For Quick Alerts
ALLOW NOTIFICATIONS  
For Daily Alerts

ಮನೆಯನ್ನು ಸುಂದರವಾಗಿಸಲು ಅತ್ಯಪೂರ್ಣ ಸಲಹೆಗಳು

|

ಮನೆಯೆಂದರೆ ಮಂದಿರಕ್ಕೆ ಸಮಾನವೆನ್ನುತ್ತಾರೆ. ಮನೆಯನ್ನು ಮಂದಿರದಂತೆಯೇ ಸ್ವಚ್ಛ ಹಾಗೂ ಅಚ್ಚುಕಟ್ಟಾಗಿಟ್ಟುಕೊಳ್ಳುವುದು ತುಂಬಾ ಮುಖ್ಯ. ಕೆಲವರು ಮನೆಯೊಳಗೆ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಇಟ್ಟಿರುತ್ತಾರೆ. ಇದರಿಂದ ಮನೆಯ ಅಂದ ಕೆಡುತ್ತದೆ. ಮನೆಯ ಸೌಂದರ್ಯಕ್ಕೆ ಅದನ್ನು ನಾವು ಯಾವ ರೀತಿಯಲ್ಲಿ ಕಾಪಾಡಿಕೊಂಡು ಹೋಗುತ್ತಿದ್ದೇವೆ ಎನ್ನುವುದು ಕೂಡ ಮುಖ್ಯವಾಗುತ್ತದೆ.

ಇಂದಿನ ದುಬಾರಿ ಸಮಯದಲ್ಲಿ ಮನೆಯನ್ನು ಅನುಕೂಲಕ್ಕೆ ತಕ್ಕಂತೆ ಶೃಂಗರಿಸಿಡುವುದು ಕಷ್ಟವಾದರೂ ಸಣ್ಣ ಬಜೆಟ್ ನಲ್ಲಿಯೂ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡು ಮನೆಯ ಅಂದವನ್ನು ಹೆಚ್ಚಿಸುವ ಸಲಹೆಗಳು ಇಲ್ಲಿದೆ. ಮನೆಯಲ್ಲಿಯೇ ಬೆಳೆಸಬಹುದಾದ ಸೊಳ್ಳೆ ನಿವಾರಕ ಸಸ್ಯಗಳು!

ಮನೆಯ ಮುಂದಿನ ದ್ವಾರ ಚೆನ್ನಾಗಿರಲಿ
ಮನೆ ಮುಂದಿನ ದ್ವಾರ ಮತ್ತು ಮೆಟ್ಟಿಲುಗಳಲ್ಲಿ ಯಾವುದೇ ಬಿರುಕು ಕಾಣಿಸಿಕೊಂಡಿದ್ದರೆ ಅದಕ್ಕೆ ಸಿಮೆಂಟ್ ಹಾಕಿ ಅಥವಾ ಸಣ್ಣ ಇಟ್ಟಿಗೆಗಳನ್ನು ಜೋಡಿಸಿ ಮೆಟ್ಟಿಲು ರಚಿಸಿದರೆ ಅಂದ ಹೆಚ್ಚುತ್ತದೆ. ಬಿರುಕುಗಳನ್ನು ಸಿಮೆಂಟ್‌ನಿಂದ ತುಂಬಿಸಿ ಅದಕ್ಕೆ ಪೈಂಟ್ ಮಾಡಿ.

ಅಡುಗೆ ಕೋಣೆ ಸಾಮಗ್ರಿ
ಮನೆಯಲ್ಲಿ ಅಡುಗೆ ಕೋಣೆಗೆ ತನ್ನದೇ ಆದ ಸ್ಥಾನವಿದೆ. ಅಡುಗೆ ಕೋಣೆಯಲ್ಲಿರುವ ಹಳೆಯ ಮತ್ತು ಉಪಯೋಗಕ್ಕೆ ಬಾರದ ವಸ್ತುಗಳನ್ನು ತೆಗೆದು ಅಲ್ಲಿ ಹೊಸ ವಸ್ತುಗಳನ್ನಿಡಿ. ಇದನ್ನು ಮಾರುಕಟ್ಟೆಯಿಂದಲೇ ಖರೀದಿಸಬೇಕೆಂದಿಲ್ಲ. ಸ್ವಚ್ಛಗೊಳಿಸಿದರೆ ಹಳೆ ವಸ್ತುವಿಗೂ ಹೊಸ ಕಳೆ ಬರುತ್ತದೆ.

Tips for home improvement Idea

ಫರ್ನಿಚರ್ ಮತ್ತು ನೆಲಕ್ಕೆ ಪಾಲಿಶ್
ನೆಲ, ಬೇಸ್ ಬೋರ್ಡ್ ಮತ್ತು ಫರ್ನಿಚರ್ ಗಳಿಗೆ ಪಾಲಿಶ್ ಮಾಡಿ. ಶುಚಿತ್ವವೆಂದರೆ ದೇವರಿದ್ದಂತೆ ಎನ್ನುವ ಮಾತಿದೆ. ಇದನ್ನು ಪಾಲಿಸಿ.

ಅಡುಗೆ ಕೋಣೆ ಸಾಮಗ್ರಿ
ಮನೆಯಲ್ಲಿ ಅಡುಗೆ ಕೋಣೆಗೆ ತನ್ನದೇ ಆದ ಸ್ಥಾನವಿದೆ. ಅಡುಗೆ ಕೋಣೆಯಲ್ಲಿರುವ ಹಳೆಯ ಮತ್ತು ಉಪಯೋಗಕ್ಕೆ ಬಾರದ ವಸ್ತುಗಳನ್ನು ತೆಗೆದು ಅಲ್ಲಿ ಹೊಸ ವಸ್ತುಗಳನ್ನಿಡಿ. ಇದನ್ನು ಮಾರುಕಟ್ಟೆಯಿಂದಲೇ ಖರೀದಿಸಬೇಕೆಂದಿಲ್ಲ. ಸ್ವಚ್ಛಗೊಳಿಸಿದರೆ ಹಳೆ ವಸ್ತುವಿಗೂ ಹೊಸ ಕಳೆ ಬರುತ್ತದೆ. ಮೈಕ್ರೋವೇವ್‌ನಿಂದ ಮಾಡಬಹುದಾದ ಅಚ್ಚರಿಯ ಸಂಗತಿಗಳು

ಕಾರ್ಪೆಟ್ ಗಳನ್ನು ಕ್ಲೀನ್ ಮಾಡಿ
ಅಮೋನಿಯಾ, ನೀರು, ವಿನೆಗರ್ ಮತ್ತು ಒಂದು ಕಪ್ ಬ್ಲೀಚ್ ಅನ್ನು ಬೆರೆಸಿ ಕಾರ್ಪೆಟ್ ಅನ್ನು ಸ್ವಚ್ಛ ಮಾಡುವುದರಿಂದ ಕಾರ್ಪೆಟ್ ಹೊಸತರಂತೆ ಕಂಗೊಳಿಸುತ್ತದೆ.

English summary

Tips for home improvement Idea

In today's expensive market, it's tough to decorate your home within budget. That is why you'll want to try these affordable, do-it-yourself home improvement projects, which can make your home look good within your pockets.
X
Desktop Bottom Promotion