾವೆಂದು ನಾವು ನೆನಪಿಟ್ಟುಕೊಳ್ಳಬೇಕು. ಇದರಿಂದ ಅಡುಗೆಮನೆಯ ಟವೆಲ್ ನ್ನು ಶುಚಿಯಾಗಿಡಬಹುದು. ಬಿಳಿಯಾಗಿದ್ದರೆ ಆಗ ಬಣ್ಣ ಬಿಡುವುದಿಲ್ಲ.

6.ಅಡುಗೆ ಮನೆಯ ಟವೆಲ್ ನ್ನು ಸ್ವಚ್ಛವಾಗಿಡುವ ಪ್ರಮುಖ ಮಾರ್ಗವೆಂದರೆ ಅವುಗಳನ್ನು ಬಿಸಿನೀರಿನಲ್ಲಿ ಪ್ರತ್ಯೇಕವಾಗಿ ಒಗೆಯಬೇಕು. ಇದರ ಬಳಿಕ ಬ್ಲೀಚ್ ಬಳಸಬಹುದು. ಇದರಿಂದ ಒಳ್ಳೆಯ ಸುವಾಸನೆ ಬರುತ್ತದೆ ಮತ್ತು ದುರ್ಗಂಧ ದೂರ ಮಾಡುತ್ತದೆ. ವಿನೇಗರ್ ಅಥವಾ ಅಡುಗೆ ಸೋಡಾವನ್ನು ಟವೆಲ್ ಒಗೆಯಲು ಬಳಸಬಹುದು. ಆದರೆ ಇದನ್ನು ಜತೆಯಾಗಿ ಬಳಸಬಾರದು ಎಂದು ನೆನಪಿಟ್ಟುಕೊಳ್ಳಿ.

7.ಅಡುಗೆ ಮನೆಯ ಟವೆಲ್ ನ್ನು ಸ್ವಚ್ಛಗೊಳಿಸುವಾಗ ನೀವು ಫ್ಯಾಬ್ರಿಕ್ ಸಾಫ್ಟನರ್ ನ್ನು ಬಳಸಲೇಬಾರದು. ಯಾಕೆಂದರೆ ಇದರಲ್ಲಿನ ಅನಗತ್ಯ ರಾಸಾಯನಿಕಗಳು ಟವೆಲ್ ಹೀರುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.

8.ಟವೆಲ್ ನ್ನು ನಿರ್ಮಲವಾಗಿಡಲು ಮತ್ತೊಂದು ಮಾರ್ಗವೆಂದರೆ ಕಲೆ ನಿವಾರಕಗಳನ್ನು ಬಳಸುವುದು. ಕಲೆ ನಿವಾರಕದಲ್ಲಿ ಟವೆಲ್ ನ್ನು ಹಾಕಿಡಿ ಮತ್ತು 15 ನಿಮಿಷಗಳ ತೆಗೆದು ತೊಳೆಯಿರಿ.

9.ಅಡುಗೆ ಮನೆಯ ಟವೆಲ್ ತುಂಬಾ ಕೊಳೆಯಾಗಿದ್ದರೆ ಆಗ ರಾತ್ರಿ ಬಿಸಿನೀರಿನಲ್ಲಿ ನೆನೆಸಿ ಹಾಕಿ. ಬಣ್ಣ ತೆಗೆಯದಂತಹ ಬ್ಲೀಚ್ ನ್ನು ಬಳಸಬಹುದು. ಇದರಿಂದ ಎಲ್ಲಾ ರೀತಿಯ ಕಲೆ ತೆಗೆಯಬಹುದು. ಇದರಿಂದ ಬಟ್ಟೆ ಶುಭ್ರವಾಗಿ ತಾಜಾ ಸುವಾಸನೆ ನೀಡಬಹುದು.

10.ಟವೆಲ್ ನ್ನು ರಾತ್ರಿ ಬ್ಲೀಚ್ ಮತ್ತು ಸೋಡಿಯಂ ಬೈಕಾರ್ಬೊನೇಟ್ ಮಿಶ್ರಣದಲ್ಲಿ ನೆನೆಸಿಡಿ. ಈ ಮಿಶ್ರಣವು ತುಂಬಾ ಕೆಟ್ಟ ವಾಸನೆ ಬೀರುವುದರಿಂದ ಅದನ್ನು ಗಾಳಿ ಹರಿದಾಡುವ ಪ್ರದೇಶದಲ್ಲಿಡಿ. ಬಳಿಕ ಯಂತ್ರದಲ್ಲಿ ಅದನ್ನು ತೊಳೆದು ಒಣಗಿಸಿ. ಇದರ ಬಳಿಕ ಅಡುಗೆ ಮನೆಯ ಟವೆಲ್ ಒಳ್ಳೆಯ ಸುವಾಸನೆ ಬೀರುತ್ತದೆ.

ಪ್ರತೀದಿನ ನಿಮ್ಮ ಅಡುಗೆಮನೆಯ ಟವೆಲ್ ನ್ನು ತೊಳೆಯಲು ಪ್ರಯತ್ನಿಸಿ ಮತ್ತು ರಾತ್ರಿ ಒಣಗಲು ಹಾಕಿ. ಇದರಿಂದ ಅದು ಯಾವುದೇ ಶಿಲೀಂಧ್ರ ಅಥವಾ ಕ್ರಿಮಿಗಳಿಗೆ ವಾಸಸ್ಥಾನವಾಗದು. ಪ್ರತೀದಿನ ನೀವು ತಾಜಾ ಮತ್ತು ನಿರ್ಮಲವಾಗಿರುವ ಟವೆಲ್ ಬಳಸಬಹುದು.

English summary

Tips To Keep Kitchen Towels Clean

Kitchen towels are one of the most important utilitarian materials inside your kitchen, and also are most prone to getting dirty and smelling bad. If one doesn't take care of keeping kitchen towels clean and maintaining their hygiene, they may also lead to health problems.
X
Desktop Bottom Promotion